Home namma chikmagalur chikamagalur ಅರತಿಕೃಷ್ಣಗೆ ಮಂತ್ರಿ ಗ್ಯಾರಂಟಿ – ಶ್ರೀನಿವಾಸ್ ತಿರುಪತಿಗೆ ? – ನಯನ ನವ ಅವತಾರಕ್ಕೆ ಭಂಗ, ಭಂಗ
chikamagalurHomeLatest Newsnamma chikmagalurPolitical News

ಅರತಿಕೃಷ್ಣಗೆ ಮಂತ್ರಿ ಗ್ಯಾರಂಟಿ – ಶ್ರೀನಿವಾಸ್ ತಿರುಪತಿಗೆ ? – ನಯನ ನವ ಅವತಾರಕ್ಕೆ ಭಂಗ, ಭಂಗ

Share
Share

ಚಿಕ್ಕಮಗಳೂರು: ಜಿಲ್ಲೆಯ ಲ್ಲಿ ಮಂತ್ರಿಯಾಗ ಬೇಕು ಎಂದು ಪಟ್ಟು ಹಿಡಿದವರು ಪಲ್ಟಿ ಹೊಡೆದಿದ್ದಾರೆ ಆದರೆ ಅರತಿಕೃಷ್ಣ ಮಂತ್ರಿಯಾಗುವುದು ಖಚಿತವಾಗಿದೆ. ತರೀಕೆರೆ ಕ್ಷೇತ್ರದ ಶಾಸಕ ಶ್ರೀನಿವಾಸ್ ಕಳೆದ ಎರಡು ತಿಂಗಳಿಂದ ಕ್ಷೇತ್ರ ಕೈ ಹೆಂಡತಿ ಮಗಳ ಕೈಗೆ ಇಟ್ಟು ಅವರೀವರ ಮನೆ ಬಾಗಿಲು ಕಾದಿದ್ದಲ್ಲದೇ ಮಂತ್ರಿ ಗಿರಿ ಖಚಿತ ಎಂದು ಹೇಳಿಕೊಳ್ಳುವದನ್ನು ನೋಡಿ ಹಲವಾರು ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ ಕುರಿ ಕೋಳಿ ಕೊಯ್ದು ಹರಿಕೆ ತೀರಿಸಿದವರು ಇದ್ದಾರೆ.

ನಯನ ಮೋಟಮ್ಮ ಮೈ ಮೇಲೆ ಮಂತ್ರಿಗಿರಿ ಬಂದಂತೆ ದೆಹಲಿ ಟೂ ಬೆಂಗಳೂರು ತಿರುಗಿ ಬಂದು ಸುಸ್ತಾದರೆ ಅವರ ವಿರೋಧಿಗಳು ನಯನ ಮಂತ್ರಿಯಾದರೆ ನಮಗೆ ರಾಜಕೀಯ ಆತ್ಮಹತ್ಯೆ ಒಂದೇ ದಾರಿ ಎನ್ನುತ್ತಿರುವಾಗ ನಯನ ತಕ ದಿಮೀ ಎಂದು ಕುಣಿಯ ತೊಡಗಿದ್ದಾರೆ .ಇವರನ್ನು ಸಮಾಧಾನ ಮಾಡಲು ಸ್ವತಃ ಸಿ.ಎಂ.ಡಿ.ಕೆ.ಶಿ.ಬರಲಿದ್ದಾರೆ ಎಂಬ ಕೂಗು ಕೇಳಿಬರುತ್ತಿದೆ.

ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ಮಂತ್ರಿ ಆಗಬೇಕೆಂದು ಡಿ.ಕೆ. ಬಳಿ ಕೇಳಿದಾಗ ಡಿ.ಕೆ. ಕಷ್ಟ ಎಂದು ಹೇಳಿ  ನಾನು ಮುಖ್ಯಮಂತ್ರಿ ಕ್ಷೇತ್ರದ ಬಗ್ಗೆ ತಲೆಕೆಡಿಸಿಕೋ ಎಂದ ಹೇಳಿ ಕಳುಹಿಸಿದ್ದಾರೆ.ಇದರಿಂದ ಕ್ಷೇತ್ರದಲ್ಲಿ ಇದ್ದಾರೆ ಎನ್ನಲಾಗಿದೆ. ಕಡೂರು ಕ್ಷೇತ್ರದ ಶಾಸಕ ಆನಂದ್ ಹೆಸರು ಡೆಲ್ಲಿಯಲ್ಲಿ ಕೇಳಿ ಬಂದಿದ್ದು ತರೀಕೆರೆ ಶಾಸಕ ಶ್ರೀವಾಸ್ ಗೆ ಸೆಡ್ಡ ಹೊಡೆಯಲು ಎನ್ನಲಾಗಿದೆ.

