Home Crime News ಆಸ್ಟ್ರೇಲಿಯಾದಲ್ಲಿ ವರದಕ್ಷಿಣೆ ಕಿರುಕುಳ ಆರೋಪ
Crime NewsHomeLatest Newsnamma chikmagalurTarikere

ಆಸ್ಟ್ರೇಲಿಯಾದಲ್ಲಿ ವರದಕ್ಷಿಣೆ ಕಿರುಕುಳ ಆರೋಪ

Share
Share

ತರೀಕೆರೆ: ಆಸ್ಟ್ರೇಲಿಯಾದಲ್ಲಿ ವಾಸವಿದ್ದಾಗ ಹೆಚ್ಚುವರಿ ವರದಕ್ಷಿಣೆಗಾಗಿ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿ, ತನ್ನ ಸಂಬಳವನ್ನೂ ಬಲವಂತವಾಗಿ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ತರೀಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಅಜ್ಜಂಪುರ ತಾಲ್ಲೂಕಿನ ಹೆಬ್ಬೂರು ಗ್ರಾಮದ ಅಭಿಷೇಕ್ ಎಚ್.ಪಿ. ಅವರನ್ನು ವಿವಾಹವಾಗಿದ್ದ ಮಹಿಳೆ, ಪತಿ ಅಭಿಷೇಕ್, ಮಾವ ಪುಟ್ಟರುದ್ರಪ್ಪ, ಅತ್ತೆ ಪಂಕಜ ಹಾಗೂ ಮೈದುನ ವಿಕ್ರಮ್ ವಿರುದ್ಧ ಕೌಟುಂಬಿಕ ದೌರ್ಜನ್ಯ, ಕ್ರೌರ್ಯ ಮತ್ತು ವರದಕ್ಷಿಣೆ ಕಿರುಕುಳದ ಆರೋಪ ಮಾಡಿದ್ದಾರೆ.

ದೂರಿನ ಪ್ರಕಾರ, 2025ರ ಏಪ್ರಿಲ್‌ನಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹ ನಡೆದಿದ್ದು, ಮದುವೆಗೆ ಸುಮಾರು ₹75 ಲಕ್ಷ ಖರ್ಚು ಮಾಡಲಾಗಿತ್ತು. ಮದುವೆಯ ನಂತರ ಆಸ್ಟ್ರೇಲಿಯಾಕ್ಕೆ ತೆರಳಿದ ಬಳಿಕ ಪತಿ ಹೆಚ್ಚುವರಿ ಹಣ ತರುವಂತೆ ಒತ್ತಡ ಹೇರುತ್ತಿದ್ದರು. ಮಹಿಳೆಯ ಸಂಬಳವನ್ನು ಬಲವಂತವಾಗಿ ಪಡೆದುಕೊಳ್ಳುವುದರ ಜತೆಗೆ ಹಲವು ಬಾರಿ ಹಲ್ಲೆ ನಡೆಸಿ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಮಹಿಳೆಯ ತಂದೆ ವಿವಿಧ ದಿನಗಳಲ್ಲಿ ಹಣ ವರ್ಗಾಯಿಸಿದ್ದರೂ, ಮತ್ತೆ ಹಣಕ್ಕಾಗಿ ಕಿರುಕುಳ ಮುಂದುವರಿದಿತ್ತು. ಪತಿ ದಾಂಪತ್ಯ ಜೀವನದಲ್ಲಿ ನಿರ್ಲಕ್ಷ್ಯ ತೋರಿದ್ದಲ್ಲದೆ, ಭಾರತಕ್ಕೆ ಕರೆತಂದು ತವರು ಮನೆಯಲ್ಲಿ ಬಿಟ್ಟು ಹೋಗಿದ್ದಾರೆ. ಬಳಿಕ ಸಂಬಂಧ ಮುಂದುವರಿಸಲು ಇಷ್ಟವಿಲ್ಲವೆಂದು ತಿಳಿಸಿ ಸಂಪರ್ಕ ಕಡಿತಗೊಳಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಈ ಸಂಬಂಧ ಅ.13ರಂದು ತರೀಕೆರೆ ಪೊಲೀಸ್ ಠಾಣೆಗೆ ಲಿಖಿತ ದೂರು ಸಲ್ಲಿಸಲಾಗಿದೆ. ಪ್ರಕರಣದ ಮುಂದಿನ ಪೊಲೀಸ್ ಕ್ರಮ ಹಾಗೂ ತನಿಖೆಯ ವಿವರಗಳು ಲಭ್ಯವಾಗಿಲ್ಲ.

