Home namma chikmagalur chikamagalur ಭತ್ತದ ಗದ್ದೆಯಲ್ಲಿ 12 ಅಡಿ ಉದ್ದದ ಬೃಹತ್ ಗಾತ್ರದ ಕಾಳಿಂಗ ಸರ್ಪ
chikamagalurHomeLatest Newsnamma chikmagalur

ಭತ್ತದ ಗದ್ದೆಯಲ್ಲಿ 12 ಅಡಿ ಉದ್ದದ ಬೃಹತ್ ಗಾತ್ರದ ಕಾಳಿಂಗ ಸರ್ಪ

Share
Share

ಕಳಸ: ಭತ್ತದ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ರೈತರ ಕಣ್ಣಿಗೆ ಸುಮಾರು 12 ಅಡಿ ಉದ್ದದ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು ಏಕಾಏಕಿ ಗೋಚರಿಸಿದ್ದು, ಸ್ಥಳೀಯರಲ್ಲಿ ಕೆಲಕಾಲ ತೀವ್ರ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ಕಳಸ ತಾಲೂಕಿನ ಹಿರೇಬೈಲ್ ಸಮೀಪದ ಎಳಂದೂರು ಗ್ರಾಮದ ರೈತ ರಾಮಪ್ಪ ಎಂಬುವರ ಗದ್ದೆಯಲ್ಲಿ ಈ ದೈತ್ಯ ಹಾವು ಓಡಾಡುತ್ತಿತ್ತು. ಎಂದಿನಂತೆ ಕೃಷಿ ಕೆಲಸದಲ್ಲಿ ತೊಡಗಿದ್ದ ಕಾರ್ಮಿಕರು ಹಾಗೂ ರೈತರು ಬೃಹತ್ ಹಾವನ್ನು ಕಂಡು ಬೆಚ್ಚಿಬಿದ್ದು ತಕ್ಷಣವೇ ದೂರ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಖ್ಯಾತ ಉರಗ ತಜ್ಞ ಸ್ನೇಕ್ ರಿಜ್ವಾನ್ ಅವರು ಅತ್ಯಂತ ಜಾಗರೂಕತೆಯಿಂದ ಕಾರ್ಯಾಚರಣೆ ನಡೆಸಿ, ಕಾಳಿಂಗ ಸರ್ಪವನ್ನು ಯಾವುದೇ ಅಪಾಯವಾಗದಂತೆ ಸುರಕ್ಷಿತವಾಗಿ ಸೆರೆಹಿಡಿದರು. ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸಹಕಾರದೊಂದಿಗೆ ಹಾವನ್ನು ಕುದುರೆಮುಖದ ದಟ್ಟ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಡಲಾಯಿತು.

ಬೃಹತ್ ಗಾತ್ರದ ಕಾಳಿಂಗ ಸರ್ಪ ಸೆರೆಯಾಗಿ ಕಾಡಿಗೆ ರವಾನೆಯಾಗುತ್ತಿದ್ದಂತೆ ಗದ್ದೆ ಕೆಲಸಕ್ಕೆ ತೆರಳುವ ಸ್ಥಳೀಯ ರೈತರು ಹಾಗೂ ಸುತ್ತಮುತ್ತಲಿನ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

A massive 12-foot-long King Cobra in a paddy field.

Share

Leave a comment

Leave a Reply

Your email address will not be published. Required fields are marked *

Don't Miss

ಪ್ರತಾಪ ಸಿಂಹ ವಿರುದ್ಧ ಭೀಮ್ ಆರ್ಮಿ ಪ್ರತಿಭಟನೆ

ಚಿಕ್ಕಮಗಳೂರು: ದಲಿತ ಸಂಘಟನೆಗಳ ಬಗ್ಗೆ ಮಾಜಿ ಸಂಸದ ಪ್ರತಾಪ ಸಿಂಹ ಲಘುವಾಗಿ ಮಾತನಾಡಿದ್ದು, ಕೂಡಲೇ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ ಭೀಮ್ ಆರ್ಮಿ ಮುಖಂಡರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ನಗರದ...

