Home namma chikmagalur chikamagalur ಜಿಲ್ಲೆಯಲ್ಲಿ ಗೂಟದ ಕಾರಿಗಾಗಿ “ಕೈ ಪಡೆ” ಯ ಕಸರತ್ತು !
chikamagalurHomeLatest Newsnamma chikmagalurPolitical News

ಜಿಲ್ಲೆಯಲ್ಲಿ ಗೂಟದ ಕಾರಿಗಾಗಿ “ಕೈ ಪಡೆ” ಯ ಕಸರತ್ತು !

Share
Share

ಚಿಕ್ಕಮಗಳೂರು: ಮುಖ್ಯ ಮಂತ್ರಿಯಾಗಿದ್ದ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದರಿಂದ ಉಳಿದ ಎರಡು ವರ್ಷಗಳ ಅವಧಿಗೆ ಡಿ.ಕೆ.ಮುಖ್ಯಮಂತ್ರಿಯಾಗಿ ದೇವಸ್ಥಾನ, ಮಠ ಮಂದಿರಗಳಿಗೆ ಕಳೆ ಬಂದಿದೆ.
ಇದರ ಜೊತೆಗೆ ಕೈ ಪಡೆಯಲ್ಲಿ ನಿಗಮ,ಮಂಡಳಿಗಳಲ್ಲಿ ಸ್ಥಾನ ಪಡೆಯಲು ಕಸರತ್ತು ಪ್ರಾರಂಭವಾಗಿದೆ.

ನಾನು ಮಂತ್ರಿಯಾಗುವೆ ಎನ್ನುತ್ತಿದ್ದ ಶಾಸಕರಗಳು ಈಗ ನಿಗಮ ಮಂಡಳಿಗಳ ಕಡೆ ಕಣ್ಣು ಬಿಡುತ್ತಿದ್ದಾರೆ. ಕಳೆದ ಹಲವು ದಿನಗಳಿಂದ ಡಿ.ಕೆ. ಡಿ.ಕೆ ಎಂದು ಹಾರ ತುರಾಯಿ ಹಿಡಿದು ಡಿ.ಕೆ.ಸುತ್ತಮುತ್ತ ಓಡಾಡುತ್ತಿದ್ದಾರೆ.
ಬಯಸದೆ ಬಂದ ಭಾಗ್ಯ ಆರತಿ ಕೃಷ್ಣ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ .

ಈಗಲೂ ಮಂತ್ರಿ ಸ್ಥಾನಕ್ಕೆ ಗುಟ್ಟು ಗುಟ್ಟಾಗಿ “ವ್ಯವಹಾರ” ಶುರುವಾಗಿದೆ ಜೊತೆಗೆ ಅನಿವಾಸಿ ಭಾರತೀಯರಿಗಾಗಿ ಹೊಸದಾಗಿ ಸಚಿವ ಸ್ಥಾನ ನೀಡುವ ಬಗ್ಗೆ ಡಿ.ಕೆ.ಘೋಷಣೆ ಮಾಡಿರುವುದು ಅರತಿ ಕೃಷ್ಣ ಕಳೆದ ಹತ್ತಾರು ವರ್ಷಗಳಿಂದ ಅನಿವಾಸಿ ಭಾರತೀಯರ ಸಂಘಟನೆಯಲ್ಲಿ ಹೆಚ್ಚು ತೊಡಗಿಸಿ ಕೊಂಡಿದ್ದಾರೆ .ಮತ್ತೊಮ್ಮೆ ವ್ಯವಹಾರ ನಡೆದರೆ ಅರತಿ ಗ್ಯಾರಂಟಿ ಸಚಿವರಾಗುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಈಗಾಗಲೇ “ಐದು” ಗೂಟದ ಕಾರುಗಳಲ್ಲಿ ಓಡಾಡುತ್ತಿರುವವರಿಂದ ಜಿಲ್ಲೆಗೆ,ಜನರಿಗೆ ಮತ್ತು ಪಕ್ಷಕ್ಕೆ ನಯಾಪೈಸೆ ಕೆಲಸವಾಗಿಲ್ಲಾ ಆದರೂ ಮತ್ತೆ ಮುಂದುವರಿಯುವ “ಲಾಭಿ” ಪ್ರಾರಂಭಿಸಿದ್ದಾರೆ ಇವರ ಜೊತೆಗೆ ಹೊಸದಾಗಿ ಹಲವರು ಡಿ.ಕೆ.ಗೆ ಹಾರತುರಾಯಿಯ ಜೊತೆಗೆ ಲಾಭಿ ಶುರುಮಾಡಿದ್ದಾರೆ ಕಳೆದ ಕೆಲ ದಿನಗಳಿಂದ ಬೆಂಗಳೂರಿನಲ್ಲಿ ಡಿ.ಕೆ.ಬಿ.ಕೆ ಮತ್ತು ಹಲವು ಸಚಿವರ ಮನೆ ಮುಂದೆ ಠಳಾಯಿಸುತ್ತಿದ್ದಾರೆ. ಬಿ.ಎಲ್.ಶಂಕರ್ ಮುಂದೆ ಪಟ್ಟಿಗೆ ಹೆಸರು ಬರೆಸುವವರ ಸಂಖ್ಯೆ ಹೆಚ್ಚುತ್ತಿದ್ದಾರೆ ಎನ್ನಲಾಗುತ್ತಿದೆ.

