Home namma chikmagalur ಕಳಸದಲ್ಲಿ ಈಜಲು ತೆರಳಿದ್ದ ಯುವಕ ನೀರುಪಾಲು
namma chikmagalurchikamagalurCrime NewsHomeLatest News

ಕಳಸದಲ್ಲಿ ಈಜಲು ತೆರಳಿದ್ದ ಯುವಕ ನೀರುಪಾಲು

Share
Share

ಚಿಕ್ಕಮಗಳೂರು: ಈಜಲು ತೆರಳಿದ್ದ ತಮಿಳುನಾಡು ಮೂಲದ ಯುವಕ ನೀರುಪಾಲಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕೋಟೆಹೊಳೆ ಗ್ರಾಮದಲ್ಲಿ ನಡೆದಿದೆ. ದುರ್ಘಟನೆಯಲ್ಲಿ 19 ವರ್ಷದ ಸೂರ್ಯ ಸಾವನ್ನಪ್ಪಿದ್ದಾನೆ.

ಈತ ಮೂಲತಃ ತಮಿಳುನಾಡು ಮೂಲದವನಾಗಿದ್ದು, ಕಳಸ ತಾಲೂಕಿನ ಕೋಟೆಹೊಳೆ ಗ್ರಾಮದ ಬಳಿ ಇರುವ ಕಾಫಿ ತೋಟವೊಂದಕ್ಕೆ ಕೆಲಸಕ್ಕಾಗಿ ಬಂದಿದ್ದನು.

ಸೂರ್ಯ ಭದ್ರಾ ನದಿಯಲ್ಲಿ ಈಜಲು ತೆರಳಿದ್ದಾಗ ಆಳದ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಿದ್ದಾನೆ ಎಂದು ತಿಳಿದುಬಂದಿದೆ.

ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಗಳು ಕೂಡಲೇ ಮೃತದೇಹಕ್ಕಾಗಿ ನದಿಯಲ್ಲಿ ಹುಡುಕಾಟ ನಡೆಸಿದ್ದಾರೆ.

ಇತ್ತೀಚಿನ ಮಾಹಿತಿಯ ಪ್ರಕಾರ ಯುವಕನ ಮೃತದೇಹ ಇನ್ನು ಪತ್ತೆಯಾಗಿಲ್ಲ ಘಟನೆಯ ಸಂಬಂಧ ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

A young man who had gone swimming in Kalasa fell into the water.

Share

Leave a comment

Leave a Reply

Your email address will not be published. Required fields are marked *

Don't Miss

30 ಲಕ್ಷ ರೂಪಾಯಿ ಹಣ ನೀಡುವಂತೆ ಬ್ಲಾಕ್‌ ಮೆಲ್

ಚಿಕ್ಕಮಗಳೂರು: ಎಡಿಟ್ ಮಾಡಿದ ಗೃಹಿಣಿಯೊಬ್ಬರ ಫೋಟೋಗಳನ್ನು ಅವರ ಮೊಬೈಲ್‌ಗೇ ಕಳುಹಿಸಿ, ಬರೋಬ್ಬರಿ 30 ಲಕ್ಷ ರೂಪಾಯಿ ಹಣ ನೀಡುವಂತೆ ಕಿಡಿಗೇಡಿಗಳು ಬೇಡಿಕೆಯಿಟ್ಟಿದ್ದ ಘಟನೆ ಬೆಳಕಿಗೆ ಬಂದಿದೆ. ಒಂದು ವೇಳೆ ಹಣ ನೀಡದಿದ್ದರೆ...

ವಿವಾಹಿತ ಮಹಿಳೆಗಾಗಿ ನಡೆದ ಜಗಳದಲ್ಲಿ ಕೈ ಕಟ್

ಎನ್.ಆ‌ರ್.ಪುರ: ವಿವಾಹಿತ ಮಹಿಳೆಯೊಬ್ಬರಿಗಾಗಿ ಇಬ್ಬರು ವ್ಯಕ್ತಿಗಳು ಲಾಂಗು ಮಚ್ಚಿನಿಂದ ಬಡಿದಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆ‌ರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಅಡಿಗೆಬೈಲು ಗ್ರಾಮದಲ್ಲಿ ನಡೆದಿದೆ. ಗಂಡನಿಂದ ದೂರವಿದ್ದ ಮಹಿಳೆಯೊಬ್ಬರ ವಿಚಾರವಾಗಿ ಶೇಷಗಿರಿ...

Related Articles

5 ದಶಕದ ಬಳಿಕ ನಿಡಘಟ್ಟ ಆಂಜನೇಯಸ್ವಾಮಿ ದೇವಾಲಯಕ್ಕೆ ದಲಿತರ ಪ್ರವೇಶ

ಚಿಕ್ಕಮಗಳೂರು: ಇತಿಹಾಸ ಪ್ರಸಿದ್ಧ ಗಟಾಗಟಿ ದೇವರು ಎಂದು ಕರೆಯಲ್ಪಡುವ ಕಡೂರು ತಾಲೂಕಿನ ನಿಡಘಟ್ಟದ ಶ್ರೀ ಆಂಜನೇಯಸ್ವಾಮಿ ದೇವಾಲಯಕ್ಕೆ...

ದೇಶ ವ್ಯಾಪ್ತಿ ಛಾತ್ರೋನ್ ಕಿ ಗೂಂಚ್ ವಿದ್ಯಾರ್ಥಿ ಆಂದೋಲನ

ಚಿಕ್ಕಮಗಳೂರು: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರ ನೇತೃತ್ವದಲ್ಲಿ ಛಾತ್ರೋನ್ ಕಿ ಗೂಂಚ್ ಎಂಬ ದೇಶ ವ್ಯಾಪಿ...

ಕುಡಿಯುವ ನೀರು-ಜಾನುವಾರು ಮೇವಿಗೆ ಕೊರತೆಯಾಗದಂತೆ ಕ್ರಮಕ್ಕೆ ಸೂಚನೆ

ಚಿಕ್ಕಮಗಳೂರು: ಕುಡಿಯುವ ನೀರು, ಜಾನುವಾರುಗಳ ಮೇವಿಗೆ ಕೊರತೆಯಾಗದಂತೆ ಕ್ರಮ ಕೈಗೊಳ್ಳುವಂತೆ ಇಂಧನ, ಪ್ರವಾಸೋದ್ಯಮ ಹಾಗೂ ಚಿಕ್ಕಮಗಳೂರು...

ಗೃಹಜ್ಯೋತಿ ಯೋಜನೆ ಅರ್ಹ ಗುರುತಿಸುವ ಉದ್ದೇಶದಿಂದ ಪರಿಷ್ಕರಣೆ

ಚಿಕ್ಕಮಗಳೂರು: ಸರ್ಕಾರ ಗೃಹಜ್ಯೋತಿ ಯೋಜನೆಯನ್ನು ಸಾರಾಸಗಟಾಗಿ ಪರಿಷ್ಕರಿಸುವ ಅಥವಾ ಕಡಿತಗೊಳಿಸುವ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು...