Home namma chikmagalur chikamagalur ಆಲ್ಲೂರಿನಲ್ಲಿ ದಲಿತ ಮಹಿಳೆ ಮೇಲೆ ದೌರ್ಜನ್ಯ
chikamagalurCrime NewsHomeLatest Newsnamma chikmagalur

ಆಲ್ಲೂರಿನಲ್ಲಿ ದಲಿತ ಮಹಿಳೆ ಮೇಲೆ ದೌರ್ಜನ್ಯ

Share
Share

ಚಿಕ್ಕಮಗಳೂರು: ದಲಿತ ಮಹಿಳೆಯೊಬ್ಬರ ಪಿತ್ರಾರ್ಜಿತ ಜಮೀನಿನ ಬೇಲಿ ಕತ್ತರಿಸಿ, ಜಾತಿನಿಂದನೆ ಮಾಡಿ, ಜೀವ ಬೆದರಿಕೆ ಒಡ್ಡಿರುವ ಗಂಭೀರ ಅಪರಾಧ ಪ್ರಕರಣವೊಂದು ಚಿಕ್ಕಮಗಳೂರು ತಾಲೂಕಿನ ಆಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಪಟ್ಟಣದ ಮೇದರಬೀದಿ ನಿವಾಸಿಯಾದ ವೆಂಕಟಮ್ಮ (65) ಎಂಬುವವರು ದೌರ್ಜನ್ಯಕ್ಕೊಳಗಾದ ವೃದ್ದೆ. ಇವರಿಗೆ ಮತ್ತು ಇವರ ಸಹೋದರಿಯರಿಗೆ ದೋಣಗುಡಿಗೆ ಗ್ರಾಮದ ಸರ್ವೆ ನಂಬರ್ 86ರಲ್ಲಿ 2 ಎಕರೆ 38 ಗುಂಟೆ ಪಿತ್ರಾರ್ಜಿತ ಜಂಟಿ ಖಾತೆ ಜಮೀನಿದೆ.

ಆದರೆ, ಇದೇ ದೋಣಗುಡಿಗೆ ಗ್ರಾಮದ ಸವರ್ಣೀಯ ಜಾತಿಗೆ ಸೇರಿದ ಡಿ. ಚಂದ್ರೇಗೌಡ, ಡಿ. ಮರಿಸಿದ್ದೇಗೌಡ ಹಾಗೂ ಈತನ ಮಗ ಭವಿತ್ ಎಂಬುವವರು ಮೇ 20ರಂದು ಬುಧವಾರ ತೋಟದ ಬೇಲಿಯ ಮೆಸ್ಸನ್ನು ದೌರ್ಜನ್ಯದಿಂದ ಕತ್ತರಿಸಿ ಹಾಕಿದ್ದಾರೆ.

ಈ ಅಕ್ರಮವನ್ನು ಪ್ರಶ್ನಿಸಲು ಹೋದ ವೆಂಕಟಮ್ಮ ಅವರಿಗೆ ಚಂದ್ರೇಗೌಡನ ಕುಮ್ಮಕ್ಕಿನಿಂದ ಮರಿಸಿದ್ದೇಗೌಡ ಮತ್ತು ಭವಿತ್ ಅತ್ಯಂತ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರಲ್ಲದೆ, “ಎಸ್ಸಿ ಎಸ್ಟಿ ಜಾತಿಗೆ ಸೇರಿದ ನೀನು ಏನು ಮಾಡುತ್ತೀಯಾ?” ಎಂದು ಜಾತಿ ಹಿಡಿದು ನಿಂದನೆ ಮಾಡಿದ್ದಾರೆ. ಅಷ್ಟಕ್ಕೇ ನಿಲ್ಲದೆ, ವೃದ್ಧೆಯ ಮೇಲೆ ಕೈಯಿಂದ ಹಲ್ಲೆ ನಡೆಸಲು ಮುಂದಾಗಿದ್ದಾರೆ.

“ಊರಿಂದ ಊರು ಬಿಟ್ಟು ಬಂದು ಜಮೀನು ಮಾಡುತ್ತೀರಾ, ನಿಮ್ಮನ್ನು ಬದುಕಲು ಬಿಡುವುದಿಲ್ಲ, ತೋಟದಲ್ಲಿ ಹೇಗೆ ಇರುತ್ತೀರಿ ಎಂದು ನೋಡುತ್ತೇನೆ” ಎಂಬುದಾಗಿ ಮರಿಸಿದ್ದೇಗೌಡ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಘಟನೆಯಿಂದ ಆಘಾತಕ್ಕೊಳಗಾಗಿದ್ದ ವೃದ್ದೆ ವೆಂಕಟಮ್ಮ, ತದನಂತರ ಮನೆಯ ಹಿರಿಯರು ಹಾಗೂ ನೆಂಟರಿಷ್ಟರ ಸಲಹೆ ಪಡೆದು ತಡವಾಗಿ ಆಲ್ಲೂರು ಪೊಲೀಸ್‌ ಠಾಣೆಗೆ ತೆರಳಿ ಲಿಖಿತ ದೂರು ನೀಡಿದ್ದಾರೆ.

