Home namma chikmagalur ಕನ್ನಡ ಸಾಹಿತ್ಯ ಪರಿಷತ್ತಿನ ಶ್ಲಾಘನೀಯ ಕಾರ್ಯಾಗಾರ
namma chikmagalurchikamagalurHomeLatest News

ಕನ್ನಡ ಸಾಹಿತ್ಯ ಪರಿಷತ್ತಿನ ಶ್ಲಾಘನೀಯ ಕಾರ್ಯಾಗಾರ

Share
Share

ತರೀಕೆರೆ: ಕನ್ನಡ ಸಾಹಿತ್ಯ ಪರಿಷತ್ತು ಇಂದು ನಗೆಪಟಾಲಿಗೆ ಸಿಕ್ಕಿದೆ.ಬರೀ ಸಮ್ಮೇಳನ, ಹಾರ,ತುರಾಯಿ ಮತ್ತು ಬೇಕು ಬೇಡದವರಿಗೆ ಜಗಮಗಿಸುವ ಕನ್ನಡ ಕಸ್ತೂರಿ, ಚಿಂತಕ,ಮಂತಕ,ವಾಗ್ಮಿ, ಸಂಘಟನ ಚತುರ,ಮಾತಿನ ಮಲ್ಲಾ,ಸಾಹಿತ್ಯ ಅರಾಧಕ ಎಂಬ ಪ್ರಶಸ್ತಿ ಕೊಟ್ಟು ಡೋಲು ಬಾರಿಸಿದ್ದೆ ಹೆಚ್ಚು. ಅವರನ್ನು, ಇವರು,ಇವರನ್ನು, ಅವರು ಹೊಗಳಿ ಹೊಗಳಿ ಹೊಸ,ಹೊಸ ವೇಷದಲ್ಲಿ ಬರೀ ವಸೂಲಿ ಮಾಡಲು ಅಟ್ಟಕ್ಕೆ ಏರಿಸಿದ ಜಾತ್ರೆ ಕಾರ್ಯಕ್ರಮಗಳನ್ನು ನೋಡಿದ್ದೆ ಹೆಚ್ಚು.

ತರೀಕೆರೆ ತಾಲ್ಲೂಕು ಸಾಹಿತ್ಯ ಪರಿಷತ್ತು ಇದಕ್ಕೆ ಭಿನ್ನವಾಗಿ ಕಾರ್ಯಾಗಾರ ಆಯೋಜನೆ ಮಾಡುತ್ತಿರುವುದನ್ನು ಯಾರಾದರೂ ಮೆಚ್ಚ ಬೇಕು. ಇದೇ ತಿಂಗಳು29 ಮತ್ತು 30 ರಂದು ರಂಗೇನಹಳ್ಳಿಯಲ್ಲಿ ತರೀಕೆರೆ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಹಲವು ಸಂಘ ಸಂಸ್ಥೆಗಳ ಆಶ್ರಯದಲ್ಲಿ ನಾಡಿನ ಖ್ಯಾತ ಸಾಹಿತಿಗಳು ಮತ್ತು ವಿಚಾರವಂತರನ್ನು ಕರೆಯಿಸಿ ಎರಡು ದಿನಗಳ ಕಾರ್ಯಾಗಾರ ಮಾಡುತ್ತಿರುವುದನ್ನು ಶ್ಲಾಘಿಸ ಬೇಕು.

29 ರಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ ಪುರುಷೋತ್ತಮ ಬಿಳಿಮಲೆ ಉದ್ಘಾಟಿಸಿ ಮಾಧ್ಯಮದಲ್ಲಿ ಕನ್ನಡ ಭಾಷೆ ಬಳಕೆ ಕುರಿತು ಪತ್ರಕರ್ತ ಬಿ.ಎಂ.ಹನೀಫ್ ಹಾಗೂ ಶಿಕ್ಷಣ ಮತ್ತು ಸಮಾಜ ಕುರಿತು ಭಾಷ ತಜ್ಞ ಮಲ್ಲಿಕಾರ್ಜುನ ಮೇಟಿ ದಲಿತ ಅಭಿವ್ಯಕ್ತಿ ಹೋರಾಟ ಕುರಿತು ರಂಗ ವಿಜ್ಞಾನಿ ಮತ್ತು ಪ್ರಾಧ್ಯಾಪಕ ಸಿ.ಜಿ.ಲಕ್ಷ್ಮೀಪತಿ ಉಪನ್ಯಾಸ ನೀಡಲಿದ್ದಾರೆ.ಈ ಕಾರ್ಯಾಗಾರದ ಸಂಪನ್ಮೂಲ ನಿರ್ವಹಣೆಯನ್ನು ತುಂಬಳಿ ರಾಮಯ್ಯ ನಿರ್ವಹಣೆ ಮಾಡಲಿದ್ದಾರೆ.

