ಚಿಕ್ಕಮಗಳೂರು: ಬೀರೂರಿನ ಕೆ.ಬಿ.ಮಲ್ಲಿಕಾರ್ಜುನ್ ರಾಜಕೀಯ ನೇಪತ್ಯಕ್ಕೆ ಸರಿದು ಹಲವು ವರ್ಷಗಳಾಗಿವೆ.ಆದರೂ ಅವರ ಮಾರ್ಗದರ್ಶನಕ್ಕೆ ಪಕ್ಷ ಭೇದ ಮರೆತು ಬಹುಪಕ್ಷದವರು ಬರುವುದು ನೋಡಿದರೆ ಆಶ್ಚರ್ಯವಾಗುತ್ತದೆ.ಕೆಲ ದಿನಗಳಿಂದ ಆರೋಗ್ಯದ ಕಡೆ ಮಾತ್ರ ಗಮನ ಹರಿಸುತ್ತಿರುವ ಕೆ.ಬಿ.ಎಂ ಬಗ್ಗೆ ಅವರ ಅಭಿಮಾನಿಗಳು ಮೇ 31 ರಂದು “ಆತ್ಮೀಯ ಮನಸ್ಸಗಳ ಸಮ್ಮಿಲನ” ಕಾರ್ಯಕ್ರಮ ಹಮ್ಮಿಕೊಂಡಿರುವುದು ವಿಶೇಷವಾಗಿದೆ.
ಕೆ.ಬಿ.ಎಂ.ಎಂದು ಜನಪ್ರಿಯತೆ ಗಳಿಸಿರುವ ಕೆ.ಬಿ.ಮಲ್ಲಿಕಾರ್ಜುನ ಶುದ್ಧ ಹಸ್ತ ಎನ್ನುವುದನ್ನು ಅವರ ವಿರೋಧಿಗಳು ಕೂಡ ಒಪ್ಪುತ್ತಾರೆ. ಕೆ.ಬಿ.ಎಂ.ರಾಜಕಾರಣಕ್ಕಿಂತ ಕೃಷಿಕ ಎನ್ನುವುದಕ್ಕೆ ಕನೆಕ್ಟ್ ಆಗುತ್ತಾರೆ.ಕೃಷಿ ವೃತ್ತಿ ಎಂದು ನಂಬಿ ಇಂದು ಕೂಡ ತೋಟ,ಅಡಿಕೆ ಮನೆಯಲ್ಲಿ ಸದಾ ನಿರತರಾಗಿರುವುದೇ ಸಾಕ್ಷಿ.
ವಿದ್ಯಾರ್ಥಿ ದಿನಗಳಿಂದಲೂ ರಾಜಕೀಯ ಗೀಳು ಇದ್ದರೂ ತಾರತಿಗಡಿ ಮಾಡದೆ ರಾಜಕಾರಣಕ್ಕೆ ಬಂದ ಮೇಲೆ ತೆಗೆದುಕೊಳ್ಳುವ ತೀರ್ಮಾನಗಳಿಂದಾಗಿ ಹಲವರ ವಿರೋಧ ಕಟ್ಟಿಕೊಂಡಿರುವುದು ಉಂಟು.
1980 ರಲ್ಲಿ ಕಾಂಗ್ರೆಸ್ ವಿರೋಧಿ ಅಲೆ ರಾಜ್ಯದಲ್ಲಿ ಬೀಸುವ ಸಮಯದಲ್ಲಿ ಜಿಲ್ಲಾ ಜನತಾ ಪಕ್ಷದ ಅಧ್ಯಕ್ಷರಾಗಿ 1983ರಲ್ಲಿ ಕಾಂಗ್ರೆಸ್ ನೆಲಕಚ್ಚುವಂತೆ ಮಾಡಿದವರ ಪೈಕಿ ಕೆ.ಬಿ.ಎಂ ಅಗ್ರಸ್ಥಾನದಲ್ಲಿದ್ದವರು .1985 ರಲ್ಲಿ ಮತ್ತೊಮ್ಮೆ ವಿಧಾನ ಸಭಾ ಚುನಾವಣೆಗಳು ನಡೆದು ಜನತಾ ಪಕ್ಷ ಜಿಲ್ಲೆಯಲ್ಲಿ ನಾಲ್ಕು ವಿಧಾನ ಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತು.
ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ಮೊದಲ ಬಾರಿಗೆ ಆಯ್ಕೆಯಾದ ದಾಖಲೆಯ ಗೆಲುವು ಸಾಧಿಸಿದ್ದವರು,ನಂತರ ಮತ್ತೊಮ್ಮೆ ವಿಧಾನ ಪರಿಷತ್ ಸದಸ್ಯರಾಗಿ ಸಚೇತಕರಾದವರು ನೇರ,ನೇರವಾಗಿ ಸದನದಲ್ಲಿ, ಕೆ.ಡಿ.ಪಿ ಸಭೆಯಲ್ಲಿ ಮಾತನಾಡಿ ಹಲವು ಸಮಸ್ಯೆಗಳಿಗೆ ಪರಿಹಾರ ಕೊಡಿಸಿದವರು 1999 ರಲ್ಲಿ ಬೀರೂರು ವಿಧಾನ ಸಭಾ ಕ್ಷೇತ್ರದಲ್ಲಿ ಸಮಾಜವಾದಿ ಜನತಾಪಕ್ಷದಿಂದ ಗೆಲುವು ಸಾಧಿಸಿ ವಿಧಾನ ಸಭೆಗೆ ಎಂಟ್ರಿ ಕೊಟ್ಟ ನಂತರ ಕಾಂಗ್ರೆಸ್ ಸೇರಿ ಚಿಕ್ಕಮಗಳೂರು ಮತ್ತು ಕಡೂರು ವಿಧಾನ ಸಭೆಗೆ ಸ್ಪರ್ಧೆ ಮಾಡಿ ಗೆಲುವಿನ ದಡ ಸೇರಲಾಗದೆ ಭ್ರಮನಿರಸನ ಕ್ಕೆ ಒಳಗಾದರೂ ನುಂಗಿ ಕೊಂಡು ಅಡಕೆ ತೋಟ ಮತ್ತು ಮನೆ ಸೇರಿದವರಿಗೆ ಅಭಿಮಾನಿಗಳು ಉತ್ಸವ ತುಂಬುವ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ ಆದರೆ ದೊಡ್ಡ ಮಟ್ಟದಲ್ಲಿ ಜಿಲ್ಲಾ ಕೇಂದ್ರದಲ್ಲಿ ಕಾರ್ಯಕ್ರಮ ಅಯೋಜಿಸಿದ್ದರೆ ಒಳ್ಳೆಯದಿತ್ತು ಎನ್ನುವ ಅಭಿಮಾನಿಗಳು ಹೆಚ್ಚು.
ಬಯಲು ಪ್ರದೇಶದ ರಾಜಕಾರಣಿಗಳನ್ನು ವಿಲನ್ ತರಹ ನೋಡುವರ ಮಧ್ಯೆ ಕೆ.ಬಿ.ಎಂ ನೋಡಿದರೆ ಗೌರವ ಕೊಡುತ್ತಿದ್ದರು ಏಕೆಂದರೆ “ಕ್ಲೀನ್ ಹ್ಯಾಂಡ್” ಮತ್ತು ನೇರ ನಡೆ-ನುಡಿ ಕಾರಣ.ದಳ ಮತ್ತು ಕಾಂಗ್ರೆಸ್ ನ ಜಿಲ್ಲಾ ಅಧ್ಯಕ್ಷರಾಗಿ ಸ್ವಂತ ನಿರ್ಧಾರಕ್ಕಿಂತ ಬಿ.ಎಲ್.ಶಂಕರ್ ಅಣತಿಯಂತೆ ನಡೆದುಕೊಳ್ಳುತ್ತಿದ್ದರು ಎಂದು ಪಕ್ಷದ ವಿರೋಧಿಗಳ ಅಳಲು. ಜೊತೆಗೆ ಕೆಲ ಮಠಾಧೀಶರ ಹಿತ್ತಾಳೆ ಕಿವಿಯಾಗಿ ರಾಜಕೀಯ ಅಯಾ ತಪ್ಪಿದವರಾಗಿ ಹಲವರ ವಿರೋಧ ಕಟ್ಟಿಕೊಂಡಿದ್ದರು ಇದಕ್ಕೆ ಮಾಜಿ ಶಾಸಕರುಗಳಾದ ಬಿ.ಆರ್.ನೀಲಕಂಠಪ್ಪ,ಎಸ್.ಆರ್.ಲಕ್ಷ್ಮಯ್ಯ,ಕಡೂರಿನ ಕೆ.ಎಂ.ಕೃಷ್ಣಮೂರ್ತಿ ಸದಾ ಕಾಲ ಕೆ.ಬಿ.ಎಂ.ವಿರುದ್ಧ ಹರಿದಾಯುತ್ತಿದ್ದರು.
25 ವರ್ಷದ ಸಕ್ರಿಯ ರಾಜಕಾರಣದಲ್ಲಿ ಕುಟುಂಬದವರು ಯಾರೂ ರಾಜಕೀಯ ಸುಳಿಗೆ ಸಿಲುಕದಂತೆ ಜತನದಿಂದ ಕಾಪಾಡಿಕೊಂಡಿದ್ದರು.ಅವರ ಚಿಕ್ಕಪ್ಪ ಕೆ.ಎಸ್.ಮಲ್ಲಿಕಾರ್ಜುನ ಪ್ರಸನ್ನ ವಿರುದ್ದ ರಾಜಕಾರಣ ಮಾಡಿ ಪಕ್ಷ ನಿಷ್ಠೆ ಅಚಲ ಎಂದು ತೋರಿಸಿ ನಡೆದವರು. ರಾಜಕೀಯದಷ್ಟೇ,ಧಾರ್ಮಿಕ ಕ್ಷೇತ್ರದ ಮಠಾಧೀಶರ ಅನುಗ್ರಹಕ್ಕಾಗಿ ದುಡಿದವರು. “ತರಳ ಬಾಳು ಹುಣ್ಣುಮೆ” ಇರಲಿ” ದಸರಾ ದರ್ಬಾರ್” ಇರಲಿ ದೇವಸ್ಥಾನ ಜೀರ್ಣೋದ್ಧಾರ ಇರಲಿ ಕೆ.ಬಿ.ಎಂ.ಮುಂಚೂಣಿ ಎದ್ದು ಕಾಣುತ್ತಿತ್ತು.
ಯಾವುದೇ ಮುಲಾಜಿಗೆ ಒಳಗಾದವರಲ್ಲಾ.ಮಾಜಿ ಪ್ರಧಾನಿ ದೇವೇಗೌಡರ ನಂಬಿಕೆಗೆ ಅರ್ಹತೆ ಹೊಂದಿ ಅವರ ಕಷ್ಟ ಕಾಲದಲ್ಲಿ ಆರ್ಥಿಕ ನೆರವು ನೀಡಿರುವ ವಿಚಾರ ಜನರಿಗೆ ತಿಳಿದಿದೆ.ತಾಳ್ಮೆಯ ವ್ಯಕ್ತಿತ್ವ, ನಂಬಿಕೆಯ ರಹದಾರಿ, ಲೆಕ್ಕಾಚಾರದಲ್ಲಿ ಅಷ್ಟೇ ಕಟ್ಟು ನಿಟ್ಟು, ಶುದ್ದ ಹಸ್ತ, ಉತ್ತಮ ಸಂಘಟಕರಾದರೂ ಮಂತ್ರಿಯಂತಹ ಉನ್ನತ ಸ್ಥಾನ ಕೆ.ಬಿ.ಎಂ.ಗೆ ಸಿಗಲಿಲ್ಲಾ ಎಂಬುದು ಅವರ ಅಭಿಮಾನಿಗಳ ಕೊರಗು.
ಇದರ ಜೊತೆಗೆ ಸೋಲಿನ ಹೊಡೆತ ಅವರ ರಾಜಕೀಯ ಹಿನ್ನಡೆ ಕಾರಣ ಕೂಡ ಕೆ.ಬಿ.ಎಂ. ಖಿನ್ನತೆಗೆ ಒಳಗಾಗಿರಬಹುದು ಆದರೆ ಅವರ ಅಭಿಮಾನಿಗಳ ಸಮ್ಮಿಲನ ಕೆ.ಬಿ.ಎಂ.ಗೆ ಮತ್ತಷ್ಟು ಆರೋಗ್ಯ ಶಕ್ತಿ ಕೊಡಲಿ ಎನ್ನುವವರು ಹೆಚ್ಚು. ಖಡಕ್ ನಡೆ,ನುಡಿ.ಶಿಸ್ತಿನ ಸಿಪಾಯಿ, ಸದೃಢ ಮನಸ್ಸು ಕಟ್ಟು-ನಿಟ್ಟಿನ ವ್ಯವಹಾರ,ಸಮರ್ಥ ನಾಯಕತ್ವ,ಸಜ್ಜನ ರಾಜಕಾರಣ ನೋಡಿರುವ ಅವರ ಅಭಿಮಾನಿಗಳು “ಹೊಂಬಾಳೆ ಯಂತಹ ಮನಸ್ಸು, ಶುದ್ದ ಹಸ್ತದ” ಕೆ.ಬಿ.ಎಂ ಎಂದು ಕರೆಯುತ್ತಾರೆ.
ಕೆ.ಬಿ.ಎಂ.ಬಗ್ಗೆ ಹಲವು ಜನರ ಅಭಿಪ್ರಾಯ
ಹೆಚ್.ಡಿ.ತಮ್ಮಯ್ಯ ಶಾಸಕರು; ನನ್ನ ರಾಜಕೀಯ ಗುರುಗಳು ನನಗೆ ಶಕ್ತಿ ತುಂಬಿದವರಲ್ಲಿ ಕೆ.ಬಿ.ಎಂ.ಗೆ ಮೊದಲ ಸ್ಥಾನ ಸಲ್ಲುತ್ತದೆ. ಬೀರೂರು ವಿಧಾನ ಸಭಾ ಕ್ಷೇತ್ರದಲ್ಲಿ ಅವರು ಮಾಡಿರುವ ಕೆಲಸಗಳ ಬಗ್ಗೆ ಈಗಲೂ ಜನ ನೆನಪು ಇಟ್ಟುಕೊಂಡಿರುವುದು ನೋಡಿದರೆ ಆಶ್ಚರ್ಯ ಉಂಟಾಗುತ್ತದೆ. ಶ್ರೀ ಮಂತಿಕೆಯಲ್ಲಿ ಹುಟ್ಟಿ ಬೆಳೆದವರು ಜನಸಾಮಾನ್ಯರ ಸೇವೆಯಲ್ಲಿ ತೊಡಗಿಸಿಕೊಂಡು ಪ್ರಾಮಾಣಿಕತೆ,ಸಜ್ಜನಿಕೆಗೆ ಧಕ್ಕೆ ಬಾರದಂತೆ ಎಚ್ಚರಿಕೆ ಹೆಜ್ಜೆಯ ಹಾದಿ ಮರೆಯಲು ಸಾಧ್ಯವಿಲ್ಲ. ಸಮಾಜಕ್ಕೆ ಸಾರ್ವಜನಿಕರಿಗೆ ಸದಾ ಮಿಡಿಯುವ ಮನಸ್ಸು ಬಲು ಅಪರೂಪ ಎನ್ನುತ್ತಾರೆ.
ಎಸ್.ಎಲ್.ಬೋಜೇಗೌಡ ವಿ.ಪ.ಸದಸ್ಯರು: ಕೆ.ಬಿ.ಎಂ.ಶುಭ್ರ ರಾಜಕಾರಣಿ ದ್ವೇಷ ರಾಜಕಾರಣ ಮಾಡಿದವರಲ್ಲಾ.ಆದರೆ ನಿಷ್ಠುರವಾಗಿ ತೀರ್ಮಾನ ತೆಗೆದುಕೊಳ್ಳುವ ಛಾತಿ ಇರಲಿಲ್ಲ ಎನ್ನುತ್ತಾರೆ.
ಬೆಳ್ಳಿ ಪ್ರಕಾಶ್: ,ಮಾಜಿ ಶಾಸಕರು.:ಕೆ.ಬಿ.ಎಂ.ವ್ಯಕ್ತಿತ್ವ ಪ್ರಾಮಾಣಿಕತೆಯಿಂದ ಕೂಡಿರುವುದರಿಂದ ರಾಜಕೀಯವಾಗಿ ಮತ್ತು ಆಡಳಿತಾತ್ಮಕವಾಗಿ ತಮ್ಮದೇ ಆದ ಹೆಜ್ಜೆ ಗುರುತು ಮೂಡಿಸಿದ್ದಾರೆ.ಅವರ ತೀರ್ಮಾನ ಪಕ್ಷದ ತೀರ್ಮಾನ ಎನ್ನುವ ಜಾಣ್ಮೆ ಸದಾಕಾಲವೂ ಜಾಗೃತವಾಗಿತ್ತು ಎನ್ನುತ್ತಾರೆ.
ಎಂ.ಎಲ್.ಮೂರ್ತಿ: ಹಿರಿಯ ಕಾಂಗ್ರೆಸ್ ಮುಖಂಡರು. ಕೆ.ಬಿ.ಎಂ. ತಾಯಿ ಮಮತೆ ಹೊಂದಿದ್ದವರು ಮಗುವಿನಂತಹ ಗುಣ ಇಟ್ಟುಕೊಂಡವರು ಸಾರ್ವಜನಿಕ ಜೀವನ ಪಾರದರ್ಶಕತೆಯನ್ನು ಕಾಪಾಡಿಕೊಂಡು ಬಂದವರು ಎನ್ನುತ್ತಾರೆ.
