ಚಿಕ್ಕಮಗಳೂರು: ಗಾಯಿತ್ರಿ ಶಾಂತೇಗೌಡ ಕೋರ್ಟ್ ಆದೇಶದ ಮೇರೆಗೆ ವಿಧಾನ ಪರಿಷತ್ ಗೆ ಎಂಟ್ರಿ ಕೊಟ್ಟಾಗಿದೆ. ಕಳೆದ ನಾಲ್ಕೂವರೆ ವರ್ಷಗಳಿಂದ ನ್ಯಾಯಾಲಯದಲ್ಲಿ ನ್ಯಾಯ ಪಡೆಯಲು ಕಷ್ಟ ಪಟ್ಟು ಕೋಟ್ಯಂತರ ಹಣ ವೆಚ್ಚ ಖರ್ಚು ಮಾಡಿ ಬಂದಿದ್ದಾರೆ. ಮೊದಲೇ ಪವರ್ ಸೆಂಟರ್ ಆಗಿದ್ದವರು ಇನ್ನಷ್ಟು “ಪವರ್ ” ಸೆಂಟರ್ ಗೆ ಭೀಮ ಬಲ ಬಂದಿದೆ. ಶಾಸಕರುಗಳು ಮತ್ತು ಅಧಿಕಾರಿ ವರ್ಗದವರು ಮತ್ತು ನೌಕರರು ಕೂಡ ಗಾಯಿತ್ರಿ ಮಾತು ಕೇಳಬೇಕು ಎಂಬ ತಾಕತ್ತು ಇಟ್ಟುಕೊಂಡಿದ್ದಾರೆ.
ಶಾಸಕರಲ್ಲಿ ಮೂಡಿಗೆರೆ ನಯನ ಮೋಟಮ್ಮ ನವರನ್ನು ಹೊರತು ಪಡಿಸಿದರೆ ಚಿಕ್ಕಮಗಳೂರು ಶಾಸಕ ತಮ್ಮಯ್ಯ ಅಕ್ಕನ ಮಾತಿಗೆ ಕಿಮ್ಮಕ್ ಎನ್ನಲಾರರು. ತರೀಕೆರೆ ಶಾಸಕ ಮಾತ್ರ ತೊರಿಕೆಗೆ ಗಾಯಿತ್ರಿ ಯವರ ಮಾತು ಕೇಳಬಹುದು. ಉಳಿದಂತೆ ಕಡೂರು ಶಾಸಕ ಅನಂದ್ ಮತ್ತು ಶೃಂಗೇರಿ ಕ್ಷೇತ್ರದ ಶಾಸಕರಾದ ಟಿ.ಡಿ.ರಾಜೇಗೌಡ ಗೌರವ ಕೊಡುತ್ತಾರೆ.ಇಷ್ಟಲ್ಲದೆ ಕಾಂಗ್ರೆಸ್ ನ ರಾಜ್ಯ ಮಟ್ಟದ ನಾಯಕರುಗಳು ಗಾಯಿತ್ರಿಯವರ ಮಾತಿಗೆ ಮನ್ನಣೆ ನೀಡುತ್ತಾರೆ.
ಧಾಮ್ , ದೂಮ್ ಎನ್ನುತ್ತಿದ್ದ ಎಂ.ಎಲ್.ಮೂರ್ತಿಯಂತಹ ಸಿಡಿಲು ಮರಿ ಗಾಯಿತ್ರಿಗೆ ಜೈ,ಜೈ ಎನ್ನುವ ಪರಿಸ್ಥಿತಿಗೆ ಬಂದಿದ್ದಾರೆ ಎಂದರೆ ಇನ್ನುಳಿದವರ ಪಾಡೇನು? ನೇರವಾಗಿ ಮಾತನಾಡುವ ಗಾಯಿತ್ರಿ ಶಾಂತೇಗೌಡ ಇನ್ನೂಳಿದ ಒಂದು ವರೆ ವರ್ಷಗಳ ಕಾಲ ಜಿಲ್ಲೆಯ ಪವರ್ ಸೆಂಟರ್ ಖಚಿತ. ನಾವೇ ಸಿನಿಯರ್ ಎಂದು ಲಾಭಿ ಮಾಡಲು ಸಾಧ್ಯವಿಲ್ಲ. ಏಕೆಂದರೆ ಗಾಯಿತ್ರಿ ರಾಜ್ಯ ರಾಜಕಾರಣ ಮತ್ತು ಪವರ್ ನಲ್ಲಿ ಸಿನಿಯಾರಿಟಿ ಹೊಂದಿದ್ದಾರೆ.
