Home namma chikmagalur chikamagalur ಚಿಕ್ಕಮಗಳೂರಿನಲ್ಲಿ ಡಕೋಟಾ ಬಸ್ಸುಗಳು
chikamagalurHomeLatest Newsnamma chikmagalur

ಚಿಕ್ಕಮಗಳೂರಿನಲ್ಲಿ ಡಕೋಟಾ ಬಸ್ಸುಗಳು

Share
Share

ಚಿಕ್ಕಮಗಳೂರು: ಚಿಕ್ಕಮಗಳೂರು ಕೆ,ಎಸ್,ಆರ್, ಟಿ ಸಿ ಬಸ್ಸುಗಳನ್ನು “ಡಕೋಟಾ” ಎಂದು ಜನ ಕರೆಯ ತೊಡಗಿದ್ದಾರೆ. ಕೆ,ಎಸ್,ಆರ್,ಟಿ ,ಸಿ ಬಸ್ಸುಗಳು ರಸ್ತೆಯಲ್ಲಿ ಕೆಟ್ಟು ನಿಂತಿರುವ ದೃಶ್ಯ ಕಾಣಬಹುದು.

ಚಿಕ್ಕಮಗಳೂರು ಮತ್ತು ಕಡೂರು ನಡುವೆ ಒಂದೇ ದಿನ ಮೂರ್ ನಾಲ್ಕು ಬಸ್ಸುಗಳು ಕೆಟ್ಟು ನಿಂತಿದ್ದು ಪ್ರಯಾಣಿಕರು ಉರಿ ಬಿಸಿಲು ತಾಳಲಾರದೆ ಚಡಪಡಿಸುತ್ತಿದ್ದರು.

ಒಂದೇ ದಿನ ಲಕ್ಯಾ ಕ್ರಾಸ್ ಬಳಿ ಮತ್ತು ಹಿರೇಗೌಜದ ಸಮೀಪ ಮತ್ತು ಸಖರಾಯಪಟ್ಟಣದ ಹತ್ತಿರ ಜೊತೆಗೆ ಮೂಡಿಗೆರೆ ರಸ್ತೆಯಲ್ಲಿ ಕೆ,ಎಸ್,ಆರ್, ಟಿ,ಸಿ ಬಸ್ಸುಗಳು ಕೆಟ್ಟು ನಿಂತಿವೆ .ಚಲಿಸುತ್ತಿದ್ದ ಕೆಂಪು ಬಸ್ಸಿನ ಚಕ್ರ ಕಳಚಿ ಬಿದ್ದು ಪ್ರಯಾಣಿಕರು ಉಸಿರು ಬಿಗಿ ಹಿಡಿದು ಕುಳಿತುಕೊಂಡು ಎದೆ ಉಸಿರು ಬಿಡುತ್ತಿರುವ ದೃಶ್ಯ ಇಲ್ಲಿನ ಕೆ,ಎಸ್,ಆರ್,ಟಿ,ಸಿ ಅಧಿಕಾರಿಗೆ ತಿಳಿಯದಿರುವುದು ಆಶ್ಚರ್ಯ ಉಂಟು ಮಾಡುತ್ತದೆ.

ಸಾಮಾನ್ಯ ಜನರ ಪ್ರಯಾಣ ಮಾಡಲು,ವಿದ್ಯಾರ್ಥಿಗಳು ಶಾಲೆಗೆ ಹೋಗಲು ಬಸ್ಸುಗಳು ಅನಿವಾರ್ಯ ಆದರೆ ಎಲ್ಲಿ ಯಾವಾಗ ಏನಾಗುತ್ತದೆ ಎಂಬ ಭಯ,ಅನುಮಾನ ಉಂಟಾಗುತ್ತಿದೆ.ಸರ್ಕಾರ ಗ್ಯಾರಂಟಿ, ಗ್ಯಾರಂಟಿ, ಎಂದು ಬಡಾಯಿ ಕೊಚ್ಚಿಕೊಂಡು ಪ್ರಚಾರ ಪಡೆಯುತ್ತಿದೆ ವಿನಹ ಬಸ್ಸುಗಳ ರಿಪೇರಿ ಮಾಡಿಸುವುದು ಗೊತ್ತಿಲ್ಲ. ಇಲ್ಲಿನ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸದೆ ಬರೀ ತೇಪೆ ಕೆಲಸದಲ್ಲಿ ನಿರತರಾಗಿದ್ದಾರೆ.

