Home namma chikmagalur chikamagalur ಕಾಫಿನಾಡಿನಿಂದ ಬೇಲೂರಿನತ್ತ ಮರಳಿದ ಒಂಟಿ ಸಲಗ
chikamagalurHomeLatest Newsnamma chikmagalur

ಕಾಫಿನಾಡಿನಿಂದ ಬೇಲೂರಿನತ್ತ ಮರಳಿದ ಒಂಟಿ ಸಲಗ

Share
Share

ಚಿಕ್ಕಮಗಳೂರು: ಹಾಸನ ಜಿಲ್ಲೆಯ ಕಾಡಾನೆಗಳನ್ನು ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಅಭಯಾರಣ್ಯಕ್ಕೆ ಸ್ಥಳಾಂತರಿಸುವ ವಿಚಾರಕ್ಕೆ ತೀವ್ರ ವಿರೋಧ ವ್ಯಕ್ತವಾಗಿರುವ ಬೆನ್ನಲ್ಲೇ, ಸೆರೆ ಕಾರ್ಯಾಚರಣೆಯಲ್ಲಿದ್ದ ಒಂಟಿ ಸಲಗವೊಂದು ಅರಣ್ಯ ಇಲಾಖೆ ಸಿಬ್ಬಂದಿಯ ಕಣ್ತಪ್ಪಿಸಿ ರಾತ್ರೋರಾತ್ರಿ ಬೇಲೂರು ಭಾಗದತ್ತ ಮರಳಿದೆ. ಇದರೊಂದಿಗೆ ಕಾಫಿನಾಡಿನಲ್ಲಿ ಕಾಡಾನೆಗಳ ಸಂಚಾರ ಮತ್ತಷ್ಟು ಕುತೂಹಲ ಹಾಗೂ ಆತಂಕಕ್ಕೆ ಕಾರಣವಾಗಿದೆ.

ಮತ್ತಾವರ ಮತ್ತು ನೆಲ್ಲೂರು ಭಾಗದಲ್ಲಿ ಬೀಡುಬಿಟ್ಟಿದ್ದ ಒಂಟಿ ಸಲಗವನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ‘ಆಪರೇಷನ್ ಗಜ’ ಕಾರ್ಯಾಚರಣೆ ಕೈಗೊಂಡಿತ್ತು. ನಿನ್ನೆ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಆರು ಕುಮ್ಮಿ ಆನೆಗಳ ನೆರವಿನಿಂದ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ, ಕಾರ್ಯಾಚರಣೆ ವೇಳೆ ಅಯ್ಯಪ್ಪ ಎಂಬ ಕುಮ್ಮಿ ಆನೆ ಗಾಬರಿಗೊಂಡ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.

ಇದೇ ಅವಕಾಶ ಬಳಸಿಕೊಂಡ ಒಂಟಿ ಸಲಗ, ರಾತ್ರಿ ವೇಳೆ ಅರಣ್ಯ ಇಲಾಖೆ ಸಿಬ್ಬಂದಿಯ ಕಣ್ತಪ್ಪಿಸಿ ತಾನು ಬಂದ ದಾರಿಯಲ್ಲೇ ವಾಪಸ್ ತೆರಳಿದೆ. ಸದ್ಯ ಬೇಲೂರು ಭಾಗದತ್ತ ಮುಖ ಮಾಡಿರುವ ಸಲಗದ ಪತ್ತೆಗಾಗಿ ಅರಣ್ಯ ಸಿಬ್ಬಂದಿ ಬಸ್ಕಲ್, ಬಾಚಿಗನಹಳ್ಳಿ, ವಸ್ತಾರೆ ಹಾಗೂ ಕೂದುವಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.

