Home namma chikmagalur chikamagalur ಸದೃಢ ಸಾಧನೆಯ “ಐ.ಎ.ಎಸ್ ಮಿಥುನ್ “
chikamagalurHomeLatest Newsnamma chikmagalur

ಸದೃಢ ಸಾಧನೆಯ “ಐ.ಎ.ಎಸ್ ಮಿಥುನ್ “

Share
Share

ಚಿಕ್ಕಮಗಳೂರು: ನೋವು ಸಂಕಟ,ಅಪಮಾನ,ಬಡತನ ಮೆಟ್ಟಿ ನಿಲ್ಲುವುದು ವಿದ್ಯೆಯಿಂದ ಮಾತ್ರ ಸಾಧ್ಯ ಎಂದು ನಿರೂಪಿಸಿರುವ ಸಿ.ಅರ್.ಮಿಥುನ್ ಅಪ್ಪಟ ಉದಾಹರಣೆಯಾಗಬಲ್ಲಾ. ಬಡವರ ಮಕ್ಕಳು ಬೆಳೆಯ ಬೇಕು ಸಾಧಿಸ ಬೇಕು ಮತ್ತು ಬೆಳಗ ಬೇಕು ಇದಕ್ಕೆ ಛಲ ಹಾಗು ಹಠ ಇದ್ದರೆ ಸಾಧ್ಯ.

ಕುಗ್ರಾಮದಲ್ಲಿ ಹುಟ್ಟಿ ಬೆಳೆದು ಸರ್ಕಾರಿ ಶಾಲೆಗಳಲ್ಲಿ ಕಲಿತು ಇಂದು ಐ.ಎ.ಎಸ್.ನಂತಹ ಉನ್ನತ ಅಧಿಕಾರಿಯಾಗಿ ಸಾಕ್ಷಿಕರಿಸುರುವುದನ್ನು ಮೆಚ್ಚಲೇ ಬೇಕು, ಅಚಲವಾದ ವಿಶ್ವಾಸ ಹಾಗೂ ಉತ್ಸಾಹ ತುಂಬಿ ಕೊಂಡು ನಯ,ವಿನಯ ತುಂಬಿಕೊಂಡಿರುವ ಮಿಥುನ್‌ ಸಾಧನೆ ಯಾರಿಗೂ ತಿಳಿಯದಂತೆ ಕಾಪಿಟ್ಟುಕೊಂಡಿರುವ ದೃಢತೆಯನ್ನು ತೋರಿಸುತ್ತದೆ. ಇಂತಹ ದಿಟ್ಟತನ ಎಲ್ಲರಿಗೂ ಬರಲು ಸಾಧ್ಯವಿಲ್ಲ. ತಾನು ಕಂಡ ಕನಸನ್ನು ಈಡೇರಿಸುವ ಮೂಲಕ ಇತರರಿಗೆ ಮಾದರಿಯಾಗುವುದರ ಜೊತೆಗೆ ಬಡವರ ಮಕ್ಕಳಿಗೆ ದಾರಿ ದೀಪ ತೋರಿಸುವ ಎದೆಗಾರಿಕೆಗೆ ಸಿ.ಅರ್.ಮಿಥುನ್ ಬಗ್ಗೆ ಎಷ್ಟು ಬರೆದರು ಸಾಲದು.

“ಬೇಸಾಯ ನೀ ಸಾಯ, ನಾ ಸಾಯ, ಮನೆ ಮಕ್ಕಳು ಸಾಯ” ಎನ್ನುವ ರೈತಾಪಿ ಕುಟುಂಬದ ಕುಡಿ ಎಂದು ತನ್ನ ಓದಿನ ಮತ್ತು ಪದವಿಯ ಬಗ್ಗೆ ಹೇಳದೇ ಇರುವುದು ರೋಚಕವಾಗಿದೆ.ಪ್ರಚಾರ ಬಯಸಲಿಲ್ಲ, ಡಂಗುರ ಹೊಡೆಯಲಿಲ್ಲ,ಕೊಚ್ಚಿ ಕೊಳ್ಳಲಿಲ್ಲ ಮನಸ್ಸಿನಲ್ಲಿ ಮತ್ತಷ್ಟು ಸಾಧಿಸಲು ತುದಿಗಾಲಲ್ಲಿ ನಿಂತಿರುವುದು ಮಾತ್ರ ಸತ್ಯ.

