Home namma chikmagalur chikamagalur ಮಲೆನಾಡು ಮಹಿಳಾ ಸುಗ್ಗಿ ಉತ್ಸವಕ್ಕೆ ಚಾಲನೆ
chikamagalurHomeLatest Newsnamma chikmagalur

ಮಲೆನಾಡು ಮಹಿಳಾ ಸುಗ್ಗಿ ಉತ್ಸವಕ್ಕೆ ಚಾಲನೆ

Share
Share

ಮೂಡಿಗೆರೆ: ಹಿರಿಯರನ್ನು ಕಡೆಗಣಿಸುವ ಕಾಲಘಟ್ಟದಲ್ಲಿ ಇಂದು ಹಿರಿಯರನ್ನು ಒಂದೆಡೆ ಸೇರಿಸಿ ಅವರನ್ನು ಹುರಿದುಂಬಿಸಿ ಸಂಭ್ರಮ ಪಡುವ ಕಾರ್ಯಕ್ರಮವನ್ನು ನಾನೆಲ್ಲೂ ನೋಡಲ್ಲವೆಂದು ಬೆಂಗಳೂರಿನ ಸುಮಂಗಲಿ ಸೇವಾ ಆಶ್ರಮದ ಸುಶೀಲಮ್ಮ ಹೇಳಿದರು.

ಅವರು ಶುಕ್ರವಾರ ಪಟ್ಟಣದ ಅಡ್ಯಂತಾಯ ರಂಗಮಂದಿರಲ್ಲಿ ಮಲೆನಾಡು ಸಮಾನ ಮನಸ್ಕ ಮಹಿಳೆಯರಿಂದ ಏರ್ಪಡಿಸಿದ್ದ ಮಲೆನಾಡು ಮಹಿಳಾ ಸುಗ್ಗಿ ಉತ್ಸವ, ಹಿರಿಯರ ಜೀವನೋತ್ಸವ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಿರಿಯರನ್ನೆಲ್ಲಾ ಒಂದೇ ವೇದಿಕೆಯಲ್ಲಿ ಸೇರಿಸಿ, ಅವರನ್ನು ಕಿರಿಯರನ್ನಾಗಿ ಮಾಡಿ, ಮುಂದಿನ ದಿನ ಇನ್ನಷ್ಟು ಸಂಭ್ರಮದಿಂದ ಜೀವಿಸುವಂತಹ ವಾತಾವರಣ ಸೃಷ್ಟಿ ಮಾಡಿರುವುದು ನಿಜವಾಗಿಯೂ ಶ್ಲಾಘನೀಯ. ಇಲ್ಲಿ ಒಟ್ಟು ೩೫ ಹಿರಿಯ ದಂಪತಿಯನ್ನು ಹುಡುಕಿ ಒಂದೇ ವೇದಿಕೆಯಲ್ಲಿ ಸೇರಿಸಿ, ನಗಿಸಿ, ಸಂಭ್ರಮಿಸಿರುವುದು ಪುಣ್ಯದ ಕಾರ್ಯವೆಂದು ಹೇಳಿದರು.

ಮಾಜಿ ಸಚಿವೆ ಮೋಟಮ್ಮ ಮಾತನಾಡಿ, ಉತ್ತರ ಕರ್ನಾಟಕ ಮಹಿಳೆಯರು ಮಾಡುವ ನಾಗರಪಂಚಮಿ ಹಬ್ಬ, ಕೊಡಗಿನ ಮಹಿಳೆಯರು ನಡೆಸುವ ಹುತ್ತರಿಹಬ್ಬವನ್ನು ನಾನು ನೋಡಿದ್ದೇನೆ. ಆ ಹಬ್ಬದಲ್ಲಿ ಮಹಿಳೆಯರ ನಡುಗೆ, ತೊಡುಗೆ ಬಗ್ಗೆ ಗಮನಿಸಿದಾಗ, ನಮ್ಮ ಮಲೆನಾಡು ಕೂಡ ಸಾಂಸ್ಕೃತಿಕ ಹಾಗೂ ಜಾನಪದ ಸೊಗಡು ಬೀರುವ ನಾಡಾಗಿದೆ ಎಂದರು

