Home namma chikmagalur chikamagalur ಜಿಲ್ಲೆಯಲ್ಲಿ ‘ಡಿಜಿಟಲ್ ಅರೆಸ್ಟ್’ – 48.50 ಲಕ್ಷ ರೂ. ವಂಚನೆ
chikamagalurCrime NewsHomeLatest Newsnamma chikmagalur

ಜಿಲ್ಲೆಯಲ್ಲಿ ‘ಡಿಜಿಟಲ್ ಅರೆಸ್ಟ್’ – 48.50 ಲಕ್ಷ ರೂ. ವಂಚನೆ

Share
Share

ಚಿಕ್ಕಮಗಳೂರು: ರಾಜ್ಯದಲ್ಲಿ ಸೈಬರ್ ಅಪರಾಧಗಳ ಅಬ್ಬರ ಮುಂದುವರಿದಿದ್ದು, ಇದೀಗ ಚಿಕ್ಕಮಗಳೂರು ಜಿಲ್ಲೆಯಲ್ಲಿ ‘ಡಿಜಿಟಲ್ ಅರೆಸ್ಟ್’ ಎಂಬ ಹೊಸ ಮಾದರಿಯ ವಂಚನೆ ಬೆಳಕಿಗೆ ಬಂದಿದೆ.

ಜಿಲ್ಲೆಯ ಕಡೂರು ತಾಲ್ಲೂಕಿನ ಆಸಂದಿ ಗ್ರಾಮದ 71 ವರ್ಷದ ಎ.ಆರ್. ಲೋಕೇಶಪ್ಪ ಎಂಬುವವರು ವಂಚಕರ ಜಾಲಕ್ಕೆ ಸಿಲುಕಿ ಬರೋಬ್ಬರಿ 48 ಲಕ್ಷದ 50 ಸಾವಿರ ರೂಪಾಯಿ ಕಳೆದುಕೊಂಡಿದ್ದಾರೆ.

ಮಾರ್ಚ್ 15ರಂದು ಲೋಕೇಶಪ್ಪ ಅವರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ ತಾನು ಸಿಬಿಐ ಅಧಿಕಾರಿ ಎಂದು ಪರಿಚಯಿಸಿಕೊಂಡು, ನೀವು ನರೇಶ್ ಗೋಯೆಲ್ ಪ್ರಕರಣದಲ್ಲಿ ಭಾಗಿಯಾಗಿದ್ದೀರಿ ಎಂದು ಹೆದರಿಸಿದ್ದಾನೆ.

ವಂಚಕರು ಲೋಕೇಶಪ್ಪ ಅವರಿಗೆ ಮಾನಸಿಕ ಒತ್ತಡ ಹೇರಿ, ತನಿಖೆ ಮುಗಿಯುವವರೆಗೆ ಯಾರೊಂದಿಗೂ ಮಾತನಾಡಬಾರದು ಮತ್ತು ಕೊಠಡಿಯಿಂದ ಹೊರಬರಬಾರದು ಎಂದು ಸೂಚಿಸಿ ಅವರನ್ನು ಡಿಜಿಟಲ್ ಬಂಧನದಲ್ಲಿರಿಸಿದ್ದರು.

ಸರ್ಕಾರದ ಸಂಸ್ಥೆಗಳ ಹೆಸರನ್ನು ದುರ್ಬಳಕೆ ಮಾಡಿಕೊಂಡ ವಂಚಕರು, ಪರಿಶೀಲನೆಗಾಗಿ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಆಕ್ಟಿಐ ಖಾತೆಗೆ ವರ್ಗಾಯಿಸಬೇಕು ಎಂದು ನಂಬಿಸಿದ್ದಾರೆ. ಇದನ್ನು ನಿಜವೆಂದು ನಂಬಿದ ಲೋಕೇಶಪ್ಪ ಅವರು ಹಂತ ಹಂತವಾಗಿ ಒಟ್ಟು 48.50 ಲಕ್ಷ ರೂಪಾಯಿಯನ್ನು ಆರೋಪಿಗಳ ಖಾತೆಗೆ ವರ್ಗಾಯಿಸಿದ್ದಾರೆ.

ಬಳಿಕ ತಾನು ವಂಚನೆಗೆ ಒಳಗಾಗಿರುವುದು ಅರಿವಿಗೆ ಬರುತ್ತಿದ್ದಂತೆ ಲೋಕೇಶಪ್ಪ ಅವರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಘಟನೆಯ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಚ್ಚರದಿಂದಿರುವಂತೆ ಪೊಲೀಸರು ಸೂಚನೆ ನೀಡಿದ್ದಾರೆ.