ಇನ್ನೊಂದೆಡೆ ಬೇಲೂರು ಮತ್ತು ಮೂಡಿಗೆರೆ ತಾಲೂಕುಗಳ ವ್ಯಾಪ್ತಿಯಲ್ಲಿ ಬರೋಬ್ಬರಿ 39 ಕಾಡಾನೆಗಳು ಎರಡು ಪ್ರತ್ಯೇಕ ಗುಂಪುಗಳಾಗಿ ಬೀಡುಬಿಟ್ಟಿವೆ. ಎಪಿಸಿಸಿಎಫ್ ಮನೋಜ್ ರಾಜನ್ ನೀಡಿರುವ ಮಾಹಿತಿ ಪ್ರಕಾರ, ಬೇಲೂರಿನ ಕನ್ನಹಳ್ಳಿ ಭಾಗದಲ್ಲಿ 21 ಕಾಡಾನೆಗಳ ಹಿಂಡು ಹಾಗೂ ಮೂಡಿಗೆರೆಯ ಕನ್ನಾಪುರ ವ್ಯಾಪ್ತಿಯಲ್ಲಿ 18 ಆನೆಗಳ ಗುಂಪು ಸಂಚರಿಸುತ್ತಿದೆ. ಇದರ ಜೊತೆಗೆ ಮೂರು ಒಂಟಿ ಗಂಡು ಆನೆಗಳು ಬಿಕ್ಕೋಡು ಭಾಗದಲ್ಲಿ ಪ್ರತ್ಯೇಕವಾಗಿ ಓಡಾಡುತ್ತಿವೆ. ಹೀಗಾಗಿ ಗ್ರಾಮಸ್ಥರು ಹಾಗೂ ಕಾಫಿ ಬೆಳೆಗಾರರು ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಸೂಚಿಸಿದೆ.

ಹಾಸನದ ಕಾಡಾನೆಗಳನ್ನು ಚಿಕ್ಕಮಗಳೂರಿನ ಭದ್ರಾ ಅಭಯಾರಣ್ಯಕ್ಕೆ ಸ್ಥಳಾಂತರಿಸುವ ಸರ್ಕಾರದ ನಿರ್ಧಾರ ಕಾಫಿನಾಡಿನಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ರೈತರ ತೀವ್ರ ಪ್ರತಿಭಟನೆ, ಮೂಡಿಗೆರೆ ಬಂದ್ ಹಾಗೂ ಜಿಲ್ಲೆಯ ಮೂವರು ಶಾಸಕರ ರಾಜೀನಾಮೆ ಎಚ್ಚರಿಕೆ ಸರ್ಕಾರದ ಮೇಲೆ ರಾಜಕೀಯ ಒತ್ತಡ ಸೃಷ್ಟಿಸಿತ್ತು. ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ಅವರ ಆನೆ ಸ್ಥಳಾಂತರದ ಹೇಳಿಕೆಯೂ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿತ್ತು.

ಈ ಬೆಳವಣಿಗೆಗಳ ಬೆನ್ನಲ್ಲೇ ಸರ್ಕಾರ ಆಪರೇಷನ್ ಗಜ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಇದೀಗ 21 ಕಾಡಾನೆಗಳ ಹಿಂಡು ಬೇಲೂರು ಅರಣ್ಯ ವ್ಯಾಪ್ತಿಗೆ ಮರಳಿರುವುದು ಚಿಕ್ಕಮಗಳೂರು ಭಾಗದ ಜನರಿಗೆ ಕೊಂಚ ನಿರಾಳತೆ ತಂದಿದ್ದರೂ, ಉಳಿದ ಆನೆಗಳ ಸಂಚಾರ ಹಾಗೂ ಒಂಟಿ ಸಲಗದ ಪತ್ತೆ ಅರಣ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ. ಒಟ್ಟಾರೆ, ಆನೆಗಳ ಸ್ಥಳಾಂತರದ ವಿವಾದಕ್ಕೆ ತಾತ್ಕಾಲಿಕ ವಿರಾಮ ಸಿಕ್ಕಿದ್ದರೂ ಮಲೆನಾಡಿನ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಯಾವಾಗ ಎಂಬ ಪ್ರಶ್ನೆ ಮಾತ್ರ ಹಾಗೆಯೇ ಉಳಿದಿದೆ.

