Home Latest News ಸಾಲ – ರಿಫಂಡ್ ನೀಡುವುದಾಗಿ ನಂಬಿಸಿ 6,26,000 ರೂ. ವಂಚನೆ
Latest NewschikamagalurHomenamma chikmagalur

ಸಾಲ – ರಿಫಂಡ್ ನೀಡುವುದಾಗಿ ನಂಬಿಸಿ 6,26,000 ರೂ. ವಂಚನೆ

Share
Share

ಚಿಕ್ಕಮಗಳೂರು: ವ್ಯಕ್ತಿಯೊಬ್ಬರಿಗೆ ಹೆಚ್ಚಿನ ಪ್ರಮಾಣದ ಸಾಲ ಮತ್ತು ರಿಫಂಡ್ ನೀಡುವುದಾಗಿ ನಂಬಿಸಿ ಪ್ರೋಸೆಸ್ಸಿಂಗ್ ಚಾರ್ಜಸ್ ರೀತಿಯಲ್ಲಿ 6,26,000ರೂ ಪಡೆದು ವಂಚಿಸಿದ ಘಟನೆ ನಡೆದಿದೆ

ಚಿಕ್ಕಮಗಳೂರು ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರು ಇನ್ಸ್ಟಾಗ್ರಾಮ್ ಆಪ್ (INSTAGRAM) ನಲ್ಲಿ ವಿಡಿಯೋಗಳನ್ನು ವಿಕ್ಷಿಸುತ್ತಿರುವಾಗ ತುಂಬಾ ಕಡಿಮೆ ಬಡ್ಡಿಗೆ ಲೋನ್ ಕೊಡುವ ವಿಡಿಯೋ ಬಂದಿದೆ.

ಇದನ್ನು ವೀಕ್ಷಿಸಿದ ವ್ಯಕ್ತಿಗೆ ಸೈಬರ್ ವಂಚಕರು ಕರೆಮಾಡಿ ನೀವು ಲೋನ್ ಬಗ್ಗೆ ವಿಡಿಯೋವನ್ನು ವೀಕ್ಷಿಸಿರುತ್ತೀರಿ, ನಾವು ಬ್ಯಾಂಕ್ ನಿಂದ ಕರೆ ಮಾಡುತ್ತಿದ್ದೇವೆ ನಿಮಗೆ ಲೋನ್ ಬೇಕಾದರೆ ನಾವು ಕಡಿಮೆ ಬಡ್ಡಿಗೆ ಲೋನ್ ಮಾಡಿಸಿ ಕೊಡುತ್ತೇವೆಂದು ನಂಬಿಸಿದ್ದಾರೆ.

02 ಲೋನ್ ಆಪ್ ಗಳನ್ನು ಡೌನ್ ಲೋಡ್ ಮಾಡಿಸಿ ಡಾಕ್ಯುಮೆಂಟ್ ಗಳನ್ನು ಅಪ್ ಲೋಡ್ ಮಾಡಿಸಿಕೊಂಡು ಅದರಿಂದ ಸದರಿ ವ್ಯಕ್ತಿಗೆ 4.5 ಲಕ್ಷ ರೂ ಸಾಲವನ್ನು ಮಂಜೂರು ಮಾಡಿಸಿ, ನಂತರ ನಿಮಗೆ ಇನ್ನೂ ಹೆಚ್ಚಿನ ಸಾಲ ಬೇಕಾದರೆ 07 ಲಕ್ಷ ರೂ. ಸಾಲ ಮಂಜೂರು ಮಾಡಿಸುತ್ತೇವೆ ಎಂದು ವಿಶ್ವಾಸ ಮೂಡಿಸಿದ್ದಾರೆ.

ಬಳಿಕ ನೀವು ಸಾಲ ಪಡೆದಿರುವ 4.5 ಲಕ್ಷ ರೂ ಮತ್ತು ಪ್ರೊಸೆಸಿಂಗ್ ಚಾರ್ಜಸ್ ಸೇರಿ ಒಟ್ಟು 6,26,000 ರೂ ಗಳನ್ನು ನಾವು ಹೇಳುವ ಖಾತೆಗೆ ಹಾಕಿದರೆ ನಿಮಗೆ 07 ಲಕ್ಷ ರೂ ಸಾಲದ ಜೊತೆಗೆ ನೀವು ನಮಗೆ ಹಾಕುವ 6,26,000 ರೂ ವಾಪಸ್ಸು ಮಾಡಿಸುತ್ತೇವೆಂದು ನಂಬಿಸಿದ್ದಾರೆ.