ಸದ್ಯ ಆಲ್ಲೂರು ಪೊಲೀಸರು ಆರೋಪಿಗಳಾದ ಚಂದ್ರೇಗೌಡ, ಮರಿಸಿದ್ದೇಗೌಡ ಮತ್ತು ಭವಿತ್ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿರುವ ದೂರನ್ನು ಸ್ವೀಕರಿಸಿ, ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Dalit woman assaulted in Allur

Share

Leave a comment

Leave a Reply

Your email address will not be published. Required fields are marked *

Don't Miss

ಸಾಲು ಸಾಲು ರಸ್ತೆ ಅಪಘಾತ – 12ಕ್ಕೂ ಹೆಚ್ಚು ಮಂದಿ ಗಾಯ

ಚಿಕ್ಕಮಗಳೂರು: ಜಿಲ್ಲೆಯ ವಿವಿಧೆಡೆ ಸಂಭವಿಸಿದ ಸಾಲು ಸಾಲು ರಸ್ತೆ ಅಪಘಾತಗಳಲ್ಲಿ 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್‌ಗೆ ಓಮಿನಿ ಕಾರು ಡಿಕ್ಕಿ: ಧರ್ಮಸ್ಥಳದಿಂದ ಚಿತ್ರದುರ್ಗಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ...

ವೈದ್ಯಕೀಯ ಕಾಲೇಜ್ ನಲ್ಲಿ ಲೂಟಿ ! ಲೂಟಿ !-ನೂರಾರು ಕೋಟಿ ನುಂಗಿರುವ ಖದೀಮರು?

ಚಿಕ್ಕಮಗಳೂರು: ನೂತನವಾಗಿ ನಿರ್ಮಾಣ ವಾಗಿರುವ ವೈದ್ಯಕೀಯ ಕಾಲೇಜ್ ಕಟ್ಟಡದಲ್ಲಿ ಕೋಟಿ, ಕೋಟಿರೂ ನುಂಗಿರುವ ಖದೀಮರು. ಟೆಂಡರ್ ಲೋಪ ದೋಷಗಳ ಪ್ರಕಾರ ನೂರಾರು ಕೋಟಿ ಅಕ್ರಮ ನಡೆದಿದೆ ಎನ್ನಲಾಗುತ್ತಿದೆ. ಟೆಂಡರ್ ಅವಧಿ 30...

Related Articles

ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ರಾಜ್ಯ ರೈತ ಸಂಘ ಪ್ರತಿಭಟನೆ

ಚಿಕ್ಕಮಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ನಗರದಲ್ಲಿ...

ಕಡೂರು ತಾಲ್ಲೂಕು ಬರಪೀಡಿತ ತಾಲ್ಲೂಕು ಘೋಷಣೆಗೆ ವೈ.ಎಸ್.ವಿ.ದತ್ತ ಒತ್ತಾಯ

ಚಿಕ್ಕಮಗಳೂರು: ತೀವ್ರ ಬರಗಾಲಕ್ಕೆ ತುತ್ತಾಗಿರುವ ಕಡೂರು ತಾಲ್ಲೂಕನ್ನು ಬರಪೀಡಿತ ತಾಲ್ಲೂಕು ಎಂದು ಸರ್ಕಾರ ಘೋಷಿಸಬೇಕು. ತುರ್ತು...

ಸೊಪ್ಪು ಕಡಿಯಲು ಮರ ಹತ್ತಿದ್ದ ವ್ಯಕ್ತಿ ಕೆಳಗೆ ಬಿದ್ದು ಸಾವು

ಎನ್.ಆ‌ರ್. ಪುರ: ಸೊಪ್ಪು ಕಡಿಯಲು ಮರ ಹತ್ತಿದ್ದ ವೇಳೆ ಒಣಗಿದ ಕೊಂಬೆ ಮುರಿದು ಕೆಳಗೆ ಬಿದ್ದು...

ಅರತಿಕೃಷ್ಣಗೆ ಮಂತ್ರಿ ಗ್ಯಾರಂಟಿ – ಶ್ರೀನಿವಾಸ್ ತಿರುಪತಿಗೆ ? – ನಯನ ನವ ಅವತಾರಕ್ಕೆ ಭಂಗ, ಭಂಗ

ಚಿಕ್ಕಮಗಳೂರು: ಜಿಲ್ಲೆಯ ಲ್ಲಿ ಮಂತ್ರಿಯಾಗ ಬೇಕು ಎಂದು ಪಟ್ಟು ಹಿಡಿದವರು ಪಲ್ಟಿ ಹೊಡೆದಿದ್ದಾರೆ ಆದರೆ ಅರತಿಕೃಷ್ಣ...