ಪ್ರಮುಖವಾಗಿ ಟಿ.ಡಿ.ರಾಜೇಗೌಡ, ಅಂಶುಮಂತ್,ಶಿವಾನಂದ ಸ್ವಾಮಿ,ನಯನಾ ಮೋಟಮ್ಮ,ಎಂ.ಎಲ್.ಮೂರ್ತಿ, ಗಾಯತ್ರಿ ಶಾಂತೇಗೌಡ, ಮಹಮ್ಮದ್, ಡಾ.ವಿಜಯಕುಮಾರ್, ಸಚಿನ್ ಮೀಗಾ, ರವೀಶ್ ಕ್ಯಾತನಬೀಡು ಸಿ.ಎನ್.ಅಕ್ಮಲ್ , ಬಿ.ಹೆಚ್.ಹರೀಶ್, ಮುಂತಾದವರ ಹೆಸರು ಮುಂಚೂಣಿಯಲ್ಲಿವೆ.

ಎ.ಎನ್.ಮಹೇಶ್: ಪರಿಸರ ಮಂಡಳಿಯ ಅಧ್ಯಕ್ಷ ಎ.ಎನ್.ಮಹೇಶ್ ಇನ್ನೂ ಅವಧಿ ಮುಗಿಯುವರೆಗೂ ಯಾರೂ ಏನು ಮಾಡಲು ಸಾಧ್ಯವಿಲ್ಲ.

ಶ್ರೀನಿವಾಸ್: ಎನ್.ಆರ್.ಪುರದ ಶ್ರೀನಿವಾಸ್ ಪ್ರಸ್ತುತ ಪ್ರವಾಸೋದ್ಯಮ ನಿಗಮದ ಅಧ್ಯಕ್ಷರಾಗಿದ್ದು ಅವರನ್ನು ಮತ್ತೆ ಮುಂದುವರೆಸುವ ಸಾಧ್ಯತೆ ಹೆಚ್ಚು. ಏಕೆಂದರೆ ಶ್ರೀನಿವಾಸ್ ಅಷ್ಟು ಪವರ್ ಪುಲ್,ಬೇಕು,ಬೇಡವಾದ ಸಪ್ಲೈ ಇವರಿಂದ ಅಧಿಕಾರಸ್ಥರು ಬಯಸುವುದನ್ನು ಪುರೈಸುವ ಶಕ್ತಿ ಇದೆ.

ಟಿ.ಡಿ.ರಾಜೇಗೌಡ: ಹಾಲಿ ಶಾಸಕ ಮಂತ್ರಿಯಾಗ ಬೇಕಿತ್ತು ಆದು ಸಾಧ್ಯವಿಲ್ಲದೆ ಇರುವುದರಿಂದ ನವೀಕರಿಸಬಹುದಾದ ಇಂಧನ ಹಾಲಿ ಅಧ್ಯಕ್ಷರಾಗಿದ್ದು ಮುಂದುವರೆಯುವುದು ಗ್ಯಾರಂಟಿ.