30 ರಂದು ಕನ್ನಡ ವಿಷಯ ಕುರಿತು ಪ್ರಖ್ಯಾತ ಬರಹಗಾರರು ಚಿಂತಕರಾದ ಪ್ರೊಫೆಸರ್ ತರೀಕೆರೆ ರಹಮತ್ ಉಪನ್ಯಾಸ ನೀಡಲಿದ್ದಾರೆ , ಎಚ್‌ ಆರ್‌ ಸ್ವಾಮಿ ಕನ್ನಡ ಪರಂಪರೆಯಲ್ಲಿ ವೈಜ್ಞಾನಿಕ ಮನೋಭಾವದ ವಿಷಯ ಕುರಿತು ಮಾತನಾಡಲಿದ್ದಾರೆ.ಸಾಹಿತ್ಯ ಅಭಿವ್ಯಕ್ತಿಯಲ್ಲಿ ಕನ್ನಡ ಕುರಿತು ಉಪನ್ಯಾಸಕರು ಬರಹಗಾರರಾದ ಸವಿತಾ ಬನ್ನಾಡಿ ಉಪನ್ಯಾಸ ರಂಗ ಭೂಮಿಯಲ್ಲಿ ಕನ್ನಡ ವಿಷಯ ಕುರಿತು ಡಾ. ವೆಂಕಟೇಶ್ವರ ಉಪನ್ಯಾಸ ನೀಡಲಿದ್ದಾರೆ.

ಸಮಾರೋಪ ಸಮಾರಂಭದಲ್ಲಿ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಮತ್ತು ಡಾ/ರಾಜಪ್ಪ ದಳವಾಯಿ ಮಾತನಾಡಲಿದ್ದಾರೆ. ಕಾರ್ಯಾಗಾರದಲ್ಲಿ ನಡೆಯುವ ಚಿಂತನ- ಮಂಥನ ದ ವಿಚಾರಗಳನ್ನು ಪುಸ್ತಕ ರೂಪದಲ್ಲಿ ಹೊರತರುವುದು ಇಡೀ ಕಾರ್ಯಕ್ರಮ ಮತ್ತಷ್ಟು ಕನ್ನಡದ ಕೆಲಸಕ್ಕೆ ಸಾಕ್ಷಿ ಆಗಲಿದೆ.

ಕನ್ನಡದ ಕೆಲಸಕ್ಕೆ ಕನ್ನಡದ ಮನಸ್ಸುಗಳು ,ವಿದ್ಯಾರ್ಥಿಗಳು, ಸಾಹಿತ್ಯ ಆಸಕ್ತರು ಸ್ಪಂದಿಸುವುದರ ಮೂಲಕ ವಿಶೇಷ ಅಪರೂಪದ ಕಾರ್ಯಾಗಾರ ಯಶಸ್ವಿಯಾಗಲು ಸಹಕರಿಸ ಬೇಕು. ತರೀಕೆರೆ ಕನ್ನಡ ಸಾಹಿತ್ಯ ಪರಿಷತ್ತು ನಡೆ ಕಾರ್ಯಾಗಾರ ಮತ್ತು ವಿಶೇಷ ಅಭಿಯಾನಕ್ಕೆ ಮೆಚ್ಚುಗೆ ಮತ್ತು ಸದಾ ಅಭಿನಂದನೆ ಸಲ್ಲಬೇಕು.