ಬೆಳೆಯುವ ಮೊಳಕೆ ಚಿಗುರಿನಲ್ಲಿ ಎಂಬಂತೆ ಸರಳತೆ, ಸಜ್ಜನಿಕೆ, ಸಹೃದಯ ತುಂಬಿಕೊಂಡಿರುವ “ಮಿಥುನ್” 2023 ರಲ್ಲಿ ಯುಪಿಎಸ್ಸಿ ಪರೀಕ್ಷೆ ಬರೆದು ಮೊದಲ ಪ್ರಯತ್ನದಲ್ಲಿ 156 ನೇ ರ‌್ಯಾಂಕ್ ಪಡೆದು ಕರ್ನಾಟಕ ಕೇಡಾರ್ ಗೆ ಆಯ್ಕೆಯಾಗಿರುವುದು ತಾಯ್ನಾಡಿಗೆ ಸೇವೆ ಸಲ್ಲಿಸುವ ಅವಕಾಶ ದೊರೆತಿರುವುದು ಕೂಡ ವಿಶೇಷ ಸಾಧನೆ. ತರಬೇತಿ ಪಡೆದು ಪ್ರಸ್ತುತ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ವಿಚಾರ ಊರಿನವರಿಗಿರಲಿ ಪಕ್ಕದ ಮನೆಯವರಿಗೂ ತಿಳಿದಿಲ್ಲ ಎಂದರೆ ಈತನ ಮನಸ್ಸಿನಲ್ಲಿ ಎಷ್ಟು ನೋವು ತುಂಬಿರ ಬೇಕು.

ವಿದ್ಯೆಯನ್ನು ಸೋಲಿಸುವ ಅಸ್ತ್ರ ಯಾವುದು ಇಲ್ಲ ಎಂದು ಅರಿತಿರುವ ಈತ ಪ್ರಧಾನಿ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಹಂಬಲ,ಆಸೆ ಇಟ್ಟುಕೊಂಡಿರುವುದು ದೃಢತೆಯ ಬಗ್ಗೆ ಮಾತ್ರ ಮೆಚ್ಚಲೇ ಬೇಕು. ಈತ ಯಾರೀರಬಹುದು ಎಂಬ ಕುತೂಹಲ ಬಂದಿರಬಹುದು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಚಿಕ್ಕ ಬಳ್ಳೆಕೆರೆಯ ಪೋಸ್ಟ್‌ ಮ್ಯಾನ್ ರಾಮಲಿಂಗಪ್ಪ ಮತ್ತು ರಾಧ ದಂಪತಿಗಳ ಸುಪುತ್ರ ಮಿಥುನ್ 21-8-1998ರಲ್ಲಿ ಜನನವಾದವರು. ಇವರು ಗ್ರಾಮೀಣ ಶಾಲೆಯಲ್ಲಿ ವಿಧ್ಯಾಭ್ಯಾಸ ಮಾಡಿರುವುದು ಕೂಡ ವಿಶೇಷ.

