Home namma chikmagalur chikamagalur ಅಜ್ಜಂಪುರದಲ್ಲಿ ಬೈಕ್‌ನಿಂದ ಬಿದ್ದು ಮಹಿಳೆ ಸಾವು 
chikamagalurHomeLatest Newsnamma chikmagalur

ಅಜ್ಜಂಪುರದಲ್ಲಿ ಬೈಕ್‌ನಿಂದ ಬಿದ್ದು ಮಹಿಳೆ ಸಾವು 

Share
Share

ಅಜ್ಜಂಪುರ: ಪತಿಯ ಬೈಕ್‌ನಲ್ಲಿ ಹಿಂಬದಿ ಕುಳಿತು ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಆಯತಪ್ಪಿ ರಸ್ತೆಗೆ ಬಿದ್ದು ಮೃತಪಟ್ಟಿರುವ ಘಟನೆ ಅಜ್ಜಂಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗೌರಾಪುರ–ಕಾಟಿಗನೆರೆ ನಡುವಿನ ರಸ್ತೆಯಲ್ಲಿ ಅ.20ರಂದು ನಡೆದಿದೆ.

ಮೃತರನ್ನು ಅಮೃತಾಪುರ ಗ್ರಾಮದ ಎಚ್.ಆರ್. ಈರಮ್ಮ (50) ಎಂದು ಗುರುತಿಸಲಾಗಿದೆ.

ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ಅ.20ರಂದು ಈರಮ್ಮ ಅವರು ತಮ್ಮ ತವರು ಮನೆಯಾದ ಚೌಳಹಿರಿಯೂರಿಗೆ ತೆರಳಲು ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ಪುತ್ರ ಎ.ಎಂ. ಪ್ರದೀಪ್ ಅವರು ಸ್ನೇಹಿತನಿಗೆ ಸೇರಿದ ಕೆಎ-66-ಹೆಚ್-2938 ಸಂಖ್ಯೆಯ ಬೈಕ್‌ ಅನ್ನು ತಂದೆ ಎ.ಪಿ. ಮುರುಗೇಂದ್ರಯ್ಯ ಅವರಿಗೆ ನೀಡಿದ್ದರು. ಬಳಿಕ ಬೆಳಿಗ್ಗೆ ಸುಮಾರು 11 ಗಂಟೆಗೆ ಮುರುಗೇಂದ್ರಯ್ಯ ಅವರು ಪತ್ನಿ ಈರಮ್ಮ ಅವರನ್ನು ಹಿಂಬದಿ ಕೂರಿಸಿಕೊಂಡು ಅಮೃತಾಪುರದಿಂದ ಪ್ರಯಾಣ ಆರಂಭಿಸಿದ್ದರು.

ಮಧ್ಯಾಹ್ನ ಸುಮಾರು 12 ಗಂಟೆಯ ವೇಳೆಗೆ ಗೌರಾಪುರ–ಕಾಟಿಗನೆರೆ ನಡುವಿನ ರಸ್ತೆಯಲ್ಲಿ ಬೈಕ್ ಚಲಾಯಿಸುತ್ತಿದ್ದಾಗ, ಹಿಂಬದಿಯಲ್ಲಿ ಕುಳಿತಿದ್ದ ಈರಮ್ಮ ಅವರು ರಸ್ತೆಗೆ ಬಿದ್ದಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ಅವರ ತಲೆ ಹಾಗೂ ಕಿವಿಗೆ ಗಾಯಗಳಾಗಿದ್ದು, ತಕ್ಷಣ ಆಂಬುಲೆನ್ಸ್ ಮೂಲಕ ಅಜ್ಜಂಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ವೈದ್ಯರು ಅವರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ವಿಷಯ ತಿಳಿದು ಆಸ್ಪತ್ರೆಗೆ ಬಂದ ಪುತ್ರ ಪ್ರದೀಪ್ ಅವರು ತಾಯಿಯ ಎಡ ಕಿವಿಯಿಂದ ರಕ್ತಸ್ರಾವವಾಗಿರುವುದನ್ನು ಗಮನಿಸಿದ್ದಾರೆ. ತಂದೆಯ ವಿಚಾರಣೆಯಲ್ಲಿ, ಬೈಕ್‌ ಅನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಪತ್ನಿ ಕೆಳಗೆ ಬಿದ್ದಿದ್ದಾರೆ ಎಂದು ತಿಳಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಬಂಧ ಪುತ್ರ ಎ.ಎಂ. ಪ್ರದೀಪ್ ಅವರು ಅಜ್ಜಂಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಠಾಣೆಯಲ್ಲಿ ಮೊ.ನಂ. 269/2026ರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Woman dies after falling from bike in Ajjampura

