ಅಜ್ಜಂಪುರ: ಎರಡು ಲಾರಿಗಳ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತಮಿಳುನಾಡು ಮೂಲದ 59 ವರ್ಷದ ಚಾಲಕರೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಅಜ್ಜಂಪುರ-ಬುಕ್ಕಾಂಬೂದಿ ರಸ್ತೆಯ ಅತ್ತಿಮೊಗ್ಗೆ ಗೇಟ್ ಬಳಿ ಶುಕ್ರವಾರ ಬೆಳಗಿನ ಜಾವ ನಡೆದಿದೆ.
ತಮಿಳುನಾಡು ಮೂಲದ ನಾಗರಾಜ ಎ. (59) ಮೃತಪಟ್ಟವರು.
ಅಕ್ಟೋಬರ್ 30ರಂದು ಬೆಳಗಿನ ಜಾವ ಸುಮಾರು 5 ಗಂಟೆಗೆ ದಾವಣಗೆರೆ ಕಡೆಯಿಂದ ಅಜ್ಜಂಪುರ ಕಡೆಗೆ ಟಿಎನ್-33-ಎವಿ-2832 ನೋಂದಣಿ ಸಂಖ್ಯೆಯ ಲಾರಿ ತೆರಳುತ್ತಿತ್ತು. ಈ ಸಂದರ್ಭದಲ್ಲಿ ಎದುರಿನಿಂದ ಬಂದ ಎಂಎಚ್-43-ಸಿಕೆ-8607 ನೋಂದಣಿ ಸಂಖ್ಯೆಯ ಕಂಟೇನರ್ ಲಾರಿಯನ್ನು ಅದರ ಚಾಲಕ ಭಾರತ್ ಆವಟಿ (ಮಹಾರಾಷ್ಟ್ರ ಮೂಲದವರು) ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಲಾರಿಗೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ.
ಡಿಕ್ಕಿಯ ತೀವ್ರತೆಗೆ ಲಾರಿಯಲ್ಲಿದ್ದ ಚಾಲಕ ನಾಗರಾಜ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದಿಂದ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಾರ್ವಜನಿಕರ ನೆರವಿನಿಂದ ಮೃತದೇಹವನ್ನು ಅಜ್ಜಂಪುರ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಮೃತ ನಾಗರಾಜ ಅವರ ಕುಟುಂಬದವರಿಗೆ ಅಪಘಾತದ ವಿಷಯ ತಿಳಿದ ಬಳಿಕ ಸಂಬಂಧಿಕ ಗೋವಿಂದರಾಜು ಅವರು ಅಜ್ಜಂಪುರ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ.
ಈ ಸಂಬಂಧ ಕಂಟೇನರ್ ಲಾರಿ ಚಾಲಕ ಭಾರತ್ ಆವಟಿ ವಿರುದ್ಧ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 283/2026 ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
Driver dies on the spot in collision between two lorries
Leave a comment