ಚಿಕ್ಕಮಗಳೂರು : ಪೊಲೀಸರು ವಿವೇಚನೆ ಇಟ್ಟುಕೊಂಡು ಕೆಲಸ ಮಾಡಬೇಕು, ಮಾನವ ಹಕ್ಕುಗಳನ್ನು ದಮನ ಮಾಡಲು ಸಾಧ್ಯವಾಗುವುದಿಲ್ಲ ಎಂದು ಬಿಜೆಪಿ ಎಂಎಲ್ಸಿ ಸಿ.ಟಿ.ರವಿ ತಿಳಿಸಿದ್ದಾರೆ.
ಚಿಕ್ಕಮಂಗಳೂರಿನಲ್ಲಿ ಇಂದು ಚಕ್ರವರ್ತಿ ಸೂಲುಬೆಲೆ ಕಾರ್ಯಕ್ರಮಕ್ಕೆ ಪೊಲೀಸರ ನೋಟೀಸ್ ಹಿನ್ನೆಲೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪೊಲೀಸರು ವಿವೇಚನೆ ಇಡ್ಕೊಂಡು ಕೆಲಸ ಮಾಡಬೇಕು, ಮಾನವ ಹಕ್ಕುಗಳನ್ನು ದಮನ ಮಾಡಲು ಆಗುವುದಿಲ್ಲ. ಯಾರೋ ಹೇಳುತ್ತಾರೆ ಎಂದು ಕುಣಿದರೆ, ಅವರೇ ಹೊಣೆ ಹೊತ್ತುಕೊಳ್ಳಬೇಕಾಗುತ್ತೆ. ಇಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆಯಾ? ರಾಜಕೀಯ ನಾಯಕನ ಟೀಕೆ ಮಾಡಬಾರದು, ಇವರು ಯಾರು ಹೇಳೋದಕ್ಕೆ, ಬರೆದು ಕೊಟ್ಟು ಹೋಗಬೇಕಾ? ಇವರು ಹೇಳಿದಂತೆ ಮಾತನಾಡಬೇಕಾ ಎಂದು ಪ್ರಶ್ನಿಸಿದರು.
ಚಕ್ರವರ್ತಿ ಸೂಲಿಬೆಲೆ ಒಬ್ಬ ರಾಷ್ಟ್ರವಾದಿ ಚಿಂತಕರು, ನಕ್ಸಲ್ ವಾದಿಗಳ ಪಕ್ಕದಲ್ಲಿ ಕೂರಿಸಿಕೊಂಡು ಮೀಟಿಂಗ್ ಮಾಡಲು ಬರುತ್ತದೆ. ದೇಶದ್ರೋಹಿ ಚಟುವಟಿಕೆ ಮಾಡುವರ ಬೆಂಬಲ ಪಡೆದು ವೋಟ್ ಬ್ಯಾಂಕ್ ಮಾಡಿಕೊಳ್ಳಲು ಬರುತ್ತದೆ. ರಾಷ್ಟ್ರವಾದಿಯಾ ಭಾಷಣಕ್ಕೆ ನಿರ್ಬಂಧ ಹೇರುತ್ತಾರೆ, ಇದನ್ನೆಲ್ಲಾ ಸಹಿಸಲು ಆಗುತ್ತಾ? 12 ಗಂಟೆಗೆ ಬಂದು ಬಾಗಿಲು ಬಡಿದರೆ ಯಾರು ಸಹಿಸಿಕೊಳ್ಳುತ್ತಾರೆ? ಕಾನೂನಿನ ಮೇಲೆ ನಂಬಿಕೆ ಇಟ್ಟಿರುವ ಜನರಾದ್ದರಿಂದ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇದೆಲ್ಲಾ ಬಹಳ ದಿನ ನಡೆಯಲ್ಲ, ತುರ್ತು ಪರಿಸ್ಥಿತಿಗೆ ಐವತ್ತು ವರ್ಷವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಅಘೋಷಿತ ತುರ್ತು ಪರಿಸ್ಥಿತಿ ಹೇರಿ ಮಾಡಬಾರದ್ದೆಲ್ಲಾ ಮಾಡಿದರೆ ಆಗಲ್ಲ. ಕಾಂಗ್ರೆಸ್ ಅನ್ನು ಜನ ದೇಶಾದ್ಯಂತ ಬೇರು ಸಹಿತ ಕಿತ್ತುಹಾಕೋ ಕೆಲಸ ಮಾಡಿದರು. ನೀವು ಮಾಡಬಾರದನ್ನೆಲ್ಲಾ ಮಾಡಲು ಹೋದರೆ ನಿಮಗೂ ಅದೇ ಗತಿ ಎಂದರು.
Police should work with discretion.
Leave a comment