Home namma chikmagalur chikamagalur ಸಿ.ಟಿ.ರವಿಯಿಂದ ಸಮಾಜದಲ್ಲಿ ಸಾಮರಸ್ಯ ಕದಡುವ ಕೆಲಸ
chikamagalurHomeLatest Newsnamma chikmagalur

ಸಿ.ಟಿ.ರವಿಯಿಂದ ಸಮಾಜದಲ್ಲಿ ಸಾಮರಸ್ಯ ಕದಡುವ ಕೆಲಸ

Share
oplus_161480704
Share

ಚಿಕ್ಕಮಗಳೂರು : ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ಮುಲ್ಲಾನ ಎದೆ ಸೀಳಿದರೆ ಮೂರಕ್ಷರ ಇಲ್ಲ ಎನ್ನುವ ಮೂಲಕ ಸಮಾಜದಲ್ಲಿ ಸಾಮರಸ್ಯ ಕದಡುವ ಕೆಲಸ ಮಾಡುತ್ತಿದ್ದು ಇವರ ನಾಲಿಗೆಯಿಂದ ಮೆದುಳಿಗೆ ನೆಟ್ವರ್ಕ್ ಕಟ್ಟಾಗಿರುವಂತೆ ಕಾಣುತ್ತಿದೆ ಎಂದು ಕಾಂಗ್ರೆಸ್ ಜಿಲ್ಲಾ ವಕ್ತಾರ ರೂಬಿನ್‌ಮೊಸೆಸ್ ವ್ಯಂಗ್ಯವಾಡಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವ್ಯಕ್ತಿ ತಾವೊಬ್ಬ ಸಚಿವನಾಗಿದ್ದವನು ಎಂಬುದನ್ನು ಮರೆತು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಯಾವುದೇ, ಹೋರಾಟವಿರಲಿ ಇವರಿಗೆ ಕಾಣುವುದು ಮುಸಲ್ಮಾನರು. ಯಾವೊಬ್ಬ ವ್ಯಕ್ತಿ ತಪ್ಪು ಮಾಡಿದ್ದರೆ ವೈಯಕ್ತಿಕವಾಗಿ ಅವರ ಬಗ್ಗೆ ಮಾತಾಡಲಿ ಅದನ್ನು ಬಿಟ್ಟು ಅವರ ಧರ್ಮವನ್ನೇ ಟಾರ್ಗೆಟ್ ಮಾಡುವುದು ಹಿಂದಿನಿಂದಲೂ ಇವರ ರಾಜಕೀಯ ಷಡ್ಯಂತರವಾಗಿದೆ. ಇಂತಹ ಕಟುವಾದ ಮಾತನ್ನು ಕೇಳಿಯೂ ಕೆಲ ಮುಸಲ್ಮಾನ ಸ್ನೇಹಿತರು ಬಿಜೆಪಿಯಲ್ಲಿದ್ದಾರೆ. ಅವರಿಗೆ ಧರ್ಮದ ಬಗ್ಗೆ ಗೌರವವಿದ್ದರೆ ಬಿಜೆಪಿಯಿಂದ ಹೊರಬರಲಿ ಎಂದರು.

ರಾಷ್ಟ್ರಪತಿಯಾಗಿದ್ದ ಎಪಿಜೆ ಅಬ್ಬುಲ್ ಕಲಾಂ ಕೂಡ ಮುಲ್ಲಾನೆ, ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣಬಿಟ್ಟ ಶಹೀದ್ ಅಶ್ವಕ್ ಉಲ್ಲಾಖಾನ್ ಒಬ್ಬಮುಲ್ಲಾ ಅನ್ನೋದು ಸಿ.ಟಿ.ರವಿಗೆ ಗೊತ್ತಿಲ್ಲ. ಮುಲ್ಲಾ ಎಂದರೆ ದೇವರು ಮತ್ತು ಭಕ್ತರ ನಡುವೆ ಇರುವ ಅರ್ಚಕನಿದ್ದಂತೆ. ಅಂತಹ ಹುದ್ದೆಗೆ ಇವರು ಅಗೌರವ ತೋರಿದ್ದಾರೆ ಎಂದು ಹೇಳಿದ ಅವರು ಮುಲ್ಲಾ ಎಂದು ಆರೋಪಿಸಿರುವ ವ್ಯಕ್ತಿಯ ಕೃತ್ಯ ಜಂತರ್ ಮಂತರ್ ನಲ್ಲಿ ನಡೆದಿದ್ದಲ್ಲ. ಬೇರೆ ವಿಡೀಯೋದ ಅಸಲಿಯತ್ತನ್ನೂ ತಿಳಿಯದ ಡಾ.ಸಿ.ಟಿ.ರವಿ ಈ ರೀತಿ ಮಾತಾಡಿರುವುದರ ಹಿಂದೆ ಸಮಾಜದ ಸ್ವಾಸ್ಥ್ಯ ಕದಡುವ ಹುನ್ನಾರ ಇದೆ ಎಂದರು.

ಬಿಜೆಪಿಗರು ಈಗಲೂ ಪೊಲೀಸ್ ಇಲಾಖೆಯನ್ನೂ ತಮ್ಮ ಹದ್ದುಬಸ್ತಿನಲ್ಲೇ ಇಟ್ಟುಕೊಂಡಿದ್ದಾರೆ ಎಂಬುದಕ್ಕೆ ನಿನ್ನೆಯ ನಿದರ್ಶನವೇ ಸಾಕ್ಷಿ. ಮುಲ್ಲಾ ಹೇಳಿಕೆ ಸಂಬಂಧ ದೂರು ದಾಖಲಾದ ಹಿನ್ನೆಲೆಯಲ್ಲಿ ಪೊಲೀಸರು ಸಿ.ಟಿ.ರವಿ ಮನೆಗೆ ನೊಟೀಸ್ ಕೊಡಲು ಹೋಗಿದ್ದರು. ಅದಕ್ಕೂ ಮುನ್ನ ಬಿಜೆಪಿ ಪಟಾಲಂ ಅಲ್ಲಿ ನೆರೆದಿತ್ತು. ಪೊಲೀಸರು ಬರುತ್ತಾರೆ ಎಂದು ಸಿ.ಟಿ.ರವಿಗೆ ಕನಸು ಬಿದಿತ್ತೆ ಎಂದು ಪ್ರಶ್ನಿಸಿದ ಅವರು ತಮ್ಮ ಮನೆಗೆ ಬರುವ ವಿಚಾರವನ್ನು ಇದೇ ಪೊಲೀಸರು ಸಿ.ಟಿ.ರವಿಗೆ ಮೊದಲೇ ತಿಳಿಸಿದ್ದಾರೆ ಎಂದು ಆರೋಪಿಸಿದರು.

ತಮ್ಮ ಪಕ್ಷ ಶಿಸ್ತಿನ ಪಕ್ಷ ಎಂದು ಬೊಗಳೆ ಬಿಡುವ ಸಿ.ಟಿ.ರವಿ ಪೊಲೀಸರು ತಮ್ಮ ಮನೆಗೆ ನೊಟೀಸ್ ಕೊಡಲು ಬಂದಾಗ ಕಾನೂನಿಗೆ ಗೌರವ ಕೊಟ್ಟು ಅದನ್ನು ಸ್ವೀಕರಿಸಬೇಕಿತ್ತು. ಅದನ್ನು ಬಿಟ್ಟು ಬಿಜೆಪಿ ಕಾರ್ಯಕರ್ತರ ಮೂಲಕ ಪ್ರತಿಭಟನೆ ಮಾಡಿಸಿ ಪೊಲೀಸರನ್ನೇ ಹಿಮ್ಮೆಟ್ಟಿಸಿರುವುದು ಅವರ ಯೋಗ್ಯತೆಯನ್ನು ತೋರಿಸುತ್ತದೆ ಎಂದರು.

ಕೇಂದ್ರಶಿಕ್ಷಣ ಮಂತ್ರಿ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಪಡೆದರೆ ಸಾಲದು ನೀಟ್ ಅಕ್ರಮದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಕುಟುಂಬಗಳಿಗೆ ಪರಿಹಾರ ನೀಡಬೇಕು. ಪ್ರತಿಭಟನೆ ಮಾಡಿದ ಯುವಕರ ಮೇಲೆ ಯಾವುದೇ ಕಾನೂನು ಕ್ರಮ ಕೈಗೊಳ್ಳಬಾರದು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ತನೋಜ್‌ನಾಯ್ಡು, ಪ್ರಕಾಶ್‌ರೈ, ಶಾಂತಕುಮಾರ್, ರಾಮಚಂದ್ರ, ರಫೀಕ್‌ಅಹ್ಮದ್ ಇದ್ದರು.

C.T. Ravi’s work to disrupt harmony in society

Share

Leave a comment

Leave a Reply

Your email address will not be published. Required fields are marked *

Don't Miss

ಜಿಲ್ಲೆಯಲ್ಲಿ ಮೂರು ತಿಂಗಳಿಂದ ಪಿಂಚಣಿ ಹಣ ಸ್ಥಗಿತ

ಚಿಕ್ಕಮಗಳೂರು: ಸಾಮಾಜಿಕ ಭದ್ರತಾ ಯೋಜನೆಗಳಡಿ ವೃದ್ಧಾಪ್ಯ, ವಿಧವಾ ಸೇರಿದಂತೆ ವಿವಿಧ ಮಾಸಿಕ ಪಿಂಚಣಿಗಳನ್ನು ಪಡೆಯುತ್ತಿರುವ ಫಲಾನುಭವಿಗಳಿಗೆ “ತಿಳುವಳಿಕೆ ಪತ್ರ” ನೀಡುವ ನೆಪದಲ್ಲಿ ಕಳೆದ ಸುಮಾರು ಮೂರು ತಿಂಗಳಿಂದ ಪಿಂಚಣಿ ಹಣ ತಡೆಹಿಡಿಯಲಾಗಿದೆ...

ಕಾಡುಕೋಣ ದಾಳಿಗೆ ಕಾರ್ಮಿಕ ಬಲಿ

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡುಕೋಣಗಳ ಹಾವಳಿ ಮತ್ತೆ ಜೀವ ಬಲಿ ಪಡೆದಿದೆ. ಕೊಪ್ಪ ತಾಲೂಕಿನ ಅಗಳಗಂಡಿ ಸಮೀಪದ ದೋಣಿಹಡ್ಲು ಗ್ರಾಮದಲ್ಲಿ ಕಾಡುಕೋಣ ದಾಳಿಗೆ 45 ವರ್ಷದ ಮಂಜುನಾಥ್ ಮೃತಪಟ್ಟಿದ್ದಾರೆ. ಮಂಜುನಾಥ್...

Related Articles

ಯಗಟಿ ಸಮೀಪದ ವಿದ್ಯುತ್ ತಂತಿ ತಗುಲಿ ವ್ಯಕ್ತಿ ಬಲಿ

ಚಿಕ್ಕಮಗಳೂರು: ಕಾಡುಹಂದಿ ಬೇಟೆಗಾಗಿ ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್ ತಂತಿ ತಗುಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಸಿಕ್ಕಿಬೀಳುವ ಭೀತಿಯಿಂದ ಬೇಟೆಗಾರರು...

ಸಿ.ಟಿ.ರವಿಯನ್ನು ಇನ್ನೆರಡು ದಿನದಲ್ಲಿ ಬಂಧಿಸದಿದ್ದರೆ ಜಿಲ್ಲಾ ಬಂದ್‌

ಮೂಡಿಗೆರೆ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಸಮರ್ಥಿಸುವ ಭರದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು...

ಎಲ್ಲಾ ಧರ್ಮದವರನ್ನು ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ

ಚಿಕ್ಕಮಗಳೂರು : ಜಿಲ್ಲೆಯಲ್ಲಿ ಎಲ್ಲಾ ಧರ್ಮದ ಜನರು ಪ್ರೀತಿ ಸ್ನೇಹದಿಂದ ಬದುಕುತ್ತಿರುವ ಇಂತಹ ಪರಂಪರೆಯನ್ನು ಗೌರವಿಸಬೇಕಾಗಿರುವುದು...

ರಾಜ್ಯ ಸರ್ಕಾರ ಜನ ಸಾಮಾನ್ಯರ ಜೀವನದ ಜೊತೆ ಚೆಲ್ಲಾಟ

ಕೊಪ್ಪ: ವೃದ್ಧಾಪ್ಯ ವೇತನ, ಅಂಗವಿಕಲ ವೇತನ ಹಾಗೂ ವಿಧವಾ ವೇತನ ಪಡೆಯಲು ರಾಜ್ಯ ಸರ್ಕಾತ ಗರಿ?...