Home namma chikmagalur chikamagalur ಗಲಿ-ಬಿಲಿ “ಗಿಲ್ಲಿ”ಆಟ ಕಿಂಗ್ ಮೇಕರ್ “ಕಿಂಗ್”
chikamagalurHomeLatest Newsnamma chikmagalur

ಗಲಿ-ಬಿಲಿ “ಗಿಲ್ಲಿ”ಆಟ ಕಿಂಗ್ ಮೇಕರ್ “ಕಿಂಗ್”

Share
Share

ಚಿಕ್ಕಮಗಳೂರು: ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಗೆ ಇದುವರೆಗೆ ಕಿಂಗ್ ಮೇಕರ್ ಆಗಿದ್ದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ”ಕಿಂಗ್ ” ನಂತೆ ಕಂಗೊಳಿಸುತ್ತಿದ್ದಾರೆ.
ಇನ್ನೂ ಉಪಾಧ್ಯಕ್ಷರಾಗಿ ದಿನೇಶ್ ಹೊಸೂರು ಆಯ್ಕೆ ಯಾಗಿದ್ದಾರೆ.

ಕಳೆದ ಒಂದು ವರ್ಷದಿಂದ ದಿನಕ್ಕೊಂದು ಸುದ್ದಿ ಕ್ಷಣಕ್ಕೊಂದು ಸುದ್ದಿಗಳ ಮಧ್ಯೆ ಸುದ್ದಿಗಳಿಗೆ ತೆರೆ ಬಿದ್ದಿದೆ. ಕಾಂಗ್ರೆಸ್ ಸರ್ಕಾರ ಇರುವುದರಿಂದ ಚುನಾವಣೆ ನಡೆಸುವುದು ಕಷ್ಟ ಎನ್ನುವಂತಹ ಘಟನೆಗಳು ನಡೆದಿವೆ.ಕಡೂರು ಶಾಸಕ ಆನಂದ್ ಮತ್ತು ತರೀಕೆರೆ ಶಾಸಕ ಶ್ರೀನಿವಾಸ್ ಸರ್ಕಾರದ ಮೇಲೆ ಒತ್ತಡ ತಂದು ಬ್ಯಾಂಕ್ ಬಗ್ಗೆ ತನಿಖೆ ನಡೆಸಬೇಕು ಎಂಬ ಹಿನ್ನೆಲೆಯಲ್ಲಿ ಚುನಾವಣೆ ಪ್ರಕ್ರಿಯೆ ಪ್ರಾರಂಭವಾದ ಮೇಲೆ ಚುನಾವಣೆ ಪ್ರಕ್ರಿಯೆಗೆ ತಾತ್ಕಾಲಿಕ ತಡೆಯಾಯಿತು.

ಇದರ ಬಗ್ಗೆ ನ್ಯಾಯಾಲಯ ಚುನಾವಣೆ ನಡೆಸಬೇಕು ಮತ್ತು ಆಡಳಿತ ಮಂಡಳಿ ಯಾತಾ ಸ್ಥಿತಿ ಮುಂದುವರೆಯಬೇಕು ಎಂದು ತೀರ್ಪು ನೀಡಿದ್ದು ಆಡಳಿತ ಮಂಡಳಿ ಅವಧಿ ಮುಗಿದರೂ ಆಡಳಿತ ನಡೆಸಿದ್ದು ದಾಖಲೆ .ಇದಕ್ಕೆ ಬೆಳ್ಳಿ ಪ್ರಕಾಶ್ ಕೊಡುಗೆ ಕಾರಣ ಎನ್ನಲಾಗಿದೆ. ಸ್ಥಗಿತಗೊಂಡಿದ್ದ ಚುನಾವಣೆಗೆ ಪ್ರಕ್ರಿಯೆ ಪ್ರಾರಂಭವಾಗಿ ಬಿಜೆಪಿ ಜೆಡಿಎಸ್ ಮೈತ್ರಿ ಕೂಟ ಕ್ಲೀನ್ ಸ್ವೀಪ್ ಮಾಡಿತು.

