Home namma chikmagalur ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಒತ್ತು
namma chikmagalurchikamagalurHomeLatest News

ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಒತ್ತು

Share
Share

ಚಿಕ್ಕಮಗಳೂರು: ಕ್ಷೇತ್ರದಲ್ಲಿ ಕೆರೆ ತುಂಬಿಸುವ ಕಾರ್ಯವೂ ಸೇರಿದಂತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ತಿಳಿಸಿದರು.

ನೆಟ್ಟೇಕೆರೆಹಳ್ಳಿಯಲ್ಲಿ ಇಂದು ಬೆಳಿಗ್ಗೆ ನಡೆದ ನಡೆದ ಕಾರ್ಯಕ್ರಮದಲ್ಲಿ ನೆಟ್ಟೇಕೆರೆಹಳ್ಳಿ ಹಾಗೂ ಸೆಗನೀಪುರ ಗ್ರಾಮಗಳ ‘ವಾಸಿಸುವವನೇ ಒಡೆಯ’ ಯೋಜನೆಯಡಿ ಹಕ್ಕುಪತ್ರ ಹಾಗೂ ಇ-ಸ್ವತ್ತು ಖಾತೆ ಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.

ಈಗಾಗಲೇ ರಾಜ್ಯ ಸರ್ಕಾರದಿಂದ ಪಂಚ ಗ್ಯಾರಂಟಿ ಯೋಜನೆಯನ್ನು ಈಗಾಗಲೇ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದ್ದು, ಅಭಿವೃದ್ಧಿ ಕಾರ್ಯಗಳಿಗೂ ವಿಶೇಷ ಕ್ರಮ ಕೈಗೊಳ್ಳಲಾಗುತ್ತಿದೆ. ರೈತರಿಗೆ ಅನುಕೂಲವಾಗುವಂತೆ ಮಳೆ, ಉತ್ತಮ ಬೆಳೆ ಹಾಗೂ ಆ ಬೆಳೆಗೆ ತಕ್ಕಂತೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರೆಯಲೆಂದು ತಾವು ಆಶಿಸುವುದಾಗಿ ಹೇಳಿದರು.

೧೯೭೪-೭೫ ರಲ್ಲಿ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಹಾಗೂ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಉಳುವವನೇ ಭೂಮಿ ಯೋಜನೆಯನ್ನು ಜಾರಿಗೆ ತಂದು ೫೦ ವರ್ಷವಾಗಿದೆ. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಾಸಿಸುವವನೇ ಒಡೆಯ ಯೋಜನೆಯಡಿ ಕಂದಾಯ ಗ್ರಾಮಗಳನ್ನು ಉಪಗ್ರಾಮಗಳನ್ನಾಗಿಸಿ ಗ್ರಾಮಗಳಲ್ಲಿ ಯಾರ್‍ಯಾರಿಗೆ ಹಕ್ಕುಪತ್ರ, ಇ-ಸ್ವತ್ತು ಖಾತೆ ಪತ್ರ ಹಾಗೂ ಕ್ರಯಪತ್ರಗಳಿರಲಿಲ್ಲವೋ ಅವರಿಗೆ ಅವುಗಳನ್ನು ವಿತರಿಸಲು ಕ್ರಮ ಕೈಗೊಂಡಿದ್ದಾರೆ. ಆ ಹಿನ್ನೆಲೆಯಲ್ಲಿ ನೆಟ್ಟೇಕೆರೆಹಳ್ಳಿ ಹಾಗೂ ಸೆಗನೀಪುರ ಗ್ರಾಮಗಳ ಸುಮಾರು ೮೨ ಫಲಾನುಭವಿಗಳು ಹಕ್ಕುಪತ್ರಗಳನ್ನು ಪಡೆಯಲಿದ್ದಾರೆ ಎಂದು ತಿಳಿಸಿದರು.

ಕರ್ತಿಕೆರೆ ಗ್ರಾ.ಪಂ. ಅಧ್ಯಕ್ಷೆ ಭಾಗ್ಯ ಶ್ರೀನಿವಾಸ್, ಉಪಾಧ್ಯಕ್ಷರಾದ ಪುಟ್ಟಸ್ವಾಮಿ ಶೆಟ್ಟಿ, ಸದಸ್ಯರುಗಳಾದ ಮೋಹನ್, ಸಿದ್ದರಾಮೇಗೌಡ, ಲೋಕೇಶ್, ಯತೀಶ್, ಚಂದ್ರಶೇಖರ್ ರಾಜ್ ಅರಸ್ ಹಾಗೂ ಸೌಮ್ಯ, ತಹಶೀಲ್ದಾರ್ ಕೆ.ಎಸ್.ರೇಷ್ಮಾಶೆಟ್ಟಿ,  ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ವಿಜಯಕುಮಾರ್, ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯ ನಾಗೇಶ್ ಮತ್ತಿತರರು ಭಾಗವಹಿಸಿದ್ದರು.

