Home namma chikmagalur chikamagalur ಗುತ್ತಿಗೆದಾರರ ಬಾಕಿ ಹಣ ಮರುಪಾವತಿಗಾಗಿ ಬೃಹತ್ ಪ್ರತಿಭಟನೆ
chikamagalurHomeLatest Newsnamma chikmagalur

ಗುತ್ತಿಗೆದಾರರ ಬಾಕಿ ಹಣ ಮರುಪಾವತಿಗಾಗಿ ಬೃಹತ್ ಪ್ರತಿಭಟನೆ

Share
Share

ಚಿಕ್ಕಮಗಳೂರು: ಗುತ್ತಿಗೆದಾರರಿಗೆ ಬಾಕಿ ಉಳಿಸಿಕೊಂಡಿರುವ ೩೭ ಸಾವಿರ ಕೋಟಿರೂ. ಹಣ ಮರುಪಾವತಿಗೆ ಒತ್ತಾಯಿಸಿ ಮಾರ್ಚ್ ೦೫ ರಂದು ರಾಜಧಾನಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವ ನದಲ್ಲಿ ಬೃಹತ್ ಶಾಂತಿಯುತ ಪ್ರತಿಭಟನೆ ನಡೆಸಲು ನಿರ್ಣಯಲಾಗಿದೆ ಎಂದು ರಾಜ್ಯ ಗುತ್ತಿಗೆದಾರರ ಸಂ ಘದ ಅಧ್ಯಕ್ಷ ಆರ್.ಮಂಜುನಾಥ್ ಹೇಳಿದರು.

ನಗರದ ಜಿಲ್ಲಾ ಗುತ್ತಿಗೆದಾರರ ಸಂಘದ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ಧ ಪ್ರತಿಭಟನೆ ಕುರಿತು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿ ಗುತ್ತಿಗೆದಾರರ ಸಂಕಷ್ಟ ಮನದಟ್ಟು ಮಾಡಲು ಗುತ್ತಿಗೆದಾರರು ಕುಟುಂಬ ಸಮೇತ ಪ್ರತಿಭಟನೆಯಲ್ಲಿ ಭಾಗಿಯಾಗುವ ಮೂಲಕ ಸರ್ಕಾರಕ್ಕೆ ಗುತ್ತಿಗೆದಾರರ ಸಂಕಷ್ಟದ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಗುತ್ತಿಗೆದಾರರ ೩೭ ಸಾವಿರ ಕೋಟಿ ರೂ. ಬಿಲ್ಲನ್ನು ರಾಜ್ಯಸರ್ಕಾರ ಬಾಕಿ ಇರಿಸಿದೆ. ಮುಖ್ಯಮಂತ್ರಿ ಸಿದ್ದ ರಾಮಯ್ಯ ಕೂಡಲೇ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು. ನಿರ್ಲಕ್ಷ್ಯ ಧೋರಣೆ ಅನುಸರಿಸಿದರೆ ಮಾ. ೦೭ ರಂದು ರಾಜ್ಯಾದ್ಯಂತ ಸಾವಿರಾರು ಗುತ್ತಿಗೆದಾರರು ಕೆಲಸ ಸ್ಥಗಿತಗೊಳಿಸಿ, ಬೃಹತ್ ಪ್ರತಿಭಟನೆ ನಡೆಸಲು ಮೂಲಕ ಸರ್ಕಾರಕ್ಕೆ ಎಚ್ಚರಿಸುತ್ತೇವೆ ಎಂದರು.

ಮೂರು ವರ್ಷಗಳ ಕಾಲದ ಬಿಲ್‌ಗಾಗಿ ಗುತ್ತಿಗೆದಾರರು ನಿರಂತರವಾಗಿ ಕಾಯುತ್ತಿದ್ದೇವೆ. ಮುಖ್ಯಮಂ ಮತ್ರಿ ಹಾಗೂ ಸಂಬಂಧಿಸಿದ ಸಚಿವರಿಗೆ ಸಾಕಷ್ಟು ಪತ್ರ ಮುಖೇನ ಹಾಗೂ ನೇರವಾಗಿ ಭೇಟಿ ಮಾಡಿ ಮನ ವಿ ಸಲ್ಲಿಸಲಾಗಿದೆ. ಆದರೆ ರಾಜ್ಯಸರ್ಕಾರ ಗುತ್ತಿಗೆದಾರರ ಬಾಕಿ ಮೊತ್ತವನ್ನು ನೀಡದೇ ಸತಾಯಿಸುತ್ತಿದೆ ಎಂ ದು ದೂರಿದರು.

