Home namma chikmagalur chikamagalur ರಾಷ್ಟ್ರೀಯ ಹಬ್ಬಗಳ ನೆನಪಿಗೆ ಜನರಅಭಿರುಚಿಗೆ ತಕ್ಕ ಪ್ರದರ್ಶನಗಳು ಅಗತ್ಯ
chikamagalurHomeLatest Newsnamma chikmagalur

ರಾಷ್ಟ್ರೀಯ ಹಬ್ಬಗಳ ನೆನಪಿಗೆ ಜನರಅಭಿರುಚಿಗೆ ತಕ್ಕ ಪ್ರದರ್ಶನಗಳು ಅಗತ್ಯ

Share
Share

ಚಿಕ್ಕಮಗಳೂರು: ರಾಷ್ಟ್ರೀಯ ಹಬ್ಬಗಳನ್ನು ಒಂದು ದಿನ ಆಚರಿಸಿ ಮರೆಯುವುದಕ್ಕಿಂತಜನರಅಭಿರುಚಿಗೆತಕ್ಕಗುಡಿ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಕಾರ್ಯಕ್ರಮಗಳು ನಡೆದಾಗ ಮಾತ್ರರಾಷ್ಟ್ರೀಯ ಹಬ್ಬಗಳ ಆಚರಣೆಗೆ ನಿಜ ಅರ್ಥ ಬರುತ್ತದೆಎಂದುಜಿಲ್ಲಾಧಿಕಾರಿಎನ್.ಎಂ ನಾಗರಾಜ್ ಅಭಿಪ್ರಾಯಿಸಿದರು.

ಅವರು ನೇತಾಜಿ ಸುಭಾಷ್‌ಚಂದ್ರ ಬೋಸ್‌ಜಿಲ್ಲಾಆಟದ ಮೈದಾನದಲ್ಲಿ ಜಿಲ್ಲಾಡಳಿತ, ಜಿ.ಪಂ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿಗಣರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ಫಲಪುಷ್ಪ ಪ್ರದರ್ಶನ ಹಾಗೂ ಚೈತ್ರೋತ್ಸವ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಚೈತ್ರೋತ್ಸವ-೨ ಬಹಳ ಯಶಸ್ವಿಯಾಗಿ ಮೂಡಿಬಂದಿದೆ, ಕೇವಲ ಫಲಪುಷ್ಪ ಪ್ರದರ್ಶನವಾಗದೆ ವೈವಿಧ್ಯಮಯ ಚಟುವಟಿಕೆಗಳಿಗೆ ಪೂರಕವಾದ ಅವಕಾಶಗಳನ್ನು ಕಲ್ಪಿಸಲಾಗಿತ್ತುಎಂದು ಶ್ಲಾಘಿಸಿದರು.

ಪ್ರವಾಸೋದ್ಯಮವೇ ಬಂಡವಾಳವಾಗಿರುವ ಜಿಲ್ಲೆಯಲ್ಲಿ ಈ ಪ್ರದರ್ಶನದಲ್ಲಿ ಸರ್ವರೂ ಪಾಲ್ಗೊಂಡು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಈ ರೀತಿಯ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆದಾಗಜನರಿಗೆಉಪಯುಕ್ತ ಮಾಹಿತಿದೊರೆಯಲು ಸಹಕಾರಿಯಾಗಲಿದೆಎಂದು ಹೇಳಿದರು.

ಶ್ವಾನ ಮತ್ತು ಜಾನುವಾರುಗಳ ಪ್ರದರ್ಶನ, ಫಲಪಾಕ ಸ್ಪರ್ಧೆ ಶುಚಿರುಚಿಯಾಗಿತಯಾರಿಸಲಾಗಿತ್ತು. ಭಾಗವಹಿಸಿದ ಎಲ್ಲಾ ಮಹಿಳೆಯರಿಗೂ ಬಹುಮಾನ ನೀಡಬೇಕೆನ್ನುವ ಮಟ್ಟಿಗೆ ಖಾದ್ಯಗಳನ್ನು ತಯಾರಿಸಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು.

ಗಣರಾಜ್ಯೋತ್ಸವವನ್ನು ಕಳೆದ ಮೂರು ದಿನಗಳಿಂದ ಆಚರಣೆ ಮಾಡಿದಅನುಭವವಾಯಿತು, ಸಾಂಸ್ಕೃತಿಕಕಾರ್ಯಕ್ರಮ, ಫಲಪುಷ್ಪ ಪ್ರದರ್ಶನಎಲ್ಲವೂಅದ್ದೂರಿಯಾಗಿತ್ತುಎಂದರು.