೨೧ಸಿಕೆಎಂ೩: ನೆಟ್ಟೇಕೆರೆಹಳ್ಳಿಯಲ್ಲಿ ಇಂದು ಬೆಳಿಗ್ಗೆ ನಡೆದ ನಡೆದ ಕಾರ್ಯಕ್ರಮದಲ್ಲಿ ನೆಟ್ಟೇಕೆರೆಹಳ್ಳಿ ಹಾಗೂ ಸೆಗನೀಪುರ ಗ್ರಾಮಗಳ ‘ವಾಸಿಸುವವನೇ ಒಡೆಯ’ ಯೋಜನೆಯಡಿ ಹಕ್ಕುಪತ್ರ ಹಾಗೂ ಇ-ಸ್ವತ್ತು ಖಾತೆ ಪತ್ರಗಳ ವಿತರಣೆ ಸಮಾರಂಭವನ್ನು ಶಾಸಕ ಹೆಚ್.ಡಿ.ತಮ್ಮಯ್ಯ ಉದ್ಘಾಟಿಸಿದರು.

Greater emphasis on development work in the field

Share

Leave a comment

Leave a Reply

Your email address will not be published. Required fields are marked *

Don't Miss

ಭಿಕ್ಷುಕಿಯನ್ನು ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ

ಚಿಕ್ಕಮಗಳೂರು:  ಕ್ಷುಲ್ಲಕ ಕಾರಣಕ್ಕೆ ಸೈಜುಕಲ್ಲು ಎತ್ತಿಹಾಕಿ ಮಹಿಳೆಯನ್ನು ಕೊಲೆ ಮಾಡಿದ ಆರೋಪಿಗೆ ಇಲ್ಲಿನ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ನೀಡಿದ್ದು, ೮೧ ಸಾವಿರ ರೂ.ಗಳ ದಂಡ...

ಹುಬ್ಬಳ್ಳಿ-ಚಿಕ್ಕಮಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸೇವೆ ವಿಸ್ತರಣೆ

ಚಿಕ್ಕಮಗಳೂರು: ನೈಋತ್ಯ ರೈಲ್ವೆಯು ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ಹುಬ್ಬಳ್ಳಿ ಮತ್ತು ಚಿಕ್ಕಮಗಳೂರು ನಡುವೆ ಚಲಿಸುವ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸೇವೆಯನ್ನು ವಿಸ್ತರಿಸಲು ನಿರ್ಧರಿಸಿದೆ. ಈ ಹಿಂದೆ ಜೂನ್ 21,...

Related Articles

ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ

ಚಿಕ್ಕಮಗಳೂರು: RVR ಹೆಲ್ತ್ ಕೇರ್ ವತಿಯಿಂದ, ಶ್ರೀ ವಿಜಯ್ ಎಂ.ಎನ್. ಶೆಟ್ಟಿ ಹಾಗೂ ಡಾ. (ಪ್ರೊ). ರಾಘವೇಂದ್ರ...

ಧುಮ್ಮಿಕ್ಕಿ ಹರಿಯುತ್ತಿರುವ ಹೆಬ್ಬೆ ಫಾಲ್ಸ್‌

ಚಿಕ್ಕಮಗಳೂರು: ಕಾಫಿನಾಡಿನ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಮಳೆ (Rain) ಅಬ್ಬರ ಜೋರಾಗಿದ್ದು, ತರೀಕೆರೆ (Tarikere) ತಾಲೂಕಿನಲ್ಲಿರುವ ಹೆಬ್ಬೆ...

ಶ್ರೀಈಶ್ವರ-ಚೌಡೇಶ್ವರಿ ದೇವಾಲಯಗಳಲ್ಲಿ ಆಭರಣ ಕಳವು

ಕಡೂರು: ತಾಲ್ಲೂಕಿನ ಸಿಂಗಟಗೆರೆ ಸಮೀಪದ ಎಸ್.ಡಿ. ಕೊಪ್ಪಲು ಗ್ರಾಮದ ಶ್ರೀಈಶ್ವರ ಹಾಗೂ ಚೌಡೇಶ್ವರಿ ದೇವಾಲಯಗಳಲ್ಲಿ ದೇವರ...

ತರೀಕೆರೆಯ ಗೋಪಿಕೃಷ್ಣಗೆ ಎಂಎಲ್ ಸಿ ಸ್ಥಾನ ನೀಡಬೇಕು

ಚಿಕ್ಕಮಗಳೂರು: ಅಹಿಂದ ಪರವಾಗಿ ಮಾತಾಡುವ ಕಾಂಗ್ರೆಸ್ ಪಕ್ಷ ಮಡಿವಾಳ ಸಮುದಾಯದ ಮುಖಂಡರಿಗೆ ರಾಜಕೀಯ ಪ್ರಾತಿನಿಧ್ಯ ನೀಡುತ್ತಿಲ್ಲ....