ಸತೀಶ್ ಎಂಬ ಅಧಿಕಾರಿ ಬಸ್ ಡಿಪೋದಲ್ಲಿ ತೇಗದ ಮರ ಕಡಿದು ಸಾಗಿಸಿದವರಿಗೆ ಬಡ್ತಿ ನೀಡಿ ರಾಜಕಾರಣಿಗಳಿಂದ ಸೈ ಅನ್ನಿಸಿ ಕೊಳ್ಳಲು ಬಕೆಟ್ ಹಿಡಿದುಕೊಂಡು ನಿಂತಿದ್ದಾರೆ. ಜನರ,ಪ್ರಯಾಣಿಕರ ಜೀವ ಕಳೆದು ಕೊಳ್ಳುವ ಮೊದಲು ಕ್ರಮ ಕೈಗೊಳ್ಳದಿದ್ದರೆ ಜನ ಡಿಪೋದ ಬಳಿ ಬಂದು ಕ್ಯಾಕರಿಸಿ ಉಗಿಯುವ ಸಮಯ ಬರುತ್ತದೆ ಎಂದು ಜನ ಹೇಳುತ್ತಿದ್ದಾರೆ.

Dakota buses in Chikmagalur

Share

Leave a comment

Leave a Reply

Your email address will not be published. Required fields are marked *

Don't Miss

ಭಿಕ್ಷುಕಿಯನ್ನು ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ

ಚಿಕ್ಕಮಗಳೂರು:  ಕ್ಷುಲ್ಲಕ ಕಾರಣಕ್ಕೆ ಸೈಜುಕಲ್ಲು ಎತ್ತಿಹಾಕಿ ಮಹಿಳೆಯನ್ನು ಕೊಲೆ ಮಾಡಿದ ಆರೋಪಿಗೆ ಇಲ್ಲಿನ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ನೀಡಿದ್ದು, ೮೧ ಸಾವಿರ ರೂ.ಗಳ ದಂಡ...

ಹುಬ್ಬಳ್ಳಿ-ಚಿಕ್ಕಮಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸೇವೆ ವಿಸ್ತರಣೆ

ಚಿಕ್ಕಮಗಳೂರು: ನೈಋತ್ಯ ರೈಲ್ವೆಯು ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ಹುಬ್ಬಳ್ಳಿ ಮತ್ತು ಚಿಕ್ಕಮಗಳೂರು ನಡುವೆ ಚಲಿಸುವ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸೇವೆಯನ್ನು ವಿಸ್ತರಿಸಲು ನಿರ್ಧರಿಸಿದೆ. ಈ ಹಿಂದೆ ಜೂನ್ 21,...

Related Articles

ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ

ಚಿಕ್ಕಮಗಳೂರು: RVR ಹೆಲ್ತ್ ಕೇರ್ ವತಿಯಿಂದ, ಶ್ರೀ ವಿಜಯ್ ಎಂ.ಎನ್. ಶೆಟ್ಟಿ ಹಾಗೂ ಡಾ. (ಪ್ರೊ). ರಾಘವೇಂದ್ರ...

ಧುಮ್ಮಿಕ್ಕಿ ಹರಿಯುತ್ತಿರುವ ಹೆಬ್ಬೆ ಫಾಲ್ಸ್‌

ಚಿಕ್ಕಮಗಳೂರು: ಕಾಫಿನಾಡಿನ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಮಳೆ (Rain) ಅಬ್ಬರ ಜೋರಾಗಿದ್ದು, ತರೀಕೆರೆ (Tarikere) ತಾಲೂಕಿನಲ್ಲಿರುವ ಹೆಬ್ಬೆ...

ಶ್ರೀಈಶ್ವರ-ಚೌಡೇಶ್ವರಿ ದೇವಾಲಯಗಳಲ್ಲಿ ಆಭರಣ ಕಳವು

ಕಡೂರು: ತಾಲ್ಲೂಕಿನ ಸಿಂಗಟಗೆರೆ ಸಮೀಪದ ಎಸ್.ಡಿ. ಕೊಪ್ಪಲು ಗ್ರಾಮದ ಶ್ರೀಈಶ್ವರ ಹಾಗೂ ಚೌಡೇಶ್ವರಿ ದೇವಾಲಯಗಳಲ್ಲಿ ದೇವರ...

ತರೀಕೆರೆಯ ಗೋಪಿಕೃಷ್ಣಗೆ ಎಂಎಲ್ ಸಿ ಸ್ಥಾನ ನೀಡಬೇಕು

ಚಿಕ್ಕಮಗಳೂರು: ಅಹಿಂದ ಪರವಾಗಿ ಮಾತಾಡುವ ಕಾಂಗ್ರೆಸ್ ಪಕ್ಷ ಮಡಿವಾಳ ಸಮುದಾಯದ ಮುಖಂಡರಿಗೆ ರಾಜಕೀಯ ಪ್ರಾತಿನಿಧ್ಯ ನೀಡುತ್ತಿಲ್ಲ....