6,26,000 ರೂ ಗಳನ್ನು ಸೈಬರ್ ಫ್ರಾಡ್ ಗಳು ತಮ್ಮ ಖಾತೆಗೆ ಹಾಕಿಸಿಕೊಂಡು ಯಾವುದೇ ಲೋನ್ ಆಗಲಿ ಮತ್ತು ರೀಫಂಡ್ ಆಗಲಿ ಮಾಡದೇ ಮೋಸ ಮಾಡಿರುತ್ತಾರೆ. ಈ ಬಗ್ಗೆ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Loan – Rs. 626000 fraud on the pretext of refund

Share

Leave a comment

Leave a Reply

Your email address will not be published. Required fields are marked *

Don't Miss

ಜೀವಾಣು ಹೆಚ್ಚಿಸುವ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕು

ಚಿಕ್ಕಮಗಳೂರು: ಮಣ್ಣು ರೋಗಯುಕ್ತವಾಗಿದ್ದು, ಅದಕ್ಕೆ ಬೇಕಿರುವ ಜೀವಾಣುಗಳನ್ನು ಹೆಚ್ಚಿಸುವ ಮೂಲಕ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕಾದ ಅನಿವಾರ್ಯ ಇದೆ’ ಎಂದು ಕನ್ನೇರ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು. ಸಾವಯವ ರೈತರ ಬಳಗದಿಂದ...

ಅಡ್ಡ ಮತದಾನದ ಸತ್ಯಶೋಧನಾ ಸಮಿತಿ ವರದಿ ಸಿದ್ದ

ಚಿಕ್ಕಮಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನದ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ರಚಿಸಿರುವ ಸತ್ಯಶೋಧನಾ ಸಮಿತಿಯು ತನ್ನ ಪ್ರಾಥಮಿಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಸಮಿತಿಯ ಸದಸ್ಯರಾದ ಸಿ.ಟಿ. ರವಿ ಅವರು ಚಿಕ್ಕಮಗಳೂರಿನಲ್ಲಿ ಈ...

Related Articles

ಸ್ವಚ್ಛ ಪರಿಸರ ಉಳಿಸಿ ಬೆಳೆಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ

ಚಿಕ್ಕಮಗಳೂರು: ಮಲೆನಾಡಿನ ನಿಸರ್ಗದತ್ತ ಸೌಂದರ್ಯ ಮತ್ತು ಸ್ವಚ್ಛ ಪರಿಸರವನ್ನು ಉಳಿಸಿ ಬೆಳೆಸುವ ಮಹತ್ತರವಾದ ಹೊಣೆಗಾರಿಕೆ ನಮ್ಮೆಲ್ಲರ...

ಪ್ರವಾಹ ಪರಿಸ್ಥಿತಿ ಎದುರಿಸುವ ಅಣಕು ಪ್ರದರ್ಶನ

ಚಿಕ್ಕಮಗಳೂರು: ಕಾಫಿನಾಡಿನ ಹಿರೇಕೊಳಲೆ ಕೆರೆಯಲ್ಲಿ ಪ್ರವಾಹ ಪರಿಸ್ಥಿತಿಯನ್ನು ಎದುರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಅಗ್ನಿಶಾಮಕ ಮತ್ತು...

ಯುವಜನತೆ ಮಾದಕ ವಸ್ತು ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಲಿ

ಚಿಕ್ಕಮಗಳೂರು: ಇಂದಿನ ಸಮಾಜದಲ್ಲಿ ಮಾದಕ ದ್ರವ್ಯಗಳ ಹಾವಳಿ ಹೆಚ್ಚಾಗುತ್ತಿದ್ದು, ಇದು ಯುವ ಪೀಳಿಗೆಯ ಭವಿಷ್ಯ ಹಾಗೂ...

ಭಿಕ್ಷುಕಿಯನ್ನು ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ

ಚಿಕ್ಕಮಗಳೂರು:  ಕ್ಷುಲ್ಲಕ ಕಾರಣಕ್ಕೆ ಸೈಜುಕಲ್ಲು ಎತ್ತಿಹಾಕಿ ಮಹಿಳೆಯನ್ನು ಕೊಲೆ ಮಾಡಿದ ಆರೋಪಿಗೆ ಇಲ್ಲಿನ ಒಂದನೇ ಅಧಿಕ...