Home namma chikmagalur chikamagalur ಕಾರ್ಯನಿರ್ವಹಿಸದ ಉಪಕಾರಾಗೃಹದಲ್ಲಿ ಕಳ್ಳತನ
chikamagalurCrime NewsHomeLatest Newsnamma chikmagalur

ಕಾರ್ಯನಿರ್ವಹಿಸದ ಉಪಕಾರಾಗೃಹದಲ್ಲಿ ಕಳ್ಳತನ

Share
Share

ತರೀಕೆರೆ:  ಕಾರ್ಯನಿರ್ವಹಿಸದ ತರೀಕೆರೆ ಉಪಕಾರಾಗೃಹದ ಹಿಂಬಾಗಿಲು ಒಡೆದು ಒಳನುಗ್ಗಿದ ಕಳ್ಳರು ಹಲವು ವಸ್ತುಗಳನ್ನು ಕಳವು ಮಾಡಿರುವುದಲ್ಲದೆ, ಸರ್ಕಾರಿ ದಾಖಲೆಗಳು ಹಾಗೂ ಕಡತಗಳನ್ನು ಸುಟ್ಟು ಹಾಕಿರುವ ಘಟನೆ ಬೆಳಕಿಗೆ ಬಂದಿದೆ.

ತರೀಕೆರೆ ಉಪಕಾರಾಗೃಹವು ಚಿಕ್ಕಮಗಳೂರು ಜಿಲ್ಲಾ ಕಾರಾಗೃಹದ ಅಧೀನದಲ್ಲಿದ್ದು, ಪ್ರಸ್ತುತ ಕಾರ್ಯನಿರ್ವಹಿಸುತ್ತಿಲ್ಲ. ನವೆಂಬರ್ 19ರಂದು ಜಿಲ್ಲಾ ಕಾರಾಗೃಹ ಅಧೀಕ್ಷಕರು ಪರಿಶೀಲನೆಗಾಗಿ ಉಪಕಾರಾಗೃಹಕ್ಕೆ ಭೇಟಿ ನೀಡಿದಾಗ ಘಟನೆ ಬೆಳಕಿಗೆ ಬಂದಿದೆ.

ಕಳ್ಳರು ಕಾರಾಗೃಹದ ಹಿಂಬಾಗಿಲನ್ನು ಒಡೆದು ಒಳನುಗ್ಗಿ ವಿಚಾರಣಾ ಬಂದಿಗಳ ಪಿ.ಸಿ. ಪುಸ್ತಕ, ಮಾರ್ಗ ಬಂದಿಗಳ ದಾಖಲಾತಿ ಪುಸ್ತಕ, ವಕೀಲರು ಹಾಗೂ ವಿಶೇಷ ವ್ಯಕ್ತಿಗಳ ಭೇಟಿ ಪುಸ್ತಕಗಳು ಮತ್ತು ಬಂದಿಗಳ ಭೇಟಿ ಪುಸ್ತಕಗಳು ಸೇರಿದಂತೆ ಹಲವು ವರ್ಷಗಳ ಹಿಂದಿನ ಪ್ರಮುಖ ದಾಖಲೆಗಳನ್ನು ಸುಟ್ಟು ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸುಟ್ಟುಹಾಕಲಾದ ದಾಖಲೆಗಳಲ್ಲಿ 1981ರಿಂದ 2018ರವರೆಗಿನ ವಿಚಾರಣಾ ಬಂದಿಗಳ ಪಿ.ಸಿ. ಪುಸ್ತಕ, 2018ರ ಮಾರ್ಗ ಬಂದಿಗಳ ದಾಖಲಾತಿ ಪುಸ್ತಕ, 2013ರಿಂದ 2018ರವರೆಗಿನ ವಕೀಲರು ಹಾಗೂ ವಿಶೇಷ ವ್ಯಕ್ತಿಗಳ ಭೇಟಿ ದಾಖಲೆಗಳು ಮತ್ತು 2003ರಿಂದ 2017ರವರೆಗಿನ ಬಂದಿಗಳ ಭೇಟಿ ಪುಸ್ತಕಗಳು ಸೇರಿವೆ.

ಇದರ ಜೊತೆಗೆ ಜೆರಾಕ್ಸ್ ಯಂತ್ರ, ಮರದ ಪೀಠೋಪಕರಣಗಳು, ಎಲ್‌ಇಡಿ ಟಿವಿ, ಎಲ್‌ಜಿ ಫ್ಲಾಟ್ರಾನ್ ಸ್ಕ್ರೀನ್ ಟಿವಿ ಹಾಗೂ ಫ್ಯಾಕ್ಸ್/ಟೆಲಿಫೋನ್ ಯಂತ್ರ ಸೇರಿದಂತೆ ಹಲವು ವಸ್ತುಗಳಿಗೆ ಹಾನಿ ಮಾಡಲಾಗಿದೆ.

ಇನ್ನು ಎರಡು ಸೀಲಿಂಗ್ ಫ್ಯಾನ್‌ಗಳು, ದುರಸ್ತಿಯಲ್ಲಿದ್ದ ಬೀಗಗಳು, ಎರಡು ಎಸಿಆರ್ ಸಿಪಿಯುಗಳು, ಯುಪಿಎಸ್, ಖಾಲಿ ಸಿಲಿಂಡರ್, ಫೈರ್ ಎಕ್ಸ್‌ಟಿಂಗ್ವಿಷರ್, ಸ್ಟೀಲ್ ಚಂಬು ಹಾಗೂ ಪಾತ್ರೆಗಳು, ಡೆಸ್ಕ್ ಬ್ಯಾಟರಿಗಳು, ಇನ್‌ವರ್ಟರ್ ಯುಪಿಎಸ್, ಪ್ಲಾಸ್ಟಿಕ್ ಕುರ್ಚಿಗಳು ಮತ್ತು ಎಲ್‌ಇಡಿ ಟಿವಿ ಸೇರಿದಂತೆ ಹಲವು ವಸ್ತುಗಳನ್ನು ಕಳವು ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕಳ್ಳತನ ಹಾಗೂ ಹಾನಿಗೊಳಗಾದ ವಸ್ತುಗಳ ಒಟ್ಟು ಅಂದಾಜು ಮೌಲ್ಯ ಸುಮಾರು ₹15 ಸಾವಿರ ಎಂದು ತಿಳಿಸಲಾಗಿದೆ. ಘಟನೆ ಮೇ 13ರಿಂದ ನವೆಂಬರ್ 19ರ ನಡುವಿನ ಅವಧಿಯಲ್ಲಿ ನಡೆದಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಜಿಲ್ಲಾ ಕಾರಾಗೃಹ ಅಧೀಕ್ಷಕಿ ದೀಪಾ ಎಂ. ಅವರು ನವೆಂಬರ್ 19ರಂದು ರಾತ್ರಿ ತರೀಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಳ್ಳತನ ಹಾಗೂ ಸರ್ಕಾರಿ ದಾಖಲೆಗಳ ನಾಶದ ಕುರಿತು ತನಿಖೆ ಕೈಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ.

Theft at a non-functional sub-jail

Share

Leave a comment

Leave a Reply

Your email address will not be published. Required fields are marked *

Don't Miss

ನೂತನ ಸೌಲಭ್ಯಗಳೊಂದಿಗೆ ಚಿಕ್ಕಮಗಳೂರು ರೈಲು ನಿಲ್ದಾಣ ಲೋಕಾರ್ಪಣೆ

ಚಿಕ್ಕಮಗಳೂರು: ಪರಂಪರೆಯಿಂದ ಆಧುನಿಕತೆಯತ್ತ ಹೆಜ್ಜೆಯಿಟ್ಟಿರುವ ಚಿಕ್ಕಮಗಳೂರು ರೈಲು ನಿಲ್ದಾಣವು ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ 22.06 ಕೋಟಿ ವೆಚ್ಚದಲ್ಲಿ ಪುನ‌ರ್ ಅಭಿವೃದ್ಧಿಗೊಂಡಿದ್ದು, ನೂತನ ಸೌಲಭ್ಯಗಳೊಂದಿಗೆ ಶುಕ್ರವಾರ ಲೋಕಾರ್ಪಣೆಗೊಂಡಿತು. ಪ್ರಧಾನಿ ನರೇಂದ್ರ ಮೋದಿ...

ತಂಬಾಕು ದುಷ್ಪರಿಣಾಮ ಕುರಿತು ಜಾಗೃತಿ ಮೂಡಿಸಿ

ಚಿಕ್ಕಮಗಳೂರು:  ತಂಬಾಕು ಉತ್ಪನ್ನಗಳ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತು ಜಿಲ್ಲೆಯ ಜನರಲ್ಲಿ ಹೆಚ್ಚಿನ ಅರಿವು ಮೂಡಿಸಲು ಹಾಗೂ ಜಿಲ್ಲೆಯನ್ನು ತಂಬಾಕು ಮುಕ್ತವನ್ನಾಗಿಸಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ...

Related Articles

ಕುವೆಂಪು ಶ್ರೀ ರಾಮಾಯಣ ದರ್ಶನಂನಲ್ಲಿ ಗಾಂಧಿ ಮತ್ತು ಅರವಿಂದರ ಪ್ರಭಾವ

ತರೀಕೆರೆ: ಕುವೆಂಪು ರವರ ಮಹಾಕಾವ್ಯ ಶ್ರೀ ರಾಮಾಯಣ ದರ್ಶನಂ ಗಾಂಧಿ ಮತ್ತು ಅರವಿಂದ ಘೋಷರ ಪ್ರಭಾವದಿಂದ...

ಪ್ರತಿಭಟನೆಗೆ ಅಪ್ರಾಪ್ತ ಮಕ್ಕಳ ಬಳಕೆ – ಸಂಘಟಕನ ವಿರುದ್ಧ ಪ್ರಕರಣ

ಚಿಕ್ಕಮಗಳೂರು: ಕೈಗಾರಿಕಾ ಮಾಲಿನ್ಯದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಅಪ್ರಾಪ್ತ ಮಕ್ಕಳನ್ನು ಕಾನೂನುಬಾಹಿರವಾಗಿ ಬಳಸಿಕೊಂಡ ಆರೋಪದಡಿ ಗ್ರಾಮಾಂತರ...

ಮರಕ್ಕೆ ಡಿಕ್ಕಿ ಹೊಡೆದು ಬಸ್ ನಿಲ್ಲಿಸಿದ ಚಾಲಕ ಸಾವು

ಚಿಕ್ಕಮಗಳೂರು: ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಬಸ್ ಚಾಲನೆ ಮಾಡುತ್ತಿದ್ದ ವೇಳೆ ಚಾಲಕನಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡು...

ಕಾಫಿತೋಟದಲ್ಲಿ ಕಾಡುಕೋಣ ದಾಳಿ: ಕೂಲಿ ಕಾರ್ಮಿಕ ಗಂಭೀರ

ಮೂಡಿಗೆರೆ: ಕಾಫಿತೋಟದಲ್ಲಿ ಎಂದಿನಂತೆ ಕೆಲಸದಲ್ಲಿ ತೊಡಗಿದ್ದ ಕೂಲಿ ಕಾರ್ಮಿಕನ ಮೇಲೆ ಕಾಡುಕೋಣವೊಂದು ಏಕಾಏಕಿ ದಾಳಿ ನಡೆಸಿ...