ವ್ಯಾಪಾರ ವಹಿವಾಟು, ಮಹಿಳಾ ಸಬಲೀಕರಣ, ಮಕ್ಕಳಿಗೆ ವೇದಿಕೆ ಅವಕಾಶ ನೀಡಲಾಗಿದ್ದು, ಅಂತಿಮವಾಗಿ ಮನರಂಜನೆಯ ಪ್ರತಿಫಲವನ್ನುಎಲ್ಲರೂ ಅನುಭವಿಸಿದ್ದಾರೆಂದು ಭಾವಿಸುತ್ತೇನೆಂದರು.
ಮುಂದಿನ ದಿನಗಳಲ್ಲಿ ಈ ಫಲಪುಷ್ಪ ಪ್ರದರ್ಶನವನ್ನು ಕಣ್ಣುಗಳಿಗೆ ಮುದ ನೀಡುವ ಹಬ್ಬವನ್ನಾಗಿಆಚರಿಸಲುತೀರ್ಮಾನಿಸಲಾಗಿದೆಎಂದಅವರು, ಈ ಕಾರ್ಯಕ್ರಮಅದ್ದೂರಿಯಾಗಿ ಬಹಳ ಉಪಯುಕ್ತವಾಗಿದ್ದು, ಇದನ್ನುಆಯೋಜನೆ ಮಾಡಿದಜಿ.ಪಂ ಸಿಇಒ ಮತ್ತವರತಂಡಕ್ಕೆಅಭಿನಂದನೆ ತಿಳಿಸಿದರು.

ಜಿ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಹೆಚ್.ಎಸ್‌ಕೀರ್ತನ ಮಾತನಾಡಿ, ಈ ಫಲಪುಷ್ಪ ಪ್ರದರ್ಶನದಲ್ಲಿ ವಿವಿಧ ಬಗೆಯ ೧೫೦ ಸ್ಟಾಲ್‌ಗಳನ್ನು ನಿರ್ಮಾಣ ಮಾಡಿ ಮಾರಾಟಗಾರರಿಗೆ ಅನುಕೂಲ ಕಲ್ಪಿಸಲಾಗಿತ್ತುಎಂದರು.

ಕಳೆದ ಮೂರು ದಿನಗಳಿಂದ ಈ ಕಾರ್ಯಕ್ರಮದಲ್ಲಿ ಮನರಂಜನೆ, ಜಾನುವಾರು, ಡಾಗ್ ಶೋ ಪ್ರದರ್ಶನಜನರ ಮನಸೂರೆಗೊಂಡವು. ಮೂರು ದಿನಗಳಲ್ಲಿ ೧.೫೦ ಕೋಟಿರೂ. ವ್ಯಾಪಾರ ವಹಿವಾಟು ನಡೆಸಲಾಗಿದೆ. ಸ್ವಸಹಾಯ ಸಂಘದ ಮಹಿಳೆಯರು, ಮದ್ಯಮ ವರ್ಗದವರು ಭಾಗವಹಿಸುವ ಮೂಲಕ ಆರ್ಥಿಕ ಸದೃಢರಾಗಿದ್ದಾರೆಂದು ಹೇಳಿದರು.

ಇಳಕಲ್, ಮೊಳಕಾಲ್ಮೂರು ಸೀರೆಗಳು ಅತೀ ಹೆಚ್ಚು ಮಾರಾಟವಾಗಿದ್ದು, ಕೆಎಸ್‌ಐಸಿ ಮೈಸೂರು ಸಿಲ್ಕ್ ೭೫ ಲಕ್ಷ ರೂ.ಗಳ ಸೀರೆಗಳು ಮಾರಾಟವಾಗಿದ್ದು, ಇದು ಬಹಳಷ್ಟು ಜನರಜೀವನೋಪಾಯಕ್ಕೆ ನಾಂದಿಯಾಗಿದೆಎಂದು ತಿಳಿಸಿದರು.

ಈ ಕಾರ್ಯಕ್ರಮದ ಯಶಸ್ವಿಗೆ ಜಿಲ್ಲಾಧಿಕಾರಿಗಳ ಸಲಹೆ ಸಹಕಾರದಜೊತೆಗೆತೋಟಗಾರಿಕೆ, ಕೃಷಿ ಇಲಾಖೆ ಸೇರಿದಂತೆಎಲ್ಲಾ ಇಲಾಖಾಧಿಕಾರಿಗಳ ಸಹಕಾರ ಪ್ರಮುಖವಾಗಿದ್ದು, ನಗರಸಭೆ ಸ್ವಚ್ಚತೆ ಮತ್ತು ದೂಳು ಆಗದಂತೆ ನೀರು ಸಿಂಪಡಿಸಿ ಸಹಕಾರ ನೀಡಿದ್ದು, ಎಲ್ಲರಿಗೂಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಜಿತೇಂದ್ರಕುಮಾರ್‌ದಯಾಮ, ತೋಟಗಾರಿಕೆಇಲಾಖೆಯಜಂಟಿ ನಿರ್ದೇಶಕಿ ಮಂಗಳ, ಯೋಜನಾ ನಿರ್ದೇಶಕಿ ಸುಜಾತ, ಕೃಷಿಕ ಸಮಾಜದಅಶೋಕ್ ಮತ್ತಿತರರು ಅಧಿಕಾರಿಗಳು ಭಾಗವಹಿಸಿದ್ದರು.

Performances that suit people’s tastes are necessary to commemorate national festivals.

Share

Leave a comment

Leave a Reply

Your email address will not be published. Required fields are marked *

Don't Miss

ಸಾಲದ ಹಣ ಕೇಳಿದ್ದಕ್ಕೆ ಹಲ್ಲೆ; ತಾಯಿ-ಮಗನ ವಿರುದ್ಧ ಪ್ರಕರಣ

ಕಡೂರು: ಸಾಲವಾಗಿ ನೀಡಿದ್ದ ₹50 ಸಾವಿರವನ್ನು ಹಿಂದಿರುಗಿಸುವಂತೆ ಕೇಳಿದ್ದಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಯಗಟಿ ಪೊಲೀಸ್ ಠಾಣೆಯಲ್ಲಿ ತಾಯಿ-ಮಗನ ವಿರುದ್ಧ ಪ್ರಕರಣ ದಾಖಲಾಗಿದೆ. ಯಗಟಿ ಗ್ರಾಮದ ಮುದಿಯಪ್ಪ ಬಡಾವಣೆಯ...

ಹುಬ್ಬಳ್ಳಿಯಲ್ಲಿ ಆಗಸ್ಟ್ 9ರಂದು ರಾಜ್ಯಮಟ್ಟದ 32ನೇ ವಿಶ್ವ ಆದಿವಾಸಿ ದಿನಾಚರಣೆ

ಚಿಕ್ಕಮಗಳೂರು: ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ಹಾಗೂ ಆದಿವಾಸಿ ಹರಣ ಶಿಖಾರಿ ಪಾರಿ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತಾಶ್ರಯದಲ್ಲಿ ಆಗಸ್ಟ್ 9ರಂದು ಹುಬ್ಬಳ್ಳಿಯಲ್ಲಿ ರಾಜ್ಯಮಟ್ಟದ 32ನೇ ವಿಶ್ವ ಆದಿವಾಸಿ ದಿನಾಚರಣೆ ಅಂಗವಾಗಿ...

Related Articles

ಗ್ರಾಮೀಣ ಪ್ರದೇಶದಲ್ಲಿ ವಲಸೆ ತಡೆಗೆ ವಿಬಿ ಜಿ ರಾಮ್ ಜಿ ಆಸರೆ

ಚಿಕ್ಕಮಗಳೂರು: ಗ್ರಾಮೀಣ ಭಾಗದ ಜನರು ಉದ್ಯೋಗಕ್ಕಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಪ್ಪಿಸಿ, ತಮ್ಮ ಗ್ರಾಮಗಳಲ್ಲಿಯೇ...

ಆಗಸ್ಟ್ 14 ಮತ್ತು 16 ರಂದು ವಿದ್ಯುತ್ ನಿಲುಗಡೆ

ಚಿಕ್ಕಮಗಳೂರು:  ಗ್ರಾಮೀಣ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ ಹೊಸದಾದ ಗಾಣದಾಳು ವಿ.ವಿ ಕೇಂದ್ರದ ೧೧ ಕೆ.ವಿ ಲಿಂಕ್...

ವೃದ್ದರ ಮಾಶಾಸನ ಬಿಡುಗಡೆ ಆಗ್ರಹಿಸಿ ಕರವೇ (ಪ್ರವೀಣ್‌ಶೆಟ್ಟಿ)ಬಣ ಪ್ರತಿಭಟನೆ

ಚಿಕ್ಕಮಗಳೂರು: ವೃದ್ದರ ಮಾಶಾಸನ ಬಿಡುಗಡೆ ಹಾಗೂ ಬಿಡದಿಯಲ್ಲಿ ರೈತರ ಜೀವನ ಉಳಿಸಬೇಕು ಎಂದು ಆಗ್ರಹಿಸಿ ಕರವೇ...

ವಿದ್ಯುತ್ ಸ್ಪರ್ಶದಿಂದ ಎರಡು ಜಾನುವಾರುಗಳ ಸಾವು

ನರಸಿಂಹರಾಜಪುರ: ಜಮೀನಿಗೆ ಅಳವಡಿಸಿದ್ದ ಐಬೆಕ್ಸ್ ತಂತಿ ಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದ ಪರಿಣಾಮ ಎರಡು...