ಚಿಕ್ಕಮಗಳೂರು: ಹಿರಿಯ ನಾಗರೀಕರಿಗೆ ಸಂಧ್ಯಾ ಸುರಕ್ಷಾ, ವಿಧವಾ ಹಾಗೂ ಅಂಗವಿಕಲ ವೇತನವನ್ನು ಒದಗಿಸಿಕೊಡಬೇಕು ಎಂದು ಆಗ್ರಹಿಸಿ ಮಂಗಳವಾರ ಫೆಡರೇಷನ್ ಆಫ್ ಸೀನಿಯರ್‍ಸ್ ಸಿಟಿ ಜನ್ ಪೋರಮ್‌ನ ಪದಾಧಿಕಾರಿಗಳು ಜಿಲ್ಲಾಡಳಿತ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಫೆಡರೇಷನ್ ಅಧ್ಯಕ್ಷ ಕೆ.ಎಲ್.ನಂಜುಂಡರಾವ್ ಮಾತನಾಡಿ ಸರ್ಕಾರ ಕಳೆದ ನಾಲ್ಕು ತಿಂಗ ಳಿಂದ ಹಿರಿಯ ನಾಗರೀಕರಿಗೆ ವೃದ್ದಾಪ್ಯ, ಸಂಧ್ಯಾಸುರಕ್ಷಾ, ವಿಧವಾ, ಅಂಗವಿಕಲ ವೇತನವನ್ನು ನೀಡಿರುವು ದಿಲ್ಲ. ಇದರಿಂದ ಬಹಳಷ್ಟು ತೊಂದರೆಯಾಗಿದೆ ಎಂದು ತಿಳಿಸಿದರು.
ವೃದ್ದಾಪ್ಯದಲ್ಲಿ ಆರೋಗ್ಯದಲ್ಲಿ ಹಿರಿಯರಿಗೆ ಏರುಪೇರಾಗುವುದು ಸಹಜ. ಹೀಗಾಗಿ ಆರೋಗ್ಯ ಚಿಕಿತ್ಸೆ, ಔಷಧಿ, ಮಾತ್ರೆಗಳಿಗೆ ಸರ್ಕಾರದ ವೇತನಕ್ಕೆ ಹಿರಿಯರು ಸೀಮಿತರಾಗಿದ್ದಾರೆ. ಇದೀಗ ಮುರ್‍ನಾಲ್ಕು ತಿಂಗಳಿಂ ದ ವೇತನ ವಿತರಿಸದಿರುವ ಕಾರಣ ಅಲೆದಾಡುವಂತಾಗಿದೆ ಎಂದು ಹೇಳಿದರು.
ಕೂಡಲೇ ಜಿಲ್ಲಾಧಿಕಾರಿಗಳು ಹಿರಿಯ ನಾಗರೀಕರಿಗೆ ದೊರಕಬೇಕಾದ ಸೌಲಭ್ಯವನ್ನು ಮುಖ್ಯಮಂತ್ರಿಗ ಳ ಗಮನಕ್ಕೆ ತಂದು ಶೀಘ್ರದಲ್ಲೇ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಫೆಡರೇಷನ್‌ನ ಗೌರವಾಧ್ಯಕ್ಷ ಮುನೀರ್ ಅಹ್ಮದ್, ಪ್ರಧಾನ ಕಾರ್ಯದರ್ಶಿ ಎಸ್. ರಾಮಚಂದ್ರ, ಉಪಾಧ್ಯಕ್ಷೆ ಸಿ.ಸಂಧ್ಯಾರಾಣಿ, ಎನ್.ಜಿ.ರಾಜಶೇಖರ್, ಎಂ.ಸಿ.ಜೋಯಿ, ಕೆ.ಟಿ.ಪುಟ್ಟಣ್ಣ, ಮು ಖಂಡರುಗಳಾದ ಬಿ.ಎಂ.ಕುಮಾರ್, ಎಲ್.ವಿ.ಕೃಷ್ಣಮೂರ್ತಿ ಮುಂತಾದವರು ಉಪಸ್ಥಿತರಿದ್ದರು.
Appeal to provide pension facility to senior citizens
Leave a comment