ಅಜ್ಜಂಪುರ ತಾಲ್ಲೂಕಿನ ಮೆಣಸಿನಕಾಯಿ ಹೊಸಳ್ಳಿಯಲ್ಲಿ ಪ್ರಾಥಮಿಕ ಶಾಲೆಯಲ್ಲಿ ಕಲಿತು ಐದನೇ ತರಗತಿಗೆ ಬೆಳಗಾವಿ ಹೋಗಿ ನಂತರ 6 ಮತ್ತು 7 ನೇ ತರಗತಿಯನ್ನು ಸಾಣೇಹಳ್ಳಿ ಮಠದ ಶಾಲೆಯಲ್ಲಿ ಮುಗಿಸಿ ಪ್ರೌಢಶಾಲೆಯನ್ನು ಕಡೂರಿನ ಬಿಜಿಎಸ್ ನಲ್ಲಿ ತೇರ್ಗಡೆ ಹೊಂದಿ ತಿಪಟೂರು ಕಲ್ಪತರು ಕಾಲೇಜ್ ನಲ್ಲಿ ಪಿ,ಯು,ಸಿಯ ನಂತರ ಬೆಳಗಾವಿಯ ಕೆ.ಎಲ್.ಎ ಇಂಜಿನಿಯರಿಂಗ್ ಕಂಪ್ಯೂಟರ್ ಸೈನ್ಸ್ ಪದವಿ ಪಡೆದು ಇನ್ ಪೋಸ್ಸಿಸ್ ನಲ್ಲಿ ಎಂಟು ತಿಂಗಳು ಉದ್ಯೋಗದಲ್ಲಿ ಇದ್ದು ಜೀವನದಲ್ಲಿ ವಿಶೇಷ ಸಾಧನೆ ಮಾಡಬೇಕು ಎಂದು ದೆಹಲಿಯಲ್ಲಿ ಕೋಚಿಂಗ್ ಪಡೆಯಲು ಹೋಗಿ ಹಣಕಾಸು ಮುಗ್ಗಟಿನಿಂದ ಧಾರವಾಡಕ್ಕೆ ಬಂದು ತರಬೇತಿ ಪಡೆದು 156 ನೇ ರ‌್ಯಾಂಕ್ ಪಡೆದು ಕರ್ನಾಟಕದಲ್ಲಿ ಸೇವೆ ಸಲ್ಲಿಸುವ ಭಾಗ್ಯ ದೊರೆಕಿಸಿಕೊಂಡಿರುವುದರ ಹಿಂದೆ ಛಾಲಗಾರನ,ಹಠವಾದಿತನವನ್ನು ಮೆಚ್ಚ ಬೇಕು.

ಯಾವುದೂ ಸುದ್ದಿ ಹುಡುಕಲು ಹೋದಾಗ ನ್ಯೂಸ್ ಕಿಂಗ್ ಗೆ ಸುಳಿವು ದೊರಕಿದಾಗ ಇವರನ್ನು ಮೊಬೈಲ್ ನಲ್ಲಿ ಸಂಪರ್ಕ ಮಾಡಿ ವಿವರ ಪಡೆಯಲು ಮೂರ್ನಾಲ್ಕು ಬಾರಿ ಸಂಪರ್ಕ ಮಾಡಿದರು ಗುಟ್ಟು ಬಿಡಲಿಲ್ಲ. ಏಕೆಂದರೆ ಇನ್ನಷ್ಟು ಮತ್ತಷ್ಟು ಸಾಧಿಸ ಬೇಕು ಎಂಬ ಹಠ ಆತನ ಮಾತಿನಲ್ಲಿ ಸದೃಢವಾಗಿದೆ.ಸದ್ದು,ಸುದ್ದಿ ಇಲ್ಲದೆ ಬಹು ದೊಡ್ಡ ಸಾಧನೆ ಮಾಡಿರುವ ಮಿಥುನ್ ಬಡವರ ಶೋಷಿತರ ಪರ ಇರುವುದು ಖಚಿತ. ಆದರೆ ರಾಜಕೀಯದವರು,ವ್ಯಾಪಾರಸ್ಥರು ಜಾತಕ ಪಕ್ಷಿಗಳಂತೆ ಇರುತ್ತಾರೆ ಎಚ್ಚರಿಕೆ ವಹಿಸಿದರೆ ಊರಿಗಷ್ಟೇ ಅಲ್ಲ ಜನರಿಗೆ, ರಾಜ್ಯಕ್ಕೆ ,ದೇಶಕ್ಕೆ ಆಸ್ತಿ ಜೊತೆಗೆ ಅರಸನಾಗಬಲ್ಲಾ ಅವಕಾಶ ದಕ್ಕಿಸಿಕೊಂಡಿರುವ ಅಪ್ಪಟ ಗ್ರಾಮೀಣ ಯುವಕನ ಸಾಧನೆ ಇತರಿರೆಗೆ ಮಾದರಿಯಾಗಲಿ

