ಚಿಕ್ಕಮಗಳೂರು: ಕಾಡನೆಗಳ ಉಪಟಾಳವನ್ನು ಸರಿಯಾಗಿ ನಿರ್ವಹಣೆ ಮಾಡದಿರುವ ಅರಣ್ಯ ಇಲಾಖೆಯ ಬಗ್ಗೆ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ,ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಮತ್ತು ಚಿಕ್ಕಮಗಳೂರು ಶಾಸಕ ಹೆಚ್.ಡಿ.ತಮ್ಮಯ್ಯ ಪತ್ರಿಕಾಗೋಷ್ಠಿ ನಡೆಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತೇವೆ ಎಂದು ಹೇಳಿಕೆ ಬಿಡುಗಡೆ ಮಾಡಿದ್ದರು ಆದರೆ ಈ ಬಗ್ಗೆ ಸರ್ಕಾರ ಯಾವುದಕ್ಕೂ ಸ್ಪಂದಿಸಲಿಲ್ಲಾ ಇದರಿಂದ ಕೆರಳಿದ ನಯನಾ ಇಂದು ಬೆಂಗಳೂರಿಗೆ ತೆರಳಿ ರಾಜೀನಾಮೆ ನೀಡುವೆ ನಾವು ಜನರ ಕಷ್ಟಕ್ಕೆ ಸ್ಪಂದಿಸ ಬೇಕು ಎಂದು ಪುಕ್ಕಟ್ಟೆ ಪ್ರಚಾರ ಪಡೆದಿದ್ದಾರೆ ಎಂದು ಜನರಾಡಿ ಕೊಳ್ಳುತ್ತಿದ್ದಾರೆ.
ರಾಜೀನಾಮೆ ನೀಡುವುದಕ್ಕೂ ಕೆಲ ನಿಯಮಗಳಿವೆ ರಾಜೀನಾಮೆ ನೀಡಿದರು ಸಕಾರಣ ಕೊಡಬೇಕು. ನಯನಾ ಮೋಟಮ್ಮ ಸ್ಫೀಕರ್ ಕೈಗೆ ನೇರವಾಗಿ ರಾಜೀನಾಮೆ ಪತ್ರ ನೀಡಬೇಕು ನಿರ್ದಿಷ್ಟ ಕಾರಣ ತಿಳಿಸ ಬೇಕು ಇವರ ರಾಜೀನಾಮೆ ಪತ್ರ ಪ್ರಬಂಧ ತರಹ ಬರೆದಿರುವುದು ನೋಡಿದರೆ ಇದು ಪ್ರಚಾರದ ಉದ್ದೇಶ ಎನ್ನಿಸುತ್ತದೆ.ಜೊತೆಗೆ ತಾನೇ,ಸ್ಪೀಕರ್ ಕೈಗೆ ರಾಜೀನಾಮೆ ನೀಡ ಬೇಕು ಆದರೆ ಸ್ಪೀಕರ್ ಅವರ ಅವರ ಆಪ್ತ ಕಾರ್ಯದರ್ಶಿ ಕೈಗೆ ಕೊಟ್ಟಿರುವುದು ಅಷ್ಟೊಂದು ತುರ್ತು ಇದ್ದಾಗ ಸ್ಪೀಕರ್ ಇರವ ಬಳಿ ಹೋಗಿ ಅವರ ಕೈಗೆ ನೀಡಬಹುದಿತ್ತು.
ಮತದಾರರನ್ನು ಮರುಳು ಮಾಡುವುದಿದ್ದರೆ ಆನೆಗಳ ಹಿಂಡು ಬಾರದಂತೆ ತಡೆಯುವ ಬಗ್ಗೆ ಜನರ ಜೊತೆಗೆ ಪ್ರತಿಭಟಿಸ ಬಹುದಿತ್ತು.ಮೂಡಿಗೆರೆ ಕ್ಷೇತ್ರದಲ್ಲಿ ನಯನಾ ವಿರುದ್ದ ಕಾಂಗ್ರೆಸ್ ಮುಖಂಡರು ತಿರುಗಿ ಬಿದ್ದಿದ್ದಾರೆ ಹೀಗಾಗಿ ಹೊಸ ಡ್ರಾಮಾ ಶುರುಹಚ್ಚಿಕೊಂಡಿದ್ದಾರೆ ಎಂದು ಹೇಳುವುದಕ್ಕೆ ಸಾಕ್ಷಿ ಸಮೇತವಾಗಿ ಸಿಕ್ಕಿಕೊಂಡಿದ್ದಾರೆ.ಇನ್ನೂ ಟಿ.ಡಿ.ರಾಜೇಗೌಡ ಮತ್ತು ತಮ್ಮಯ್ಯ ಮಾತ್ರ ರಾಜೀನಾಮೆ ಬಗ್ಗೆ ಪತ್ರಿಕಾ ಹೇಳಿಕೆಗೆ ಸೀಮಿತರಾಗಿದ್ದಾರೆ.
ಜನ ಮರಳೋ,ಜಾತ್ರೆ ಮರಳೋ ___ಎಂಬ ಜನರಾಡುವ ಮಾತುಗಳು ನೆನಪಾಗುತ್ತಿವೆ.ಅಯ್ಯೋ ರಾಜೀನಾಮೆ ಎಂಬ ಹೈಡ್ರಾಮಾ ಮಾತ್ರ ಅವರ ಹಿಂಬಾಲಕರು ನಮ್ಮ ಶಾಸಕರ ನೋಡಿ ಖುಷಿ ಪಟ್ಟರೆ ಅವರ ವಿರೋಧಿಗಳಿಗೆ ಅಸ್ತ್ರ ಸಿಕ್ಕಿದೆ.ಆಡಳಿತಾರೂಢ ಸರ್ಕಾರದ ಶಾಸಕರ ರಾಜೀನಾಮೆ ಅಂಗೀಕಾರವಾಗುವುದು ಸಾಧ್ಯವೇ? ಪ್ರಚಾರಕ್ಕಾಗಿ, ಜನರ ದಿಕ್ಕು ತಪ್ಪಿಸುವ ಬದಲು ಜನರ ಜೊತೆ ಹೋರಾಟ ಮಾಡಿದ್ದರೆ ಒಪ್ಪಬಹುದಿತ್ತು.
MLAs’ resignation-as-campaign-tactic turns out to be a damp squib
Leave a comment