Home namma chikmagalur chikamagalur ಕೋಟ್ಯಂತರ ರೂಪಾಯಿ ಮೌಲ್ಯದ ಬ್ಯಾಂಕ್ ಆಸ್ತಿ ಪತ್ರಗಳೊಂದಿಗೆ ಮಹಿಳೆ ನಾಪತ್ತೆ
chikamagalurCrime NewsHomeLatest Newsnamma chikmagalur

ಕೋಟ್ಯಂತರ ರೂಪಾಯಿ ಮೌಲ್ಯದ ಬ್ಯಾಂಕ್ ಆಸ್ತಿ ಪತ್ರಗಳೊಂದಿಗೆ ಮಹಿಳೆ ನಾಪತ್ತೆ

Share
Share

ಕಡೂರು: ಕೋರ್ಟ್ ವಿಚಾರಣೆಗಾಗಿ ಚಿಕ್ಕಮಗಳೂರಿಗೆ ಹೋಗಿ ಬರುವುದಾಗಿ ಹೇಳಿ ಹೋದ ಮಹಿಳೆಯೊಬ್ಬರು ಮನೆಯಲ್ಲಿದ್ದ ನೂರಾರು ಗ್ರಾಂ ಚಿನ್ನಾಭರಣ ಹಾಗೂ ಕೋಟ್ಯಂತರ ರೂಪಾಯಿ ಮೌಲ್ಯದ ಬ್ಯಾಂಕ್ ಆಸ್ತಿ ಪತ್ರಗಳೊಂದಿಗೆ ನಿಗೂಢವಾಗಿ ನಾಪತ್ತೆಯಾಗಿರುವ ಆಘಾತಕಾರಿ ಘಟನೆ ಸಿಂಗಟಗೆರೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ತಾಲೂಕಿನ ಹುಲಿಗೆರೆ ಯಗಟಿ ಗ್ರಾಮದ ವೀರಭದ್ರಪ್ಪ ಎಚ್.ಎಂ. ಎಂಬುವವರ ಮೊದಲ ಪುತ್ರಿ ಸುಜಾತ (42 ವರ್ಷ) ನಾಪತ್ತೆಯಾದ ದುರ್ದೈವಿ. ಇವರ ಪತಿ ಶಿವನಂಜೇಗೌಡ ಎಂಬುವವರು ಸುಮಾರು 10 ವರ್ಷಗಳ ಹಿಂದೆಯೇ ನಿಧನರಾಗಿದ್ದರು. ಪತಿಯ ಅಗಲಿಕೆಯ ನಂತರ ಕಳೆದ 8 ವರ್ಷಗಳಿಂದ ಸುಜಾತ ಅವರು ಹುಲಿಗೆರೆ ಯಗಟಿಯಲ್ಲಿರುವ ತಮ್ಮ ತಂದೆಯ ಮನೆಯಲ್ಲೇ ಆಶ್ರಯ ಪಡೆದಿದ್ದು, ತಂದೆ ಮತ್ತು ಸೋದರ ಯೋಗೀಶ್ ಇವರ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದರು ಶುಕ್ರವಾರ ಬೆಳಗ್ಗೆ 8:00 ಗಂಟೆಗೆ ಸುಜಾತ ಅವರು “ಚಿಕ್ಕಮಗಳೂರು ನ್ಯಾಯಾಲಯದಲ್ಲಿ ಇಂದು ನನ್ನ ಕೇಸಿನ ವಿಚಾರಣೆ ಇದೆ” ಎಂದು ಹೇಳಿ ಮನೆಯಿಂದ ಹೊರಟಿದ್ದರು.

ಆದರೆ, ಕತ್ತಲಾಗಿ ರಾತ್ರಿ 9:00 ಗಂಟೆಯಾದರೂ ಅವರು ಮನೆಗೆ ಮರಳಿ ಬಂದಿರಲಿಲ್ಲ. ಇದರಿಂದ ಆತಂಕಗೊಂಡ ತಂದೆ ವೀರಭದ್ರಪ್ಪ ಮತ್ತು ಸೋದರ ಯೋಗೀಶ್ ತಕ್ಷಣವೇ ಬೈಕ್ ಹತ್ತಿ ಕಡೂರು, ಚಿಕ್ಕಮಗಳೂರು, ಅರಸೀಕೆರೆ ಹಾಗೂ ಬಾಣಾವಾರದ ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣ ಸೇರಿದಂತೆ ಸಂಭವನೀಯ ಎಲ್ಲಾ ಕಡೆಗಳಲ್ಲಿ ಇಡೀ ರಾತ್ರಿ ಜಾಲಾಡಿದ್ದಾರೆ. ಆ ಬಳಿಕ ವಿವಿಧ ಊರುಗಳಲ್ಲಿದ್ದ ತಮ್ಮ ಎಲ್ಲಾ ಪ್ರಮುಖ ಸಂಬಂಧಿಕರಿಗೂ ಕರೆ ಮಾಡಿ ವಿಚಾರಿಸಿದಾಗಲೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಮಗಳು ಎಲ್ಲಿಯೂ ಪತ್ತೆಯಾಗದ ಕಾರಣ ಮರುದಿನ ಬೆಳಗ್ಗೆ ಬೇಸರದಿಂದ ಮನೆಗೆ ಮರಳಿದ ಕುಟುಂಬಸ್ಥರು, ಸುಜಾತ ಮಲಗುತ್ತಿದ್ದ ಬೆಡ್ ರೂಮ್ ಹಾಗೂ ಅಲ್ಲಿದ್ದ ಬೀರುವನ್ನು ಪರಿಶೀಲಿಸಿದ್ದಾರೆ.

ಈ ವೇಳೆ ಅಲ್ಲಿ ಕಂಡುಬಂದ ದೃಶ್ಯ ಪೋಷಕರ ಕಾಲ ಕೆಳಗಿನ ಭೂಮಿ ಕುಸಿಯುವಂತೆ ಮಾಡಿದೆ. ಸುಜಾತ ಅವರು ಮನೆಯಿಂದ ಹೊರಡುವಾಗಲೇ ಸಂಪೂರ್ಣ ಸಿದ್ಧತೆಯೊಂದಿಗೆ ಹೊರಟಿರುವುದು ಬೆಳಕಿಗೆ ಬಂದಿದೆ. ಬೀರುವಿನಲ್ಲಿದ್ದ 1 ಲಾಂಗ್ ಚೈನ್, 1 ಗುಂಡಿನ ಲಾಂಗ್ ಚೈನ್, 3 ಕೊರಳ ಚೈನ್, 4 ಉಂಗುರಗಳು, 4 ಜೊತೆ ವಾಲೆಗಳು ಹಾಗೂ 3 ಜೊತೆ ಬಳೆಗಳು ಸೇರಿದಂತೆ ಸುಮಾರು 200 ರಿಂದ 250 ಗ್ರಾಂ ತೂಕದ ಚಿನ್ನದ ಒಡವೆಗಳನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದಾರೆ. ಇದರೊಂದಿಗೆ ಹೆಚ್‌ಡಿಎಫ್‌ಸಿ ಬ್ಯಾಂಕ್‌ನ ಪಾಸ್‌ಬುಕ್, ಬ್ಯಾಂಕಿನಲ್ಲಿ ಇಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಎಫ್‌ಡಿ (ಸ್ಥಿರ ಠೇವಣಿ) ಬಾಂಡ್ ಪೇಪರ್‌ಗಳು, ಇನ್ಸೂರೆನ್ಸ್ ಬಾಂಡ್ ಪೇಪರ್‌ಗಳು ಹಾಗೂ ತಮ್ಮ ಆಧಾರ್ ಕಾರ್ಡ್ ಸೇರಿದಂತೆ ಪ್ರಮುಖ ದಾಖಲೆಗಳನ್ನೆಲ್ಲಾ ಹೊತ್ತು ನಾಪತ್ತೆಯಾಗಿದ್ದಾರೆ.

ಮಗಳು ಒಡವೆ ಹಾಗೂ ಬ್ಯಾಂಕ್ ಆಸ್ತಿಯೊಂದಿಗೆ ನಾಪತ್ತೆಯಾಗಿರುವ ಬಗ್ಗೆ ತಂದೆ ವೀರಭದ್ರಪ್ಪ ಅವರು ನೀಡಿದ ದೂರಿನ ಮೇರೆಗೆ ಸಿಂಗಟಗೆರೆ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ನಾಪತ್ತೆ (ಮಿಸ್ಸಿಂಗ್) ಪ್ರಕರಣ ದಾಖಲಾಗಿದ್ದು, ಪೊಲೀಸರು ಮಹಿಳೆಯ ಪತ್ತೆಗಾಗಿ ತೀವ್ರ ಜಾಲ ಬೀಸಿದ್ದಾರೆ. ಒಂಟಿ ಮಹಿಳೆ ಇಷ್ಟೊಂದು ದೊಡ್ಡ ಪ್ರಮಾಣದ ಚಿನ್ನ ಮತ್ತು ಆಸ್ತಿ ಪತ್ರಗಳೊಂದಿಗೆ ನಾಪತ್ತೆಯಾಗಿರುವುದು ಈ ಭಾಗದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

Woman goes missing with bank property deeds worth crores of rupees

Share

Leave a comment

Leave a Reply

Your email address will not be published. Required fields are marked *

Don't Miss

ಎಂ.ಸಿ. ಹಳ್ಳಿಯಲ್ಲಿ ಕಡವೆ ಬೇಟೆ-ಆರೋಪಿಗಳ ಬಂಧನ

ತರೀಕೆರೆ: ಲಕ್ಕವಳ್ಳಿ ವಲಯದ ಎಂ.ಸಿ. ಹಳ್ಳಿ ಶಾಖೆಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕಡವೆಯನ್ನು ಬೇಟೆ ಮಾಡಿ ಮಾಂಸ ಕತ್ತರಿಸುತ್ತಿರುವ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿ, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ...

ಸೆ.21ರಿಂದ ಮುಖ್ಯಮಂತ್ರಿ ನಿವಾಸದವರೆಗೆ ಬೃಹತ್ ಪಾದಯಾತ್ರೆ

ಚಿಕ್ಕಮಗಳೂರು: ಹೊರಗುತ್ತಿಗೆ ಪೌರನೀರು ಸರಬರಾಜು ನೌಕರರನ್ನು ಪೌರಕಾರ್ಮಿಕರ ಮಾದರಿಯಲ್ಲಿ ವಿಶೇಷ ನೇರ ನೇಮಕಾತಿ ಅಥವಾ ನೇರಪಾವತಿ ವ್ಯವಸ್ಥೆಗೆ ಒಳಪಡಿಸಿ ಸೇವಾ ಭದ್ರತೆ ಕಲ್ಪಿಸಬೇಕು ಎಂದು ಒತ್ತಾಯಿಸಿ ಸೆ.21ರಿಂದ ತುಮಕೂರಿನ ಸಿದ್ದಗಂಗಾ ಮಠದಿಂದ...

Related Articles

ಪೂನಾ ಒಪ್ಪಂದ ಯಥಾವತ್ತಾಗಿ ಜಾರಿಗೆ ಆಗ್ರಹಿಸಿ ದಸಂಸ ಪ್ರತಿಭಟನೆ

ಚಿಕ್ಕಮಗಳೂರು:  ದಲಿತ ಸಮುದಾಯದ ಪ್ರಾತಿನಿಧ್ಯ ಹಾಗೂ ಹಕ್ಕುಗಳನ್ನು ಸಂರಕ್ಷಿಸುವ ಉ ದ್ದೇಶದಿಂದ ಪೂನಾ ಒಪ್ಪಂದ ಯಥಾವತ್ತಾಗಿ...

ಶೇ.90ಕ್ಕೂ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಚಿಕ್ಕಮಗಳೂರು: ಅಖಿಲ ಭಾರತ ವೀರಶೈವ ಮಹಾಸಭಾದ ಚಿಕ್ಕಮಗಳೂರು ಜಿಲ್ಲಾ ಘಟಕದ ವತಿಯಿಂದ 2025–26ನೇ ಸಾಲಿನ ಎಸ್‌ಎಸ್‌ಎಲ್‌ಸಿ...

ರಾಜ್ಯ ಹೆದ್ದಾರಿಯಲ್ಲಿ ದೈತ್ಯ ಒಂಟಿ ಸಲಗ ಪ್ರತ್ಯಕ್ಷ

ಚಿಕ್ಕಮಗಳೂರು : ಪ್ರಸಿದ್ದ ಧಾರ್ಮಿಕ ಕ್ಷೇತ್ರಗಳಾದ ಶೃಂಗೇರಿ ಹಾಗೂ ಹೊರನಾಡಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ...

ಸಾರಿಗೆ ಸಂಸ್ಥೆಯ ಬಸ್ – ದ್ವಿಚಕ್ರ ವಾಹನದ ನಡುವೆ ಮುಖಾಮುಖಿ ಡಿಕ್ಕಿ

ಮೂಡಿಗೆರೆ: ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ಮತ್ತು ದ್ವಿಚಕ್ರ ವಾಹನದ ನಡುವೆ ಮುಖಾಮುಖಿ ಡಿಕ್ಕಿ...