Home namma chikmagalur chikamagalur ಆಧುನಿಕ ಸೌಲಭ್ಯಗಳೊಂದಿಗೆ ಮಿಲನ್ ಚಿತ್ರಮಂದಿರ ಪುನರಾರಂಭ
chikamagalurHomeLatest Newsnamma chikmagalur

ಆಧುನಿಕ ಸೌಲಭ್ಯಗಳೊಂದಿಗೆ ಮಿಲನ್ ಚಿತ್ರಮಂದಿರ ಪುನರಾರಂಭ

Share
Share

ಚಿಕ್ಕಮಗಳೂರು: ದಶಕಗಳ ಕಾಲ ಸಿನಿ ರಸಿಕರಿಗೆ ಭರಪೂರ ಮನರಂಜನೆ ಒದಗಿಸಿ ಕಳೆದೆರಡು ವರ್ಷಗಳ ಹಿಂದೆ ಮುಚ್ಚಲ್ಪಟ್ಟಿದ್ದ ನಗರದ ಮಿಲನ್ ಚಿತ್ರಮಂದಿರ ಆಧುನಿಕ ಸೌಲಭ್ಯಗಳೊಂದಿಗೆ ಪುನರಾರಂಭಗೊಂಡಿದೆ.

ಗುರುವಾರ ಚಿತ್ರಮಂದಿರದ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಶಾಸಕ ಎಚ್.ಡಿ.ತಮ್ಮಯ್ಯ ನವೀಕೃತ ಚಿತ್ರಮಂದಿರವನ್ನು ಉದ್ಘಾಟಿಸಿ ಈ ವೇಳೆ ಮಾತನಾಡಿದ ಅವರು, ಮಿಲನ್ ಚಿತ್ರಮಂದಿರ ಮುಚ್ಚಲ್ಪಟ್ಟಾಗ ಚಿತ್ರ ರಸಿಕರಿಗೆ ತೀವ್ರ ದುಃಖ, ನಿರಾಸೆ ಉಂಟಾಗಿತ್ತು. ಹೆಚ್ಚು ಕುಟುಂಬ ಸಮೇತ ವೀಕ್ಷಿಸಬಹುದಾದ ಅದರಲ್ಲೂ ಡಾ.ರಾಜ್‌ಕುಮಾರ್ ನಟನೆಯ ಬಹುತೇಕ ಚಿತ್ರಗಳು ಮಿಲನ್ ಚಿತ್ರಮಂದಿರದಲ್ಲಿ ಪ್ರದರ್ಶಿಸಲ್ಪಟ್ಟಿವೆ ಎಂದು ತಿಳಿಸಿದರು.

ಕಲಾವಿದರನ್ನು ಪ್ರೋತ್ಸಾಹಿಸಬೇಕಾದದ್ದು ಅಭಿಮಾನಿಗಳ ಕರ್ತವ್ಯ. ಚಲನ ಚಿತ್ರಗಳನ್ನು ನೋಡುವ ಅಭಿರುಚಿ ಹೊಂದಿದವರಿಗೆ ಇಂದಿಗೂ ಚಿತ್ರಮಂದಿರಕ್ಕೆ ಬರಬೇಕು ಎನ್ನುವ ಅಭಿಲಾಶೆ ಇರುತ್ತದೆ. ಆದರೆ ಇಂದಿನ ಡಿಜಿಟಲ್ ತಂತ್ರಜ್ಞಾನದಿಂದಾಗಿ ಎಲ್ಲವೂ ಸಾಮಾಜಿಕ ಜಾಲತಾಣಗಳು, ಮೊಬೈಲ್‌ನಲ್ಲಿ ಲಭ್ಯವಿರುವುದಲ್ಲದೆ. ಮನೆಗಳಲ್ಲೇ ಹೋಂ ಥಿಯೇಟರ್‌ಗಳು ಇರುವುದರ ಜೊತೆಗೆ ಚಿತ್ರ ಬಿಡುಗಡೆ ಆಗಿ ಕೆಲವೇ ದಿನಗಳಲ್ಲಿ ಅದರ ಪ್ರತಿ ಎಲ್ಲರಿಗೂ ಲಭ್ಯವಾಗುತ್ತಿರುವುದರಿಂದ ಚಿತ್ರಮಂದಿರದ ಕಡೆಗೆ ಬರುವವರ ಸಂಖ್ಯೆ ಕಡಿಮೆ ಆಗುತ್ತಿದೆ. ಆದರೂ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸುವ ಅನುಭವವೇ ಬೇರೆ ಎಂದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಚಲನ ಚಿತ್ರಗಳು ಬಂದ ನಂತರ ನಾಟಕಗಳ ಪ್ರಭಾವ ಕಡಿಮೆ ಆಗಿತ್ತು. ಆದರೆ ಈಗ ಟಿ.ವಿ., ಮೊಬೈಲ್ ಇನ್ನಿತರೆ ಡಿಜಿಟಲ್ ಮಾಧ್ಯಮಗಳು ಬಂದ ಮೇಲೆ ಸಿನಿಮಾಗಳನ್ನು ಚಿತ್ರಮಂದಿರಗಳಲ್ಲಿ ವೀಕ್ಷಿಸುವುದು ಕಡಿಮೆ ಆಗುತ್ತಿದೆ. ಆದರೂ ಒಳ್ಳೆಯ ಚಿತ್ರಗಳು ಬಂದರೆ ಜನ ಸಾಲುಗಟ್ಟಿ ಬರುತ್ತಿದ್ದಾರೆ ಎಂದರು.