ಸಚಿವರಾಗುವ ಅವಕಾಶಕ್ಕೆ ಸಮಯದ ಕೊರತೆ ಆಗಿದೆ , ಆದರೆ ಉಪಸಭಾಪತಿಯಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ ಹೀಗಾಗಿ ಚಿಕ್ಕಮಗಳೂರು ಶಾಸಕ ಅಕ್ಕಾ, ಅಕ್ಕಾ ಎನ್ನುತ್ತಲೇ ನನ್ನ ಅಧ್ಯಕ್ಷತೆಯಲ್ಲಿ ಎಲ್ಲಾ ತೀರ್ಮಾನ ನಡೆಯುವುದು ನನ್ನ ಅಧಿಕಾರಕ್ಕೆ ಯಾರು ಏನೂ ಮಾಡಲು ಸಾಧ್ಯವಿಲ್ಲ ಎಂದು ಗೊಣಗುತ್ತಿದ್ದಾರೆ.ಆದರೆ ಶಾಸಕರುಗಳಲ್ಲಿ ತಲ್ಲಣ ಉಂಟಾಗಿರುವುದು ಗುಟ್ಟಾಗಿ ಇಡಲು ಸಾಧ್ಯವಿಲ್ಲ.
ಗಾಯಿತ್ರಿ ಶಾಂತೇಗೌಡ ಇತ್ತಾ ಜಿಲ್ಲಾ ಕಾಂಗ್ರೆಸ್ ನ ಅಧ್ಯಕ್ಷರಾಗ ಬೇಕು ಎಂದು ಮುಂಚೂಣಿಯಲ್ಲಿ ಇದ್ದಾರೆ ಆದರೆ ಉಪಸಭಾಪತಿ ಸ್ಥಾನ ಬೇಕಾದರೆ ಅಧ್ಯಕ್ಷರ ಚಿಂತೆ ಬಿಡಬೇಕು. ಗಾಯಿತ್ರಿಗೆ ರಾಜಕೀಯ ವಾಗಿ ಅನ್ಯಾಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಹಾಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಲೋಚನೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಮುಂದೆ ವಿಧಾನ ಸಭೆಗೆ ಸ್ಪರ್ಧೆ ಮಾಡಬಹುದು ಎಂಬ ಲೆಕ್ಕಾಚಾರ ನಡೆದಿದೆ ಅವರ ಅಭಿಮಾನಿಗಳು ಮತ್ತು ಹಿತೈಷಿಗಳು ಶಾಸಕರ ಬೀಜ ಬಿತ್ತುತ್ತಿದ್ದಾರೆ ಎಂಬ ವಿಷಯ ಕೂಡ ಹರಿದಾಡುತ್ತಿದೆ.
