ಚಿಕ್ಕಮಗಳೂರು: ರಾಜ್ಯ ಸರ್ಕಾರದ ಬೊಕ್ಕಸ ತುಂಬಿಸಲು ಹಣ ತರುವ ಇಲಾಖೆ ಅಬಕಾರಿ ಇಲಾಖೆ ಪ್ರಮುಖವಾದದ್ದು ಹೀಗಾಗಿ ಕಾನೂನು, ನಿಯಮ ,ನೀತೆ ಇಲ್ಲದ ಇಲಾಖೆಯಾಗಿರುವುದರಿಂದ ಅಬಕಾರಿ ಇಲಾಖೆ ಹೆಸರನ್ನು ಬದಲಿಸಿ ಆಕ್ರಮ ಇಲಾಖೆ ಎಂದು ಕರೆದರೆ ಒಳ್ಳೆಯದು.
ಅಬಕಾರಿ ಸಚಿವ ತಿಮ್ಮಪುರ ಬೇರೆ ಜನರಿಗೆ ಇನ್ನಷ್ಟು ಅಂಗಡಿಗಳ ಅವಶ್ಯಕತೆ ಇರುವುದರಿಂದ ಗ್ರಾಮ ಪಂಚಾಯತಿಗೊಂದು ಲಿಕ್ಕರ್ ಶಾಪ್ ತೆರೆಯುವ ಉದ್ದೇಶ ಇದೆ ಎಂದಿದ್ದಾರೆ. ಅಬಕಾರಿ ಇಲಾಖೆಯವರು ಖುದ್ದಾಗಿ ಆಕ್ರಮವಾಗಿ ಹಳ್ಳಿ, ಹಳ್ಳಿಗಳಿಗೆ, ಮನೆ,ಮನೆಗಳಿಗೆ ಮಧ್ಯ ಸರಬರಾಜು ಮಾಡುವುದು ನೋಡಿದರೆ ಇದನ್ನು ಅಬಕಾರಿ ಇಲಾಖೆ ಎನ್ನಲು ಸಾಧ್ಯವಿಲ್ಲ.
ಚಿಕ್ಕಮಗಳೂರು ಜಿಲೆಗೆ ಪ್ರವಾಸಿಗರು ಲಗ್ಗೆ ಇಡುತ್ತಿರುವುದರಿಂದ ಹೋಮ್ ಸ್ಟೇ ಗಳು ರೆಸಾರ್ಟ್ ಗಳು ಕಾನುನು ಮೀರಿ ನಡೆಯುತ್ತಿವೆ.ಬರುವ ಪ್ರವಾಸಿಗರು ಪ್ರಕೃತಿ, ಬೆಟ್ಟ,ಗುಡ್ಡ,ಝರಿ ನೋಡಿ ಕಣ್ಣು ತುಂಬಿಕೊಳ್ಳುವುದರ ಜೊತೆಗೆ ಹೊಟ್ಟೆ ತುಂಬಾ ಮಧ್ಯ ಸುರಿದು ಕೊಳ್ಳುತ್ತಿದ್ದಾರೆ.ಹೀಗಾಗಿ ಕೈ ಇಟ್ಟ ಕಡೆ ಮಧ್ಯ ಸಿಗುತ್ತಿದೆ.ಇದರ ಜೊತೆಗೆ ದಿನೆ,ದಿನೇ ಗಾಂಜಾ, ಅಫಿಮ್,ಡ್ರಗ್ಸ್ ಹಾವಳಿ ಕೂಡ ಹೆಚ್ಚಾಗುತ್ತಿದೆ.
ಇದನ್ನು ತಡೆಯ ಬೇಕಾದ ಜವಬ್ದಾರಿ ಅಬಕಾರಿ ಇಲಾಖೆಗೆ ಸೇರಿದ್ದು ಇದರ ಬಗ್ಗೆ ಇಲಾಖೆ ಕಣ್ಣು ಮುಚ್ಚಿ ಕುಳಿತಿದೆ ಎಂದರೆ ತಪ್ಪಾಗುತ್ತದೆ ಏಕೆಂದರೆ ದಂಧೆಕೋರರ ಎಂಜಲ ಖಾಸಿಗೆ ಕೈ ಒಡ್ಡಿಕೊಂಡು ನಿಂತಿರುವುದರಿಂದ ಅಬಕಾರಿ ಇಲಾಖೆಗೆ ಆಕ್ರಮ ಇಲಾಖೆ ಎಂದು ಹೆಸರು ಬದಲಾಯಿಸುವುದು ಒಳ್ಳೆಯದು. ಅಲ್ಲಿ, ಇಲ್ಲಿ ಪೋಲಿಸ್ ಇಲಾಖೆ ತಿಂಗಳಲ್ಲಿ ಒಂದೆರೆಡು ಕೇಸು ದಾಖಲಿಸುವುದು ಬಿಟ್ಟರೆ ದಂಧೆಕೋರರು ರಣಕೇಕೆ ಕೊಗುತ್ತಾ ಹಾದಿ,ಬೀದಿಯಲ್ಲಿ ವ್ಯವಹಾರ ನಡೆಸುತ್ತಿದ್ದಾರೆ.