Commendable workshop of Kannada Sahitya Parishat

Share

Leave a comment

Leave a Reply

Your email address will not be published. Required fields are marked *

Don't Miss

ಹುಬ್ಬಳ್ಳಿ-ಚಿಕ್ಕಮಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸೇವೆ ವಿಸ್ತರಣೆ

ಚಿಕ್ಕಮಗಳೂರು: ನೈಋತ್ಯ ರೈಲ್ವೆಯು ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ಹುಬ್ಬಳ್ಳಿ ಮತ್ತು ಚಿಕ್ಕಮಗಳೂರು ನಡುವೆ ಚಲಿಸುವ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸೇವೆಯನ್ನು ವಿಸ್ತರಿಸಲು ನಿರ್ಧರಿಸಿದೆ. ಈ ಹಿಂದೆ ಜೂನ್ 21,...

ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ

ಚಿಕ್ಕಮಗಳೂರು:  ಜಿಲ್ಲಾ ನ್ಯಾಯಾಲಯಕ್ಕೆ ಬಂದಿರುವ ಬಾಂಬ್ ಬೆದರಿಕೆ ಇ-ಮೇಲ್ ಆತಂಕಕ್ಕೆ ಕಾರಣವಾಗಿದೆ. ಮಧ್ಯಾಹ್ನ 1.30 ರಿಂದ 3.30 ರ ಅವಧಿಯಲ್ಲಿ ಕೋರ್ಟ್ ಆವರಣವನ್ನು ಸ್ಫೋಟಿಸುವುದಾಗಿ ದುಷ್ಕರ್ಮಿಗಳು ಕಳುಹಿಸಿರುವ ಸಂದೇಶದಿಂದಾಗಿ ನ್ಯಾಯಾಲಯದ ಆವರಣದಲ್ಲಿ...

Related Articles

ಧುಮ್ಮಿಕ್ಕಿ ಹರಿಯುತ್ತಿರುವ ಹೆಬ್ಬೆ ಫಾಲ್ಸ್‌

ಚಿಕ್ಕಮಗಳೂರು: ಕಾಫಿನಾಡಿನ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಮಳೆ (Rain) ಅಬ್ಬರ ಜೋರಾಗಿದ್ದು, ತರೀಕೆರೆ (Tarikere) ತಾಲೂಕಿನಲ್ಲಿರುವ ಹೆಬ್ಬೆ...

ಶ್ರೀಈಶ್ವರ-ಚೌಡೇಶ್ವರಿ ದೇವಾಲಯಗಳಲ್ಲಿ ಆಭರಣ ಕಳವು

ಕಡೂರು: ತಾಲ್ಲೂಕಿನ ಸಿಂಗಟಗೆರೆ ಸಮೀಪದ ಎಸ್.ಡಿ. ಕೊಪ್ಪಲು ಗ್ರಾಮದ ಶ್ರೀಈಶ್ವರ ಹಾಗೂ ಚೌಡೇಶ್ವರಿ ದೇವಾಲಯಗಳಲ್ಲಿ ದೇವರ...

ತರೀಕೆರೆಯ ಗೋಪಿಕೃಷ್ಣಗೆ ಎಂಎಲ್ ಸಿ ಸ್ಥಾನ ನೀಡಬೇಕು

ಚಿಕ್ಕಮಗಳೂರು: ಅಹಿಂದ ಪರವಾಗಿ ಮಾತಾಡುವ ಕಾಂಗ್ರೆಸ್ ಪಕ್ಷ ಮಡಿವಾಳ ಸಮುದಾಯದ ಮುಖಂಡರಿಗೆ ರಾಜಕೀಯ ಪ್ರಾತಿನಿಧ್ಯ ನೀಡುತ್ತಿಲ್ಲ....

ಪೋಕ್ಸೋ ಪ್ರಕರಣ ಆರೋಪಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ

ಚಿಕ್ಕಮಗಳೂರು: ಬಣಕಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪೋಕ್ಸೋ ಪ್ರಕರಣದಲ್ಲಿ ಆರೋಪಿ ತಪ್ಪಿತಸ್ಥನೆಂದು ಸಾಬೀತಾದ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ...