Home namma chikmagalur chikamagalur ಹೇಮಾವತಿ ನದಿಯ ಅಕ್ರಮವಾಗಿ ಮರಳು ಸಾಗಣೆ ಪ್ರಕರಣ ಪತ್ತೆ
chikamagalurHomeLatest Newsnamma chikmagalur

ಹೇಮಾವತಿ ನದಿಯ ಅಕ್ರಮವಾಗಿ ಮರಳು ಸಾಗಣೆ ಪ್ರಕರಣ ಪತ್ತೆ

Share
Share

ಮೂಡಿಗೆರೆ: ಜೀವನದಿ ಹೇಮಾವತಿಯ ಒಡಲಿಗೆ ಕನ್ನ ಹಾಕಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಜಾಲದ ಮೇಲೆ ಗೋಣಿಬೀಡು ಪೊಲೀಸರು ಬಲೆ ಬೀಸಿದ್ದಾರೆ.

ಹಾಲೂರು ಗ್ರಾಮದ ವ್ಯಾಪ್ತಿಯಲ್ಲಿ ನದಿಯಿಂದ ಕಳ್ಳತನದಿಂದ ಮರಳು ತೆಗೆದು ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪಿಎಸ್‌ಐ ಶ್ರೀನಾಥ ರೆಡ್ಡಿ ನೇತೃತ್ವದ ತಂಡವು ಹಠಾತ್ ದಾಳಿ ನಡೆಸಿದೆ.

ಈ ಕಾರ್ಯಾಚರಣೆಯ ಸಂದರ್ಭದಲ್ಲಿ ಹಾಲೂರು ನಿವಾಸಿ ಸುನೀಲ್ ಎಂಬಾತ ಸಿಕ್ಕಿಬಿದ್ದಿದ್ದು, ಆತನ ಬಳಿಯಿದ್ದ ಕೆ.ಎ.18 ಡಿ.3614 ನೋಂದಣಿ ಸಂಖ್ಯೆಯ ಬೊಲೆರೊ ಪಿಕ್ ಅಪ್ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪರಿಶೀಲನೆಯ ವೇಳೆ ವಾಹನದ ಹಿಂಭಾಗದಲ್ಲಿ ಸುಮಾರು 50 ರಿಂದ 60 ಪ್ಲಾಸ್ಟಿಕ್ ಚೀಲಗಳಲ್ಲಿ ಅಕ್ರಮವಾಗಿ ತುಂಬಿಸಿದ್ದ ಮರಳು ಪತ್ತೆಯಾಗಿದ್ದು, ಇದರ ಅಂದಾಜು ಮೌಲ್ಯ 6,000 ರೂಪಾಯಿಗಳೆಂದು ತಿಳಿದುಬಂದಿದೆ.

ಸದ್ಯ ಪೊಲೀಸರು ಮರಳು ಸಹಿತ ವಾಹನವನ್ನು ಜಪ್ತಿ ಮಾಡಿದ್ದು, ಆರೋಪಿತನ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ. ನದಿ ಮೂಲಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಇಲಾಖೆಯ ಈ ಕ್ರಮ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

Illegal sand transportation case detected in Hemavati river

Share

Leave a comment

Leave a Reply

Your email address will not be published. Required fields are marked *

Don't Miss

ಭಿಕ್ಷುಕಿಯನ್ನು ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ

ಚಿಕ್ಕಮಗಳೂರು:  ಕ್ಷುಲ್ಲಕ ಕಾರಣಕ್ಕೆ ಸೈಜುಕಲ್ಲು ಎತ್ತಿಹಾಕಿ ಮಹಿಳೆಯನ್ನು ಕೊಲೆ ಮಾಡಿದ ಆರೋಪಿಗೆ ಇಲ್ಲಿನ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ನೀಡಿದ್ದು, ೮೧ ಸಾವಿರ ರೂ.ಗಳ ದಂಡ...

ಹುಬ್ಬಳ್ಳಿ-ಚಿಕ್ಕಮಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸೇವೆ ವಿಸ್ತರಣೆ

ಚಿಕ್ಕಮಗಳೂರು: ನೈಋತ್ಯ ರೈಲ್ವೆಯು ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ಹುಬ್ಬಳ್ಳಿ ಮತ್ತು ಚಿಕ್ಕಮಗಳೂರು ನಡುವೆ ಚಲಿಸುವ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸೇವೆಯನ್ನು ವಿಸ್ತರಿಸಲು ನಿರ್ಧರಿಸಿದೆ. ಈ ಹಿಂದೆ ಜೂನ್ 21,...

Related Articles

ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ

ಚಿಕ್ಕಮಗಳೂರು: RVR ಹೆಲ್ತ್ ಕೇರ್ ವತಿಯಿಂದ, ಶ್ರೀ ವಿಜಯ್ ಎಂ.ಎನ್. ಶೆಟ್ಟಿ ಹಾಗೂ ಡಾ. (ಪ್ರೊ). ರಾಘವೇಂದ್ರ...

ಧುಮ್ಮಿಕ್ಕಿ ಹರಿಯುತ್ತಿರುವ ಹೆಬ್ಬೆ ಫಾಲ್ಸ್‌

ಚಿಕ್ಕಮಗಳೂರು: ಕಾಫಿನಾಡಿನ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಮಳೆ (Rain) ಅಬ್ಬರ ಜೋರಾಗಿದ್ದು, ತರೀಕೆರೆ (Tarikere) ತಾಲೂಕಿನಲ್ಲಿರುವ ಹೆಬ್ಬೆ...

ಶ್ರೀಈಶ್ವರ-ಚೌಡೇಶ್ವರಿ ದೇವಾಲಯಗಳಲ್ಲಿ ಆಭರಣ ಕಳವು

ಕಡೂರು: ತಾಲ್ಲೂಕಿನ ಸಿಂಗಟಗೆರೆ ಸಮೀಪದ ಎಸ್.ಡಿ. ಕೊಪ್ಪಲು ಗ್ರಾಮದ ಶ್ರೀಈಶ್ವರ ಹಾಗೂ ಚೌಡೇಶ್ವರಿ ದೇವಾಲಯಗಳಲ್ಲಿ ದೇವರ...

ತರೀಕೆರೆಯ ಗೋಪಿಕೃಷ್ಣಗೆ ಎಂಎಲ್ ಸಿ ಸ್ಥಾನ ನೀಡಬೇಕು

ಚಿಕ್ಕಮಗಳೂರು: ಅಹಿಂದ ಪರವಾಗಿ ಮಾತಾಡುವ ಕಾಂಗ್ರೆಸ್ ಪಕ್ಷ ಮಡಿವಾಳ ಸಮುದಾಯದ ಮುಖಂಡರಿಗೆ ರಾಜಕೀಯ ಪ್ರಾತಿನಿಧ್ಯ ನೀಡುತ್ತಿಲ್ಲ....