Home Political News ರಾಜಕಾರಣದಲ್ಲಿ ಮಠಗಳ, ಸಂಘಟನೆಗಳ “ಆರ್ಭಟ”
Political NewsState News

ರಾಜಕಾರಣದಲ್ಲಿ ಮಠಗಳ, ಸಂಘಟನೆಗಳ “ಆರ್ಭಟ”

Share
Share

ರಾಜ್ಯ ರಾಜಕಾರಣದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಠಗಳ ಪ್ರಭಾವ ಮತ್ತು ಸಂಘಟನೆಗಳು ಆರ್ಭಟ ಮಾಡುತ್ತಿರುವುದು ನೋಡಿದರೆ ಎತ್ತ ಸಾಗುತ್ತಿದ್ದೇವೆ ಎನ್ನಿಸುತ್ತದೆ. ಮಠಗಳು ಮಿತಿ ದಾಟಿದರೆ ಸಂಘಟನೆಗಳು ಲಾಭಿ ಮಾಡುತ್ತಿರುವುದು “ಸೇವೆಗಾಗಿಯೋ” ಜಾತಿಗಾಗಿಯೋ ಆಥವಾ ಕಾಸಿಗಾಗಿಯೋ ಎಂಬ ಅನುಮಾನ ಸಹಜವಾಗಿ ಬರುತ್ತದೆ.

ಸಿದ್ದರಾಮಯ್ಯ ರಾಜೀನಾಮೆ ನೀಡಿ ಡಿ.ಕೆ.ಶಿವಕುಮಾರ್ ಮುಖ್ಯ ಮಂತ್ರಿಯಾದ ಮೇಲೆ “ಮಂತ್ರಿ” ಸ್ಥಾನದ ಮೇಲೆ ಕಣ್ಣಿಟ್ಟು ಲಾಭಿ ಮಾಡಿಸಲು ಮಠಧೀಶರಗಳನ್ನು ಮತ್ತು ಸಂಘಟನೆಗಳನ್ನು ಬಳಸಿಕೊಂಡು ತಮ್ಮಗಳ ಪರ ಪ್ರಭಾವ ಬೀರಿಸಿಕೊಳ್ಳುತ್ತಿದ್ದಾರೆ.

ಡಿ.ಕೆ.ಪ್ರಮಾಣ ವಚನ ಸ್ವೀಕರಿಸಲು ಅಜ್ಜಯ್ಯನ ಪೋಟೋ ಮತ್ತು ಮಠಧೀಶರುಗಳ ತಂಡವನ್ನು ಲೋಕಭವನಕ್ಕೆ ಕರೆದುಕೊಂಡು ಬಂದ ರೀತಿಯನ್ನು ನೋಡಿದರೆ ಸರ್ಕಾರದ ನಡೆ ಗೋಚರಿಸುತ್ತಿದೆ. ಶಿವರಾಜ್ ತಂಗಡಗಿ ಪರ ಹಿಂದುಳಿದ ವರ್ಗದ ಸ್ವಾಮೀಜಿಗಳ ತಂಡ ಎಸ್,ಎಸ್,ಮಲ್ಲಿಕಾರ್ಜುನ್ ಮತ್ತು ಲಕ್ಮೀಹೆಬಾಳ್ಕರ್ ಪರ ಲಿಂಗಾಯತರ ಮಠಗಳ ಮೂಲಕ ಹೆಚ್.ಸಿ.ಮಹದೇವಪ್ಪನಂತಹ ಹಿರಿಯರ ಪರ, ಜಮೀರ್ ಪರ ಜಾತಿ ಸಂಘಟನೆಗಳು ಬೀದಿಗಿಳಿದು ಹೋರಾಟದ ಮೂಲಕ ಒತ್ತಡ ತರುತ್ತಿರುವುದು ನೋಡಿದರೆ ಪ್ರಜಾಪ್ರಭುತ್ವ ಎಂಬ ಹರಾಜಿನಲ್ಲಿ ರಾಜಕಾರಣ ನಡೆಯುತ್ತಿದೆ ಎನ್ನಿಸುತ್ತದೆ.