Share

Leave a comment

Leave a Reply

Your email address will not be published. Required fields are marked *

Don't Miss

ಬರ ನಿರ್ವಹಣೆಯಲ್ಲಿ ಸರ್ಕಾರ ವಿಫಲ: ಎಕರೆಗೆ ₹50 ಸಾವಿರ ಪರಿಹಾರಕ್ಕೆ ರೈತ ಸಂಘ ಆಗ್ರಹ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಮಲೆನಾಡು, ಅರೆಮಲೆನಾಡು ಹಾಗೂ ಬಯಲುಸೀಮೆಯ ಬಹುತೇಕ ಪ್ರದೇಶಗಳು ಬರ ಪರಿಸ್ಥಿತಿ ಎದುರಿಸುತ್ತಿದ್ದು, ರಾಜ್ಯ ಸರ್ಕಾರ ಬರ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಕರ್ನಾಟಕ ರಾಜ್ಯ ರೈತ...

ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹಿಸಿ ಸಿಪಿಐ (ಎಂಎಲ್) ಪ್ರತಿಭಟನೆ

ಚಿಕ್ಕಮಗಳೂರು: ನಗರದ ಅಜಾದ್ ಪಾರ್ಕಿನಲ್ಲಿ ಬುಧವಾರ ಸಿಪಿಐ (ಎಂಎಲ್) ರೆಡ್ ಸ್ಟಾರ್ ಜಿಲ್ಲಾ ಸಂಘಟನೆಯು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸಿ, ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಹಾಗೂ...

Related Articles

ಆರದವಳ್ಳಿ ಗ್ರಾಮದಲ್ಲಿ ವಿಜಯದಶಮಿ ಸಂಪ್ರದಾಯಿಕ ಆಚರಣೆ

ಚಿಕ್ಕಮಗಳೂರು: ದಸರಾ ನವರಾತ್ರಿ ನಾಡಹಬ್ಬದ ಅಂಗವಾಗಿ ತಾಲ್ಲೂಕಿನ ಅಂಬಳೆ ಹೋಬಳಿಯ ಆರದವಳ್ಳಿ ಗ್ರಾಮದಲ್ಲಿ ನೂ ರಾರು...

ಬೀಕನಹಳ್ಳಿ ಗ್ರಾಮಕ್ಕೆ ನಗರ ವಿದ್ಯುತ್ ಸಂಪರ್ಕ

ಚಿಕ್ಕಮಗಳೂರು: ನಗರದ ಸಮೀಪದ ದೊಡ್ಡ ಗ್ರಾಮಗಳಲ್ಲಿ ಒಂದಾದ ಬೀಕನಹಳ್ಳಿಯಲ್ಲಿ ಗ್ರಾಮಾಂತರ ವಿದ್ಯುತ್ ವ್ಯವಸ್ಥೆಯನ್ನು ನಗರ ವಿದ್ಯುತ್...

ದೇವಿರಮ್ಮನವರ ದೀಪಾವಳಿ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ

ಚಿಕ್ಕಮಗಳೂರು: ಕಾಫಿನಾಡಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಬಿಳ್ಳಿಗಾರ್ ದೇವಿರಮ್ಮನವರ ದೀಪಾವಳಿ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆಗಳು...

ದೇಶದ ಶಾಂತಿ, ಭದ್ರತೆಗಾಗಿ ಪೊಲೀಸರ ತ್ಯಾಗ ಸ್ಮರಣೀಯ

ಚಿಕ್ಕಮಗಳೂರು: ಖಾಕಿ ಸಮವಸ್ತ್ರವು ಜನರ ವಿಶ್ವಾಸದ ಸಂಕೇತವಾಗಿದ್ದು, ದೇಶದ ಗಡಿ ರಕ್ಷಣೆ, ಆಂತರಿಕ ಭದ್ರತೆ ಹಾಗೂ...