Home namma chikmagalur ಬೈಕ್‌ ಅಡ್ಡಗಟ್ಟಿ ಚಿನ್ನದಸರ ದರೋಡೆ
namma chikmagalurCrime NewsHomeKadurLatest News

ಬೈಕ್‌ ಅಡ್ಡಗಟ್ಟಿ ಚಿನ್ನದಸರ ದರೋಡೆ

Share
Share

ಬೀರೂರು:  ತೋಟದ ಕೆಲಸಕ್ಕೆ ತೆರಳುತ್ತಿದ್ದ ಬೈಕ್‌ ಸವಾರನ್ನು ಮತ್ತೊಂದು ಬೈಕ್‌ನಲ್ಲಿ ಬಂದ ಮೂವರು ಅಪರಿಚಿತರು ಅಡ್ಡಗಟ್ಟಿ ಚಾಕು ಹಾಗೂ ರಾಡ್‌ನಿಂದ ಹಲ್ಲೆ ನಡೆಸಿ ಆತನ ಬಳಿ ಇದ್ದ ಚಿನ್ನದ ಸರ ಕಸಿದು ಪರಾರಿಯಾದ ಘಟನೆ ಬೀರೂರು ಹೊರವಲಯದ ಉಳ್ಳಿನಾಗೂರು ರಸ್ತೆಯಲ್ಲಿ ಬುಧವಾರ ನಡೆದಿದೆ.

ಗೋವಿಂದನಾಯ್ಕ ಎಂಬುವವರು ಬುಧವಾರ ಬೆಳಿಗ್ಗೆ 8.30ರ ವೇಳೆಗೆ ಉಳ್ಳಿನಾಗೂರು ರಸ್ತೆಯಲ್ಲಿ ರೈಲ್ವೆ ಗೇಟ್‌ ದಾಟಿ, ಟವರ್‌ ಬಳಿ ಸಾಗುತ್ತಿದ್ದ ಸಂದರ್ಭದಲ್ಲಿ ಇನ್ನೊಂದು ಬೈಕ್‌ನಲ್ಲಿ ಬಂದ ಮೂವರು ಸ್ವಲ್ಪ ಮುಂದೆ ಹೋಗಿ ಬೈಕ್‌ ನಿಲ್ಲಿಸಿಕೊಂಡಿದ್ದಾರೆ.

ಅದರಲ್ಲಿ ಇಬ್ಬರು ಇಳಿದಿದ್ದು ಗೋವಿಂದನಾಯ್ಕ ನೀವು ಎಲ್ಲಿಗೆ ಹೋಗಬೇಕು ಎಂದು ವಿಚಾರಿಸಿದಾಗ ನಾವು ವಾಪಸ್‌ ಹೋಗುತ್ತೇವೆ ಎಂದು ಹೇಳುವ ಹೊತ್ತಿಗೆ ಸ್ಟಾರ್‌ಸಿಟಿ ಬೈಕ್‌ನಲ್ಲಿದ್ದ ಇನ್ನೊಬ್ಬ ಬೈಕನ್ನು ತಿರುಗಿಸಿಕೊಂಡು ಎದುರಾಗಿದ್ದಾನೆ.

ಇದೇ ವೇಳೆ ಈ ಮೊದಲೇ ಕೆಳಗೆ ಇಳಿದಿದ್ದವರಲ್ಲಿ ಒಬ್ಬ ಚಾಕು ಮತ್ತು ಇನ್ನೊಬ್ಬ ರಾಡ್‌ ಹಿಡಿದುಕೊಂಡು ನಿನ್ನ ಬಳಿ ಏನಿದೆ ತೆಗಿ ಎಂದು ಬೆದರಿಸಿದ್ದಾನೆ. ಚಾಕು ಹಿಡಿದವನು ಏಕಾಏಕಿ ಕುತ್ತಿಗೆಗೆ ಕೈಹಾಕಿ 12 ಗ್ರಾಂ ತೂಕದ ಚೈನ್‌ ಅನ್ನು ಕಿತ್ತುಕೊಳ್ಳುವ ಸಂದರ್ಭದಲ್ಲಿ ಗೋವಿಂದನಾಯ್ಕ ಪ್ರತಿರೋಧ ತೋರಿದ್ದಕ್ಕೆ ಚಾಕುವಿನಿಂದ ಭುಜಕ್ಕೆ ತಿವಿದರೆ ಇನ್ನೊಬ್ಬ ರಾಡ್‌ನಿಂದ ತಲೆಗೆ ಹೊಡೆದಿದ್ದಾನೆ.

