Home namma chikmagalur chikamagalur ತುಂಗಾ ನದಿಯಲ್ಲಿ ಮುಳುಗಿ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು
chikamagalurCrime NewsHomeLatest Newsnamma chikmagalur

ತುಂಗಾ ನದಿಯಲ್ಲಿ ಮುಳುಗಿ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು

Share
Share

ಶೃಂಗೇರಿ, ಅ. 11: ಪೋಷಕರೊಂದಿಗೆ ನವರಾತ್ರಿ ಪೂಜೆಗೆ ಶೃಂಗೇರಿಗೆ ಬಂದಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ತುಂಗಾ ನದಿಯಲ್ಲಿ ಮುಳುಗಿ ಮೃತಪಟ್ಟಿರುವ ದುರಂತ ಘಟನೆ ಭಾನುವಾರ ನಡೆದಿದೆ.

ಕೋಲಾರ ಜಿಲ್ಲೆಯ ಮಾಲೂರು ಮೂಲದ ರಾಘವೇಂದ್ರ ಪೂಜಾರಿ (20) ಮೃತ ಯುವಕ. ಶೃಂಗೇರಿಯ ತುಂಗಾ ನದಿಯ ಪಾರ್ಕಿಂಗ್ ಲಾಟ್ ಸಮೀಪ ಈ ಘಟನೆ ಸಂಭವಿಸಿದೆ.

ಪೋಷಕರೊಂದಿಗೆ ಶೃಂಗೇರಿಗೆ ಬಂದಿದ್ದ ರಾಘವೇಂದ್ರ ಪೂಜೆಯ ಬಳಿಕ ತುಂಗಾ ನದಿಯ ಬಳಿ ತೆರಳಿದ್ದ ಎನ್ನಲಾಗಿದೆ. ನದಿಯಿಂದ ವಾಪಸ್ ಬಂದಿದ್ದ ಯುವಕ ಮತ್ತೆ ನೀರಿಗಿಳಿದಾಗ ಮುಳುಗಿದ್ದಾನೆ. ಈ ವೇಳೆ ನದಿಯಲ್ಲಿದ್ದ ಮಹಿಳೆಯೊಬ್ಬರು ಯುವಕ ಮುಳುಗುತ್ತಿರುವುದನ್ನು ಗಮನಿಸಿ ಕೂಗಿಕೊಂಡಿದ್ದಾರೆ. ಆದರೆ, ರಕ್ಷಿಸುವಷ್ಟರಲ್ಲಿ ಯುವಕ ನೀರಿನಲ್ಲಿ ಮುಳುಗಿದ್ದಾನೆ ಎಂದು ತಿಳಿದುಬಂದಿದೆ.

ಮೃತದೇಹಕ್ಕಾಗಿ ಶೋಧ ಕಾರ್ಯ

ಘಟನೆ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಯುವಕನಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. ನದಿಯ ಆಳದಲ್ಲಿ ಮೃತದೇಹ ಪತ್ತೆಹಚ್ಚಲು ಮಲ್ಪೆಯ ಮುಳುಗು ತಜ್ಞ ಈಶ್ವರ್ ಅವರ ತಂಡವನ್ನೂ ಕರೆಸಲಾಗಿದೆ.

ಅಪಾಯಕಾರಿ ಸ್ಥಳದಲ್ಲಿ ಸುರಕ್ಷತಾ ಕ್ರಮಕ್ಕೆ ಆಗ್ರಹ

ತುಂಗಾ ನದಿಯ ಇದೇ ಪ್ರದೇಶದಲ್ಲಿ ಈ ಹಿಂದೆಯೂ ಹಲವರು ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಹೀಗಿದ್ದರೂ, ಸೂಕ್ತ ಸುರಕ್ಷತಾ ವ್ಯವಸ್ಥೆಗಳ ಕೊರತೆಯ ಬಗ್ಗೆ ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ.

ಅಪಾಯಕಾರಿ ಸ್ಥಳಗಳಲ್ಲಿ ಎಚ್ಚರಿಕೆ ಫಲಕಗಳನ್ನು ಅಳವಡಿಸುವುದರ ಜೊತೆಗೆ ಅಗತ್ಯವಿರುವ ಕಡೆ ತಡೆಬೇಲಿ ನಿರ್ಮಿಸಿ, ಪ್ರವಾಸಿಗರು ನದಿಯ ಅಪಾಯಕಾರಿ ಭಾಗಗಳಿಗೆ ತೆರಳದಂತೆ ತಾಲೂಕು ಆಡಳಿತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಈ ಸಂಬಂಧ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Engineering student drowns in Tunga River.