ಗೋವಾ, ಪಾಂಡಿಚೇರಿ ರಾಜ್ಯದಲ್ಲಿ ಕಡಿಮೆ ಬೆಲೆಯ ಮಧ್ಯ ತಂದು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ದಂಧೆ ಕೂಡ ನಡೆಯುತ್ತಿದೆ.ಜೊತೆಗೆ ಕಡಿಮೆ ಬೆಲೆಯ ಬಾಟಲ್ ಮೇಲೆ ಹೆಚ್ಚು ಬೆಲೆಯ ಲೇಬಲ್ ಅಂಟಿಸಿ ಮಾರಾಟ ಮಾಡುವ ತಂಡಗಳಿವೆ ಎಂಬ ದೂರು ಕೂಡ ಇದೆ.ಮಧ್ಯವನ್ನು ಬೇಕಾ ಬಿಟ್ಟಿ ಬೆಲೆಗೆ ಮಾರುತ್ತಿರುವುದು ,ಕಾಲಮಿತಿ ಇಲ್ಲದೆ ಸಮಯ ಮೀರಿ ವ್ಯಾಪಾರ ನಡೆಸುತ್ತಿದ್ದಾರೆ.ಇದರ ಬಗ್ಗೆ ಯಾರಾದರೂ ಪ್ರಶ್ನೆ ಮಾಡಿದರೆ ಇಲಾಖೆಯವರಿಗೆ ಮಾಮೂಲಿ ಕೊಡುತ್ತೀವಿ,ಇದರ ಜೊತೆಗೆ ಎರಡು ಕ್ಷೇತ್ರದಲ್ಲಿ ಶಾಸಕರುಗಳು ಮಾಮೂಲಿ ಪಡೆಯುತ್ತಾರೆ ಮತ್ತು ಕೇಳಿದಾಗ ಬಾಟ್ಲಿ ಕೊಡುತ್ತೇವೆ ನಾವು ಮಾರುವ ರೇಟ್ ಇಷ್ಟೇ ಎಂದು ಬೆದರಿಸುವವರು ಹೆಚ್ಚುತ್ತಿದ್ದಾರೆ .
ಲಿಕ್ಕರ್ ಶಾಪ್ ತೆರೆಯಲು ಯಾವ ಕಾನೂನು ಇಲ್ಲ ರಸ್ತೆ ಮೇಲೆ ,ಆಸ್ಪತ್ರೆ ಪಕ್ಕ,ಶಾಲೆಗಳ ಪಕ್ಕ ,ದೇವಸ್ಥಾನ ಒಟ್ಟಾರೆ ದಂಧೆ ನಡೆಸುತ್ತಿದ್ದಾರೆ. ಸಿ,ಎಲ್ 4, ಸಿ,ಎಲ್7 ಎಗ್ಗಿಲ್ಲದೆ ತಲೆ ಎತ್ತಿವೆ.ಶಾಸಕರುಗಳು ಕೂಡ ಇದರಲ್ಲಿ ಲಾಭ ಪಡೆದುಕೊಂಡರೆ ಇಲಾಖೆಯವರು ಹಗಲು ದರೋಡೆ ಮಾಡುತ್ತಿದ್ದಾರೆ.ಸರ್ಕಾರಕ್ಕೆ ಹಣ ಬೇಕು, ಇಲಾಖೆಯವರಿಗೆ ಲಂಚ ಬೇಕು ಹೇಳುವವರು ಇಲ್ಲ,ಕೇಳುವವರು ಇಲ್ಲ ಬೇಲಿಯೇ ಎದ್ದು ಹೊಲ ಮೇಯುತ್ತಿರುವಾಗ ಕಾನೂನು ,ನೀತಿ ಕಣ್ಣು ಮುಚ್ಚಿ ಕುಳಿತಿರುವಾಗ ಏನು ಮಾಡಲು ಸಾಧ್ಯ.? ಆಡಳಿತ ಪಕ್ಷಕ್ಕೆ ಸಿಂಹ ಸ್ವಪ್ನ ಆಗಬೇಕಿದ್ದ ವಿರೋಧ ಪಕ್ಷಗಳು ಸತ್ತು ಮಲಗಿರುವಾಗ ಜನ ಸಿಡಿದು ನಿಲ್ಲುವವರೆಗೆ ಕಳ್ಳರು,ಲಂಚಕೋರರು ನರ್ತನ ಮಾಡುತ್ತ ಜೇಬು ತುಂಬಿಸಿ ಕೊಳ್ಳುತ್ತಾರೆ. ಆಕ್ರಮ ಇಲಾಖೆಗಳು ಹೆಚ್ಚುತ್ತಲೇ ಇರುತ್ತವೆ.ಒಂದಲ್ಲಾ ಒಂದು ದಿನ ಜೆನ್ ಜೀ.ಹುಟ್ಟಿ ಕೊಳ್ಳುತ್ತದೆ.
Excise Department
Leave a comment