ಚಿಕ್ಕಮಗಳೂರು ಸಹಕಾರ ಸಂಘಗಳ ವತಿಯಿಂದ ವಿ,ಪ,ಸದಸ್ಯ ಸಿ.ಟಿ.ರವಿ ಮತ್ತು ಎಸ್.ಎಲ್.ಬೋಜೇಗೌಡರ ವಿರುದ್ಧ ಎಂ.ಎಸ್.ನಿರಂಜನ ತೊಡರುಗಾಲು ಕೊಟ್ಟರೂ ನಿರಾಯಾಸವಾಗಿ ಸಿ.ಟ.ರವಿ ಮತ್ತು ಎಸ್‌. ಎಲ್. ಬೋಜೇಗೌಡ ಆಯ್ಕೆಯಾದರೆ ಇತರೆ ಸಹಕಾರ ಸಂಘಗಳಿಂದ ಟಿ.ಎಲ್.ರಮೇಶ್ ಹ್ಯಾಟ್ರಿಕ್ ಸಾಧಿಸಿದರೆ ಇವರ ವಿರುದ್ಧ ಸ್ಪರ್ಧೆ ಮಾಡಿದ್ದ ಕಾಂಗ್ರೆಸ್ ನ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಸೋಲ ಬೇಕಾಯಿತು.

ಟಿ.ಎ.ಪಿ.ಸಿ.ಎಂ.ಎಸ್ ಕ್ಷೇತ್ರದಿಂದ ಕಡೂರು ಶಾಸಕ ಆನಂದ್ ಸ್ಪರ್ಧೆ ಮಾಡಿದ್ದರಿಂದ ತೀವ್ರ ಕುತೂಹಲ ಕೆರಳಿಸಿದ ಚುನಾವಣೆಯಲ್ಲಿ ಆನಂದ್ ಸೋತರೆ ಇವರ ಪ್ರತಿ ಸ್ಪರ್ಧೆ ದಿನೇಶ್ ಹೊಸೂರು ಒಂದು ಮತದಿಂದ ಗೆಲುವು ಸಾಧಿಸಿದರು. ಕಳೆದ ಬಾರಿ ಲಿಂಗಾಯತರು ಬ್ಯಾಂಕ್ ನ ಅಯಾ ಕಟ್ಟಿನ ಅಧ್ಯಕ್ಷ ಮತ್ತು ಅಪೆಕ್ಸ್ ಬ್ಯಾಂಕ್ ಪ್ರತಿನಿಧಿಯಾಗಿದ್ದರು .ಪ್ರಸ್ತುತ ಬ್ಯಾಂಕ್ ಒಕ್ಕಲಿಗರ ಬಿಗಿ ಹಿಡಿತಕ್ಕೆ ಸಿಕ್ಕಂತಾಯಿತು ಎಂಬ ವಿಶ್ಲೇಷಣೆಗಳು ಚರ್ಚೆ ಆಗುತ್ತಿವೆ.

ಸಿ.ಟಿ.ರವಿ ಕಿಂಗ್ ಮೇಕರ್ ಜೊತೆಗೆ “ಕಿಂಗ್” ಆದರೆ ಎಸ್.ಎಲ್.ಬೋಜೇಗೌಡರು ಎಲ್ಲಾ ನಾನೇ ಎಂಬಂತೆ ಆಗಿದ್ದಾರೆ ಬ್ಯಾಂಕ್ ಇಂದು ಬಿಜೆಪಿ ತೆಕ್ಕೆಗೆ ತರುವಲ್ಲಿ ಶ್ರಮಿಸಿದ ಬೆಳ್ಳಿ ಪ್ರಕಾಶ್ “ಹೀರೋ” ನಂತೆ ಕಂಡರೆ ಅಧ್ಯಕ್ಷರಾಗಿದ್ದ ಡಿ.ಎಸ್.ಸುರೇಶ್ ದುರಂತ ನಾಯಕರಾಗಿದ್ದಾರೆ.ಇನ್ನೂ ಉಳಿದವರು ಸೈಡ್ ಅಂಕ್ಟರ್ ತರಹ ಇದ್ದಾರೆ.ಪವರ್ ಇದ್ದರೂ ನಮ್ಮದು ಏನೂ ನಡೆಯಲಿಲ್ಲ ಮುಂದೆ ” ಮಾರಿ ಹಬ್ಬ ” ಇದೆ ಎಂದು ಕಾಂಗ್ರೆಸ್ ನವರು ಗೊಣಗುತ್ತಿದ್ದಾರೆ.

ಇಷ್ಟೆಲ್ಲಾ ಅಧಿಕಾರ ಪಡೆಯಲು ಕಸರತ್ತು ನಡೆಸಿದ್ದು ಏಕೆ ಎಂದರೆ “ಬ್ಯಾಂಕ್” ನೇಮಕಾತಿಗಾಗಿ ಎಂದು ಜನ ಮಾತನಾಡುತ್ತಿದ್ದಾರೆ.

