Home namma chikmagalur chikamagalur ಅ.8ರಂದು ಚಿಕ್ಕಮಗಳೂರಿನಲ್ಲಿ ದಲಿತ ಸಂಘರ್ಷ ಸಮಿತಿಯ ಮಹಿಳಾ ಮಹಾಸಭೆ
chikamagalurHomeLatest Newsnamma chikmagalur

ಅ.8ರಂದು ಚಿಕ್ಕಮಗಳೂರಿನಲ್ಲಿ ದಲಿತ ಸಂಘರ್ಷ ಸಮಿತಿಯ ಮಹಿಳಾ ಮಹಾಸಭೆ

Share
Oplus_16908288
Share

ಚಿಕ್ಕಮಗಳೂರು:  ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ರಾಜ್ಯ ಸಮಿತಿ ಹಾಗೂ ಚಿಕ್ಕಮಗಳೂರು ಜಿಲ್ಲಾ ಸಮಿತಿ ವತಿಯಿಂದ ಜಿಲ್ಲೆಯ ವಿವಿಧ ತಾಲ್ಲೂಕುಗಳ ನೂತನ ಪದಾಧಿಕಾರಿಗಳ ಅಭಿನಂದನಾ ಸಮಾರಂಭ, ರಾಜ್ಯ ಮಹಿಳಾ ಸರ್ವ ಸದಸ್ಯರ ಸಭೆ ಹಾಗೂ ಮಹಿಳಾ ಮಹಾಸಭೆಯನ್ನು ಅ.8ರಂದು ಚಿಕ್ಕಮಗಳೂರಿನಲ್ಲಿ ಆಯೋಜಿಸಲಾಗಿದೆ ಎಂದು ರಾಜ್ಯ ಸಮಿತಿ ಸದಸ್ಯ ಮರ್ಲೆ ಅಣ್ಣಯ್ಯ ತಿಳಿಸಿದರು.

ಚಿಕ್ಕಮಗಳೂರು ಪ್ರೆಸ್ ಕ್ಲಬ್‌ನಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.8ರ ಗುರುವಾರ ಬೆಳಗ್ಗೆ 11 ಗಂಟೆಗೆ ನಗರದ ಬಸವನಹಳ್ಳಿ ಶಾಲೆಯ ಮುಂಭಾಗ, ತಾಲ್ಲೂಕು ಕಚೇರಿ ಸಮೀಪದ ಗ್ರ್ಯಾಂಡ್ ಮಹಾರಾಜ್ ಹೋಟೆಲ್‌ನಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.

ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಸಂತೋಷ್ ಲಕ್ಯಾ ಸ್ವಾಗತಿಸಲಿದ್ದು, ಜಿಲ್ಲಾ ಸಂಚಾಲಕ ಮಂಜಯ್ಯ ಬಾಚಿಗನಹಳ್ಳಿ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ರಾಜ್ಯ ಸಮಿತಿ ಸದಸ್ಯೆ ಇಂದಿರಾ ಕೃಷ್ಣಪ್ಪ ಅವರು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಲಿದ್ದು, ರಾಜ್ಯ ಸಮಿತಿ ಸದಸ್ಯ ಮರ್ಲೆ ಅಣ್ಣಯ್ಯ ಪ್ರಾಸ್ತಾವಿಕ ನುಡಿ ಆಡಲಿದ್ದಾರೆ. ಡಾ. ಹರೀಶ್ ನಳಿಕೆ ನಿರೂಪಣೆ ಮಾಡಲಿದ್ದಾರೆ.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಪಿ. ಮಂಜೇಗೌಡ, ಮಾಜಿ ಸಚಿವ ಹಾಗೂ ಅಂಬೇಡ್ಕರ್ ಅಧ್ಯಯನ ಸಂಸ್ಥೆ ಅಧ್ಯಕ್ಷ ಬಿ.ಬಿ. ನಿಂಗಯ್ಯ, ಹಿರಿಯ ಪ್ರಗತಿಪರ ಹೋರಾಟಗಾರ ಎಚ್.ಹೆಚ್. ದೇವರಾಜ್, ರೈತ ಸಂಘದ ಮುಖಂಡ ಗುರುಶಾಂತಪ್ಪ, ಹಿರಿಯ ನಿವೃತ್ತ ನೌಕರ ಹಾಗೂ ಸಮಾಜದ ಮುಖಂಡ ಹರಿಯಪ್ಪ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಮಹಿಳೆಯರ ಹಕ್ಕು–ಹೋರಾಟದ ಕುರಿತು ಚರ್ಚೆ