ಹಿಂದೆ ಸರತಿಯಲ್ಲಿ ನಿಲ್ಲದೆ, ಪ್ರಭಾವ ಬಳಸಿ ಟಿಕೆಟ್ ಪಡೆದು ಸಿನಿಮಾ ನೋಡುವುದೆಂದರೆ ಒಂದು ಪ್ರತಿಷ್ಠೆಯ ವಿಚಾರವಾಗುತ್ತಿತ್ತು. ಅಂತಹ ದಿನಗಳು ಮತ್ತೆ ಬರಲಿ ಎಂದು ಆಶಿಸುತ್ತೇವೆ ಎಂದರು.
ಹಿಂದೆ ಚಲನಚಿತ್ರ ಸಾಹಿತ್ಯ, ಸಂಗೀತ ಅರ್ಥಗರ್ಭಿತವಾಗಿ, ಪ್ರಾಸವೂ ಇರುತ್ತಿತ್ತು. ಆದರೆ ಈಗ ಅಂತಹ ಸಾಹಿತ್ಯವು ಕಡಿಮೆ ಆಗಿದೆ. ಸಮಾಜದ ಸ್ಥರವೇ ಹೀಗೆ ಆಗಿದೆಯೂ ಗೊತ್ತಿಲ್ಲ. ಹಿಂದೆ ಚಲನ ಚಿತ್ರಗಳು ಸತ್ಪ್ರೇರಣೆ ನೀಡುತ್ತಿದ್ದವು. ಆರೀತಿ ಚಲನ ಚಿತ್ರಗಳು ಮತ್ತೆ ಬರಲಿ ಎಂದರು.

ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ, ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಳಿ ಮಾಜಿ ಅಧ್ಯಕ್ಷರಾದ ಎಸ್.ಎ.ಚಿನ್ನೇಗೌಡ, ಚಿತ್ರ ನಿರ್ಮಾಪಕರಾದ ಪುಷ್ಪಾ ಅರುಣ್ ಕುಮಾರ್, ಮಿಲನ್ ಚಿತ್ರಮಂದಿರದ ಮಾಲೀಕರಾದ ಕೆ.ರಮೇಶ್ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಚಲನಚಿತ್ರ ವಿತರಕರೂ, ಶ್ರೀಧರ ಕೃಪಾ ಕಂಬೈನ್ಸ್‌ನ ಮಾಲೀಕರೂ ಆದ ಶ್ರೀಧರ ಶ್ಯಾಮನೂರು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಭಾಗವಹಿಸಿದ್ದರು. ಚಿತ್ರಮಂದಿರ ಪುನರಾರಂಭದ ಅಂಗವಾಗಿ ಡಾ.ರಾಜ್ ಕುಮಾರ್ ನಟನೆಯ ಗಂಧದ ಗುಡಿ ಚಿತ್ರದ ಉಚಿತ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