“IAS Mithun” of strong performance

Share

Leave a comment

Leave a Reply

Your email address will not be published. Required fields are marked *

Don't Miss

ಸಾಲದ ಹಣ ಕೇಳಿದ್ದಕ್ಕೆ ಹಲ್ಲೆ; ತಾಯಿ-ಮಗನ ವಿರುದ್ಧ ಪ್ರಕರಣ

ಕಡೂರು: ಸಾಲವಾಗಿ ನೀಡಿದ್ದ ₹50 ಸಾವಿರವನ್ನು ಹಿಂದಿರುಗಿಸುವಂತೆ ಕೇಳಿದ್ದಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಯಗಟಿ ಪೊಲೀಸ್ ಠಾಣೆಯಲ್ಲಿ ತಾಯಿ-ಮಗನ ವಿರುದ್ಧ ಪ್ರಕರಣ ದಾಖಲಾಗಿದೆ. ಯಗಟಿ ಗ್ರಾಮದ ಮುದಿಯಪ್ಪ ಬಡಾವಣೆಯ...

ಹುಬ್ಬಳ್ಳಿಯಲ್ಲಿ ಆಗಸ್ಟ್ 9ರಂದು ರಾಜ್ಯಮಟ್ಟದ 32ನೇ ವಿಶ್ವ ಆದಿವಾಸಿ ದಿನಾಚರಣೆ

ಚಿಕ್ಕಮಗಳೂರು: ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ಹಾಗೂ ಆದಿವಾಸಿ ಹರಣ ಶಿಖಾರಿ ಪಾರಿ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತಾಶ್ರಯದಲ್ಲಿ ಆಗಸ್ಟ್ 9ರಂದು ಹುಬ್ಬಳ್ಳಿಯಲ್ಲಿ ರಾಜ್ಯಮಟ್ಟದ 32ನೇ ವಿಶ್ವ ಆದಿವಾಸಿ ದಿನಾಚರಣೆ ಅಂಗವಾಗಿ...

Related Articles

ಗ್ರಾಮೀಣ ಪ್ರದೇಶದಲ್ಲಿ ವಲಸೆ ತಡೆಗೆ ವಿಬಿ ಜಿ ರಾಮ್ ಜಿ ಆಸರೆ

ಚಿಕ್ಕಮಗಳೂರು: ಗ್ರಾಮೀಣ ಭಾಗದ ಜನರು ಉದ್ಯೋಗಕ್ಕಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಪ್ಪಿಸಿ, ತಮ್ಮ ಗ್ರಾಮಗಳಲ್ಲಿಯೇ...

ಆಗಸ್ಟ್ 14 ಮತ್ತು 16 ರಂದು ವಿದ್ಯುತ್ ನಿಲುಗಡೆ

ಚಿಕ್ಕಮಗಳೂರು:  ಗ್ರಾಮೀಣ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ ಹೊಸದಾದ ಗಾಣದಾಳು ವಿ.ವಿ ಕೇಂದ್ರದ ೧೧ ಕೆ.ವಿ ಲಿಂಕ್...

ವೃದ್ದರ ಮಾಶಾಸನ ಬಿಡುಗಡೆ ಆಗ್ರಹಿಸಿ ಕರವೇ (ಪ್ರವೀಣ್‌ಶೆಟ್ಟಿ)ಬಣ ಪ್ರತಿಭಟನೆ

ಚಿಕ್ಕಮಗಳೂರು: ವೃದ್ದರ ಮಾಶಾಸನ ಬಿಡುಗಡೆ ಹಾಗೂ ಬಿಡದಿಯಲ್ಲಿ ರೈತರ ಜೀವನ ಉಳಿಸಬೇಕು ಎಂದು ಆಗ್ರಹಿಸಿ ಕರವೇ...

ವಿದ್ಯುತ್ ಸ್ಪರ್ಶದಿಂದ ಎರಡು ಜಾನುವಾರುಗಳ ಸಾವು

ನರಸಿಂಹರಾಜಪುರ: ಜಮೀನಿಗೆ ಅಳವಡಿಸಿದ್ದ ಐಬೆಕ್ಸ್ ತಂತಿ ಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದ ಪರಿಣಾಮ ಎರಡು...