ಮಧ್ಯಾಹ್ನ 12.30ಕ್ಕೆ ರಾಜ್ಯ ಮಹಿಳಾ ಸರ್ವ ಸದಸ್ಯರ ಸಭೆ ಹಾಗೂ ಮಹಿಳಾ ಮಹಾಸಭೆ ನಡೆಯಲಿದೆ. ರಾಜ್ಯ ಮಹಿಳಾ ಸಂಚಾಲಕಿ ನಿರ್ಮಲಾ ಅಧ್ಯಕ್ಷತೆ ವಹಿಸಲಿದ್ದು, ರಾಜ್ಯ ಸಮಿತಿ ಸದಸ್ಯೆ ಇಂದಿರಾ ಕೃಷ್ಣಪ್ಪ ಉಪಸ್ಥಿತರಿರುವರು.

ನಿವೃತ್ತ ಉಪನ್ಯಾಸಕಿ ಸಾವಿತ್ರಿ ಎಂ.ಬಿ. ಅವರು ‘ಜನಪರ ಚಳುವಳಿಯಲ್ಲಿ ಮಹಿಳೆಯರ ಭಾಗವಹಿಸುವಿಕೆ’ ವಿಷಯ ಕುರಿತು ವಿಚಾರ ಮಂಡಿಸಲಿದ್ದಾರೆ. ಸಿಪಿಐ ಮುಖಂಡೆ ರಾಧಾ ಸುಂದ್ರೇಶ್, ಚಿಕ್ಕಮಗಳೂರು ಜಿಲ್ಲಾ ಮಹಿಳಾ ಸಂಚಾಲಕಿ ಶೇಷಮ್ಮ ಹಾಗೂ ಶಿವಮೊಗ್ಗದ ರಾಜ್ಯ ಸಂಘಟನಾ ಸಂಚಾಲಕಿ ರುದ್ರಮ್ಮ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ಟರ್ (ಉಡುಪಿ), ರಮೇಶ್ ಡಾಕುಳುಕಿ (ಬೀದರ್), ಕಾರಹಳ್ಳಿ ಶ್ರೀನಿವಾಸ್, ಹಿರೇಶ್ ಹಿರೇಹಳ್ಳಿ, ರಾಮಣ್ಣ ಕಲ್ಲದೇವನಹಳ್ಳಿ, ಸಿದ್ದರಾಜು (ಚಾಮರಾಜನಗರ), ಹುಸೇನಪ್ಪ (ಬಳ್ಳಾರಿ), ರಾಜ್ಯ ಖಜಾಂಚಿ ಸಿದ್ದಪ್ಪ ಕಾಂಬ್ಳೆ ಸೇರಿದಂತೆ ರಾಜ್ಯ ಸಮಿತಿ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ದಲಿತ ಸಮುದಾಯದ ಹಕ್ಕುಗಳು, ಸಾಮಾಜಿಕ ನ್ಯಾಯ, ಮಹಿಳೆಯರ ಪಾಲ್ಗೊಳ್ಳುವಿಕೆ ಹಾಗೂ ಜನಪರ ಚಳುವಳಿಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಮರ್ಲೆ ಅಣ್ಣಯ್ಯ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಹೂವಪ್ಪ, ಸಂತೋಷ್, ರಾಜೇಶ್ ಹಾಗೂ ಚೌಡಪ್ಪ , ಸಂತೋಷ್ ಉಪಸ್ಥಿತರಿದ್ದರು.