ಬಳಿಕ ಬೈಕ್‌ ಸವಾರರು ರೈಲ್ವೆ ಹಳಿ ಕಡೆ ತೆರಳಿದಾಗ ಸಂತ್ರಸ್ತನು ಕೂಗಾಡಿಕೊಂಡು ಹೋದರೂ ಪರಾರಿಯಾಗಿದ್ದಾರೆ. ಗಾಬರಿಯಲ್ಲಿ ಬೈಕ್‌ ನಂಬರು ನೋಡಲು ಸಾಧ್ಯವಾಗಿಲ್ಲ ಎಂದು ಗಾಯಾಳು ತಿಳಿಸಿದ್ದಾರೆ.

Bike Addagatti Chinnadasara robbery

Share

Leave a comment

Leave a Reply

Your email address will not be published. Required fields are marked *

Don't Miss

ಭಿಕ್ಷುಕಿಯನ್ನು ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ

ಚಿಕ್ಕಮಗಳೂರು:  ಕ್ಷುಲ್ಲಕ ಕಾರಣಕ್ಕೆ ಸೈಜುಕಲ್ಲು ಎತ್ತಿಹಾಕಿ ಮಹಿಳೆಯನ್ನು ಕೊಲೆ ಮಾಡಿದ ಆರೋಪಿಗೆ ಇಲ್ಲಿನ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ನೀಡಿದ್ದು, ೮೧ ಸಾವಿರ ರೂ.ಗಳ ದಂಡ...

ಹುಬ್ಬಳ್ಳಿ-ಚಿಕ್ಕಮಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸೇವೆ ವಿಸ್ತರಣೆ

ಚಿಕ್ಕಮಗಳೂರು: ನೈಋತ್ಯ ರೈಲ್ವೆಯು ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ಹುಬ್ಬಳ್ಳಿ ಮತ್ತು ಚಿಕ್ಕಮಗಳೂರು ನಡುವೆ ಚಲಿಸುವ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸೇವೆಯನ್ನು ವಿಸ್ತರಿಸಲು ನಿರ್ಧರಿಸಿದೆ. ಈ ಹಿಂದೆ ಜೂನ್ 21,...

Related Articles

ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ

ಚಿಕ್ಕಮಗಳೂರು: RVR ಹೆಲ್ತ್ ಕೇರ್ ವತಿಯಿಂದ, ಶ್ರೀ ವಿಜಯ್ ಎಂ.ಎನ್. ಶೆಟ್ಟಿ ಹಾಗೂ ಡಾ. (ಪ್ರೊ). ರಾಘವೇಂದ್ರ...

ಧುಮ್ಮಿಕ್ಕಿ ಹರಿಯುತ್ತಿರುವ ಹೆಬ್ಬೆ ಫಾಲ್ಸ್‌

ಚಿಕ್ಕಮಗಳೂರು: ಕಾಫಿನಾಡಿನ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಮಳೆ (Rain) ಅಬ್ಬರ ಜೋರಾಗಿದ್ದು, ತರೀಕೆರೆ (Tarikere) ತಾಲೂಕಿನಲ್ಲಿರುವ ಹೆಬ್ಬೆ...

ಶ್ರೀಈಶ್ವರ-ಚೌಡೇಶ್ವರಿ ದೇವಾಲಯಗಳಲ್ಲಿ ಆಭರಣ ಕಳವು

ಕಡೂರು: ತಾಲ್ಲೂಕಿನ ಸಿಂಗಟಗೆರೆ ಸಮೀಪದ ಎಸ್.ಡಿ. ಕೊಪ್ಪಲು ಗ್ರಾಮದ ಶ್ರೀಈಶ್ವರ ಹಾಗೂ ಚೌಡೇಶ್ವರಿ ದೇವಾಲಯಗಳಲ್ಲಿ ದೇವರ...

ತರೀಕೆರೆಯ ಗೋಪಿಕೃಷ್ಣಗೆ ಎಂಎಲ್ ಸಿ ಸ್ಥಾನ ನೀಡಬೇಕು

ಚಿಕ್ಕಮಗಳೂರು: ಅಹಿಂದ ಪರವಾಗಿ ಮಾತಾಡುವ ಕಾಂಗ್ರೆಸ್ ಪಕ್ಷ ಮಡಿವಾಳ ಸಮುದಾಯದ ಮುಖಂಡರಿಗೆ ರಾಜಕೀಯ ಪ್ರಾತಿನಿಧ್ಯ ನೀಡುತ್ತಿಲ್ಲ....