Home namma chikmagalur chikamagalur ದೇವಸ್ಥಾನದಲ್ಲೇ ಮಗುವನ್ನು ಮರೆತುಹೋದ ಪೋಷಕರು!
chikamagalurHomeLatest Newsnamma chikmagalur

ದೇವಸ್ಥಾನದಲ್ಲೇ ಮಗುವನ್ನು ಮರೆತುಹೋದ ಪೋಷಕರು!

Share
Share

ಕಳಸ: ಪಟ್ಟಣದ ಶ್ರೀಕಲಶೇಶ್ವರ ಸ್ವಾಮಿ ದೇವಸ್ಥಾನಕ್ಕೆ ಬಂದಿದ್ದ ದಂಪತಿ, ದೇವರ ದರ್ಶನ ಪಡೆದು ಹಿಂದಿರುಗುವಾಗ ತಮ್ಮ ನಾಲ್ಕು ವರ್ಷದ ಹೆಣ್ಣು ಮಗುವನ್ನು ದೇವಸ್ಥಾನದ ಆವರಣದಲ್ಲೇ ಮರೆತು ಕಾರಿನಲ್ಲಿ ಹೊರಟುಹೋದ ಘಟನೆ ಶನಿವಾರ ನಡೆದಿದ್ದು ಸ್ಥಳೀಯರ ಮಾನವೀಯತೆ ಹಾಗೂ ಕಳಸ ಪೊಲೀಸರ ತಕ್ಷಣದ ಕಾರ್ಯಾಚರಣೆಯಿಂದಾಗಿ ಮಗು ಸುರಕ್ಷಿತವಾಗಿ ಪೋಷಕರ ಮಡಿಲು ಸೇರಿದೆ.

ಕೊಳ್ಳೆಗಾಲದ ಶಿವಶಂಕರ್ ದಂಪತಿ ಕಳಸದ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ದೇವರ ದರ್ಶನ ಪಡೆದ ಬಳಿಕ ಹೊರನಾಡಿಗೆ ಹೊರಟಿದ್ದಾರೆ. ದೇವಸ್ಥಾನದ ಆವರಣದಿಂದ ಪೋಷಕರು ಕಾರು ಹತ್ತಿ ಹೊರಟಾಗ, ನಾಲ್ಕು ವರ್ಷದ ಪುಟ್ಟಮಗು ತಾನು ಒಂಟಿಯಾಗಿದ್ದನ್ನು ಕಂಡು ದಿಗಿಲುಗೊಂಡಿದೆ.

ತನ್ನ ಕಣ್ಣೆದುರೇ ಹೆತ್ತವರು ಕಾರಿನಲ್ಲಿ ಹೋಗುತ್ತಿರುವುದನ್ನು ಕಂಡು, ಕಣ್ಣೀರು ಹಾಕುತ್ತಾ ಕಾರಿನ ಹಿಂದೆಯೇ ರಸ್ತೆಯಲ್ಲಿ ಓಡಲಾರಂಭಿಸಿದೆ. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಮಗುವನ್ನು ರಕ್ಷಿಸಿದ್ದಾರೆ. ನಂತರ ಮಗುವಿಗೆ ಧೈರ್ಯ ತುಂಬಿ, ಕಳಸ ಪೊಲೀಸ್ ಠಾಣೆಗೆ ಕರೆತಂದು ಒಪ್ಪಿಸಿದ್ದಾರೆ.

ಪೊಲೀಸ್ ಠಾಣೆಯಲ್ಲಿ ಮಗು ಅಳುತ್ತಾ ತಾನು ಕೊಳ್ಳೆಗಾಲದವಳೆಂದು, ತನ್ನ ಹೆಸರು, ಹೆತ್ತವರ ಹೆಸರು ಹಾಗೂ ಸ್ಥಳೀಯರ ಮಾನವೀಯತೆ, ಪೊಲೀಸರ ಸಮಯ ಪ್ರಜ್ಞೆಯಿಂದ ಹೆತ್ತವರ ಮಡಿಲು ಸೇರಿದ ಕಂದಮ್ಮ
ಶಾಲೆಯ ಹೆಸರನ್ನು ಸ್ಪಷ್ಟವಾಗಿ ಹೇಳಿದೆ.

“ನನಗೆ ನನ್ನ ಅಪ್ಪ ಬೇಕು, ಅಮ್ಮ ಬೇಕು. ಅವರಿಗೆ ನಾನಂದ್ರೆ ಇಷ್ಟ, ನನಗೂ ಅವರಂದ್ರೆ ಇಷ್ಟ. ಆದರೆ, ನನ್ನನ್ನು ಇಲ್ಲೇ ಬಿಟ್ಟು ಹೋಗಿದ್ದಾರೆ. ನನ್ನನ್ನು ಅಪ್ಪನ ಹತ್ತಿರ ಕಳುಹಿಸಿ…” ಎಂದು ಮಗು ಬಿಕ್ಕಿ ಬಿಕ್ಕಿ ಅಳುತ್ತಿದ್ದಾಗ ಅಲ್ಲಿದ್ದ ಸಾರ್ವಜನಿಕರು ಹಾಗೂ ಪೊಲೀಸರ ಕರುಳು ಹಿಂಡಿದಂತಾಗಿದೆ. ಪೊಲೀಸರು ಮಗುವಿಗೆ ಚಾಕೊಲೆಟ್ ನೀಡಿ, ಸಾಂತ್ವನ ಹೇಳಿದ್ದಾರೆ. ಅತ್ತ ಕಳಸದಿಂದ ಕಾರಿನಲ್ಲಿ ಹೊರಟ
ಪೋಷಕರು ಹೊರನಾಡು ತಲುಪಿದ್ದಾರೆ.