Gali-bili “Gilli” Game King Maker “King”

Share

Leave a comment

Leave a Reply

Your email address will not be published. Required fields are marked *

Don't Miss

ಸಾಲದ ಹಣ ಕೇಳಿದ್ದಕ್ಕೆ ಹಲ್ಲೆ; ತಾಯಿ-ಮಗನ ವಿರುದ್ಧ ಪ್ರಕರಣ

ಕಡೂರು: ಸಾಲವಾಗಿ ನೀಡಿದ್ದ ₹50 ಸಾವಿರವನ್ನು ಹಿಂದಿರುಗಿಸುವಂತೆ ಕೇಳಿದ್ದಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಯಗಟಿ ಪೊಲೀಸ್ ಠಾಣೆಯಲ್ಲಿ ತಾಯಿ-ಮಗನ ವಿರುದ್ಧ ಪ್ರಕರಣ ದಾಖಲಾಗಿದೆ. ಯಗಟಿ ಗ್ರಾಮದ ಮುದಿಯಪ್ಪ ಬಡಾವಣೆಯ...

ಹುಬ್ಬಳ್ಳಿಯಲ್ಲಿ ಆಗಸ್ಟ್ 9ರಂದು ರಾಜ್ಯಮಟ್ಟದ 32ನೇ ವಿಶ್ವ ಆದಿವಾಸಿ ದಿನಾಚರಣೆ

ಚಿಕ್ಕಮಗಳೂರು: ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ಹಾಗೂ ಆದಿವಾಸಿ ಹರಣ ಶಿಖಾರಿ ಪಾರಿ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತಾಶ್ರಯದಲ್ಲಿ ಆಗಸ್ಟ್ 9ರಂದು ಹುಬ್ಬಳ್ಳಿಯಲ್ಲಿ ರಾಜ್ಯಮಟ್ಟದ 32ನೇ ವಿಶ್ವ ಆದಿವಾಸಿ ದಿನಾಚರಣೆ ಅಂಗವಾಗಿ...

Related Articles

ಗ್ರಾಮೀಣ ಪ್ರದೇಶದಲ್ಲಿ ವಲಸೆ ತಡೆಗೆ ವಿಬಿ ಜಿ ರಾಮ್ ಜಿ ಆಸರೆ

ಚಿಕ್ಕಮಗಳೂರು: ಗ್ರಾಮೀಣ ಭಾಗದ ಜನರು ಉದ್ಯೋಗಕ್ಕಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಪ್ಪಿಸಿ, ತಮ್ಮ ಗ್ರಾಮಗಳಲ್ಲಿಯೇ...

ಆಗಸ್ಟ್ 14 ಮತ್ತು 16 ರಂದು ವಿದ್ಯುತ್ ನಿಲುಗಡೆ

ಚಿಕ್ಕಮಗಳೂರು:  ಗ್ರಾಮೀಣ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ ಹೊಸದಾದ ಗಾಣದಾಳು ವಿ.ವಿ ಕೇಂದ್ರದ ೧೧ ಕೆ.ವಿ ಲಿಂಕ್...

ವೃದ್ದರ ಮಾಶಾಸನ ಬಿಡುಗಡೆ ಆಗ್ರಹಿಸಿ ಕರವೇ (ಪ್ರವೀಣ್‌ಶೆಟ್ಟಿ)ಬಣ ಪ್ರತಿಭಟನೆ

ಚಿಕ್ಕಮಗಳೂರು: ವೃದ್ದರ ಮಾಶಾಸನ ಬಿಡುಗಡೆ ಹಾಗೂ ಬಿಡದಿಯಲ್ಲಿ ರೈತರ ಜೀವನ ಉಳಿಸಬೇಕು ಎಂದು ಆಗ್ರಹಿಸಿ ಕರವೇ...

ವಿದ್ಯುತ್ ಸ್ಪರ್ಶದಿಂದ ಎರಡು ಜಾನುವಾರುಗಳ ಸಾವು

ನರಸಿಂಹರಾಜಪುರ: ಜಮೀನಿಗೆ ಅಳವಡಿಸಿದ್ದ ಐಬೆಕ್ಸ್ ತಂತಿ ಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದ ಪರಿಣಾಮ ಎರಡು...