ಯಾವುದೇ ಸರ್ಕಾರಿ ಅಧಿಕಾರಿಗಳು ಫೋನ್ ಮೂಲಕ ಹಣ ವರ್ಗಾವಣೆಗೆ ಕೇಳುವುದಿಲ್ಲ ಮತ್ತು ಅಪರಿಚಿತ ಕರೆಗಳಿಗೆ ಬೆದರಿ ಬ್ಯಾಂಕ್ ಮಾಹಿತಿ ಹಂಚಿಕೊಳ್ಳಬಾರದು ಎಂದು ಪೊಲೀಸ್ ಇಲಾಖೆ ಮನವಿ ಮಾಡಿದೆ. ಪ್ರಸ್ತುತ ಸೈಬ‌ರ್ ಪೊಲೀಸರು ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.

‘Digital arrest’ in the district – Rs 48.50 lakh fraud

Share

Leave a comment

Leave a Reply

Your email address will not be published. Required fields are marked *

Don't Miss

ಭಿಕ್ಷುಕಿಯನ್ನು ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ

ಚಿಕ್ಕಮಗಳೂರು:  ಕ್ಷುಲ್ಲಕ ಕಾರಣಕ್ಕೆ ಸೈಜುಕಲ್ಲು ಎತ್ತಿಹಾಕಿ ಮಹಿಳೆಯನ್ನು ಕೊಲೆ ಮಾಡಿದ ಆರೋಪಿಗೆ ಇಲ್ಲಿನ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ನೀಡಿದ್ದು, ೮೧ ಸಾವಿರ ರೂ.ಗಳ ದಂಡ...

ಹುಬ್ಬಳ್ಳಿ-ಚಿಕ್ಕಮಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸೇವೆ ವಿಸ್ತರಣೆ

ಚಿಕ್ಕಮಗಳೂರು: ನೈಋತ್ಯ ರೈಲ್ವೆಯು ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ಹುಬ್ಬಳ್ಳಿ ಮತ್ತು ಚಿಕ್ಕಮಗಳೂರು ನಡುವೆ ಚಲಿಸುವ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸೇವೆಯನ್ನು ವಿಸ್ತರಿಸಲು ನಿರ್ಧರಿಸಿದೆ. ಈ ಹಿಂದೆ ಜೂನ್ 21,...

Related Articles

ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ

ಚಿಕ್ಕಮಗಳೂರು: RVR ಹೆಲ್ತ್ ಕೇರ್ ವತಿಯಿಂದ, ಶ್ರೀ ವಿಜಯ್ ಎಂ.ಎನ್. ಶೆಟ್ಟಿ ಹಾಗೂ ಡಾ. (ಪ್ರೊ). ರಾಘವೇಂದ್ರ...

ಧುಮ್ಮಿಕ್ಕಿ ಹರಿಯುತ್ತಿರುವ ಹೆಬ್ಬೆ ಫಾಲ್ಸ್‌

ಚಿಕ್ಕಮಗಳೂರು: ಕಾಫಿನಾಡಿನ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಮಳೆ (Rain) ಅಬ್ಬರ ಜೋರಾಗಿದ್ದು, ತರೀಕೆರೆ (Tarikere) ತಾಲೂಕಿನಲ್ಲಿರುವ ಹೆಬ್ಬೆ...

ಶ್ರೀಈಶ್ವರ-ಚೌಡೇಶ್ವರಿ ದೇವಾಲಯಗಳಲ್ಲಿ ಆಭರಣ ಕಳವು

ಕಡೂರು: ತಾಲ್ಲೂಕಿನ ಸಿಂಗಟಗೆರೆ ಸಮೀಪದ ಎಸ್.ಡಿ. ಕೊಪ್ಪಲು ಗ್ರಾಮದ ಶ್ರೀಈಶ್ವರ ಹಾಗೂ ಚೌಡೇಶ್ವರಿ ದೇವಾಲಯಗಳಲ್ಲಿ ದೇವರ...

ತರೀಕೆರೆಯ ಗೋಪಿಕೃಷ್ಣಗೆ ಎಂಎಲ್ ಸಿ ಸ್ಥಾನ ನೀಡಬೇಕು

ಚಿಕ್ಕಮಗಳೂರು: ಅಹಿಂದ ಪರವಾಗಿ ಮಾತಾಡುವ ಕಾಂಗ್ರೆಸ್ ಪಕ್ಷ ಮಡಿವಾಳ ಸಮುದಾಯದ ಮುಖಂಡರಿಗೆ ರಾಜಕೀಯ ಪ್ರಾತಿನಿಧ್ಯ ನೀಡುತ್ತಿಲ್ಲ....