ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ವತಿಯಿಂದ ಜಿಲ್ಲೆಯ 25 ವರ್ಷದೊಳಗಿನ ಪುರುಷರು ಹಾಗೂ 14 ವರ್ಷದೊಳಗಿನ ಬಾಲಕಿಯರ ಕಬಡ್ಡಿ ತಂಡಗಳ ಆಯ್ಕೆ ಪ್ರಕ್ರಿಯೆಯನ್ನು ಅ.18ರ ಭಾನುವಾರ ಬೆಳಿಗ್ಗೆ 11.30ಕ್ಕೆ ನಗರದ ಜಿಲ್ಲಾ ಆಟದ ಮೈದಾನದಲ್ಲಿ ಆಯೋಜಿಸಲಾಗಿದೆ.
ನ.13ರಿಂದ 15ರವರೆಗೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆಯಲಿರುವ ಸಿ ಜೋನ್ ಕಬಡ್ಡಿ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸುವ ಜಿಲ್ಲೆಯ ಪುರುಷರ ತಂಡ ಹಾಗೂ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಒಲಿಂಪಿಕ್ ಅಸೋಸಿಯೇಷನ್ ವತಿಯಿಂದ ನಡೆಯಲಿರುವ ಅಂಡರ್-14 ಬಾಲಕಿಯರ ಕಬಡ್ಡಿ ಚಾಂಪಿಯನ್ಶಿಪ್ಗಾಗಿ ಆಟಗಾರ್ತಿಯರ ಆಯ್ಕೆ ನಡೆಯಲಿದೆ.
ಅರ್ಹತಾ ಮಾನದಂಡಗಳು
- 25 ವರ್ಷದೊಳಗಿನ ಪುರುಷರ ದೇಹದ ತೂಕ 85 ಕೆ.ಜಿ. ಒಳಗಿರಬೇಕು. ಜನವರಿ 1, 2001ರ ನಂತರ ಜನಿಸಿರಬೇಕು.
- 14 ವರ್ಷದೊಳಗಿನ ಬಾಲಕಿಯರ ದೇಹದ ತೂಕ 55 ಕೆ.ಜಿ. ಒಳಗಿರಬೇಕು. ನವೆಂಬರ್ 18, 2012ರ ನಂತರ ಜನಿಸಿರಬೇಕು.
- ಆಧಾರ್ ಕಾರ್ಡ್, ಜನನ ಪ್ರಮಾಣಪತ್ರ ಹಾಗೂ ಎಸ್ಎಸ್ಎಲ್ಸಿ ಅಂಕಪಟ್ಟಿ ಅಥವಾ ಪಾಸ್ಪೋರ್ಟ್ ತರಬೇಕು.
- ಆಯ್ಕೆಯಲ್ಲಿ ಭಾಗವಹಿಸುವ ಆಟಗಾರರು ತಮ್ಮ ಕ್ಲಬ್ ಮೂಲಕ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ನಲ್ಲಿ ನೋಂದಣಿಯಾಗಿರಬೇಕು.
- 14 ವರ್ಷದೊಳಗಿನ ಬಾಲಕಿಯರು ಬ್ಯಾಂಕ್ ಪಾಸ್ಬುಕ್ ತರಬೇಕು.
ಜಿಲ್ಲೆಯ ಅರ್ಹ ಕಬಡ್ಡಿ ಆಟಗಾರರು ಹಾಗೂ ಆಟಗಾರ್ತಿಯರು ನಿಗದಿತ ಸಮಯಕ್ಕೆ ಅಗತ್ಯ ದಾಖಲೆಗಳೊಂದಿಗೆ ಹಾಜರಾಗುವಂತೆ ಅಸೋಸಿಯೇಷನ್ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
- ಮಂಜು ರಾಜ್ ಅರಸ್: 6360958827
- ದಿನೇಶ್ ಎಂ.ಈ.: 9449557201
- ಧರ್ಮೇಶ್ ಎಂ.ಡಿ.: 9035924959
Selection process for Kabaddi players on Oct 18
Leave a comment