ಪ್ರಸ್ತುತ ರಾಜ್ಯಸರ್ಕಾರಕ್ಕೆ ಪತ್ರ ವ್ಯವಹಾರಗಳು ಹಾಗೂ ಬಾಕಿ ಮೊತ್ತ ಕುರಿತು ೧೦೦ ಪುಟಗಳ ಮನವಿ ಯನ್ನು ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿದ್ದೇವೆ. ಕೆಲವು ಸಚಿವರು ಸಭೆ ಕರೆದಿದಾರೆ. ಆದರೂ ಹಣ ಬಿಡುಗ ಡೆಯ ಬಗ್ಗೆ ಮುಖ್ಯಮಂತ್ರಿಗಳು ಮೌನವಹಿಸಿದ್ದಾರೆ. ಅಲ್ಲದೇ ಸಂಬಂಧಪಟ್ಟ ಸಚಿವರೊಂದಿಗೆ ನೇರವಾಗಿ ಮುಖ್ಯಮಂತ್ರಿಗಳು ಸಭೆ ಕರೆಯುತ್ತಿಲ್ಲ ಎಂದು ತಿಳಿಸಿದರು.

ರಾಜ್ಯಾದ್ಯಂತ ಸಣ್ಣಪುಟ್ಟ ಗುತ್ತಿಗೆದಾರರು ಅತಿಹೆಚ್ಚು ಸಂಖ್ಯೆಯಲ್ಲಿದ್ದಾರೆ. ಸರ್ಕಾರಿ ಕೆಲಸಗಳ ನಿಗಧಿತ ಸಮಯಕ್ಕೆ ಪೂರೈಸುವ ಸಲುವಾಗಿ ಸ್ವಂತ ಚಿನ್ನಾಭರಣ, ಮನೆ ಹಾಗೂ ನಿವೇಶನವನ್ನು ಅಡವಿಟ್ಟು ಸರ್ಕಾರಿ ಕಟ್ಟಡವನ್ನು ಪೂರೈಸುತ್ತಿದ್ದೇವೆ. ಒಂದೆಡೆ ಸರ್ಕಾರ ಹಣವು ಬಿಡುಗಡೆಗೊಳಿಸುತ್ತಿಲ್ಲ. ಇನ್ನೊಂದೆಡೆ ಅಡವಿಟ್ಟ ವಸ್ತುವಿನ ಬಡ್ಡಿಯು ಏರಿಕೆಯಾಗುತ್ತಿದೆ ಎಂದರು.

ಜಿಎಸ್‌ಟಿ ಹಣ ಪಾವತಿಗೆ ೫೦ ನೋಟಿಸ್ ಕೊಡುತ್ತಾರೆ. ಅದನ್ನು ನಮಗೆ ನೀಡಬೇಕಾದ ಬಿಲ್‌ನಲ್ಲೇ ಕಟಾವು ಮಾಡಿಕೊಂಡು ಕೊಡಲಿ. ಸಣ್ಣಪುಟ್ಟ ಗುತ್ತಿಗೆ ಕೆಲಸ ಮಾಡಿದರೂ ನಮಗೆ ಮಾತ್ರ ಹಣ ಕೊಡುತ್ತಿಲ್ಲ. ಸಾಲ ಮಾಡಿ ಕೆಲಸ ಮಾಡಿದ್ದೇವೆ. ಬಡ್ಡಿ ಕಟ್ಟಲು ಆಗುತ್ತಿಲ್ಲ. ನಮ್ಮ ಸಮಸ್ಯೆಗಳನ್ನು ಸರ್ಕಾರ ಅರಿತು ಪರಿ ಹಾರ ಸೂಚಿಸುವಂತೆ ಮನವಿ ಮಾಡಿದರು.