ಚಿಕ್ಕಮಗಳೂರು ಶಾಸಕ ತಮ್ಮಯ್ಯ ಮಾತ್ರ ಮಂತ್ರಿಗಿರಿ ಕೇಳಲಿಲ್ಲ ಡಬಲ್ ಗೇಮ್ ರಾಜಕಾರಣದಲ್ಲಿ ತೊಡಗಿಸಿಕೊಂಡು ಒಮ್ಮೆ ರಾಜೇಗೌಡರ ಪರ ಇನ್ನೊಮ್ಮೆ ಶೀನಿವಾಸ್ ಪರ ದೆಹಲಿಗೆ ಹೋಗಿ ಬಂದು ಇಡೀ ರಾಜ್ಯದ ಪತ್ರಕರ್ತರು ತಮ್ಮಯ್ಯನ ಪರ ಬರೆಯುವುದಲ್ಲದೆ ಕ್ಯಾನ್ವಾಸ್ ಮಾಡಲು ಬರುವಂತೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ. ಜೊತೆಗೆ ಆರ್.ಎಸ್.ಎಸ್  ನವರಂಗಿ ಗಿರಿಜಾಶಂಕರ್ ನೀನು ಮತ್ತೊಮ್ಮೆಗೆಲ್ಲ ಬೇಕಾದರೆ ಇದೇ ದಾರಿಯಲ್ಲಿ ಸಾಗು ಎಂದು ಕಿವಿಗೆ ಹೂಗಳನ್ನು ಇಟ್ಟು ಕಳಿಹಿಸಿದ್ದಾರೆ ಎನ್ನಲಾಗುತ್ತಿದೆ.

ಅರತಿ ಕೃಷ್ಣ ಮಂತ್ರಿ

ಜಿಲ್ಲೆಯ ಮಲೆನಾಡು ಅದರಲ್ಲೂ ಶೃಂಗೇರಿ ಕ್ಷೇತ್ರದಲ್ಲಿ ಅರತಿ ಕೃಷ್ಣ ಚಿರಪರಿಚಿತರು.ಬಯಲ ಪ್ರದೇಶದ ಜನರಿಗೆ ಇನ್ನೂ ಮುಂದೆ ಪರಿಚಿತರಾಗುತ್ತಾರೆ. ಅರತಿ ಮಾಜಿ ಮಂತ್ರಿ ಬೇಗನೆ ರಾಮ್ಮಯ್ಯನ ಸುಪುತ್ರಿ.ತನ್ನ ತಂದೆ ಹೆಸರಿನಲ್ಲಿ ರಾಜಕಾರಣ ಮಾಡಿದವರಲ್ಲ.ಸ್ವತಃ ಸ್ವಯಂ ಸ್ಥಾನ ಮಾನ ಪಡೆದವರು. ಕಳೆದ ಇಪ್ಪತ್ತು ವರ್ಷಗಳಿಂದ ಅನಿವಾಸಿ ಭಾರತೀಯರ ಕಾರ್ಯದರ್ಶಿಯಾಗಿ ಉಪಾಧ್ಯಕ್ಷರಾಗಿ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿಯಾಗಿ ವಿದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿದ ಭಾರತೀಯರ ಅದರಲ್ಲೂ ಕನ್ನಡಿಗರ ಪರವಾಗಿ ನಿಂತು ಹಸ್ತ ಕೈಚಾಚಿ ಸಹಾಯ ಮಾಡಿದ್ದಾರೆ.

ಕೊರಾನಾ ಸಂದರ್ಭದಲ್ಲಿ ಬಹಳಷ್ಟು ಜನರನ್ನು ಭಾರತಕ್ಕೆ ಕರೆ ತಂದು ಅವರವರ ಮನೆಗೆ ಸುರಕ್ಷಿತವಾಗಿ ಕಳುಹಿಸಿ ಕೊಟ್ಟಿದ್ದಾರೆ. ಯುದ್ಧದ ಸಮಯದಲ್ಲಿ ಅದರಲ್ಲೂ ಜನಾಂಗೀಯ ಸಂಕಷ್ಟದಲ್ಲಿ ಇರುವವರಿಗೆ ಕಾನೂನು ನೆರವಿನ ಜೊತೆಗೆ ದೇಶಕ್ಕೆ ಕರೆತಂದಿರುವ ದಾಖಲೆಗಳು ಇವೆ.ಕೂಲಿ ಕಾರ್ಮಿಕರು ಮತ್ತು ನ್ಯಾಯಾಲಯಗಳಲ್ಲಿ ಕಾನೂನು ತೊಡಕಿನಲ್ಲಿ ಸಿಕ್ಕಿ ನೋವು ಅನುಭವಿಸಿದವರ ನೆರವಿಗೆ ನಿಂತು ಅವರುಗಳನ್ನು ದೇಶಕ್ಕೆ ಮರುತರುವಲ್ಲಿ ಬಹಳಷ್ಟು ಯಶಸ್ವಿಯಾಗಿದ್ದಾರೆ.ದೇಶ ವಿದೇಶ ಗಳಲ್ಲಿ ಕೆಲಸ ನಿರ್ವಹಣೆ ಮಾಡಿದವರು ಜಿಲ್ಲೆಯ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುತ್ತಾರೆ ಎಂಬ ಭರವಸೆ ಇದೆ.

ಶೃಂಗೇರಿಯಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ ಮುಗಿಸಿ ಮೈಸೂರಿನಲ್ಲಿ ಪದವಿ ಪಡೆದ ನಂತರ ದೆಹಲಿಯಲ್ಲಿ ರಾಜ್ಯ ಶಾಸ್ತ್ರದಲ್ಲಿ ಮಾಸ್ಟರ್ ಪದವಿ ಪಡೆದವರು ನಂತರ ಅಮೇರಿಕಾದ ವಾಷಿಂಗ್ಟನ್ ಲೂಯಿಸ್ ವಿಶ್ವವಿದ್ಯಾಲಯದಲ್ಲಿ ಗೌರವ ಡಾಕ್ಟರೇಟ್ ಪಡೆದುಕೊಂಡು ಅಮೇರಿಕಾದಲ್ಲಿ ಇಂಡಿಯಾ ಡೆವಲಪ್ಮೆಂಟ್ ಆಫೀಸರ್ ಅಗಿ ಕಾರ್ಯಾನಿರ್ವಹಿಸಿದವರು.ಎಂದೂ ಕೂಡ ರಾಜಕಾರಣದ ಬಗ್ಗೆ ತಲೆ ಕೆಡಿಸಿಕೊಂಡವರಲ್ಲಾ.

ಅನಿವಾಸಿ ಭಾರತೀಯ ರು ಮತ್ತು ಕನ್ನಡಿಗರ ಕೆಲಸ ಮಾಡುವಾಗ ಶ್ಯಾಮ್ ಪಿಟ್ರೋಡ್ ರವರ ಮೆಚ್ಚುಗೆ ಮತ್ತು ಮಾರ್ಗದರ್ಶನ ಫಲ ರಾಹುಲ್ ಗಾಂಧಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹೀಗಾಗಿ ಕಳೆದ ಮೂರು ತಿಂಗಳ ಹಿಂದೆ ವಿಧಾನ ಪರಿಷತ್ ಸದಸ್ಯರಾಗಿ ಈಗ ಮಂತ್ರಿ ಸ್ಥಾನಕ್ಕೆ ನೇರವಾಗಿ ಬಂದು ಕುಳಿತುಕೊಳ್ಳುವ ಅವಕಾಶ ಹೆಚ್ಚಾಗಿದೆ.ಇವರ ಬದ್ದತೆ,ಎಲ್ಲವನ್ನೂ ತಾಳ್ಮೆಯಿಂದ ಅಲಿಸುವ ಗುಣ ,ಪರಿಹಾರಕ್ಕೆ ದಾರಿ ತೋರಿಸುವ ಸಹಾನುಭೂತಿ ಇವರನ್ನು ರಾಜಕಾರಣಕ್ಕೆ ಎಳೆದು ತಂದಿರ ಬಹುದು ಅರತಿ ಕೃಷ್ಣ ಕಳೆದ ಇಪ್ಪತ್ತು ವರ್ಷಗಳಿಂದ ಬೇರೆ ಜಿಲ್ಲೆಯ ಉಸ್ತುವಾರಿಗೆ ಕೊನೆಗಾಣಿಸಬಹುದು.ಮಹಾನ್ ಮಹಾನ್ ಲೀಡರ್ ಗಳಿಗೆ ಅದರಲ್ಲೂ ಮಹಿಳೆಯರು ಮಂತ್ರಿ ಆಗಬೇಕದವರಿಗೆ ಬಿಸಿ ತುಪ್ಪವಾಗಿರ ಬಹುದು.ಕರ್ನಾಟಕದಲ್ಲಿ ಅನಿವಾಸಿ ಭಾರತೀಯರ ಸಚಿವಾಲಯ ತೆರೆದಿದ್ದು ಹೀಗಾಗಿ ಅರತಿಗೆ ಅದೃಷ್ಟದ ಬಾಗಿಲು ತೆರೆದಿದೆ.

Ministerial guarantee for Arathikrishna – Srinivas for Tirupati? – Nayana Nava Avatara is in trouble, trouble

Share

Leave a comment

Leave a Reply

Your email address will not be published. Required fields are marked *

Don't Miss

ಸಿಐಡಿ ಪೊಲೀಸ್ ರಿಂದ ಪಂಜರದಲ್ಲಿ ಬಂಧಿಸಿಟ್ಟಿದ ಕಾಡು ಗಿಳಿ ವಶ

ಚಿಕ್ಕಮಗಳೂರು : ಅಕ್ರಮವಾಗಿ ಪಂಜರದಲ್ಲಿ ಬಂಧಿಸಿಟ್ಟಿದ ಕಾಡು ಗಿಳಿಗಳನ್ನು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳ ವಶಕ್ಕೆ ಪಡೆದಿದೆ ನಗರದ ಟಿಪ್ಪುನಗರದ ಚಾಮುಂಡಿ ಕಾಫಿ ಕ್ಯೂರಿಂಗ್ ಹಿಂಭಾಗದ ರಾಜಸ್ತಾನ ಕುಳ್ಳಿ ರಸ್ತೆಯ...

ಸಖರಾಯಪಟ್ಟಣದಲ್ಲಿ ಹಣದ ವಿಷಯಕ್ಕೆ ಸ್ನೇಹಿತನೇ ಕೊಲೆ

ಕಡೂರು: ಅಪಘಾತದಲ್ಲಿ ಯುವಕ ಸಾವನ್ನಪ್ಪಿದ್ದ ಎಂದು ಭಾವಿಸಿದ್ದ ಪ್ರಕರಣ ತಿರುವು ಪಡೆದುಕೊಂಡಿದ್ದು, ಹಣದ ವಿಷಯಕ್ಕೆ ಸ್ನೇಹಿತನೇ ಕೊಲೆ ಮಾಡಿರುವುದನ್ನು ಸಖರಾಯಪಟ್ಟಣ ಪೊಲೀಸರು ಪತ್ತೆ ಮಾಡಿದ್ದಾರೆ. ಜೂನ್ 13ರ ರಾತ್ರಿ ಸಖರಾಯಪಟ್ಟಣ ಪೊಲೀಸ್...

Related Articles

ರೂಬೆನ್ ಮೊಸಸ್ ಗೆ ನ್ಯಾಷನಲ್ ಬೆಸ್ಟ್ ಸೋಷಿಯಲ್ ವರ್ಕರ್ ಅವಾರ್ಡ್ 

ಚಿಕ್ಕಮಗಳೂರು: ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿರುವ ರೂಬೆನ್ ಮೊಸಸ್ ರವರಿಗೆ ನ್ಯಾಷನಲ್ ಬೆಸ್ಟ್ ಸೋಷಿಯಲ್ ವರ್ಕರ್ ಅವಾರ್ಡ್ ದೊರೆತಿದೆ....

ಹಿರಿಯ ನಾಗರಿಕರಿಗೆ ಪಿಂಚಣಿ ಸೌಲಭ್ಯ ನೀಡಲು ಮನವಿ

ಚಿಕ್ಕಮಗಳೂರು:  ಹಿರಿಯ ನಾಗರೀಕರಿಗೆ ಸಂಧ್ಯಾ ಸುರಕ್ಷಾ, ವಿಧವಾ ಹಾಗೂ ಅಂಗವಿಕಲ ವೇತನವನ್ನು ಒದಗಿಸಿಕೊಡಬೇಕು ಎಂದು ಆಗ್ರಹಿಸಿ...

ಜಲಾಶಯದ ನೀರು ಕುಡಿಯುವ ನೀರಿಗೆ ಬಳಕೆ

ಚಿಕ್ಕಮಗಳೂರು: ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆಯ ಕೊರತೆಯಿಂದಾಗಿ ರಾಜ್ಯದ ಜಲಾಶಯಗಳಲ್ಲಿ ನೀರಿನ ಮಟ್ಟ ತೀವ್ರವಾಗಿ ಕ್ಷೀಣಿಸುತ್ತಿದ್ದು,...

ಆಗಸ್ಟ್ 2ಕ್ಕೆ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಯ ಪರೀಕ್ಷೆಗೆ ನಿಷೇಧಾಜ್ಞೆ ಜಾರಿ

ಚಿಕ್ಕಮಗಳೂರು: ಪೊಲೀಸ್ ಕಾನ್‌ಸ್ಟೇಬಲ್ (ಸಿವಿಲ್) ಹುದ್ದೆಗಳ ನೇರ ನೇಮಕಾತಿಗಾಗಿ ಆಗಸ್ಟ್ ೨ ರಂದು ಲಿಖಿತ ಪರೀಕ್ಷೆ...