ಚಿಕ್ಕಮಗಳೂರು: ಹಿಂದೂ ಮುಖಂಡ ಶರತ್ ಪಂಪ್‌ವೆಲ್‌ಗೆ ಒಂದು ತಿಂಗಳ ಕಾಲ ಜಿಲ್ಲಾಡಳಿತ ನಿರ್ಬಂಧ ವಿಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಪ್ರಚೋದನಕಾರಿ ಭಾಷಣದಿಂದ ಗಲಾಟೆ, ಗುಂಪುಘರ್ಷಣೆ ಸನ್ನಿವೇಶಗಳು ಸೃಷ್ಟಿಯಾ ಗುವ ಸಾಧ್ಯತೆಗಳಿರುವುದರಿಂದ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ.
ಶರತ್ ಪಂಪ್‌ವೆಲ್ ಜಿಲ್ಲೆ ಪ್ರವೇಶಿಸದಂತೆ ಜು.೬ ರಿಂದ ಆ.೪ರವರೆಗೂ ನಿರ್ಬಂಧಿಸಿ ಆದೇಶಿದ್ದು, ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ, ಆಲ್ದೂರಿನಲ್ಲಿ ಪಂಪ್‌ವೆಲ್ ಕರೆಸಿ ಬೈಠಕ್ ಹಮ್ಮಿಕೊಂಡಿದ್ದು, ಪಂಪ್‌ವೆಲ್ ಬಲಪಂಥೀಯ ನಿಲುವಿನಿಂದ ಪ್ರಭಾವಿತರಾಗಿದ್ದಾರೆ.
ಮುದ್ವೇಷ ಹರಡುವ ಭಾಷಣ ಮಾಡುವ ಪ್ರವೃತ್ತಿ ಉಳ್ಳವರಾಗಿದ್ದಾರೆ. ಇವರ ಪ್ರಚೋದನಾಕಾರಿ ಭಾಷಣದಿಂದ ಗಲಾಟೆ, ಗುಂಪು ಸಂರ್ಘಣೆ ಸಂಭವಿಸುವ ಸನ್ನಿವೇಶಗಳು ಹೆಚ್ಚಿವೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಶರತ್ ಪಂಪ್‌ವೆಲ್ ವಿರುದ್ಧ ೨೨ಕ್ಕೂ ಹೆಚ್ಚು ಪ್ರಕರಣಗಳಿದ್ದು, ಚಿಕ್ಕಮಗಳೂರು ಸೇರಿ ಕೆಲ ಪಟ್ಟಣಗಳು ಮತೀಯ ಸೂಕ್ಷ್ಮ ಪ್ರದೇಶವಾಗಿದ್ದು, ಸಣ್ಣ ಘಟನೆಯೂ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ತರುವ ಸಾಧ್ಯತೆಗಳಿದ್ದು ಮುಂದಿನ ೩೦ ದಿನಗಳ ಕಾಲ ಪಂಪ್‌ವೆಲ್ ಅವರು ಚಿಕ್ಕಮಗಳೂರಿಗೆ ಆಗಮಿಸದಂತೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಲಾಗಿದೆ.
District entry ban on Sharath Pumpwell
Leave a comment