ಚಿಕ್ಕಮಗಳೂರು: ನಗರದ ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯನ್ನು ಸಂಪೂರ್ಣ ವ್ಯವಸ್ಥೆಯುಳ್ಳ ಕಟ್ಟಡಕ್ಕೆ ಸ್ಥಳಾಂತರಿಸಬೇಕು ಎಂದು ಭೀಮ್ ಬ್ರಿಗೇಡ್ ಮುಖಂಡರುಗಳು ಮಂಗಳ ವಾರ ಉಪ ವಿಭಾಗಾಧಿಕಾರಿ ಬಿ.ಕೆ.ಸುದರ್ಶನ್ ಅವರಿಗೆ ಮನವಿ ಸಲ್ಲಿಸಿದರು.
ಈ ಕುರಿತು ಮಾತನಾಡಿದ ಬ್ರಿಗೇಡ್ ಮುಖಂಡ ಹರೀಶ್‌ಮಿತ್ರ ಪ್ರಸ್ತುತ ಕಲ್ಯಾಣನಗರದಲ್ಲಿರುವ ಅಂ ಬೇಡ್ಕರ್ ವಸತಿ ಶಾಲೆಯು ಸಂಪೂರ್ಣ ಅವ್ಯವಸ್ಥೆ ಹಾಗೂ ಮೂಲಸೌಕರ್ಯಗಳಿಂದ ವಂಚಿತವಾಗಿರುವ ಹಿನ್ನೆಲೆಯಲ್ಲಿ ತ್ವರಿತವಾಗಿ ಬೇರೆಡೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದರು.
ಮಳೆಗಾಲದಲ್ಲಿ ವಸತಿ ಶಾಲೆ ಕೆರೆಗಳಂತಾಗಲಿದೆ. ಅಕ್ಕಿಮೂಟೆ, ಕಂಪ್ಯೂಟರ್, ಶಾಲಾ ಹಾಗೂ ಪ್ರಿನ್ಸಿ ಪಾಲರ ಕೊಠಡಿಗಳು ಸಹ ನೀರಿನಿಂದ ತುಂಬಿರುತ್ತದೆ. ಬೇಸಿಗೆ ಕಾಲ ಬಂತೆಂದರೆ ಪಕ್ಕದಲ್ಲೇ ಸಿಮೆಂಟ್, ಇಟ್ಟಿಗೆಯ ಕಾರ್ಖಾನೆಯಿರುವ ಕಾರಣ ದೂಳುಮಯವಾಗಲಿದ್ದು ಇದರಿಂದ ಮಕ್ಕಳಿಗೆ ಕಾಯಿಲೆಗಳು ಎದು ರಾಗಲಿದೆ ಎಂದು ತಿಳಿಸಿದರು.
ಶಾಲೆಯು ಕಿಟಕಿ, ಬಾಗಿಲು ಎಲ್ಲವು ಮುರಿದು ಹಾಳಾಗಿರುವ ಕಾರಣ ಚಳಿಗಾಲದಲ್ಲಿ ಶೀತ, ಜ್ವರದ ಸಮಸ್ಯೆ ಕಾಡಲಿದೆ. ಪ್ರಮುಖವಾಗಿ ನೀರಿನ ಅವ್ಯವಸ್ಥೆಯಿಂದ ಕೂಡಿರುವುದರಿಂದ ತಿಂಗಳುಗಟ್ಟಲೇ ವಿದ್ಯಾ ರ್ಥಿಗಳು ಸ್ನಾನ ಮಾಡುತ್ತಿಲ್ಲ. ಅಲ್ಲದೇ ಬಾಡಿಗೆ ವಿಪರೀತವಾದರೂ ಕಟ್ಟಡದ ಮಾಲೀಕರು ಯಾವುದೇ ವ್ಯ ವಸ್ಥೆ ಮಾಡಿಕೊಟ್ಟಿಲ್ಲ. ಈ ಬಗ್ಗೆ ಹಲವಾರು ಬಾರಿ ಸಮಾಜ ಕಲ್ಯಾಣ ಇಲಾಖೆಗೆ ತಿಳಿಸಿದರೂ ಯಾವುದೇ ಕ್ರಮ ವಹಿಸಿಲ್ಲ ಎಂದು ದೂರಿದರು.
ಈ ವಸತಿ ಶಾಲೆಯಲ್ಲಿ ಅತಿಹೆಚ್ಚು ಪರಿಶಿಷ್ಟ ವರ್ಗದ ಬಾಲಕಿಯರಿದ್ದು, ಇದರಿಂದ ಮಕ್ಕಳ ಪಾಲಕರು ವಸತಿ ಶಾಲೆಯ ಮೇಲೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದು ಕೂಡಲೇ ಜಿಲ್ಲಾಡಳಿತ ಈ ಸಮಸ್ಯೆಗಳ ಬಗ್ಗೆ ಗಂ ಭೀರವಾಗಿ ಪರಿಗಣಿಸಿ ಗುಣಮಟ್ಟ ವ್ಯವಸ್ಥೆಯಿಂದ ಕೂಡಿರುವ ಕಟ್ಟಡಕ್ಕೆ ಶಾಲೆಯನ್ನು ವರ್ಗಾಯಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಚಾಲಕ ಬಾಲಕೃಷ್ಣ ಬಿಳೇಕಲ್ಲು, ಬ್ರಿಗೇಡ್‌ನ ಮುಖಂಡರುಗಳಾ ದ ಕಬ್ಬಿಕೆರೆ ಮೋಹನ್‌ಕುಮಾರ್, ಸತ್ಯನಾರಾಯಣ್, ಲಕ್ಷ್ಮಣಚಾರ್ ಹಾಜರಿದ್ದರು.
Request to relocate residential school to a fully equipped building
Leave a comment