Home namma chikmagalur chikamagalur ಎರಡು ಲಾರಿಗಳ ಡಿಕ್ಕಿಯಲ್ಲಿ ಚಾಲಕ ಸ್ಥಳದಲ್ಲೇ ಸಾವು
chikamagalurHomeLatest Newsnamma chikmagalur

ಎರಡು ಲಾರಿಗಳ ಡಿಕ್ಕಿಯಲ್ಲಿ ಚಾಲಕ ಸ್ಥಳದಲ್ಲೇ ಸಾವು

Share
Share

ಅಜ್ಜಂಪುರ: ಎರಡು ಲಾರಿಗಳ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತಮಿಳುನಾಡು ಮೂಲದ 59 ವರ್ಷದ ಚಾಲಕರೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಅಜ್ಜಂಪುರ-ಬುಕ್ಕಾಂಬೂದಿ ರಸ್ತೆಯ ಅತ್ತಿಮೊಗ್ಗೆ ಗೇಟ್ ಬಳಿ ಶುಕ್ರವಾರ ಬೆಳಗಿನ ಜಾವ ನಡೆದಿದೆ.

ತಮಿಳುನಾಡು ಮೂಲದ ನಾಗರಾಜ ಎ. (59) ಮೃತಪಟ್ಟವರು.

ಅಕ್ಟೋಬರ್ 30ರಂದು ಬೆಳಗಿನ ಜಾವ ಸುಮಾರು 5 ಗಂಟೆಗೆ ದಾವಣಗೆರೆ ಕಡೆಯಿಂದ ಅಜ್ಜಂಪುರ ಕಡೆಗೆ ಟಿಎನ್-33-ಎವಿ-2832 ನೋಂದಣಿ ಸಂಖ್ಯೆಯ ಲಾರಿ ತೆರಳುತ್ತಿತ್ತು. ಈ ಸಂದರ್ಭದಲ್ಲಿ ಎದುರಿನಿಂದ ಬಂದ ಎಂಎಚ್-43-ಸಿಕೆ-8607 ನೋಂದಣಿ ಸಂಖ್ಯೆಯ ಕಂಟೇನರ್ ಲಾರಿಯನ್ನು ಅದರ ಚಾಲಕ ಭಾರತ್ ಆವಟಿ (ಮಹಾರಾಷ್ಟ್ರ ಮೂಲದವರು) ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಲಾರಿಗೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ.

ಡಿಕ್ಕಿಯ ತೀವ್ರತೆಗೆ ಲಾರಿಯಲ್ಲಿದ್ದ ಚಾಲಕ ನಾಗರಾಜ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದಿಂದ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಾರ್ವಜನಿಕರ ನೆರವಿನಿಂದ ಮೃತದೇಹವನ್ನು ಅಜ್ಜಂಪುರ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.

ಮೃತ ನಾಗರಾಜ ಅವರ ಕುಟುಂಬದವರಿಗೆ ಅಪಘಾತದ ವಿಷಯ ತಿಳಿದ ಬಳಿಕ ಸಂಬಂಧಿಕ ಗೋವಿಂದರಾಜು ಅವರು ಅಜ್ಜಂಪುರ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ.

ಈ ಸಂಬಂಧ ಕಂಟೇನರ್ ಲಾರಿ ಚಾಲಕ ಭಾರತ್ ಆವಟಿ ವಿರುದ್ಧ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 283/2026 ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Driver dies on the spot in collision between two lorries

 

Share

Leave a comment

Leave a Reply

Your email address will not be published. Required fields are marked *

Don't Miss

ಪ್ರತ್ಯೇಕ ಅಪಘಾತ ಪ್ರಕರಣದಲ್ಲಿ ಹಲವರಿಗೆ ಗಾಯ

ಚಿಕ್ಕಮಗಳೂರು: ಜಿಲ್ಲೆಯ ಆಲ್ದೂರು, ಅಜ್ಜಂಪುರ, ಬೀರೂರು ಹಾಗೂ ಪಂಚನಹಳ್ಳಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಪ್ರತ್ಯೇಕ ಅಪಘಾತ ಪ್ರಕರಣಗಳು ವರದಿಯಾಗಿವೆ. ಅಜಾಗರೂಕ ಚಾಲನೆ ಹಾಗೂ ವಾಹನದ ನಿಯಂತ್ರಣ ತಪ್ಪಿದ ಪರಿಣಾಮ ಹಲವರು ಗಾಯಗೊಂಡಿದ್ದು,...

ಸಮಾನ ಆಚರಣಾ ಸಂಹಿತೆ, ಸಂಸ್ಕಾರ ಶಿಕ್ಷಣ ಇಂದಿನ ಅನಿವಾರ್ಯತೆ

*ಶೃಂಗೇರಿ:* ಭಾರತೀಯ ಮೂಲದ ಧಾರ್ಮಿಕ ಪರಂಪರೆಗಳಲ್ಲಿರುವ ಸಾಮಾನ್ಯ ಮೌಲ್ಯಗಳನ್ನು ಆಧರಿಸಿ ಸಮಾನ ಆಚರಣೆ ಸಂಹಿತೆ ಹಾಗೂ ಸಂಸ್ಕಾರ ಶಿಕ್ಷಣವನ್ನು ರೂಪಿಸುವುದು ಇಂದಿನ ಕಾಲದ ಅನಿವಾರ್ಯತೆಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ....

Related Articles

ಸ್ಕೂಟಿ ಡಿಕ್ಕಿಗೆ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವೃದ್ಧೆ ಸಾವು

ಕಡೂರು: ಅತಿವೇಗ ಹಾಗೂ ಅಜಾಗರೂಕತೆಯಿಂದ ಬಂದ ಸ್ಕೂಟಿ ಡಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿ ನಡೆದುಕೊಂಡು...

3.50 ಲಕ್ಷ ರೂ. ಮೌಲ್ಯದ ನಗ-ನಗದು ಕಳವು

ಕೊಪ್ಪ: ಮನೆಯ ಹಿಂಬಾಗಿಲು ತಳ್ಳಿ ಒಳನುಗ್ಗಿದ ಕಳ್ಳರು ಸುಮಾರು 3.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ...

ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಶೇ.10ರಷ್ಟು ಲಾಭದ ಆಮಿಷ: 21.32 ಲಕ್ಷ ರೂ. ವಂಚನೆ

ಚಿಕ್ಕಮಗಳೂರು: ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಪ್ರತಿದಿನ ಶೇ.10ರಷ್ಟು ಲಾಭ ನೀಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ ಹಂತ ಹಂತವಾಗಿ 21.32...

ಪ್ಯಾರಾ ಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ ಲೈಫ್‌ಲೈನ್ ಫೀಡ್ಸ್ ನಿಂದ ಸನ್ಮಾನ

ಚಿಕ್ಕಮಗಳೂರು: ಕ್ರೀಡಾ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತಂದಿರುವ ಪ್ಯಾರಾ ಏಷ್ಯನ್ ಗೇಮ್ಸ್...