Milan cinema reopens with modern facilities

 

Share

Leave a comment

Leave a Reply

Your email address will not be published. Required fields are marked *

Don't Miss

ಕಳಸದಲ್ಲಿ ಬೃಹತ್ ಮರ ಬಿದ್ದು ಆಟೋರಿಕ್ಷಾ ಜಖಂ

ಕಳಸ: ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಗುಡ್ಡೆಮಕ್ಕಿ ಗ್ರಾಮದಲ್ಲಿ ಭಾರಿ ಗಾಳಿ-ಮಳೆಯ ಆರ್ಭಟಕ್ಕೆ ಸುಧೀರ್ ಆಚಾರ್ ಎಂಬುವವರ ಮನೆ ಮುಂದೆ ನಿಲ್ಲಿಸಲಾಗಿದ್ದ ಆಟೋರಿಕ್ಷಾ ಹಾಗೂ ಅವರ ಮನೆಯ ಮೇಲೆ ಬೃಹತ್ ಮರವೊಂದು...

ಜಿಲ್ಲೆಯ 5 ತಾಲೂಕುಗಳಲ್ಲಿ ಶಾಲೆ – ಅಂಗನವಾಡಿಗಳಿಗೆ ರಜೆ

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕಳೆದ ಕೆಲ ದಿನಗಳಿಂದ ವರುಣನ ಆರ್ಭಟ ಮುಂದುವರಿದಿದೆ. ಭಾರಿ ಮಳೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಹಾಗೂ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಜಿಲ್ಲಾಡಳಿತ ಮಹತ್ವದ ನಿರ್ಧಾರ ಕೈಗೊಂಡಿದೆ. ನಾಳೆ...

Related Articles

ಕಡೂರು ತಾಲ್ಲೂಕಿನಲ್ಲಿ ಬರದ ಆತಂಕ

ಕಡೂರು: ಮುಂಗಾರು ಮಳೆಯ ಕೊರತೆಯಿಂದ ಕಡೂರು ತಾಲ್ಲೂಕಿನಲ್ಲಿ ಬರದ ಆತಂಕ ಎದುರಾಗಿದ್ದು, ಕುಡಿಯುವ ನೀರು, ಜಾನುವಾರುಗಳ...

ಜು.21ಕ್ಕೆ ಕೊಪ್ಪಳದಲ್ಲಿ ಬೃಹತ್ ರೈತ ಸಮಾವೇಶ

ಚಿಕ್ಕಮಗಳೂರು : ೪೬ನೇ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಕೊಪ್ಪಳದಲ್ಲಿ ಬೃಹತ್ ರೈತ ಸಮಾವೇಶವನ್ನು ಜು.೨೧...

ಅಕ್ರಮವಾಗಿ ಸಾಗಿಸುತ್ತಿ ಕಾಡುಜಾತಿಯ ಮರಗಳ ದಿಮ್ಮಿಗಳ ವಶ

ಮೂಡಿಗೆರೆ: ಕಾಡುಜಾತಿಯ ಮರಗಳ ದಿಮ್ಮಿಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದುದನ್ನು ತಾಲ್ಲೂಕಿನ ಹಂಡುಗುಳಿ ಗ್ರಾಮದ ಸಮೀಪ ಅರಣ್ಯ ಇಲಾಖೆ...

ಜವಾಹರ್ ನವೋದಯ ವಿದ್ಯಾಲಯದಲ್ಲಿ ಪ್ರವೇಶಕ್ಕೆ ಆಹ್ವಾನ

ಚಿಕ್ಕಮಗಳೂರು:  ಸೀಗೋಡುವಿನ ಪಿ.ಎಂ.ಶ್ರೀ ಜವಾಹರ ನವೋದಯ ವಿದ್ಯಾಲಯವು  ವಸತಿಯುತ ಸಹಶಿಕ್ಷಣ ವಿದ್ಯಾಲಯವಾಗಿದ್ದು, ಗ್ರಾಮೀಣ ಪ್ರದೇಶದ ಪ್ರತಿಭಾವಂತ...