ಹಳೆಯ ಸರ್ಕಾರದ ಬಾಕಿಯಿದೆ ಎಂದು ಮುಖ್ಯಮಂತ್ರಿ ಹೇಳುತ್ತಿದ್ದಾರೆ. ನಮಗೆ ಎಲ್ಲಾ ಸರ್ಕಾರವು ಒಂದೇ ಆಗಿದೆ. ನಾವು ಕಾಮಗಾರಿ ಮಾಡಬೇಕು ಮತ್ತು ಹಣ ಸಿಗಬೇಕು. ಮುಖ್ಯಮಂತ್ರಿ ತುರ್ತು ಸಭೆ ಕರೆ ಯದೇ ನಮ್ಮ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಆ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಗುತ್ತಿಗೆ ದಾರರು ಒಗ್ಗೂಡಿಸುವ ಮೂಲಕ ಬೃಹತ್ ಪ್ರತಿಭಟನೆಗೆ ನಿರ್ಣಯಿಸಲಾಗಿದೆ ಎಂದರು.

ದೇಶದ ಬಹುತೇಕ ರಾಜ್ಯಗಳಲ್ಲಿ ಗುತ್ತಿಗೆದಾರರಿಗೆ ಅಲ್ಲಿನ ರಾಜ್ಯಸರ್ಕಾರ ಸೂಕ್ತವಾಗಿ ಸ್ಪಂದಿಸುವ ಮೂ ಲಕ ಸಹಕರಿಸುತ್ತಿದೆ. ಆದರೆ ಕರ್ನಾಟಕ ರಾಜ್ಯದಲ್ಲಿ ಗುತ್ತಿಗೆದಾರರ ಸ್ಥಿತಿ ಹೀನಾಯವಾಗಿದೆ. ಸ್ವಂತ ಹಣ ಖರ್ಚು ಮಾಡಿ, ಸರ್ಕಾರದಿಂದ ವರ್ಷನುಗಟ್ಟಲೇ ಕಾದು ಕುಳಿತು ಪ್ರತಿಭಟನೆ ಮೂಲಕ ಬಾಕಿ ಹಣ ಕೇಳು ವ ಸ್ಥಿತಿ ನಿರ್ಮಾಣವಾಗಿದೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ರಾಜ್ಯ ಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷ ಮತ್ತು ಜಿಲ್ಲಾ ಸಂಘದ ಅಧ್ಯಕ್ಷ ಕೆ.ಎಸ್.ಶಾಂತೇಗೌಡ ವಹಿಸಿದ್ದರು. ಈ ಸಂದರ್ಭದಲ್ಲಿ ರಾಜ್ಯ ಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷ ಬಿ.ಸಿ. ದಿನೇಶ್, ಉಪಾಧ್ಯಕ್ಷರಾದ ಬಿ.ಎಸ್.ಗುರುಸಿದ್ದಪ್ಪ, ಮಂಜುನಾಥ್, ಜಂಟಿ ಕಾರ್ಯದರ್ಶಿಗಳಾದ ಬಿ.ಎಲ್ .ಮುನಿರಾಜು, ಲಕ್ಷ್ಮೀಪತಿ, ಸುರೇಶ್‌ಕುಮಾರ್, ಸಂಘಟನಾ ಕಾರ್ಯದರ್ಶಿಗಳಾದ ರವಿ ಚಂಗಪ್ಪ, ಹೇಮಂ ತ್‌ಕುಮಾರ್, ನಿರ್ದೇಶಕರಾದ ವಿ.ಹೆಚ್.ರಂಗಸ್ವಾಮಿ, ಸುಬ್ರಮಣಿ, ಜಿಲ್ಲಾ ಉಪಾಧ್ಯಕ್ಷ ಬಿ.ಎ.ನಾಗರಾಜ್, ಕಾರ್ಯದರ್ಶಿ ಬಿ.ಎಂ.ಪುಟ್ಟಸ್ವಾಮಿ, ಸಹ ಕಾರ್ಯದರ್ಶಿ ಕೆ.ವಿ.ಮಂಜುನಾಥ್, ಖಜಾಂಚಿ ಸಿ.ಎಸ್.ಖಲಂ ಧರ್, ಸದಸ್ಯರಾದ ಎಂ.ಮಂಜೇಗೌಡ, ವೆಲ್ಸಿಪಿಂಟೋ, ಕೆ.ಎನ್.ದೊಡ್ಡೇಗೌಡ, ಎಂ.ಎ.ರವಿಕುಮಾರ್, ಜಿ.ಎಂ.ಪ್ರಕಾಶ್, ಅನುಪ್‌ಕುಮಾರ್, ಬಿ.ಎನ್.ಮಂಜುನಾಥ್, ಟಿ.ಎಂ.ನಾಸೀರ್ ಇದ್ದರು.

