Home namma chikmagalur chikamagalur ಸಾಮಾಜಿಕ ನ್ಯಾಯ ಕೊಡಿಸುವಲ್ಲಿ ಅಂಬೇಡ್ಕರ್ ಪ್ರಮುಖ ಪಾತ್ರ
chikamagalurHomeLatest Newsnamma chikmagalur

ಸಾಮಾಜಿಕ ನ್ಯಾಯ ಕೊಡಿಸುವಲ್ಲಿ ಅಂಬೇಡ್ಕರ್ ಪ್ರಮುಖ ಪಾತ್ರ

Share
Share

ಚಿಕ್ಕಮಗಳೂರು: ಡಾ. ಬಿ,ಆರ್ ಅಂಬೇಡ್ಕರ್ ರವರು ದೇಶ ಕಂಡ ಒಬ್ಬ ಅಪರೂಪದ ಮಹಾನ್ ನಾಯಕ ಅವರು ದಲಿತ ಸಮುದಾಯಕ್ಕೆ ಸೀಮಿತರಾಗದೆ ಎಲ್ಲಾ ವರ್ಗದ ಶೋಷಿತರಿಗೆ ಸಾಮಾಜಿಕ ನ್ಯಾಯ ಕೊಡಿಸುವಲ್ಲಿ ಹೋರಾಟ ಮಾಡಿದ ಮಹಾನ್ ವ್ಯಕ್ತಿ ಎಂದು ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ವಿ. ಹನುಮಂತಪ್ಪ ತಿಳಿಸಿದರು.

ಅವರು ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ೬೯ನೇ ಪರಿನಿರ್ವಾಣ ದಿನದ ಅಂಗವಾಗಿ ಜಿಲ್ಲಾ ಪಂಚಾಯಿತಿ ಆವರಣದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮತ್ತು ಪು?ರ್ಚನೆಯನ್ನು ಅರ್ಪಿಸಿ ಮಾತನಾಡಿದರು.

ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ರವರು ತಮ್ಮ ಕುಟುಂಬದ ಪತ್ನಿ ಸೇರಿದಂತೆ ಮಕ್ಕಳು ಮೃತಪಟ್ಟಿದ್ದನ್ನು ಲೆಕ್ಕಿಸದೆ, ಇಡಿ ದೇಶದ ಜನತೆ ನನ್ನ ಕುಟುಂಬ ಎಂದು ಬಾವಿಸಿ ಇತರೆ ದೇಶಗಳ ಸಂವಿದಾನವನ್ನು ಅಭ್ಯಾಸ ಮಾಡಿ ಭಾರತಕ್ಕೆ ಅಗತ್ಯ ಇರುವ ಸಂವಿಧಾನವನ್ನು ಜಾರಿ ಮಾಡಿ ಸಾಮಾಜಿಕ ವ್ಯವಸ್ಥೆಯಲ್ಲಿ ಬದಲಾವಣೆ ಆಗಬೇಕು, ಎಲ್ಲಾ ವರ್ಗದ ಜನರಿಗೆ ಸಮಾನ ಅವಕಾಶಗಳು ದೊರೆಯಬೇಕು ಎಂಬ ಸಾಮಾಜಿಕ ನ್ಯಾಯ ಪರಿಕಲ್ಪನೆಯನ್ನು ಹೊಂದಿದ್ದರು ಎಂದು ಬಣ್ಣಿಸಿದರು.

ಬಿಎಸ್‌ಪಿ ರಾಜ್ಯ ಸಹ ಸಂಯೋಜಕ ಕೆ.ಟಿ ರಾಧಾಕೃಷ್ಣ ಮಾತನಾಡಿ ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಜೀವಂತವಾಗಿ ಉಳಿಯಲು ಮೂಲ ಕಾರಣ ನ್ಯಾಯಾಧೀಶರು, ನಿಷ್ಠಾವಂತ, ಗೌರವಾನ್ವಿತ ನ್ಯಾಯಾಧೀಶರು ಸಾಮಾನ್ಯ ಜನರಂತೆ ಜನರೊಂದಿಗೆ ಬೆರೆಯುತ್ತಿರುವ ಅವರ ಗುಣಗಳನ್ನು ನಾವೆಲ್ಲರು ಅಳವಡಿಸಿಕೊಳ್ಳಬೇಕೆಂಬ ಅಗತ್ಯ ಇದೆ ಎಂದರು.