ಕಸ್ತೂರಿರಂಗನ್ ವರದಿ ವಿರೋಧಿಸಿ ಶೃಂಗೇರಿ ಬಂದ್‌ ಯಶಸ್ವಿ

ಶೃಂಗೇರಿ: ಕಸ್ತೂರಿರಂಗನ್ ವರದಿ ವಿರೋಧಿ ಸಮಿತಿ ನೇತೃತ್ವದಲ್ಲಿ ಸೋಮವಾರ ಕರೆ ನೀಡಿದ್ದ ಶೃಂಗೇರಿ ಪಟ್ಟಣ ಬಂದ್ ಯಶಸ್ವಿಯಾಯಿತು. ಬಂದ್ ಅಂಗವಾಗಿ ನಡೆದ ಪಟ್ಟಣದ ಸ್ವಾಗತ ಮಂಟಪದಿಂದ ಕುವೆಂಪು ಬಸ್ ನಿಲ್ದಾಣದವರೆಗೆ ನಡೆದ...

Related Articles

ತಂದೆ-ಮಗಳ ಗಾಯನ ಮಾಧುರ್ಯಕ್ಕೆ ಮನಸೋತ ಶ್ರೋತೃಗಳು

ಚಿಕ್ಕಮಗಳೂರು: ನಗರದ ಕುವೆಂಪು ಕಲಾಮಂದಿರದಲ್ಲಿ ಶನಿವಾರ ಸಂಜೆ ಅನುರಣಿಸಿದ ಕರ್ನಾಟಕ ಶಾಸ್ತ್ರೀಯ ಹಾಗೂ ಹರಿದಾಸ ಸಾಹಿತ್ಯದ...

ತಂದೆ-ಮಗಳ ಗಾಯನ ಮಾಧುರ್ಯಕ್ಕೆ ಮನಸೋತ ಶ್ರೋತೃಗಳು

ಚಿಕ್ಕಮಗಳೂರು: ನಗರದ ಕುವೆಂಪು ಕಲಾಮಂದಿರದಲ್ಲಿ ಶನಿವಾರ ಸಂಜೆ ಅನುರಣಿಸಿದ ಕರ್ನಾಟಕ ಶಾಸ್ತ್ರೀಯ ಹಾಗೂ ಹರಿದಾಸ ಸಾಹಿತ್ಯದ...

ಅಕ್ಟೋಬರ್ ೧ ರಿಂದ ವಿದ್ಯುತ್ ಪೂರೈಕೆ ಸುಧಾರಣೆ

ಚಿಕ್ಕಮಗಳೂರು: ಜಿಲ್ಲೆಯ ವಿದ್ಯುತ್ ಬೇಡಿಕೆಗೆ ಅನುಗುಣವಾಗಿ ಪೂರೈಕೆ ಹೆಚ್ಚಿಸುವುದು ಸೇರಿದಂತೆ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ...

 ಪ್ರವಾಸೋದ್ಯಮ ಬೆಳೆಸುವ ಉತ್ಸಾಹದಲ್ಲಿ ಪರಿಸರ ಸಂರಕ್ಷಣೆ ಮರೆಯಬಾರದು

ಚಿಕ್ಕಮಗಳೂರು: ಪ್ರವಾಸೋದ್ಯಮ ಕ್ಷೇತ್ರದಿಂದ ಲಕ್ಷಾಂತರ ಜನರಿಗೆ ಉದ್ಯೋಗ ಸೃಷ್ಟಿಯಾಗುತ್ತಿದ್ದು, ಸ್ಥಳೀಯ ಆರ್ಥಿಕತೆಯೂ ಚೇತರಿಸಿಕೊಳ್ಳುತ್ತಿದೆ. ಆದರೆ ಪ್ರವಾಸೋದ್ಯಮ...