Allegations of dowry harassment in Australia

Share

Leave a comment

Leave a Reply

Your email address will not be published. Required fields are marked *

Don't Miss

ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ

ಚಿಕ್ಕಮಗಳೂರು: ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ ೧೫ ಸಾವಿರ ಮಾಸಿಕ ಗೌರವಧನ ನೀಡುವುದು ಸೇರಿದಂತೆ ವಿವಿಧ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ  ನೇತೃತ್ವದಲ್ಲಿ ಶುಕ್ರವಾರ...

ಜಿಲ್ಲಾಧಿಕಾರಿಯಿಂದ ಮಳಲೂರು ಏತನೀರಾವರಿ ಸ್ಥಳ ಪರಿಶೀಲನೆ

ಚಿಕ್ಕಮಗಳೂರು:  ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ತಾಲೂಕಿನ ಮಳಲೂರು ಏತನೀರಾವರಿ ಯೋಜನೆಯ ಕಾಮಗಾರಿಗಳನ್ನು ಸಮಗ್ರವಾಗಿ ಪೂರ್ಣಗೊಳಿಸಲು ಕಾವೇರಿ ನೀರಾವರಿ ನಿಗಮದಿಂದ (ಸಿಎನ್‌ಎನ್‌ಎಲ್) ರೂ.೨೧.೫ ಕೋಟಿ ವೆಚ್ಚದ ನೂತನ ವಿಸ್ತೃತ ಯೋಜನಾ ವರದಿ...

Related Articles

ಅ.18ರಂದು ಕಬಡ್ಡಿ ಆಟಗಾರರ ಆಯ್ಕೆ ಪ್ರಕ್ರಿಯೆ

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ವತಿಯಿಂದ ಜಿಲ್ಲೆಯ 25 ವರ್ಷದೊಳಗಿನ ಪುರುಷರು ಹಾಗೂ...

ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನ ಟಯರ್ ಕಳಚಿ ಬಿತ್ತು!

ಕೊಪ್ಪ: ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನ ಟಯರ್ ಏಕಾಏಕಿ ಕಳಚಿ ಬಿದ್ದ ಪರಿಣಾಮ, ಬಸ್ಸಿನಲ್ಲಿದ್ದ 50ಕ್ಕೂ ಹೆಚ್ಚು...

ಅ.25ರಂದು ಮ್ಯಾರಥಾನ್ – ಸೈಕ್ಲಿಂಗ್ ಕ್ರೀಡಾಕೂಟ

ಚಿಕ್ಕಮಗಳೂರು: ಕಾಫಿನಾಡಿನ ಪ್ರಕೃತಿ ಸೌಂದರ್ಯದ ನಡುವೆ ಓಟ ಮತ್ತು ಸೈಕ್ಲಿಂಗ್ ಕ್ರೀಡೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಚಿಕ್ಕಮಗಳೂರು...

ಸ್ಕೂಟರ್‌ಗಳು ಏಕಾಏಕಿ ಹೊತ್ತಿ ಉರಿದ ಎಲೆಕ್ನಿಕ್ ಸ್ಕೂಟರ್‌

ಚಿಕ್ಕಮಗಳೂರು: ನಿಲ್ಲಿಸಿದ್ದ ಜಾಗದಲ್ಲೇ ಎರಡು ಎಲೆಕ್ನಿಕ್ ಸ್ಕೂಟರ್‌ಗಳು ಏಕಾಏಕಿ ಹೊತ್ತಿ ಉರಿದು ಸಂಪೂರ್ಣ ಭಸ್ಮವಾಗಿರುವ ಆಘಾತಕಾರಿ...