Share

Leave a comment

Leave a Reply

Your email address will not be published. Required fields are marked *

Don't Miss

ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ನಿವಾರಣೆಗೆ ಸೂಕ್ತ ಕ್ರಮ

ಚಿಕ್ಕಮಗಳೂರು: ವಿದ್ಯುತ್ ಪೂರೈಕೆಯಲ್ಲಿ ಇತ್ತೀಚೆಗೆ ಉಂಟಾದ ತಾತ್ಕಾಲಿಕ ವ್ಯತ್ಯಯವನ್ನು ದೊಡ್ಡ ಸಮಸ್ಯೆಯಾಗಿ ಬಿಂಬಿಸುವ ಅಗತ್ಯವಿಲ್ಲ. ಮುಂದಿನ ಬೇಸಿಗೆಯಲ್ಲಿ ಯಾವುದೇ ತೊಂದರೆ ಉಂಟಾಗದಂತೆ ಈಗಾಗಲೇ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ...

ಕೊಳವೆಬಾವಿ ಕೊರೆಯಲು ಬೇಕಾಬಿಟ್ಟಿ ದರ ನಿಗದಿ ಮಾಡಲು ಅವಕಾಶ ನೀಡಬಾರದು

ಚಿಕ್ಕಮಗಳೂರು: ಬರಗಾಲದ ಸಂದರ್ಭದಲ್ಲಿ ಕೊಳವೆಬಾವಿ ಕೊರೆಯಲು ಬೇಕಾಬಿಟ್ಟಿ ದರ ನಿಗದಿ ಮಾಡಲು ಅವಕಾಶ ನೀಡಬಾರದು. ನಿಯಮಾವಳಿ ರೂಪಿಸಿ ನಿಯಂತ್ರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು....

Related Articles

ಬರಗಾಲದಲ್ಲಿ ಅಧಿಕ ಮಾಸ ! ಶಾಸಕರುಗಳ ಮೂಗಿನ ನೇರಕ್ಕೆ.ಮೀಸಲಾತಿ ?

ಹೊಸ ಮುಖಗಳಿಗೆ ಛಾನ್ನ್.!! ಚಿಕ್ಕಮಗಳೂರು; ಜಿಲ್ಲಾದ್ಯಂತ ಬರದಿಂದ ಜನತೆ ತತ್ತರಿಸಿದ್ದಾರೆ.ಮಲೆನಾಡು ಮತ್ತು ಬಯಲು ನಾಡು ಎಂಬುದು...

ಜಿ.ಪಂ.ತಾ.ಪಂ.ಕ್ಷೇತ್ರಗಳ ಮೀಸಲಾತಿ ನಿಗದಿಯಲ್ಲಿಯೂ ರಾಜಕೀಯ ಹಿತಾಸಕ್ತಿಗಳಿಗೆ ಆದ್ಯತೆ

ಕಡೂರು: ರಾಜ್ಯದಲ್ಲಿ ರೈತರು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಬದಲು, ಆಡಳಿತಾರೂಢ...

ಬೀಕನಹಳ್ಳಿಯಲ್ಲಿ ಮಹಿಳೆಯ ತಾಳಿಸರ ಕಿತ್ತು ಪರಾರಿ

ಚಿಕ್ಕಮಗಳೂರು:  ನಗರದ ಹೊರವಲಯದ ಬೀಕನಹಳ್ಳಿ ಕೆರೆ ಏರಿಯ ಮೇಲೆ ದನಗಳನ್ನು ಹೊಡೆದುಕೊಂಡು ಬರಲು ತೆರಳಿದ್ದ ಮಹಿಳೆಯೊಬ್ಬರ...

ತರೀಕೆರೆಯಲ್ಲಿ 20 ಕ್ವಿಂಟಾಲ್ ಹಸಿ ಅಡಿಕೆ ಕಳವು

ತರೀಕೆರೆ: ತಾಲೂಕಿನ ದುಗ್ಗಲಾಪುರ ಗ್ರಾಮದ ಅಡಿಕೆ ತೋಟವೊಂದರಿಂದ ಸುಮಾರು 20 ಕ್ವಿಂಟಾಲ್ ಹಸಿ ಅಡಿಕೆಯನ್ನು ಕಳವು...