Home namma chikmagalur chikamagalur ಮಹಿಳೆಯರು ಧರಿಸುವ ‘ನೈಟಿ’ ಧರಸಿ ದೇವಸ್ಥಾನದಲ್ಲಿ ಕಳ್ಳತನ
chikamagalurHomeLatest Newsnamma chikmagalur

ಮಹಿಳೆಯರು ಧರಿಸುವ ‘ನೈಟಿ’ ಧರಸಿ ದೇವಸ್ಥಾನದಲ್ಲಿ ಕಳ್ಳತನ

Share
Share

ಚಿಕ್ಕಮಗಳೂರು:  ದೇವಸ್ಥಾನಗಳಲ್ಲಿ ಕಳ್ಳತನ ನಡೆಯುವುದು ಹೊಸದೇನಲ್ಲ. ಆದರೆ, ಪತ್ತೆಯಾಗಬಾರದು ಎಂದು ಕಳ್ಳರು ಹೂಡುವ ತಂತ್ರಗಳು ಮಾತ್ರ ಪೊಲೀಸರಿಗಷ್ಟೇ ಅಲ್ಲದೆ ಸಾರ್ವಜನಿಕರಿಗೂ ಅಚ್ಚರಿ ಮೂಡಿಸುತ್ತವೆ. ಇದೀಗ ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂತಹುದೇ ಒಂದು ವಿಚಿತ್ರ ಹಾಗೂ ಕತರ್ ನಾಕ್ ಕಳ್ಳತನ ಘಟನೆ ನಡೆದಿದ್ದು, ಕಳ್ಳನ ನೈಟಿ ಜಿಮಿಕ್ ಕಂಡು ಗ್ರಾಮಸ್ಥರು ಮತ್ತು ಪೊಲೀಸರು ಬೆಚ್ಚಿಬಿದ್ದಿದ್ದಾರೆ!

ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಜಲ್ಲದೀಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಪ್ರಸಿದ್ಧ ಶಂಕರಲಿಂಗೇಶ್ವರ ಸ್ವಾಮಿ ದೇವಸ್ಥಾನಕ್ಕೆ ಮಧ್ಯರಾತ್ರಿ ನುಗ್ಗಿದ ಕಳ್ಳ, ದೇವರ ಹುಂಡಿಗೆ ಕನ್ನ ಹಾಕಿದ್ದಾನೆ. ಆದರೆ, ಇಲ್ಲಿ ವಿಶೇಷ ಏನೆಂದರೆ ತನ್ನ ಗುರುತು ಸಿಗಬಾರದು ಎಂಬ ಕಾರಣಕ್ಕೆ ಈತ ಮಹಿಳೆಯರು ಧರಿಸುವ ‘ನೈಟಿ’  ತೊಟ್ಟು ಬಂದಿದ್ದನು!

ಮೊನ್ನೆ ಮಧ್ಯರಾತ್ರಿ ಸುಮಾರು 1:45 ರ ವೇಳೆಗೆ ದೇವಸ್ಥಾನದ ಆವರಣಕ್ಕೆ ನುಗ್ಗಿದ ಈ ಖದೀಮ, ಮೈ ಮೇಲೆಲ್ಲಾ ಹೊದಿಕೆ ಹಾಕ್ಕೊಂಡು ಅತಿ ಚಾಣಾಕ್ಷತನದಿಂದ ಹುಂಡಿಯಲ್ಲಿದ್ದ ಹಣವನ್ನು ಕದ್ದಿದ್ದಾನೆ. ಹುಂಡಿಯಲ್ಲಿದ್ದ ಕಾಗದದ ನೋಟುಗಳನ್ನು ಮಾತ್ರ ಕಳವು ಮಾಡಿ, ಚಿಲ್ಲರೆ ನಾಣ್ಯಗಳನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.

ಕಳ್ಳತನದ ಸಂಪೂರ್ಣ ದೃಶ್ಯಾವಳಿಗಳು ದೇವಸ್ಥಾನದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ನೈಟಿ ಧರಿಸಿ, ಮುಖ ಮುಚ್ಚಿಕೊಂಡು ಹುಂಡಿ ಒಡೆಯುವ ಕಳ್ಳನ ಕೃತ್ಯ ಈಗ ವೈರಲ್ ಆಗಿದೆ. ಬೆಳಿಗ್ಗೆ ದೇವಸ್ಥಾನಕ್ಕೆ ಬಂದ ಅರ್ಚಕರು ಹಾಗೂ ಸ್ಥಳೀಯರು ಹುಂಡಿ ಒಡೆದಿರುವುದನ್ನು ನೋಡಿ ತಕ್ಷಣ ಅಜ್ಜಂಪುರ ಪೊಲೀಸ್ ಠಾಣೆಗೆ

ಜಲದಿಹಳ್ಳಿ ಗ್ರಾಮಸ್ಥರ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಅಜ್ಜಂಪುರ ಪೊಲೀಸರು, ಸಿಸಿಟಿವಿ ಫೂಟೇಜ್ (CCTV Footage) ಆಧರಿಸಿ ಈ ಕತರ್ ನಾಕ್ ‘ನೈಟಿ ಕಳ್ಳ’ನ ಪತ್ತೆಗಾಗಿ ಬಲೆ ಬೀಸಿದ್ದಾರೆ.

Women’s ‘nightie’ stole from temple

Share

Leave a comment

Leave a Reply

Your email address will not be published. Required fields are marked *

Don't Miss

ಜಿಲ್ಲೆಯಲ್ಲಿ ಮೂರು ತಿಂಗಳಿಂದ ಪಿಂಚಣಿ ಹಣ ಸ್ಥಗಿತ

ಚಿಕ್ಕಮಗಳೂರು: ಸಾಮಾಜಿಕ ಭದ್ರತಾ ಯೋಜನೆಗಳಡಿ ವೃದ್ಧಾಪ್ಯ, ವಿಧವಾ ಸೇರಿದಂತೆ ವಿವಿಧ ಮಾಸಿಕ ಪಿಂಚಣಿಗಳನ್ನು ಪಡೆಯುತ್ತಿರುವ ಫಲಾನುಭವಿಗಳಿಗೆ “ತಿಳುವಳಿಕೆ ಪತ್ರ” ನೀಡುವ ನೆಪದಲ್ಲಿ ಕಳೆದ ಸುಮಾರು ಮೂರು ತಿಂಗಳಿಂದ ಪಿಂಚಣಿ ಹಣ ತಡೆಹಿಡಿಯಲಾಗಿದೆ...

ಕಾಡುಕೋಣ ದಾಳಿಗೆ ಕಾರ್ಮಿಕ ಬಲಿ

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡುಕೋಣಗಳ ಹಾವಳಿ ಮತ್ತೆ ಜೀವ ಬಲಿ ಪಡೆದಿದೆ. ಕೊಪ್ಪ ತಾಲೂಕಿನ ಅಗಳಗಂಡಿ ಸಮೀಪದ ದೋಣಿಹಡ್ಲು ಗ್ರಾಮದಲ್ಲಿ ಕಾಡುಕೋಣ ದಾಳಿಗೆ 45 ವರ್ಷದ ಮಂಜುನಾಥ್ ಮೃತಪಟ್ಟಿದ್ದಾರೆ. ಮಂಜುನಾಥ್...

Related Articles

ಯಗಟಿ ಸಮೀಪದ ವಿದ್ಯುತ್ ತಂತಿ ತಗುಲಿ ವ್ಯಕ್ತಿ ಬಲಿ

ಚಿಕ್ಕಮಗಳೂರು: ಕಾಡುಹಂದಿ ಬೇಟೆಗಾಗಿ ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್ ತಂತಿ ತಗುಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಸಿಕ್ಕಿಬೀಳುವ ಭೀತಿಯಿಂದ ಬೇಟೆಗಾರರು...

ಸಿ.ಟಿ.ರವಿಯನ್ನು ಇನ್ನೆರಡು ದಿನದಲ್ಲಿ ಬಂಧಿಸದಿದ್ದರೆ ಜಿಲ್ಲಾ ಬಂದ್‌

ಮೂಡಿಗೆರೆ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಸಮರ್ಥಿಸುವ ಭರದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು...

ಸಿ.ಟಿ.ರವಿಯಿಂದ ಸಮಾಜದಲ್ಲಿ ಸಾಮರಸ್ಯ ಕದಡುವ ಕೆಲಸ

ಚಿಕ್ಕಮಗಳೂರು : ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ಮುಲ್ಲಾನ ಎದೆ ಸೀಳಿದರೆ ಮೂರಕ್ಷರ ಇಲ್ಲ...

ಎಲ್ಲಾ ಧರ್ಮದವರನ್ನು ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ

ಚಿಕ್ಕಮಗಳೂರು : ಜಿಲ್ಲೆಯಲ್ಲಿ ಎಲ್ಲಾ ಧರ್ಮದ ಜನರು ಪ್ರೀತಿ ಸ್ನೇಹದಿಂದ ಬದುಕುತ್ತಿರುವ ಇಂತಹ ಪರಂಪರೆಯನ್ನು ಗೌರವಿಸಬೇಕಾಗಿರುವುದು...