ಹೆಚ್.ಹೆಚ್.ದೇವರಾಜ್: ಕಾಂಗ್ರೆಸ್ ವಕ್ತಾರ. ವಿಷಯಕ್ಕೆ ತಕ್ಕಂತೆ ಜವಾಬ್ದಾರಿ ನಿರ್ವಹಿಸಿದ ಬೆರಳೆಣಿಕೆ ರಾಜಕಾರಣಿಗಳಲ್ಲಿ ಕೆ.ಬಿ.ಎಂ.ಗೆ ಅಗ್ರ ಸ್ಥಾನ. ಕ್ಲೀನ್ ಹ್ಯಾಂಡ್ ಖಡಕ್ ಮಾತು ಮರೆಯಲು ಸಾಧ್ಯವಾಗುವುದಿಲ್ಲ ಎನ್ನುತ್ತಾರೆ.
ಹೆಚ್.ಎಂ.ರೇಣುಕಾರಾಧ್ಯ.ಸಿ.ಪಿ.ಐ.ಮುಖಂಡರು:ಕೆ.ಬಿ.ಎಂ.ಸೌಮ್ಯವಾದಿ ಸಾರ್ವಜನಿಕರ ಬಗ್ಗೆ ಗೌರವ ಇಟ್ಟುಕೊಂಡವರು ಇಂದಿನ ರಾಜಕಾರಣಕ್ಕೆ ಹೋಲಿಸಿದರೆ ಅಪರೂಪದ ಸಜ್ಜನ ರಾಜಕಾರಣಿ ಎನ್ನುತ್ತಾರೆ.
ಗುರುಶಾಂತಪ್ಪ, ರೈತ ಮುಖಂಡರು: ಸುಸಂಸ್ಕೃತ ರಾಜಕಾರಣಿ ಸಂಘಟನೆಗಳ ಬಗ್ಗೆ ಗೌರವ ಭಾವನೆ ಇಟ್ಟುಕೊಂಡು ಎಚ್ಚರಿಕೆ ಹೆಜ್ಜೆ ಇಟ್ಟುಕೊಂಡು ನಡೆದವರಲ್ಲಿ ಹಿರಿಯ ಸ್ಥಾನ ಹೊಂದಿದ್ದಾರೆ.ಎನ್ನುತ್ತಾರೆ.
ಹೆಚ್.ಎಸ್.ಮಂಜಪ್ಪ: ದಳದ ಮುಖಂಡರು:ಜಿಲ್ಲೆಯಲ್ಲಿ ಜನತಾಪಕ್ಷ ಮತ್ತು ಜನತಾದಳ ಗಟ್ಟಿಯಾಗಿ ಕಟ್ಟಿದ ಸಂಘಟಕ ಹಲವು ಸ್ಥಾನ ಮಾನ ಪಡೆದರು ಎಲ್ಲೇ ಮೀರಿದವರಲ್ಲ.ಎಲ್ಲರೊಂದಿಗೆ ಇನ್ನಷ್ಟು ಬೆರೆಯಬೇಕಿತ್ತು. ಕಾಂಗ್ರೆಸ್ ಪಕ್ಷ ಸೇರಿ ಯಾವ ಸ್ಥಾನ ಮಾನ ಪಡೆಯಲಿಲ್ಲ .ದಳದಲ್ಲಿ ಇರ ಬೇಕಿತ್ತು ಎನ್ನುತ್ತಾರೆ.
ಒಟ್ಟಾರೆ ಕೆ.ಬಿ.ಎಂ.ಬಗ್ಗೆ ಹಲವು ಅಭಿಪ್ರಾಯಗಳಿದ್ದರು ಅವರ ಸಜ್ಜನಿಕೆ, ಸರಳತೆ,ಸುಸಂಸ್ಕೃತ ನಡವಳಿಕೆ ಶುದ್ದ ಹಸ್ತದ ಬಗ್ಗೆ ಜನಾಭಿಪ್ರಾಯ ಮಾತ್ರ ಸತ್ಯವಂತರು ರಾಜಕಾರಣದಲ್ಲಿ ಸದೃಡ ಮನಸ್ಸಿದ್ದರೆ ನಿಷ್ಕಲ್ಮಶವಾಗಿ ಉಳಿಯಬಹುದು ಎಂಬುದಕ್ಕೆ ಕೆ.ಬಿ.ಎಂ.ಜೀವಂತ ಉದಾಹರಣೆಯಾಗಿದ್ದಾರೆ.
K.B. Mallikarjuna the pure hand of the Hombale mind
Leave a comment