Home State News ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
State News

ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

Share
Share
ಚಿಕ್ಕಮಗಳೂರು: ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕೊನೆಗೂ ವಿಡಿಯೋ ಅಸಲಿಯತ್ತು ಏನೆಂದು ತನಿಖೆಯಿಂದ ಬಯಲಾಗಿದೆ.

ಕೆಲವು ದಿನಗಳ ಹಿಂದೆ ಡಿಜಿಪಿ ರಾಮಚಂದ್ರ ರಾವ್ ತಮ್ಮ ಕಚೇರಿಯಲ್ಲಿ ಇಬ್ಬರು ಮಹಿಳೆಯರೊಂದಿಗೆ ಅಶ್ಲೀಲವಾಗಿ ವರ್ತಿಸುತ್ತಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ತಕ್ಷಣವೇ ಗೃಹ ಇಲಾಖೆ ರಾಮಚಂದ್ರ ರಾವ್ ಅವರನ್ನು ಅಮಾನತುಗೊಳಿಸಿ ಇಲಾಖೆ ಮಟ್ಟದಲ್ಲಿ ತನಿಖೆಗೆ ಆದೇಶಿಸಿತ್ತು.  ಇದೀಗ ತನಿಖೆ ಪೂರ್ಣಗೊಂಡಿದ್ದು ವಿಡಿಯೋಗಳು ಅಸಲಿ ಎಂದು ಬಯಲಾಗಿದೆ. ಈ ವಿಡಿಯೋಗಳು ಎಐ ನಿರ್ಮಿತ ಅಥವಾ ಡೀಪ್ ಫೇಕ್ ವಿಡಿಯೋ ಅಥವಾ ಎಡಿಟ್ ಮಾಡಲಾದ ವಿಡಿಯೋಗಳು ಅಲ್ಲ ಎಂದು ತನಿಖೆಯಿಂದ ಖಚಿತವಾಗಿದೆ.
ಇದರೊಂದಿಗೆ ರಾಮಚಂದ್ರ ರಾವ್ ಗೆ ತೀವ್ರ ಹಿನ್ನಡೆಯಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಅವರು ನಿವೃತ್ತರಾಗಲಿದ್ದರು. ಇದಕ್ಕೆ ಮೊದಲು ಪ್ರತಿಕ್ರಿಯಿಸಿದ್ದ ಅವರು ಇದು ಎಐ ವಿಡಿಯೋ ಎಂದಿದ್ದರು. ಆದರೆ ಈಗ ವಿಡಿಯೋಗಳು ಅಸಲಿ ಎಂದು ಖಚಿತವಾಗಿದ್ದು ಸದ್ಯಕ್ಕೆ ಅವರ ನಿವೃತ್ತಿ ವೇತನ, ಇತರೆ ಸೌಲಭ್ಯಗಳನ್ನುಸ್ಥಗಿತಗೊಳಿಸಲಾಗುತ್ತದೆ.
ಇನ್ನು ವಿಡಿಯೋದಲ್ಲಿದ್ದ ಇಬ್ಬರು ಮಹಿಳೆಯರು ಸದ್ಯಕ್ಕೆ ನಾಪತ್ತೆಯಾಗಿದ್ದಾರೆ. ಇವರು ಆಗಾಗ ರಾಮಚಂದ್ರ ರಾವ್ ಅವರ ಖಾಸಗಿ ಕಚೇರಿಗೆ ಭೇಟಿ ನೀಡುತ್ತಿದ್ದರು ಎನ್ನಲಾಗಿದೆ. ಇಬ್ಬರು ಮಹಿಳೆಯರ ಪೈಕಿ ಒಬ್ಬಾಕೆ ಈ ವಿಡಿಯೋಗಳನ್ನು ಚಿತ್ರೀಕರಿಸಿದ್ದಾಳೆ ಎನ್ನಲಾಗಿದೆ. ಸದ್ಯಕ್ಕೆ ಮಹಿಳೆಯರಿಗಾಗಿ ಹುಡುಕಾಟ ನಡೆದಿದೆ.
Big twist for DGP Ramachandra Rao Rasalile case
Share

Leave a comment

Leave a Reply

Your email address will not be published. Required fields are marked *

Don't Miss

ಪೊಲೀಸ್ ಅಧಿಕಾರಿ ಖಾಕಿ ಸಮವಸ್ತ್ರ ಧರಿಸಿ ಗೂಂಡಾಗಿರಿ

ಚಿಕ್ಕಮಗಳೂರು: ಟಿ. ನರಸೀಪುರದಲ್ಲಿ ಹಿಂದೂ ಕಾರ್ಯಕರ್ತರಿಗೆ ಇನ್ಸ್‌ಪೆಕ್ಟರ್ ಧನಂಜಯ್ ಧಮ್ಕಿ ಹಾಕಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ....

ಕೃಷಿ ಸಾಲಕ್ಕೆ ಶೇ.50 ಸಬ್ಸಿಡಿ ಕೊಡಿಸುವುದಾಗಿ ನಂಬಿಸಿ ರೈತರಿಗೆ ವಂಚನೆ

ಶೃಂಗೇರಿ: ಬ್ಯಾಂಕ್‌ನಿಂದ ಕೃಷಿ ಸಾಲ ಮಂಜೂರು ಮಾಡಿಸಿ, ಸರ್ಕಾರದಿಂದ ಶೇ.50ರಷ್ಟು ಸಬ್ಸಿಡಿ ಕೊಡಿಸುವುದಾಗಿ ನಂಬಿಸಿ ರೈತರಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿರುವ ಆರೋಪ ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಳಿಬಂದಿದೆ. ನೆಮ್ಮಾರು...

Related Articles

ಮೌಲ್ಯ – ಸೇವೆ ಮರೆತು ಹಣ ದೂಚಲು ಪ್ರಜಾಪ್ರಭುತ್ವದ ಕಗ್ಗೂಲೆ…

ಅದಲು-ಬದಲು ಯಾವ ಪಕ್ಷಗಳಿಗೆ ಸಿದ್ದಾಂತ, ನೈತಿಕತೆ ಇದೆ ಭಾರತದಲ್ಲಿ ಸಾಧ್ಯವಿಲ್ಲ. ಎಲ್ಲಾ ಪಕ್ಷಗಳು ಬೆರಿಕೆಯ ತುರಿಕೆಯಲ್ಲಿವೆ.ಅದರಲ್ಲೂ...

ರಾಜಕಾರಣದಲ್ಲಿ ಮಠಗಳ, ಸಂಘಟನೆಗಳ “ಆರ್ಭಟ”

ರಾಜ್ಯ ರಾಜಕಾರಣದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಠಗಳ ಪ್ರಭಾವ ಮತ್ತು ಸಂಘಟನೆಗಳು ಆರ್ಭಟ ಮಾಡುತ್ತಿರುವುದು ನೋಡಿದರೆ ಎತ್ತ...

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂಪುಟದ 13 ಸಚಿವರಿಗೆ ಖಾತೆ ಹಂಚಿಕೆ

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್  ಅವರು ತಮ್ಮ ಸಂಪುಟದ (Cabinet) ಮೊದಲ 13 ಸಚಿವರಿಗೆ ಖಾತೆಯನ್ನು...

ರಾಜ್ಯದಲ್ಲಿ ಶಾಲಾ, ಕಾಲೇಜ್ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್

ಬೆಂಗಳೂರು: ಡಿಕೆ ಶಿವಕುಮಾರ್ ಅವರು ಬುಧವಾರ ರಾಜ್ಯದ 18ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ...