ಚಿಕ್ಕಮಗಳೂರು: ಮೂಡಿಗೆರೆ ಶಾಸಕಿ ನಯನಮೋಟಮ್ಮನವರ ನಡವಳಿಕೆ, ವರ್ತನೆಯ ಬಗ್ಗೆ ಮುಸ್ಲಿಮ್ ಮುಖಂಡರು ಕೊತ,ಕೊತ ಕುದಿಯುತ್ತಿದ್ದಾರೆ. ಚಿಕ್ಕಮಗಳೂರು ಪ್ರವಾಸಿ ಮಂದಿರದಲ್ಲಿ ಸಭೆ ಸೇರಿ ನಯನಮೋಟಮ್ಮನವರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ.
ಕಾಂಗ್ರೆಸ್ ಮುಖಂಡರಾದ ಮಹಮ್ಮದ್, ಹನೀಫ್ ಸಿ.ಡಿ.ಎ ಅಧ್ಯಕ್ಷ ನಯಾಜ್ ಮತ್ತು ವಕ್ತಾರ ಹೆಚ್.ಹೆಚ್.ದೇವರಾಜ್ ಬಳಿ ತಮ್ಮ ನೋವು ಮತ್ತು ಆಕ್ರೋಶ ವ್ಯಕ್ತಪಡಿಸಿ ಕ್ರಮ ತೆಗೆದುಕೊಳ್ಳಲು ಆಗ್ರಹಿಸಿದ್ದಾರೆ. ಶಾಸಕರಾದಗಿನಿಂದ ಉಡಾಪೆಯಾಗಿ ನಡೆದುಕೊಳ್ಳುವ ನಯನಮೋಟಮ್ಮನವರ ಗೆಲುವಿಗೆ ಶ್ರಮಿಸಿದ್ದಕ್ಕೆ ಸಾರ್ಥಕವಾಯಿತು ಎಂದು ತಮ್ಮ ದುಃಖ ದುಮ್ಮಾನಗಳನ್ನು ಹೇಳಿದ್ದಾರೆ.
ಬಿಜೆಪಿ ಮತ್ತು ಭಜರಂಗದವರ ಮಾತು ಕೇಳುವ ಶಾಸಕರು ಪ್ರಮೋದ್ ಮುತಾಲಿಕ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ್ದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಲ್ಲದೆ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಅಂಶುಮಂತ್ ತುಟಿ ಬಿಚ್ಚದಿರುವುದು ಏಕೆ ಇನ್ನೂ ಮುಂದೆ ಹೋಗಿ ಪಕ್ಷದ ಪ್ರದಾನ ಕಾರ್ಯದರ್ಶಿ ಶಿವಾನಂದಸ್ವಾಮಿ ನಯನರಿಗೆ ಪತ್ರ ಬರೆದು ಪ್ರಶಂಸೆ ಮಾಡಿರುವುದು ಕಾಂಗ್ರೆಸ್ ನಂಬಿದ ನಮಗೆ ಘಾಸಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯ ಜನರು ಶಾಸಕಿ ನಯನಮೋಟಮ್ಮನವರನ್ನು ಮಾತನಾಡಿಸಲು ಸಾಧ್ಯವಿಲ್ಲ. ಎರಡು ವರ್ಷಗಳಿಂದ ಸಹಿಸಿಕೊಂಡು ಬಂದಿದ್ದೇವೆ ಇನ್ನೂ ಸಹಿಸಲು ಸಾಧ್ಯವಿಲ್ಲ. ಈ ಬಗ್ಗೆ ಅವರ ಮೇಲೆ ಪಕ್ಷ ಕ್ರಮ ಕೈಗೊಳ್ಳ ಬೇಕು. ಈ ಸಂಬಂಧ ಎಐಸಿಸಿ ಮತ್ತು ಕೆಪಿಸಿಸಿ ಹಾಗೂ ರಾಹುಲ್ ಗಾಂಧಿಯವರಿಗೆ ಪತ್ರ ಬರೆಯುವುದರ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಳಿ ನಿಯೋಗ ಹೋಗಿ ದೂರು ಸಲ್ಲಿಸುವ ತೀರ್ಮಾನಕ್ಕೆ ಬರಲಾಯಿತು ಎಂದು ತಿಳಿದುಬಂದಿದೆ.
ಸಿ.ಡಿ.ಎ ಅಧ್ಯಕ್ಷರಾದ ನಯಾಜ್ ಮೊದಲು ಜಿಲ್ಲಾ ಕಾಂಗ್ರೆಸ್ ಗೆ ಸಭೆ ನಡೆಸಿ ನಯನಮೋಟಮ್ಮನವರನ್ನು ಕರೆಯಿಸಿ ಮಾತನಾಡುವ ಸಲಹೆ ನೀಡಿದರು ಎಂದು ತಿಳಿದುಬಂದಿದೆ.
ನಮ್ಮ ಭಾವನೆಗಳಿಗೆ ಸ್ಪಂದಿಸಿರುವ ದಲಿತ ಸಂಘಟನೆ ಗಳು ರೈತ ಸಂಘ ಮತ್ತು ಹೆಚ್.ಹೆಚ್.ದೇವರಾಜ್ ರವರಿಗೆ ಧನ್ಯವಾದ ಹೇಳಿದರು ಎಂದು ತಿಳಿದುಬಂದಿದೆ. ಅಲ್ದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಜಾಬೀರ್.ಮೂಡಿಗೆರೆ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಅಕ್ರಮ್ ಹಾಜಿ ಮುಖಂಡರಾದ ಸಿ.ಕೆ ಇಬ್ರಾಹಿಂ ಮತ್ತಿತರರು ಇದ್ದರೂ ಎಂದು ತಿಳಿದುಬಂದಿದೆ.
Muslims are killing each other against MLA Nayana Motamma. !
Leave a comment