Massive protest for refund of contractor’s dues

 

Share

Leave a comment

Leave a Reply

Your email address will not be published. Required fields are marked *

Don't Miss

ಭಿಕ್ಷುಕಿಯನ್ನು ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ

ಚಿಕ್ಕಮಗಳೂರು:  ಕ್ಷುಲ್ಲಕ ಕಾರಣಕ್ಕೆ ಸೈಜುಕಲ್ಲು ಎತ್ತಿಹಾಕಿ ಮಹಿಳೆಯನ್ನು ಕೊಲೆ ಮಾಡಿದ ಆರೋಪಿಗೆ ಇಲ್ಲಿನ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ನೀಡಿದ್ದು, ೮೧ ಸಾವಿರ ರೂ.ಗಳ ದಂಡ...

ಹುಬ್ಬಳ್ಳಿ-ಚಿಕ್ಕಮಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸೇವೆ ವಿಸ್ತರಣೆ

ಚಿಕ್ಕಮಗಳೂರು: ನೈಋತ್ಯ ರೈಲ್ವೆಯು ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ಹುಬ್ಬಳ್ಳಿ ಮತ್ತು ಚಿಕ್ಕಮಗಳೂರು ನಡುವೆ ಚಲಿಸುವ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸೇವೆಯನ್ನು ವಿಸ್ತರಿಸಲು ನಿರ್ಧರಿಸಿದೆ. ಈ ಹಿಂದೆ ಜೂನ್ 21,...

Related Articles

ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ

ಚಿಕ್ಕಮಗಳೂರು: RVR ಹೆಲ್ತ್ ಕೇರ್ ವತಿಯಿಂದ, ಶ್ರೀ ವಿಜಯ್ ಎಂ.ಎನ್. ಶೆಟ್ಟಿ ಹಾಗೂ ಡಾ. (ಪ್ರೊ). ರಾಘವೇಂದ್ರ...

ಧುಮ್ಮಿಕ್ಕಿ ಹರಿಯುತ್ತಿರುವ ಹೆಬ್ಬೆ ಫಾಲ್ಸ್‌

ಚಿಕ್ಕಮಗಳೂರು: ಕಾಫಿನಾಡಿನ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಮಳೆ (Rain) ಅಬ್ಬರ ಜೋರಾಗಿದ್ದು, ತರೀಕೆರೆ (Tarikere) ತಾಲೂಕಿನಲ್ಲಿರುವ ಹೆಬ್ಬೆ...

ಶ್ರೀಈಶ್ವರ-ಚೌಡೇಶ್ವರಿ ದೇವಾಲಯಗಳಲ್ಲಿ ಆಭರಣ ಕಳವು

ಕಡೂರು: ತಾಲ್ಲೂಕಿನ ಸಿಂಗಟಗೆರೆ ಸಮೀಪದ ಎಸ್.ಡಿ. ಕೊಪ್ಪಲು ಗ್ರಾಮದ ಶ್ರೀಈಶ್ವರ ಹಾಗೂ ಚೌಡೇಶ್ವರಿ ದೇವಾಲಯಗಳಲ್ಲಿ ದೇವರ...

ತರೀಕೆರೆಯ ಗೋಪಿಕೃಷ್ಣಗೆ ಎಂಎಲ್ ಸಿ ಸ್ಥಾನ ನೀಡಬೇಕು

ಚಿಕ್ಕಮಗಳೂರು: ಅಹಿಂದ ಪರವಾಗಿ ಮಾತಾಡುವ ಕಾಂಗ್ರೆಸ್ ಪಕ್ಷ ಮಡಿವಾಳ ಸಮುದಾಯದ ಮುಖಂಡರಿಗೆ ರಾಜಕೀಯ ಪ್ರಾತಿನಿಧ್ಯ ನೀಡುತ್ತಿಲ್ಲ....