Home namma chikmagalur chikamagalur ಮನೆಗೆ ನುಗ್ಗಿ ₹3.44 ಲಕ್ಷ ಮೌಲ್ಯದ ಚಿನ್ನ-ಬೆಳ್ಳಿ ಹಾಗೂ ನಗದು ಕಳವು
chikamagalurCrime NewsHomeLatest Newsnamma chikmagalur

ಮನೆಗೆ ನುಗ್ಗಿ ₹3.44 ಲಕ್ಷ ಮೌಲ್ಯದ ಚಿನ್ನ-ಬೆಳ್ಳಿ ಹಾಗೂ ನಗದು ಕಳವು

Share
Share

ಚಿಕ್ಕಮಗಳೂರು, ನ.20: ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನು ಗಮನಿಸಿ ಕಳ್ಳರು ಮನೆಗೆ ನುಗ್ಗಿ ₹3.44 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ಕಾಲುಚೈನ್ ಹಾಗೂ ನಗದು ಕಳ್ಳತನ ಮಾಡಿರುವ ಘಟನೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ನಗರದ ಕಲ್ಯಾಣ ನಗರ ನಿವಾಸಿ ಸುಧಾ ಅವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. ಸುಧಾ ಅವರು ವಿಕಾಸನಗರದಲ್ಲಿರುವ ಮೂರಾರ್ಜಿ ಶಾಲೆಯಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದು, ಕೆಲ ದಿನಗಳಲ್ಲಿ ಕೆಲಸದ ಸ್ಥಳದಲ್ಲೇ ಉಳಿದುಕೊಳ್ಳುತ್ತಿದ್ದರು. ಮನೆಯಲ್ಲಿ ಅವರ ಪುತ್ರ ಆಯುಷ್ಯ್ ವಾಸವಾಗಿದ್ದ.

ನ.17ರಂದು ರಾತ್ರಿ ಸುಮಾರು 9.30ಕ್ಕೆ ಸುಧಾ ಅವರು ಮಗನಿಗೆ ಅಡುಗೆ ಮಾಡಿ ಕೆಲಸಕ್ಕೆ ತೆರಳಿದ್ದರು. ಅದೇ ದಿನ ಆಯುಷ್ಯ್ ಕೂಡ ಕೆಲಸಕ್ಕೆ ತೆರಳುವ ಮುನ್ನ ಮನೆಯ ಬಾಗಿಲಿಗೆ ಬೀಗ ಹಾಕಿ, ಕೀಲಿಯನ್ನು ಮನೆಯ ಚಪ್ಪಲಿ ಸ್ಟ್ಯಾಂಡ್‌ನಲ್ಲಿದ್ದ ಶೂವೊಂದರೊಳಗೆ ಇಟ್ಟು ತೆರಳಿದ್ದಾನೆ. ಬಳಿಕ ಸ್ನೇಹಿತನ ಮನೆಗೆ ತೆರಳಿದ್ದರಿಂದ ರಾತ್ರಿ ಮನೆಗೆ ಬಂದಿರಲಿಲ್ಲ. ಸುಧಾ ಕೂಡ ಮನೆಗೆ ವಾಪಸ್ ಆಗಿರಲಿಲ್ಲ.

ನ.18ರಂದು ಬೆಳಗ್ಗೆ ಸುಮಾರು 8 ಗಂಟೆಗೆ ಮನೆಗೆ ಬಂದ ಸುಧಾ ಅವರು ಶೂವಿನಲ್ಲಿದ್ದ ಕೀಲಿಯಿಂದ ಬಾಗಿಲು ತೆರೆದು ಒಳಗೆ ಹೋದಾಗ ಮೊದಲ ಕೊಠಡಿಯಲ್ಲಿದ್ದ ಕಬ್ಬಿಣದ ಬೀರುವಿನ ಬಾಗಿಲು ತೆರೆದಿದ್ದು, ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿರುವುದು ಕಂಡುಬಂದಿದೆ. ಪರಿಶೀಲಿಸಿದಾಗ ಮಗನಿಗೆ ಸೇರಿದ 2 ಗ್ರಾಂ ತೂಕದ ಚಿನ್ನದ ಉಂಗುರ ಕಳವಾಗಿರುವುದು ಗೊತ್ತಾಗಿದೆ.

ನಂತರ ಎರಡನೇ ಕೊಠಡಿಯಲ್ಲಿದ್ದ ಮತ್ತೊಂದು ಬೀರುವನ್ನೂ ಪರಿಶೀಲಿಸಿದಾಗ ಅದರ ಬಾಗಿಲು ತೆರೆದಿದ್ದು, ಬಟ್ಟೆಗಳು ಅಸ್ತವ್ಯಸ್ತವಾಗಿದ್ದವು. ಬೀರುವಿನಲ್ಲಿದ್ದ ಕೆಂಪು ಹರಳಿನ ಜುಮಕಿ, ಬಿಳಿ ಹರಳಿನ ಜುಮಕಿ, ಚಿನ್ನದ ಬ್ರಾಸ್‌ಲೈಟ್, ಎರಡು ಚಿನ್ನದ ಉಂಗುರ, ಚಿಕ್ಕ ವಾಲೆ, ಸೈಡ್ ಮಾಟಿ ಸೇರಿದಂತೆ ಒಟ್ಟು 33.250 ಗ್ರಾಂ ಚಿನ್ನಾಭರಣ, 130 ಗ್ರಾಂ ಬೆಳ್ಳಿ ಕಾಲುಚೈನ್ ಹಾಗೂ ₹50 ಸಾವಿರ ನಗದು ಕಳವಾಗಿರುವುದು ಪತ್ತೆಯಾಗಿದೆ.

ಕಳವಾಗಿರುವ ಚಿನ್ನಾಭರಣಗಳ ಅಂದಾಜು ಮೌಲ್ಯ ₹2.83 ಲಕ್ಷ, ಬೆಳ್ಳಿ ಕಾಲುಚೈನ್‌ನ ಮೌಲ್ಯ ₹11 ಸಾವಿರ ಹಾಗೂ ನಗದು ₹50 ಸಾವಿರ ಸೇರಿದಂತೆ ಒಟ್ಟು ₹3.44 ಲಕ್ಷ ಮೌಲ್ಯದ ವಸ್ತುಗಳು ಕಳವಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನು ಗಮನಿಸಿಕೊಂಡು ಕಳ್ಳರು ಶೂವಿನಲ್ಲಿ ಇಡಲಾಗಿದ್ದ ಕೀಲಿಯನ್ನು ಬಳಸಿರಬಹುದು ಅಥವಾ ನಕಲಿ ಕೀಲಿಯಿಂದ ಮನೆಗೆ ಪ್ರವೇಶಿಸಿರಬಹುದು ಎಂದು ಶಂಕಿಸಲಾಗಿದೆ. ಈ ಸಂಬಂಧ ಸುಧಾ ಅವರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಾಥಮಿಕ ವರದಿ ದಾಖಲಿಸಿಕೊಂಡು ಕಳ್ಳರ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.

Gold silver and cash worth ₹344 lakh stolen after breaking into a house

Share

Leave a comment

Leave a Reply

Your email address will not be published. Required fields are marked *

Don't Miss

ಕೊಪ್ಪ ತಾಲ್ಲೂಕಿನಲ್ಲಿ ಕಾಡುಕೋಣಗಳ ಉಪಟಳ

ಕೊಪ್ಪ: ಕಾಡುಕೋಣಗಳ ಉಪಟಳ ದಿನೇ ದಿನೇ ಮಿತಿ ಮೀರುತ್ತಿದ್ದು, ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವಲಸೆ ಕಾರ್ಮಿಕರ ಮೇಲೆ ಏಕಾಏಕಿ ಕಾಡುಕೋಣ ದಾಳಿಗೆ ಯತ್ನಿಸಿದ ಆತಂಕಕಾರಿ ಘಟನೆ ಕೊಪ್ಪ ಅರಣ್ಯ ವಲಯ ವ್ಯಾಪ್ತಿಯ...

ಕೆಂಪುಬಸ್ ಬಲೂ ಗ್ಯಾರಂಟಿ ಡೇಂಜರ್ ? ಡೇಂಜರ್ ? ಕೆಟ್ಟು ನಿಲ್ಲುವ ಬಸ್ಸುಗಳು

ಚಿಕ್ಕಮಗಳೂರು:  ಚಿಕ್ಕಮಗಳೂರು ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಬಲೂ ಡೇಂಜರ್ ಯಾವಾಗ ಎಲ್ಲಿ ಕೆಟ್ಟು ನಿಲ್ಲುತ್ತವೆ ಎಂದು ಪ್ರಯಾಣಿಕರು ದೂರುವುದು ಸಾಮಾನ್ಯವಾಗಿದ್ದು ಜೊತೆಗೆ ತಳ್ಳು ಮಾಡಲ್ ಐಸಾ ಎಂದು ಬಸ್ಸುಗಳನ್ನು ತಳ್ಳುವ ದೃಶ್ಯ ಸಾಮಾನ್ಯವಾಗಿ...

Related Articles

ಕಾಡಾನೆ ದಾಳಿ ಖಂಡಿಸಿ ನರಸಿಂಹರಾಜಪುರ ಬಂದ್‌ ಯಶಸ್ವಿ

ನರಸಿಂಹರಾಜಪುರ: ಬಾಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆನ್ನಂಗಿ ಗ್ರಾಮದ ರೈತ ಕೃಷ್ಣಮೂರ್ತಿ ಅವರು ಬುಧವಾರ ಕಾಡಾನೆ...

20 ವರ್ಷ ಅಧಿಕಾರದಲ್ಲಿದ್ದರೂ ಜಿಲ್ಲೆಯ ಅಭಿವೃದ್ಧಿಗೆ ರವಿ ಕೊಡುಗೆ ಏನು?

ಚಿಕ್ಕಮಗಳೂರು: ಸುಮಾರು 20 ವರ್ಷಗಳ ಕಾಲ ಶಾಸಕರಾಗಿ ಅಧಿಕಾರ ಅನುಭವಿಸಿರುವ ಸಿ.ಟಿ. ರವಿ ಅವರು ಜಿಲ್ಲೆಗೆ...

ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲುವಿಗೆ ಶ್ರಮಿಸಬೇಕು

ಚಿಕ್ಕಮಗಳೂರು: ಮುಂಬರುವ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳು ಪಕ್ಷದ ಸಂಘಟನೆಗೆ...

ಕೋಮುವಾದಿ ರಾಜಕಾರಣವನ್ನೂ ಸೋಲಿಸಬೇಕು

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಜನತೆ ಚುನಾವಣೆಯಲ್ಲಿ ಕೋಮುವಾದಿ ನಾಯಕರನ್ನು ಸೋಲಿಸಿ ಮನೆಗೆ ಕಳುಹಿಸಿದ್ದಾರೆ. ಆದರೆ ಕೇವಲ...