ತಮ್ಮಯ್ಯ ಏನೂ ಇಲ್ಲದಾಗ ಕಾಂಗ್ರೆಸ್ ಟಿಕೆಟ್ ಪಡೆದು ಇಪ್ಪತ್ತು ವರ್ಷದಿಂದ ಹೆಸರು ಇರದೆ ಇದ್ದಾಗ ಶಾಸಕನಾದವನು ನಾನೇ ಎನ್ನುತ್ತಿರುವಾಗ ಕಾಂಗ್ರೆಸ್ ಯಾವಾಗ ಯಾರನ್ನು ತಳ್ಳುತ್ತದೆ ಯಾರನ್ನು ಅಪ್ಪಿಕೊಳ್ಳುತ್ತದೆ ಎನ್ನುವುದನ್ನು ಒಂದುವರೆ ವರ್ಷ ನಂತರ ತಿಳಿಯಲಿದೆ. ತಮ್ಮಯ್ಯರ ಡಬಲ್ ಗೇಮ್ ರಾಜಕೀಯಕ್ಕೆ ಕಾಂಗ್ರೆಸ್ ನವರು ಬೇಸತ್ತಿದ್ದಾರೆ ಒಮ್ಮೆ ಸಿದ್ದರಾಮಯ್ಯನಿಗೆ ಜೈ ಎಂದರೆ ಮತ್ತೊಮ್ಮೆ ಡಿ.ಕೆಗೆ ಜೈ ಎನ್ನುವ ತಮ್ಮಯ್ಯ ಪರಿಸ್ಥಿತಿ ತೂಗು ಉಯ್ಯಾಲೆಯಲ್ಲಿದೆ ಎನ್ನುತ್ತಿದ್ದಾರೆ.
ಗಾಯಿತ್ರಿ ಚಿಕ್ಕಮಗಳೂರು ವಿಧಾನ ಸಭೆಗೆ ಸ್ಪರ್ಧೆ ಮಾಡಿದರೆ ಜಿಲ್ಲೆಯ ರಾಜಕಾರಣ ಏರುಪೇರು ಆಗಲಿದೆ.ತಮ್ಮಯ್ಯನ ಬಗ್ಗೆ ಸಿದ್ದರಾಮಯ್ಯ ನವರ ಅಭಿಮಾನಿಗಳು ಉರಿದು ಬೀಳುತ್ತಿರುವುದು ತಮ್ಮಯ್ಯರ ಒಳ ಪಂಗಡದ ರಾಜಕಾರಣ ಅಸಹ್ಯ ತರುತ್ತಿದೆ ಎನ್ನುವವರು ದಿನೆ,ದಿನೇ ಹೆಚ್ಚುತ್ತಿದ್ದಾರೆ.ಗಾಯಿತ್ರಿ ಹಟದ ಮುಂದೆ ಮುಂದಿನ ಜಿಲ್ಲಾ ರಾಜಕಾರಣ ನಿಂತಿದೆ.
ಲಾಸ್ಟ್ ಸಿಫ್: ದನಗಳು ಹೊರ ಹೋದ ಮೇಲೆ ದೊಡ್ಡಿ ಬಾಗಿಲು ಹಾಕಿದಂತೆ ಎಂಬ ಹಿರಿಯರ ಮಾತು ಪ್ರಾಣೇಶ್ ರಾಜೀನಾಮೆ ಪ್ರಸಂಗ ಕಾಣುತ್ತಿದೆ.ಕೋರ್ಟ್ನ ಸ್ಪಷ್ಟ ಆದೇಶ ಬಂದ ಮೇಲೆ ಉಪಸಭಾಪತಿ ಸ್ಥಾನಕ್ಕೆ ಮತ್ತು ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗುತ್ತಿದೆ ಇಂತಹ ಐಡಿಯಾ ಕೊಟ್ಟ ಬಿಜೆಪಿಯವರ ಅಸಲಿ ರಾಜಕಾರಣ ಏನು ಎಂಬುದು ತಿಳಿಯುತ್ತಿದೆ ಎಂದು ಕಾಂಗ್ರೆಸ್ ನವರು ವ್ಯಂಗವಾಡುತ್ತಿದ್ದಾರೆ.ಪ್ರಾಣೇಶ್ಗೆ ರಾಜಕೀಯ ದಾಹ ಎಷ್ಟು ಇತ್ತು ಎಂದು ತಿಳಿಯುತ್ತದೆ.
Gayatri Power Center launched in “Congress”! Are the MLAs worried?
Leave a comment