A lonely man who returned from the land of coffee to Belur

Share

Leave a comment

Leave a Reply

Your email address will not be published. Required fields are marked *

Don't Miss

ಚಿಕ್ಕಮಗಳೂರು ಜಿಪಂನ 36 ಕ್ಷೇತ್ರಗಳಿಗೆ ಅಂತಿಮ ಮೀಸಲಾತಿ ಪ್ರಕಟ

ಚಿಕ್ಕಮಗಳೂರು: ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಚಿಕ್ಕಮಗಳೂರು ಜಿಲ್ಲೆಯ 36 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಅಂತಿಮ ಮೀಸಲಾತಿ ಪಟ್ಟಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ನವೆಂಬರ್ 23ರಂದು ಹೊರಡಿಸಿರುವ ಕರ್ನಾಟಕ ರಾಜಪತ್ರದ ಅಧಿಸೂಚನೆಯಲ್ಲಿ...

ಕನ್ನಡ ಸಾಹಿತ್ಯ ಪರಿಷತ್ ಘಟಕಗಳ ನಿರ್ವಹಣೆಗೆ ಆಡಳಿತಾಧಿಕಾರಿ ನೇಮಕ

ಕನ್ನಡ,ಕನ್ನಡ ಬನ್ನಿ ನಮ್ಮ ಸಂಗಡ ಎನ್ನುವ ಬದಲಿಗೆ ಕನ್ನಡ, ಕನ್ನಡ ನಮಗೆ ದೇಣಿಗೆ ನಿಮಗೆ ಬೇಕಾದ ಪ್ರಶಸ್ತಿಗಳು ಎನ್ನುವೇ ಅಂತಕ್ಕೆ ಸಾಹಿತ್ಯ ಪರಿಷತ್ ಗೆ ವಕ್ಕರಿಸಿರುವ ಕೆಲವರಿಗೆ ಊಟ,ತಿಂಡಿ,ನಿದ್ದೆ ಬರುವುದು ಕಡು...

Related Articles

ಸಚಿವರ ಸಭೆ ಬಹಿಷ್ಕರಿಸಲು ಸಿ.ಟಿ. ರವಿ ನಿರ್ಧಾರ

ಚಿಕ್ಕಮಗಳೂರು: ಹಾಸನ ಜಿಲ್ಲೆಯ ಬೇಲೂರು ಭಾಗದಿಂದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿಗೆ ಆಗಮಿಸಿರುವ ಕಾಡಾನೆಗಳನ್ನು ಭದ್ರಾ...

ಅನ್ನದಾತರ “ಕಿವಿಗೆ “ಹೂವು “ಶಾಸಕಿ ನಯನ ಹೈ ಡ್ರಾಮಾ.

ಮೂಡಿಗೆರೆ :  ಇಲ್ಲಿನ ಕಾಫಿ ಬೆಳೆಗಾರರು, ರಹಿತರು, ಕೂಲಿ ಕಾರ್ಮಿಕರು ಪ್ರಾಣ ಕಳೆದುಕೊಂಡು ಪ್ರತಿ ವರ್ಷ...

ಆನೆ ಹಾವಳಿಗೆ ಬೇಸತ್ತ ರೈತ-ಪ್ರತಿಭಟನೆ ಸ್ಥಳದಲ್ಲೇ ವಿಷ ಸೇವಿಸಲು ಯತ್ನ

ಚಿಕ್ಕಮಗಳೂರು: ಕಾಡಾನೆಗಳ ಹಾವಳಿಯಿಂದ ತೋಟ ಹಾಗೂ ಬದುಕು ಕಳೆದುಕೊಂಡ ರೈತನೊಬ್ಬ ಪ್ರತಿಭಟನೆ ನಡೆಯುತ್ತಿದ್ದ ಸ್ಥಳದಲ್ಲೇ ವಿಷ...

ಹೈಡ್ರಾಮಾಕ್ಕೆ ತಾತ್ಕಾಲಿಕ ತೆರೆ-ತವರು ಸೇರಿದ 21 ಗಜಪಡೆ

ಚಿಕ್ಕಮಗಳೂರು: ಹಾಸನ ಜಿಲ್ಲೆಯ ಕಾಡಾನೆಗಳನ್ನು ಚಿಕ್ಕಮಗಳೂರಿನ ಭದ್ರಾ ಅಭಯಾರಣ್ಯಕ್ಕೆ ಸ್ಥಳಾಂತರಿಸುವ ಸರ್ಕಾರದ ನಿರ್ಧಾರ ಕಾಫಿನಾಡಿನಲ್ಲಿ ಭಾರಿ...