Home namma chikmagalur chikamagalur ಕಡೂರಿನಲ್ಲಿ ಕಾರು–ಬೈಕ್ ಡಿಕ್ಕಿಯಲ್ಲಿ ಯುವಕ ಸಾವು
chikamagalurHomeLatest Newsnamma chikmagalur

ಕಡೂರಿನಲ್ಲಿ ಕಾರು–ಬೈಕ್ ಡಿಕ್ಕಿಯಲ್ಲಿ ಯುವಕ ಸಾವು

Share
Share

ಕಡೂರು: ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಯುವಕ ಮೃತಪಟ್ಟಿದ್ದು, ಹಿಂಬದಿ ಸವಾರ ಗಾಯಗೊಂಡಿರುವ ಘಟನೆ ಯಗಟಿ ಪೊಲೀಸ್ ಠಾಣಾ ವ್ಯಾಪ್ತಿಯ ಮಲ್ಲಾಪುರ ಗ್ರಾಮದ ವೇದಾವತಿ ನದಿ ಸೇತುವೆ ಬಳಿಯ ತಿರುವಿನಲ್ಲಿ ನ.10ರಂದು ನಡೆದಿದೆ.

ಹಾಸನದ ಮುಜಾಮಿಲ್ ಷರೀಫ್ (ವಯಸ್ಸು 19) ಮೃತಪಟ್ಟ ಯುವಕ. ಇರ್ಫಾನ್ ಗಾಯಗೊಂಡಿದ್ದು, ಕಡೂರು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಹಾಸನಕ್ಕೆ ಕರೆದೊಯ್ಯಲಾಗಿದೆ.

ಹಾಸನದಿಂದ ಚಿತ್ರದುರ್ಗಕ್ಕೆ ಸಂಬಂಧಿಕರ ಮದುವೆಗೆ ಎಕ್ಸ್‌ಪಲ್ಸ್ ಬೈಕ್‌ನಲ್ಲಿ ತೆರಳುತ್ತಿದ್ದಾಗ, ಚೌಳಹಿರಿಯೂರು ಕಡೆಯಿಂದ ಬಂದ ಕಾರು ವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಇಬ್ಬರೂ ರಸ್ತೆಗೆ ಬಿದ್ದಿದ್ದು, ತೀವ್ರವಾಗಿ ಗಾಯಗೊಂಡ ಮುಜಾಮಿಲ್ ಅವರನ್ನು ಕಡೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.

ಈ ಸಂಬಂಧ ಕಾರು ಚಾಲಕ ಅನಿಲ್ ಮೈಸೂರು ವಿರುದ್ಧ ಯಗಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Youth dies in car-bike collision in Kadur

Share

Leave a comment

Leave a Reply

Your email address will not be published. Required fields are marked *

Don't Miss

ಬೈಕ್‌ನಿಂದ ಬಿದ್ದು ಗಾಯವಾಗಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಸಾವು

ಚಿಕ್ಕಮಗಳೂರು: ರಸ್ತೆಗೆ ಏಕಾಏಕಿ ಹಸು ಅಡ್ಡ ಬಂದ ಪರಿಣಾಮ ಬೈಕ್ ನಿಯಂತ್ರಣ ತಪ್ಪಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಸೋಮಪ್ಪ (೫೮) ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ತರೀಕೆರೆ ತಾಲ್ಲೂಕಿನ ಕುಂಟಿನಮಡು ಗ್ರಾಮದ ಬಳಿ...

ಕಂಪೌಂಡ್ ಸ್ಲ್ಯಾಬ್‌ಗಳ ವಾಹನ ಪಲ್ಟಿ: ಕಾರ್ಮಿಕ ಸಾವು

ಚಿಕ್ಕಮಗಳೂರು: ಸಿಮೆಂಟ್ ಬೆಂಚ್ ಹಾಗೂ ಕಂಪೌಂಡ್ ಸ್ಲ್ಯಾಬ್‌ಗಳನ್ನು ಸಾಗಿಸುತ್ತಿದ್ದ ಮಹೇಂದ್ರ ಜಿತೋ ವಾಹನದ ಹಿಂಬದಿಯ ಟೈರ್ ಸ್ಫೋಟಗೊಂಡು ಸಂಭವಿಸಿದ ಅಪಘಾತದಲ್ಲಿ ಓರ್ವ ಕಾರ್ಮಿಕ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ಬೀರೂರು ಸಮೀಪದ ಚಟ್ನಹಳ್ಳಿ...

Related Articles

ಕೊಪ್ಪ ತಾಲ್ಲೂಕಿನಲ್ಲಿ ಕಾಡುಕೋಣಗಳ ಉಪಟಳ

ಕೊಪ್ಪ: ಕಾಡುಕೋಣಗಳ ಉಪಟಳ ದಿನೇ ದಿನೇ ಮಿತಿ ಮೀರುತ್ತಿದ್ದು, ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವಲಸೆ ಕಾರ್ಮಿಕರ...

ಕೆಂಪುಬಸ್ ಬಲೂ ಗ್ಯಾರಂಟಿ ಡೇಂಜರ್ ? ಡೇಂಜರ್ ? ಕೆಟ್ಟು ನಿಲ್ಲುವ ಬಸ್ಸುಗಳು

ಚಿಕ್ಕಮಗಳೂರು:  ಚಿಕ್ಕಮಗಳೂರು ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಬಲೂ ಡೇಂಜರ್ ಯಾವಾಗ ಎಲ್ಲಿ ಕೆಟ್ಟು ನಿಲ್ಲುತ್ತವೆ ಎಂದು ಪ್ರಯಾಣಿಕರು...

ದೀಪಾವಳಿಗೆ ಕಾಡುಪ್ರಾಣಿಗಳ ಬೇಟೆ: ಓರ್ವನ ಬಂಧನ; ಮೂವರು ಪರಾರಿ

ಮೂಡಿಗೆರೆ: ದೀಪಾವಳಿ ಹಬ್ಬದ ಸಂಭ್ರಮಕ್ಕಾಗಿ ಅಕ್ರಮವಾಗಿ ಕಾಡುಪ್ರಾಣಿಗಳನ್ನು ಬೇಟೆಯಾಡಿ ಮಾಂಸ ಹಂಚಿಕೆ ಮಾಡುತ್ತಿದ್ದ ತಂಡವೊಂದರ ವಿರುದ್ಧ...

ಇಂದು ನವೀಕರಣಗೊಂಡ ರೈಲು ನಿಲ್ದಾಣದ ಲೋಕಾರ್ಪಣೆ

ಚಿಕ್ಕಮಗಳೂರು: ರೈಲು ನಿಲ್ದಾಣದ ನವೀಕರಣ ಕಾಮಗಾರಿಗಳು ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಪ್ರಧಾನಿ...