Home namma chikmagalur chikamagalur ಎತ್ತಿನಭುಜ ಚಾರಣದಕ್ಕೆ ಟ್ರಕ್ಕಿಂಗ್‌ ಬಂದು ಸಮಸ್ಯೆ ಎದುರಿಸುತ್ತಿರುವ ಪ್ರವಾಸಿಗರು
chikamagalurHomeLatest Newsnamma chikmagalur

ಎತ್ತಿನಭುಜ ಚಾರಣದಕ್ಕೆ ಟ್ರಕ್ಕಿಂಗ್‌ ಬಂದು ಸಮಸ್ಯೆ ಎದುರಿಸುತ್ತಿರುವ ಪ್ರವಾಸಿಗರು

Share
Share

ಮೂಡಿಗೆರೆ : ವಾರಾಂತ್ಯದ ಮಜಾ ಕಳೆಯಲು ಬೆಟ್ಟಗುಡ್ಡಗಳತ್ತ ಮುಖ ಮಾಡಿದ ಚಾರಣಪ್ರಿಯರಿಗೆ ನಿರಾಶೆಯ ಜೊತೆಗೆ ಕಾಡಿನ ನಡುವೆ ದಿಕ್ಕು ತೋಚದ ಪರಿಸ್ಥಿತಿ ಎದುರಾಗಿದೆ.

ಕಳೆದ ಹಲವು ತಿಂಗಳುಗಳಿಂದ ಸ್ಥಗಿತಗೊಂಡಿದ್ದ ಪ್ರಸಿದ್ಧ ಎತ್ತಿನಭುಜ ಚಾರಣವನ್ನು ಯಾವುದೇ ಪೂರ್ವ ಸಿದ್ಧತೆ ಹಾಗೂ ಕನಿಷ್ಠ ಮುಂಜಾಗ್ರತಾ ಕ್ರಮಗಳಿಲ್ಲದೆ ಅರಣ್ಯ ಇಲಾಖೆ ಪುನರಾರಂಭಿಸಿರುವುದು ಪ್ರವಾಸಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಆನ್‌ಲೈನ್ ಮೂಲಕ ಮುಂಗಡ ಶುಲ್ಕ ಪಾವತಿಸಿ ಉತ್ಸಾಹದಿಂದ ಬಂದಿದ್ದ ನೂರಾರು ಪ್ರವಾಸಿಗರು, ಮೂಲಭೂತ ಸೌಕರ್ಯಗಳ ಕೊರತೆ ಮತ್ತು ಅರಣ್ಯ ಸಿಬ್ಬಂದಿಯ ಬೇಜವಾಬ್ದಾರಿತನವನ್ನು ಎದುರಿಸುವಂತಾಗಿದೆ. ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು (SOP) ಸಂಪೂರ್ಣವಾಗಿ ಗಾಳಿಗೆ ತೂರಿರುವ ಇಲಾಖೆಯು, 5 ಕಿಲೋಮೀಟರ್ ಚಾರಣಕ್ಕೆ 300 ರೂಪಾಯಿ ಪ್ರವೇಶ ಶುಲ್ಕ ಹಾಗೂ ಪ್ರತಿ ಗೈಡ್‌ಗೆ 75 ರೂಪಾಯಿ ಪ್ರತ್ಯೇಕ ದರವನ್ನು ಕಡ್ಡಾಯವಾಗಿ ವಸೂಲಿ ಮಾಡುತ್ತಿದೆ.

ಆದರೆ, ಪ್ರವಾಸಿಗರಿಗೆ ಮಾರ್ಗದರ್ಶನ ನೀಡಲು ಸ್ಥಳದಲ್ಲಿ ಗೈಡ್ ಇಲ್ಲದಿರುವುದು ಮತ್ತು ಮಾರ್ಗದುದ್ದಕ್ಕೂ ಬಿದ್ದಿರುವ ಬೃಹತ್ ಮರಗಳು ದಾರಿಯನ್ನು ಸಂಪೂರ್ಣವಾಗಿ ಬಂದ್‌ ಮಾಡಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿದೆ. ದಟ್ಟ ಕಾನನದ ನಡುವೆ ಯಾವ ದಾರಿಯಲ್ಲಿ ಸಾಗಬೇಕೆಂದು ತಿಳಿಯದೆ, ಯಾವುದೇ ಸುರಕ್ಷತಾ ವ್ಯವಸ್ಥೆಯೂ ಇಲ್ಲದೆ ಕಂಗಾಲಾದ ಚಾರಣಿಗರು ಅರ್ಧ ಹಾದಿಯಲ್ಲೇ ನಿರಾಶೆಯಿಂದ ವಾಪಸ್ ಹೆಜ್ಜೆ ಹಾಕಬೇಕಾಯಿತು.

ಮೂಡಿಗೆರೆ ತಾಲೂಕು ವ್ಯಾಪ್ತಿಯ ಈ ಪ್ರವಾಸಿ ತಾಣದಲ್ಲಿ ಕೇವಲ ಹಣ ಗಳಿಕೆಗೆ ಒತ್ತು ನೀಡಿ, ಪ್ರವಾಸಿಗರ ಸುರಕ್ಷತೆಯನ್ನು ಕಡೆಗಣಿಸಿರುವ ಕಾಫಿನಾಡಿನ ಅರಣ್ಯ ಇಲಾಖೆಯ ಕಾರ್ಯವೈಖರಿ ವಿರುದ್ಧ ಜನರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

Tourists facing problems while trekking on Yettinabhuja trek

Share

Leave a comment

Leave a Reply

Your email address will not be published. Required fields are marked *

Don't Miss

ಸ್ಕೂಟರ್‌ ಅಪಘಾತ: ಚಿಕಿತ್ಸೆ ಫಲಿಸದೆ ಸಾವು

ಕಡೂರು: ರಸ್ತೆಯಲ್ಲಿ ಅಡ್ಡಬಂದ ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಸ್ಕೂಟರ್‌ ನಿಯಂತ್ರಣ ತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ನಡೆದಿದೆ. ಕಂಸಾಗರ ಗ್ರಾಮದ ಕೆಂಚಪ್ಪ...

ಧ್ವಜಾರೋಹಣದ ಕೆಲವೇ ಗಂಟೆಗಳಲ್ಲಿ ಕೆಳಗಿಳಿಸಿದ ರಾಷ್ಟ್ರಧ್ವಜ …?

ಚಿಕ್ಕಮಗಳೂರು: ಸ್ವಾತಂತ್ರ್ಯ ದಿನಾಚರಣೆಯಂದೇ ಚಿಕ್ಕಮಗಳೂರಿನಲ್ಲಿ ರಾಷ್ಟ್ರಧ್ವಜಕ್ಕೆ ಸಂಬಂಧಿಸಿದಂತೆ ವಿವಾದವೊಂದು ಭುಗಿಲೆದ್ದಿದ್ದು, ಕರ್ನಾಟಕ ರಾಜ್ಯ ರೈತ ಸಂಘದ ಕಚೇರಿ ಆವರಣದಲ್ಲಿ ಬೆಳಿಗ್ಗೆ ಧ್ವಜಾರೋಹಣ ನೆರವೇರಿಸಿದ ಕೆಲವೇ ಗಂಟೆಗಳಲ್ಲಿ ರಾಷ್ಟ್ರಧ್ವಜವನ್ನು ಕೆಳಗಿಳಿಸಲಾಗಿದೆ ಎಂಬ ಆರೋಪ...

Related Articles

ಕಾಫಿಕಿಂಗ್ ಸಿದ್ಧಾರ್ಥಹೆಗ್ಗಡೆ ಹೆಸರು ಶಾಶ್ವತವಾಗಿ ಉಳಿಸುವ ಕಾರ್ಯ ಮಾಡಬೇಕಿದೆ

ಮೂಡಿಗೆರೆ: ಕಾಫಿ ಡೇ ಮಾಲೀಕ ದಿವಂಗತ ವಿ.ಜಿ.ಸಿದ್ಧಾರ್ಥ ಹೆಗ್ಗಡೆ ಅವರು ತಮ್ಮ ಸಂಪೂರ್ಣ ಜೀವನವನ್ನು ಕಾಫಿ...

ವಿಮಾನ ನಿಲ್ದಾಣಕ್ಕಾಗಿ ಜಮೀನ ಸ್ವಾಧೀನಕ್ಕೆ ರೈತರ ವಿರೋಧ

ಚಿಕ್ಕಮಗಳೂರು: ನಗರದ ಹೊರವಲಯದಲ್ಲಿ ಕಿರು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಗುರುತಿಸಲಾಗಿರುವ ಪ್ರದೇಶ ಕೃಷಿ ಅವಲಂಬಿತವಾಗಿದ್ದು, ಅತ್ಯಂತ...

₹1.39 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ

ಅಜ್ಜಂಪುರ: ಮನೆಯ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು ಬೀರುವಿನ ಲಾಕರ್‌ನಲ್ಲಿದ್ದ ಚಿನ್ನಾಭರಣ, ಬೆಳ್ಳಿ ವಸ್ತುಗಳು...

ಮಹಿಳೆಯಿಂದ ₹93,500 ಮೌಲ್ಯದ 17 ಗ್ರಾಂ ಚಿನ್ನಾಭರಣ ಪಡೆದು ವಂಚನೆ

ಕಡೂರು: ಕಷ್ಟದ ಸಮಯದಲ್ಲಿ ಒಡವೆಗಳನ್ನು ಅಡವಿಟ್ಟು ಹಣ ಪಡೆದು ಬಳಿಕ ಬಿಡಿಸಿಕೊಡುವುದಾಗಿ ನಂಬಿಸಿ ಮಹಿಳೆಯಿಂದ ₹93,500...