ಮಠಗಳು ಜನರ ಒಳಿತಿಗಾಗಿ ಸಂಘಟನೆಗಳು ಶೋಷಿತರ ಪರವಾಗಿ ಇರುವುದು ಬಿಟ್ಟು ಇಂತಹ ರಾಜಕಾರಣಿಗಳ ಮರ್ಜಿಯಲ್ಲಿ ಮಿಂದು ಎಳುತ್ತಿರುವುದು ಏಕೆ? ಎಂಬ ಪ್ರಶ್ನೆಗೆ “ಘಾಟು”ಹೊಡೆಯುತ್ತದೆ.
ಸದಾಕಾಲವೂ ಅಧಿಕಾರ ಇರಬೇಕು ಎಂಬ ಭ್ರಮೆ,ಲಾಲಸೆ,ಮತ್ತು ವ್ಯವಹಾರ ಹಾಗೂ ದರ್ಪ ರಾಜಕಾರಣಿಗಳನ್ನು, ಆವರಿಸಿ ಕೊಂಡಿರುವುದರಿಂದ ಇವ ನಮ್ಮ ಜಾತಿಯವ ಎಂಬ ಕಾರಣಕ್ಕೆ ಮಠಗಳು, ಸಂಘಟನೆಗಳು ದಾರಿ ತಪ್ಪಿವೆ.

ಇನ್ನೂ ಕೆಲ ಮಠಗಳ ಸ್ವಾಮೀಜಿಗಳು ವೇದಿಕೆ ಮೇಲೆ ಹೇಳುವುದು ಒಂದಾದರೆ ನಡೆಯಲ್ಲಿ ವಿಭಿನ್ನ ಒಂದೊಂದು ಕ್ಷೇತ್ರದಲ್ಲೂ ತಮಗೆ ಬೇಕಾದವರ ಪರ ಪ್ರಚಾರ ನಡೆಸುವುದು ಲೋಕ ಕಲ್ಯಾಣ ಎನ್ನಬೇಕೆ? ಇನ್ನೂ ಸಂಘಟನೆಗಳು ಜಾತಿ,ಒಳಜಾತಿ ಸುಳಿಯಲ್ಲಿ ಸಿಕ್ಕಿಕೊಂಡಿವೆ.ಹೀಗಾಗಿ ಅಡ್ಡದಾರಿಯಲ್ಲಿರುವ ರಾಜಕಾರಣಕ್ಕೆ ತಡೆಗೋಡೆ ಯಾಗವಂತೆ ವರ್ತಿಸುತ್ತಿರುವುದು ಆರ್ಭಟ ಮಾಡುತ್ತಿರುವುದು ನೋಡಿದರೆ ಪ್ರಜಾಪ್ರಭುತ್ವ ಕರಗಿ ಹೋಗಿದೆ ಎನ್ನಿಸುತ್ತದೆ.

ಇವ ನಮ್ಮವ,ಇವ ನಮ್ಮವ ಎಂದ ಬಸವಣ್ಣ,ವಿಶ್ವಮಾನವ ಸಂದೇಶ ಸಾರಿದ ಕುವೆಂಪು, ಜಾತ್ಯಾತೀತ ನೀತಿ ಹೇಳಿದ ದಾರ್ಶನಿಕರು ಇದ್ದಿದ್ದರೆ ಅವರ ಪರಿಸ್ಥಿತಿ ಏನು ? ಎಂಬ ಪ್ರಶ್ನೆ ಮಾತ್ರ ಕಾಡುತ್ತಿದೆ.ರಾಜಕಾರಣಿಗಳ ತರಹ ಬಣ್ಣ ಬದಲಾಯಿಸುವ ಜನ ಎಲ್ಲಾ ಕ್ಷೇತ್ರಗಳಲ್ಲಿ ಹುಲುಸಾಗಿರುವುದನ್ನು ಹೇಳುವುದು ಅನಿವಾರ್ಯ ಕರ್ಮ.