Dalit Sangharsha Samiti Women’s Convention in Chikkamagaluru on October 8

Share

Leave a comment

Leave a Reply

Your email address will not be published. Required fields are marked *

Don't Miss

ಫೇಸ್‌ಬುಕ್‌ನ ‘ಕೇರಳ ಲಾಟರಿ’ ಜಾಹೀರಾತು ನಂಬಿ ₹4.30 ಲಕ್ಷ ಕಳೆದುಕೊಂಡ ವ್ಯಕ್ತಿ

ಚಿಕ್ಕಮಗಳೂರು: ಫೇಸ್‌ಬುಕ್‌ನಲ್ಲಿ ಕಾಣಿಸಿಕೊಂಡ ‘ಕೇರಳ ಲಾಟರಿ’ ಜಾಹೀರಾತಿನ ಲಿಂಕ್ ಕ್ಲಿಕ್ ಮಾಡಿ, ಲಾಟರಿ ಗೆದ್ದಿರುವುದಾಗಿ ನಂಬಿ ಹಂತ ಹಂತವಾಗಿ ವಿವಿಧ ಶುಲ್ಕಗಳ ಹೆಸರಿನಲ್ಲಿ ಹಣ ಪಾವತಿಸಿದ ವ್ಯಕ್ತಿಯೊಬ್ಬರು ₹4.30 ಲಕ್ಷ ಕಳೆದುಕೊಂಡಿರುವ...

ನಿಗಮ ಮಂಡಳಿ ಸ್ಥಾನ ನೀಡಲು ಪರದಾಡುತ್ತಿರುವ ಕಾಂಗ್ರೆಸ್

ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ಪತ್ತರಗುಟ್ಟುತ್ತಿದೆ.ಶಾಸಕರು ಮತ್ತು ಕಾಂಗ್ರೆಸ್ ದುಡಿದ ಮುಖಂಡರು ಕಣ್ಣ್ ,ಕಣ್ಣ್ ಬಿಡುತ್ತಿದ್ದಾರೆ. ನಾಲ್ಕು ಮಂತ್ರಿಗಳನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಅದರಲ್ಲೂ ಮಹಿಳಾ ಖೋಟದಡಿ ಸಚಿವರಾಗಲು ಪರದಾಡುತ್ತಿರುವ...

Related Articles

ವೇಗದ ಚಾಲನೆಗೆ ಬುಲೆರೋ ಪಿಕಪ್ ಅಪಘಾತದಲ್ಲಿ ಚಾಲಕ ಸಾವು

ಬೀರೂರು: ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸುತ್ತಿದ್ದ ಮಹೇಂದ್ರ ಬುಲೆರೋ ಪಿಕಪ್ ವಾಹನ ಸಿಮೆಂಟ್ ಕಟ್ಟೆಗೆ ಡಿಕ್ಕಿ...

ಜಿಲ್ಲೆಯಲ್ಲಿ ಐದು ಪ್ರತ್ಯೇಕ ಅಪಘಾತದಲ್ಲಿ ಹಲವರಿಗೆ ಗಾಯ

ಚಿಕ್ಕಮಗಳೂರು: ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಐದು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಹಲವರು...

ವಿಕಸಿತ ಭಾರತ ನಿರ್ಮಾಣಕ್ಕೆ ‘ವೋಕಲ್ ಫಾರ್ ಲೋಕಲ್’ ಸಂಕಲ್ಪ ಅಗತ್ಯ

ಚಿಕ್ಕಮಗಳೂರು: ಕಳೆದ 25 ವರ್ಷಗಳ ಕಾಲ ಯಾವುದೇ ಕಳಂಕವಿಲ್ಲದೆ, ರಜೆಯನ್ನೂ ಪಡೆಯದೆ, ನಿರಂತರವಾಗಿ ರಾಷ್ಟ್ರಕ್ಕಾಗಿ ಕೆಲಸ...

ಅತ್ಯಾಚಾರ ಆರೋಪಿ ಪರ ನಿಂತಿದ್ದ ಪೇದೆ ಅಮಾನತು

ಚಿಕ್ಕಮಗಳೂರು: ತಲೆಮರೆಸಿಕೊಂಡಿರುವ ಅತ್ಯಾಚಾರ ಪ್ರಕರಣದ ಆರೋಪಿ ಸತೀಶ್ ಪಾತ್ರಿ ಕುಟುಂಬದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಪೊಲೀಸ್ ಠಾಣೆಯಲ್ಲಿನ...