ಅಲ್ಲಿ ಕಾರಿನಿಂದ ಇಳಿಯುವಾಗ ತಮ್ಮೊಂದಿಗೆ ಮಗು ಇಲ್ಲದಿರುವುದು ಅರಿವಿಗೆ ಬಂದಿದೆ. ಗಾಬರಿಗೊಂಡು ತಕ್ಷಣವೇ ದೇವಸ್ಥಾನದ ಕಚೇರಿಯಲ್ಲಿ ವಿಚಾರಿಸಿದಾಗ, ಮಗು ಕಳಸ ಪೊಲೀಸ್ ಠಾಣೆಯಲ್ಲಿ
ಸುರಕ್ಷಿತವಾಗಿರುವ ಮಾಹಿತಿ ಲಭ್ಯವಾಗಿದೆ.

ಸುಮಾರು ಒಂದು ಗಂಟೆಯ ಕಾಲ ಹೆತ್ತವರಿಂದ ದೂರವಾಗಿ ಕಣ್ಣೀರಿಟ್ಟ ಕಂದಮ್ಮ. ಕೊನೆಗೂ ಪೊಲೀಸ್ ಠಾಣೆಗೆ ಧಾವಿಸಿ ಬಂದ ಪೋಷಕರನ್ನು ಕಂಡು
ನಿಟ್ಟುಸಿರುಬಿಟ್ಟಿದೆ. ಪೊಲೀಸರು ಸೂಕ್ತ ಪರಿಶೀಲನೆ ನಡೆಸಿ ಮಗುವನು ಪೋಷಕರಿಗೆ ಹಸ್ತಾಂತರಿಸಿದ್ದಾರೆ.

Parents who forgot their child in the temple!

Share

Leave a comment

Leave a Reply

Your email address will not be published. Required fields are marked *

Don't Miss

ಅಪಘಾತದಲ್ಲಿ ಸಾವು: ಚಾಲಕನಿಗೆ 9 ತಿಂಗಳು ಸಜೆ

ಚಿಕ್ಕಮಗಳೂರು: ಅತೀ ವೇಗ ಮತ್ತು ಅಜಾಗರೂಕತೆಯಿಂದ ಕಾರು ಚಾಲನೆ ಮಾಡಿ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ಮೃತಪಟ್ಟು ಇನ್ನಿಬ್ಬರು ಗಾಯಗೊಂಡ ಘಟನೆಗೆ ಸಂಬಂಧಿಸಿದಂತೆ ಚಾಲಕನಿಗೆ ನಗರದ ಒಂದನೇ ಅಧಿಕ ಹಿರಿಯ ಸಿ.ಜೆ....

ದ್ವಿಚಕ್ರ ವಾಹನ ಡಿಕ್ಕಿ-ಪಾದಚಾರಿ ಯುವಕ ಸಾವು

ಚಿಕ್ಕಮಗಳೂರು: ತಾಲೂಕಿನ ಕುರುಬರಹಳ್ಳಿ ಗ್ರಾಮದ ಸಮೀಪ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಯುವಕ ಮೃತಪಟ್ಟಿದ್ದು, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರ ಮಾಹಿತಿ ಪ್ರಕಾರ, ಮಾಚೇನಹಳ್ಳಿ ಗ್ರಾಮದ...

Related Articles

100 ಅಡಿ ಪ್ರಪಾತಕ್ಕೆ ಉರುಳಿದ 10 ಚಕ್ರದ ಲಾರಿ

ಚಿಕ್ಕಮಗಳೂರು: ಬ್ರೇಕ್ ಫೇಲ್ ಆಗಿ ಚಾಲಕನ ನಿಯಂತ್ರಣ ತಪ್ಪಿದ ೧೦ ಚಕ್ರದ ಲಾರಿಯೊಂದು ರಸ್ತೆ ಪಕ್ಕದ...

ದಾಸರಹಳ್ಳಿ ಕೆರೆ ಸೆ.೧೦ ರಂದು ಲೋಕಾರ್ಪಣೆ

ಚಿಕ್ಕಮಗಳೂರು: ಸುಮಾರು ೨ ಕೋಟಿ ರುಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿರುವ ದಾಸರಹಳ್ಳಿ ಕೆರೆಯನ್ನು ಸೆಪ್ಟಂಬರ್ ೧೦...

ಸಾಮಾಜಿಕ ಹೋರಾಟಗಾರನ ಹತ್ಯೆಯ ಆರೋಪಿಗಳ ಕಠಿಣ ಶಿಕ್ಷೆಗೆ ಮನವಿ

ಚಿಕ್ಕಮಗಳೂರು:  ಸಾಮಾಜಿಕ ಹೋರಾಟಗಾರ ಹಾಗೂ ದಲಿತ ಮುಖಂಡ ಭೂಮಾನ ಂದ ಹತ್ಯೆಗೈದ ಆರೋಪಿಗಳಿಗೆ ಕಠಿಣ ಶಿಕ್ಷೆ...

ಕನಿಷ್ಟ ವೇತನ ಜಾರಿಗೆ ಆಗ್ರಹಿಸಿ ಹೊರಗುತ್ತಿಗೆ ನೌಕರರಿಂದ ಪ್ರತಿಭಟನೆ

ಚಿಕ್ಕಮಗಳೂರು:  ಸರ್ಕಾರಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌ ಕರರಿಗೆ ಕಾರ್ಮಿಕ ಆಯುಕ್ತರ ಆದೇಶದಂತೆ ಕನಿಷ್ಟ ವೇತನ...