” ಭೂತದ ಬಾಯಲ್ಲಿ ಭಗವದ್ಗೀತೆ”

ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ “ಭ್ರಷ್ಟಾಚಾರ” ಮುಕ್ತ ರಾಜ್ಯ ಮಾಡಲು ಹೊರಟಿದ್ದಾರೆ.ಎಲ್ಲಾ ಕಛೇರಿ ಗಳಲ್ಲಿ ದೊಡ್ಡ ದೊಡ್ಡ ಫಲಕ ಅಳವಡಿಸುವುದರ ಜೊತೆಗೆ ಯಾರಾದರೂ ಲಂಚ ಪಡೆದರೆ ಕಠಿಣ ಕ್ರಮ ಕೈಗೊಳ್ಳಲು ನಿರ್ಧಾರ ಮಾಡಿದ್ದಾರೆ. ಹತ್ತು ರೂಪಾಯಿ ಲಂಚವಾಗಿ ನೀಡಬಾರದು ಎಂದು ಹೇಳಿರುವುದು ನೋಡಿದರೆ ಅನುಮಾನ ವ್ಯಕ್ತಪಡಿಸುತ್ತಾರೆ. ಇದರ ಜೊತೆಗೆ ಕಾಂಗ್ರೆಸ್ ನವರು ನಗಬಾರದ ಜಾಗದಲ್ಲಿ ನಗುತ್ತಲೇ ಎಲ್ಲದಕ್ಕೂ ಫೀ ಎಂದು ವಸೂಲಿ ಮಾಡಿರುವ ಡಿ.ಕೆ.ಬಾಯಲ್ಲಿ “ಭಗವದ್ಗೀತೆ” ಬರುತ್ತಿರುವುದು ನೋಡಿ ಸದ್ಯ ಡಿ.ಕೆ.ಬದಲಾದರೂ ಎಂದು ಫಲಕ ಅಳವಡಿಸುತ್ತಿದ್ದಾರೆ.

” ಲಾಸ್ಟ್ ಸಿಫ್”

ಎಸ್.ಐ.ಆರ್.ಬೇಡ ಎನ್ನುವ ಕಾಂಗ್ರೆಸ್ ನ ಡಿ.ಕೆ.ಗೆ ಗ್ಯಾರಂಟಿ ಯೋಜನೆಯಲ್ಲಿ ಅನರ್ಹರ ರು ಸೇರ್ಪಡೆಯಾಗಿದ್ದಾರೆ ಎಂದು ಸರ್ಜರಿಗೆ ಭರ್ಜರಿ ತಯಾರಿ ನಡೆಸಿರುವುದು ಏಕೆ ಮಹದೇವಪ್ಪಗೂ ಫ್ರೀ,ಕಾಕ ಸಾಹೇಬ್ ಗೂ ಫ್ರೀ,ನನಗೂ ಫ್ರೀ,ನಿಮಗೂ ಫ್ರೀ ಎನ್ನುವಾಗ ಅನರ್ಹತೆ ಪ್ರಶ್ನೆ ಏಕೆ? ಜೊತೆಗೆ ಹೊಸದಾಗಿ ಅರ್ಜಿ ಸಲ್ಲಿಸಲು ಹೇಳಿರುವುದು ನೋಡಿದರೆ ಗ್ಯಾರಂಟಿ ಯಾವಾಗ ನಿಲ್ಲುತ್ತದೆ ಎಂಬ ಪ್ರಶ್ನೆ ಸಹಜವಾಗಿ ಕಾಡುತ್ತಿದೆ ಎಂದು ಕಾಂಗ್ರೆಸ್ ನವರು ಗೊಣಗುತ್ತಿದ್ದಾರೆ.ಈಗ ಅಧಿಕಾರದಲ್ಲಿ ನೇಮಕವಾಗಿರುವವರು ನಮ್ಮ ಅಧಿಕಾರ ಹೋಗುವುದು ಗ್ಯಾರಂಟಿ ಎಂದು ಹೇಳತ್ತಲೇ ಹಂಸಲೇಖರವರ ಬಳಿ ಡಿ.ಕೆ.ಸಾಹೇಬರ ಬಗ್ಗೆ ಹಾಡು ಬೆರೆಯಲು ಮುಗಿ ಬಿದ್ದಿರುವುದು ಗ್ಯಾರಂಟಿ.