ಮಲೆನಾಡಿನ ಸಾಂಸ್ಕೃತಿಕ ವೈಭವ ಹಾಗೂ ಹಿರಿಯರನ್ನು ಗುರುತಿಸುವಂತಹ ಮಹದಾಸೆಯನ್ನು ನೆರವೇರಿಸಲು ಎಲ್ಲಾ ಮಹಿಳೆಯರ ಸಹಕಾರದಿಂದ ಸಾಧ್ಯವಾಗಿದೆ. ಇಂತಹ ಕಾರ್ಯಕ್ರಮ ಮುನ್ನೆಡೆಸಿಕೊಂಡು ಹೋಗಬೇಕೆಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಹಾಸ್ಯ ಕಲಾವಿಧ ಎಚ್.ಗೋಪಾಲ್ ಹಾಸ್ಯ ಚಟಾಕಿ ಮುಳಕ ಜನರನ್ನು ರಂಜಿಸಿದರು. ಹಿರಿಯ ಸಾಂಪ್ರದಾಯಕ ಉಡುಗೆ ತೊಡುಗೆಗಳ ನಡಿಗೆ ಮತ್ತು ಆದರ್ಶ ದಂಪತಿಗಳ ಸ್ಪರ್ಧೆ ಜತೆಗೆ ಮಲೆನಾಡ ಉಡುಗೆ, ತೊಡುಗೆ, ನಡಿಗೆ, ಸೋಬಾನೆ ಪದ, ಮದುವೆ ಹಾಡುಗಳು, ಕಂಸಾಳೆ, ಜಾನಪದ ನೃತ್ತಯ, ಕೋಲಾಟ ನೃತ್ಯ ಸ್ಪರ್ಧೆ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿರ್ಮಲ ಮಂಚೇಗೌಡ ವಹಿಸಿದ್ದರು. ಔಷಧ ರಹಿತ ಚಿಕಿತ್ಸಾ ಸಂಸ್ಥೆಯ ಸಂಸ್ಥಾಪಕಿ ಡಾ.ಪೂರ್ವಿ ಜಯರಾಜ್, ವಕೀಲೆ ರೇಷ್ಮಾ, ಮಾಜಿ ಸಚಿವೆ ಮೋಟಮ್ಮ, ಉಪಾಧ್ಯಕ್ಷೆ ಕಲಾವತಿ ರಾಜಣ್ಣ, ಕಾರ್ಯದರ್ಶಿ ರೇಖಾ ರವಿರಾಜ್, ಪ್ರಧಾನ ಸಂಚಾಲಕಿ ಮಾಲ ದಶರಥ್, ಸಂಚಾಲಕಿ ಅಶ್ವಿನಿ ಸಂತೋಷ್, ಅನಿತಾ ಸುಧೀರ್ ಮತ್ತಿತರರಿದ್ದರು.

Malnad Women’s Harvest Festival kicks off

Share

Leave a comment

Leave a Reply

Your email address will not be published. Required fields are marked *

Don't Miss

ಭಿಕ್ಷುಕಿಯನ್ನು ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ

ಚಿಕ್ಕಮಗಳೂರು:  ಕ್ಷುಲ್ಲಕ ಕಾರಣಕ್ಕೆ ಸೈಜುಕಲ್ಲು ಎತ್ತಿಹಾಕಿ ಮಹಿಳೆಯನ್ನು ಕೊಲೆ ಮಾಡಿದ ಆರೋಪಿಗೆ ಇಲ್ಲಿನ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ನೀಡಿದ್ದು, ೮೧ ಸಾವಿರ ರೂ.ಗಳ ದಂಡ...

ಹುಬ್ಬಳ್ಳಿ-ಚಿಕ್ಕಮಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸೇವೆ ವಿಸ್ತರಣೆ

ಚಿಕ್ಕಮಗಳೂರು: ನೈಋತ್ಯ ರೈಲ್ವೆಯು ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ಹುಬ್ಬಳ್ಳಿ ಮತ್ತು ಚಿಕ್ಕಮಗಳೂರು ನಡುವೆ ಚಲಿಸುವ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸೇವೆಯನ್ನು ವಿಸ್ತರಿಸಲು ನಿರ್ಧರಿಸಿದೆ. ಈ ಹಿಂದೆ ಜೂನ್ 21,...

Related Articles

ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ

ಚಿಕ್ಕಮಗಳೂರು: RVR ಹೆಲ್ತ್ ಕೇರ್ ವತಿಯಿಂದ, ಶ್ರೀ ವಿಜಯ್ ಎಂ.ಎನ್. ಶೆಟ್ಟಿ ಹಾಗೂ ಡಾ. (ಪ್ರೊ). ರಾಘವೇಂದ್ರ...

ಧುಮ್ಮಿಕ್ಕಿ ಹರಿಯುತ್ತಿರುವ ಹೆಬ್ಬೆ ಫಾಲ್ಸ್‌

ಚಿಕ್ಕಮಗಳೂರು: ಕಾಫಿನಾಡಿನ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಮಳೆ (Rain) ಅಬ್ಬರ ಜೋರಾಗಿದ್ದು, ತರೀಕೆರೆ (Tarikere) ತಾಲೂಕಿನಲ್ಲಿರುವ ಹೆಬ್ಬೆ...

ಶ್ರೀಈಶ್ವರ-ಚೌಡೇಶ್ವರಿ ದೇವಾಲಯಗಳಲ್ಲಿ ಆಭರಣ ಕಳವು

ಕಡೂರು: ತಾಲ್ಲೂಕಿನ ಸಿಂಗಟಗೆರೆ ಸಮೀಪದ ಎಸ್.ಡಿ. ಕೊಪ್ಪಲು ಗ್ರಾಮದ ಶ್ರೀಈಶ್ವರ ಹಾಗೂ ಚೌಡೇಶ್ವರಿ ದೇವಾಲಯಗಳಲ್ಲಿ ದೇವರ...

ತರೀಕೆರೆಯ ಗೋಪಿಕೃಷ್ಣಗೆ ಎಂಎಲ್ ಸಿ ಸ್ಥಾನ ನೀಡಬೇಕು

ಚಿಕ್ಕಮಗಳೂರು: ಅಹಿಂದ ಪರವಾಗಿ ಮಾತಾಡುವ ಕಾಂಗ್ರೆಸ್ ಪಕ್ಷ ಮಡಿವಾಳ ಸಮುದಾಯದ ಮುಖಂಡರಿಗೆ ರಾಜಕೀಯ ಪ್ರಾತಿನಿಧ್ಯ ನೀಡುತ್ತಿಲ್ಲ....