ಡಾ. ಬಿ,ಆರ್ ಅಂಬೇಡ್ಕರ್ ರವರ ಕಾಲಘಟ್ಟದಲ್ಲಿ ನಡೆದ ನೋವಿನ ಘಟನೆ ಬಗ್ಗೆ ಅವರ ಪತ್ನಿ ರಮಾಬಾಯಿ ಅವರಿಗೆ ಬರೆದ ಪತ್ರದಲ್ಲಿ ಈಗೆ ತಿಳಿಸಲಾಗಿತ್ತು, ನಾನು ಏಕಾಂಗಿ ಹೋರಾಟ ಮಾಡಿ ಎಲ್ಲವನ್ನು ಕೊಡಿಸಿದೆ ಆದರೆ ಇದನ್ನು ಪಡೆದ ವಿದ್ಯಾವಂತರು, ಅಧಿಕಾರ ಶಾಹಿಗಳು ಕೂಡ ನಾನು ಎಳೆದ ರಥಕ್ಕೆ ಕೈಜೊಡಿಸಲಿಲ್ಲ ಬದಲಾಗಿ ಹಿಂದಕ್ಕೆ ಎಳೆಯಲು ಪ್ರಯತ್ನಿಸಿದರು ಎಂದು ಸಮಾಜದಲ್ಲಿ ಅವರಿಗೆ ಆದ ನಿಂದನೆಗಳ ಬಗ್ಗೆ ವಿವರಿಸಿದ್ದಾರೆ ಎಂದು ಹೇಳಿದರು.

ಸ್ವಾತಂತ್ರ್ಯ ದೊರೆತು ೭೮ ವರ್ಷಗಳು ಕಳೆದರು ಇಂದಿಗೂ ಸಹ ಅದೇ ರೀತಿಯಲ್ಲಿ ಮುಂದುವರೆದುಕೊಂಡು ಬಂದಿದೆ. ಅಧಿಕಾರ ಹೀನ ಜನ ಬೇಡುವ ಜನಾಂಗವಾಗಿ ಪರಿವರ್ತನೆಗೊಂಡಿದೆ. ಬಹುಸಂಖ್ಯಾತ ವರ್ಗ ಬೇಡುತ್ತಿದ್ದರೆ ಅಲ್ಪಸಂಖ್ಯಾತ ವರ್ಗ ಆಳ್ವಿಕೆ ನಡೆಸುತ್ತಿದೆ ಇದು ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆ ಎಂದರು.

ಬಹುಸಂಖ್ಯಾತ ವರ್ಗ ಆಳ್ವಿಕೆ ನೆಡೆಸಲು ಪರಿವರ್ತರಾಗಬೇಕು ಎಂಬ ನಿಟ್ಟಿನಲ್ಲಿ ನಾವೆಲ್ಲರು ಪ್ರತಿಜ್ಞೆ ಮಾಡಿ ಅದೇ ದಾರಿಯಲ್ಲಿ ಸಾಗಿದಾಗ ಮಾತ್ರ ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ರವರ ಕನಸನ್ನು ನನಸಾಗಿಸಲು ಸಾಧ್ಯ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಶಾಸಕ ಹೆಚ್.ಡಿ ತಮ್ಮಯ್ಯ, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ್ ಅಮಟೆ, ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಕೀರ್ತನ, ಮುಖಂಡರುಗಳಾದ ವಕೀಲ ಅನಿಲ್ ಕುಮಾರ್, ಮರ್ಲೆ ಅಣ್ಣಯ್ಯ, ಹಿರೇಮಗಳೂರು ರಾಮಚಂದ್ರ, ಸಮಾಜ ಕಲ್ಯಾಣ ಇಲಾಖೆಯ ರಮೇಶ್, ಹೆಚ್.ಡಿ ರೇವಣ್ಣ, ನಗರದ ಹಿರಿಯ ನಾಗರೀಕರು ಹಾಗೂ ಅಂಬೇಡ್ಕರ್ ಅನುಯಾಯಿಗಳು ಉಪಸ್ಥಿತರಿದ್ದರು.

