ಮೂಡಿಗೆರೆ ಭಾಗದಲ್ಲಿ ಒಟ್ಟು 38ಕ್ಕೂ ಅಧಿಕ ಕಾಡಾನೆಗಳು ಇದೀಗ ಎರಡು ಪ್ರತ್ಯೇಕ ತಂಡಗಳಾಗಿ ವಿಂಗಡಣೆಯಾಗಿ ಸಂಚರಿಸುತ್ತಿವೆ. ವಿಶೇಷವಾಗಿ ಕತ್ತಲಾಗುತ್ತಿದ್ದಂತೆಯೇ ಈ ಕಾಡಾನೆಗಳ ಹಿಂಡು ಸಕ್ರಿಯವಾಗಿ ಸಂಚಾರ ಆರಂಭಿಸುತ್ತಿದ್ದು, ಅವುಗಳ ಚಲನವಲನಗಳು ಡ್ರೋನ್ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿವೆ.
ಕಾಡಾನೆಗಳ ಹಿಂಡು ಯಾವುದೇ ಕಾರಣಕ್ಕೂ ಜನವಸತಿ ಪ್ರದೇಶಗಳತ್ತ ನುಗ್ಗಿ ಪ್ರಾಣಹಾನಿ ಅಥವಾ ಬೆಳೆಹಾನಿ ಮಾಡದಂತೆ ತಡೆಯಲು ಅರಣ್ಯ ಇಲಾಖೆ ಹೈ ಅಲರ್ಟ್ ಘೋಷಿಸಿದೆ. ನೂರಾರು ಇ.ಟಿ.ಎಫ್ (ETF – ಆನೆ ಕಾರ್ಯಪಡೆ) ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಕಾಡಾನೆಗಳ ಹಿಂಡಿನ ಹಿಂದೆ-ಮುಂದೆ ನಿಂತು ಅವುಗಳ ಪ್ರತಿಯೊಂದು ನಡೆಯನ್ನೂ ಸೂಕ್ಷ್ಮವಾಗಿ ಮಾನಿಟರ್ ಮಾಡುತ್ತಿದ್ದಾರೆ.

ಸದ್ಯಕ್ಕೆ ಆನೆಗಳನ್ನು ಓಡಿಸುವ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿರುವುದರಿಂದ, ಕಾಡಾನೆಗಳ ನೈಸರ್ಗಿಕ ನಡೆಗಾಗಿ (Natural movement) ಅರಣ್ಯ ಇಲಾಖೆ ಸಿಬ್ಬಂದಿ ಕಾದು ಕುಳಿತಿದ್ದಾರೆ. ಇಡೀ ರಾತ್ರಿ ಜಾಗರಣೆಯಲ್ಲಿದ್ದು ಆನೆಗಳ ಚಲನವಲನಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಸಿಬ್ಬಂದಿ, ಗ್ರಾಮಸ್ಥರು ರಾತ್ರಿ ವೇಳೆ ಅನಗತ್ಯವಾಗಿ ಮನೆಯಿಂದ ಹೊರಬರದಂತೆ ಎಚ್ಚರಿಕೆ ನೀಡಿದ್ದಾರೆ.

Forest force awaits a ‘nature walk’ in the forests of Mudigere