The “Rush” of Maths and Organizations in Politics

Share

Leave a comment

Leave a Reply

Your email address will not be published. Required fields are marked *

Don't Miss

ಸಿಐಡಿ ಪೊಲೀಸ್ ರಿಂದ ಪಂಜರದಲ್ಲಿ ಬಂಧಿಸಿಟ್ಟಿದ ಕಾಡು ಗಿಳಿ ವಶ

ಚಿಕ್ಕಮಗಳೂರು : ಅಕ್ರಮವಾಗಿ ಪಂಜರದಲ್ಲಿ ಬಂಧಿಸಿಟ್ಟಿದ ಕಾಡು ಗಿಳಿಗಳನ್ನು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳ ವಶಕ್ಕೆ ಪಡೆದಿದೆ ನಗರದ ಟಿಪ್ಪುನಗರದ ಚಾಮುಂಡಿ ಕಾಫಿ ಕ್ಯೂರಿಂಗ್ ಹಿಂಭಾಗದ ರಾಜಸ್ತಾನ ಕುಳ್ಳಿ ರಸ್ತೆಯ...

ಸಖರಾಯಪಟ್ಟಣದಲ್ಲಿ ಹಣದ ವಿಷಯಕ್ಕೆ ಸ್ನೇಹಿತನೇ ಕೊಲೆ

ಕಡೂರು: ಅಪಘಾತದಲ್ಲಿ ಯುವಕ ಸಾವನ್ನಪ್ಪಿದ್ದ ಎಂದು ಭಾವಿಸಿದ್ದ ಪ್ರಕರಣ ತಿರುವು ಪಡೆದುಕೊಂಡಿದ್ದು, ಹಣದ ವಿಷಯಕ್ಕೆ ಸ್ನೇಹಿತನೇ ಕೊಲೆ ಮಾಡಿರುವುದನ್ನು ಸಖರಾಯಪಟ್ಟಣ ಪೊಲೀಸರು ಪತ್ತೆ ಮಾಡಿದ್ದಾರೆ. ಜೂನ್ 13ರ ರಾತ್ರಿ ಸಖರಾಯಪಟ್ಟಣ ಪೊಲೀಸ್...

Related Articles

ಅರತಿಕೃಷ್ಣಗೆ ಮಂತ್ರಿ ಗ್ಯಾರಂಟಿ – ಶ್ರೀನಿವಾಸ್ ತಿರುಪತಿಗೆ ? – ನಯನ ನವ ಅವತಾರಕ್ಕೆ ಭಂಗ, ಭಂಗ

ಚಿಕ್ಕಮಗಳೂರು: ಜಿಲ್ಲೆಯ ಲ್ಲಿ ಮಂತ್ರಿಯಾಗ ಬೇಕು ಎಂದು ಪಟ್ಟು ಹಿಡಿದವರು ಪಲ್ಟಿ ಹೊಡೆದಿದ್ದಾರೆ ಆದರೆ ಅರತಿಕೃಷ್ಣ...

ಮೌಲ್ಯ – ಸೇವೆ ಮರೆತು ಹಣ ದೂಚಲು ಪ್ರಜಾಪ್ರಭುತ್ವದ ಕಗ್ಗೂಲೆ…

ಅದಲು-ಬದಲು ಯಾವ ಪಕ್ಷಗಳಿಗೆ ಸಿದ್ದಾಂತ, ನೈತಿಕತೆ ಇದೆ ಭಾರತದಲ್ಲಿ ಸಾಧ್ಯವಿಲ್ಲ. ಎಲ್ಲಾ ಪಕ್ಷಗಳು ಬೆರಿಕೆಯ ತುರಿಕೆಯಲ್ಲಿವೆ.ಅದರಲ್ಲೂ...

ಜಿಲ್ಲೆಯಲ್ಲಿ ಗೂಟದ ಕಾರಿಗಾಗಿ “ಕೈ ಪಡೆ” ಯ ಕಸರತ್ತು !

ಚಿಕ್ಕಮಗಳೂರು: ಮುಖ್ಯ ಮಂತ್ರಿಯಾಗಿದ್ದ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದರಿಂದ ಉಳಿದ ಎರಡು ವರ್ಷಗಳ ಅವಧಿಗೆ ಡಿ.ಕೆ.ಮುಖ್ಯಮಂತ್ರಿಯಾಗಿ ದೇವಸ್ಥಾನ,...

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂಪುಟದ 13 ಸಚಿವರಿಗೆ ಖಾತೆ ಹಂಚಿಕೆ

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್  ಅವರು ತಮ್ಮ ಸಂಪುಟದ (Cabinet) ಮೊದಲ 13 ಸಚಿವರಿಗೆ ಖಾತೆಯನ್ನು...