Ambedkar’s important role in providing social justice

 

Share

Leave a comment

Leave a Reply

Your email address will not be published. Required fields are marked *

Don't Miss

ಸಾಲದ ಹಣ ಕೇಳಿದ್ದಕ್ಕೆ ಹಲ್ಲೆ; ತಾಯಿ-ಮಗನ ವಿರುದ್ಧ ಪ್ರಕರಣ

ಕಡೂರು: ಸಾಲವಾಗಿ ನೀಡಿದ್ದ ₹50 ಸಾವಿರವನ್ನು ಹಿಂದಿರುಗಿಸುವಂತೆ ಕೇಳಿದ್ದಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಯಗಟಿ ಪೊಲೀಸ್ ಠಾಣೆಯಲ್ಲಿ ತಾಯಿ-ಮಗನ ವಿರುದ್ಧ ಪ್ರಕರಣ ದಾಖಲಾಗಿದೆ. ಯಗಟಿ ಗ್ರಾಮದ ಮುದಿಯಪ್ಪ ಬಡಾವಣೆಯ...

ಹುಬ್ಬಳ್ಳಿಯಲ್ಲಿ ಆಗಸ್ಟ್ 9ರಂದು ರಾಜ್ಯಮಟ್ಟದ 32ನೇ ವಿಶ್ವ ಆದಿವಾಸಿ ದಿನಾಚರಣೆ

ಚಿಕ್ಕಮಗಳೂರು: ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ಹಾಗೂ ಆದಿವಾಸಿ ಹರಣ ಶಿಖಾರಿ ಪಾರಿ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತಾಶ್ರಯದಲ್ಲಿ ಆಗಸ್ಟ್ 9ರಂದು ಹುಬ್ಬಳ್ಳಿಯಲ್ಲಿ ರಾಜ್ಯಮಟ್ಟದ 32ನೇ ವಿಶ್ವ ಆದಿವಾಸಿ ದಿನಾಚರಣೆ ಅಂಗವಾಗಿ...

Related Articles

ಗ್ರಾಮೀಣ ಪ್ರದೇಶದಲ್ಲಿ ವಲಸೆ ತಡೆಗೆ ವಿಬಿ ಜಿ ರಾಮ್ ಜಿ ಆಸರೆ

ಚಿಕ್ಕಮಗಳೂರು: ಗ್ರಾಮೀಣ ಭಾಗದ ಜನರು ಉದ್ಯೋಗಕ್ಕಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಪ್ಪಿಸಿ, ತಮ್ಮ ಗ್ರಾಮಗಳಲ್ಲಿಯೇ...

ಆಗಸ್ಟ್ 14 ಮತ್ತು 16 ರಂದು ವಿದ್ಯುತ್ ನಿಲುಗಡೆ

ಚಿಕ್ಕಮಗಳೂರು:  ಗ್ರಾಮೀಣ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ ಹೊಸದಾದ ಗಾಣದಾಳು ವಿ.ವಿ ಕೇಂದ್ರದ ೧೧ ಕೆ.ವಿ ಲಿಂಕ್...

ವೃದ್ದರ ಮಾಶಾಸನ ಬಿಡುಗಡೆ ಆಗ್ರಹಿಸಿ ಕರವೇ (ಪ್ರವೀಣ್‌ಶೆಟ್ಟಿ)ಬಣ ಪ್ರತಿಭಟನೆ

ಚಿಕ್ಕಮಗಳೂರು: ವೃದ್ದರ ಮಾಶಾಸನ ಬಿಡುಗಡೆ ಹಾಗೂ ಬಿಡದಿಯಲ್ಲಿ ರೈತರ ಜೀವನ ಉಳಿಸಬೇಕು ಎಂದು ಆಗ್ರಹಿಸಿ ಕರವೇ...

ವಿದ್ಯುತ್ ಸ್ಪರ್ಶದಿಂದ ಎರಡು ಜಾನುವಾರುಗಳ ಸಾವು

ನರಸಿಂಹರಾಜಪುರ: ಜಮೀನಿಗೆ ಅಳವಡಿಸಿದ್ದ ಐಬೆಕ್ಸ್ ತಂತಿ ಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದ ಪರಿಣಾಮ ಎರಡು...