ಎಂ.ಎಲ್.ಮೂರ್ತಿ: ಹಿರಿಯ ಕಾಂಗ್ರೆಸ್ ಗ ಡಿ.ಕೆ. ಪಕ್ಕಾ ಹಿಂಬಾಲಕ ಮೊದಲ ಸಲವೇ ಯಾವುದಾದರೂ ಬೋರ್ಡ್ ಗ್ಯಾರಂಟಿ ಎನ್ನುತ್ತಿದ್ದರು ಆದರೆ ಠುಸ್ ಪಟಾಕಿ ಮಾಡಿದ್ದು ಬಿಯಲ್ ಎನ್ನುತ್ತಾರೆ. ಈಗಲೂ ಮೊದಲು ಹೆಸರು ಕೇಳಿ ಬರುತ್ತಿದೆ ಇದು ಕಾಂಗ್ರೆಸ್ ನ ಮಾಯಾ ಬಜಾರ್ ಈಗಲೂ ಯಾವುದಾದರೂ ಬೋರ್ಡ್ ಬರದಿದ್ದರೆ ಕಾಂಗ್ರೆಸ್ ನಲ್ಲಿ ಜಾಗಟೆ,ಗಂಟೆ ಹೊಡೆದುಕೊಂಡು ಇರಬೇಕಾಗುತ್ತದೆ.

ಹೆಚ್.ಎಂ.ಗೋಪಿ ಕೃಷ್ಣ: ತರೀಕೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಮೂರು ಬಾರಿ ಚುನಾವಣೆಗೆ ಸ್ಪರ್ಧೆ ಮಾಡಿ ಕುತೂಹಲ ಹುಟ್ಟಿಸಿದವರು.ಲೋಕಸಭಾ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಗೆ ಹಿಂತಿರುಗಿ ಡಿ.ಕೆ.ಹಿಂಬಾಲಕನಾಗಿ ಪವರ್ ಪುಲ್ ರಾಜಕೀಯ ಲಾಭಿ ಮಾಡಿ ಹೇಗಾದರೂ ಸರಿ ಗೂಟದ ಕಾರಿನಲ್ಲಿ ಕ್ಷೇತ್ರಕ್ಕೆ ಎಂಟ್ರಿ ಕೊಡಬೇಕು ಎಂಬ ಲೆಕ್ಕಾಚಾರದಲ್ಲಿ ಇದ್ದಾರೆ. ತರೀಕೆರೆ ಶ್ರೀನಿವಾಸ್ ಮತ್ತು ಕುಟುಂಬದ ಮುಂದೆ ಇದು ಸಾಧ್ಯವೇ ಎನ್ನುತ್ತಿದ್ದಾರೆ.ಹುಲ್ಲು ಕಡ್ಡಿ ಆಲ್ಲಾಡಿದರೂ ಸರಿ ಸೃಪ ಕ್ರಿಮಿ ಕೀಟಗಳು ಓಡಾಡಲು ಕುಟುಂಬದ ಅಣತಿ ಬೇಕು ಇಂತಹ ಸಮಯದಲ್ಲಿ ಡಿ.ಕೆ.ಗೋಪಿ ಕೈಹಿಡಿದರೆ ಮಾತ್ರ ಸಾಧ್ಯ.

ಗಾಯತ್ರಿ ಶಾತೇಗೌಡ: ಒಂದು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಎರಡು ಬಾರಿ ಸೋತು ತುಂಬಾ ಅನ್ಯಾಯ ವಾಗಿದೆ ಕೋರ್ಟ್ ಅಲೆ ಅಲೆದು ಸುಸ್ಥಾಗಿರುವುದರಿಂದ ನನಗೆ ಯಾವುದಾದರೂ ನಿಗಮ ಮಂಡಳಿ ಬೇಕು ಎನ್ನುವುದು ಸಹಜ.

ಅಂಶು ಮತ್ತು ಸ್ವಾಮಿ; ಈ ಜೋಡಿ ಐದು ಜನ ಕಾಂಗ್ರೆಸ್ ಶಾಸಕರನ್ನು ಗೆಲ್ಲಿಸಲು ಹಗಲು ರಾತ್ರಿ ಕಷ್ಟ ಪಟ್ಟಿದ್ದೇವೆ ನಮ್ಮನ್ನು ಮತ್ತೆ ಮುಂದುವರೆಸಿ ಎಂದು ಶಂಕರ್ ಗೆ ಗಂಟು ಬಿದ್ದಿದ್ದಾರೆ ಜೊತೆಗೆ ಡಿ.ಕೆ.ಗೆ ಶಾಲು,ಹಾರ ಹಾಕಿ ಪ್ರದಕ್ಷಿಣೆ ಮಾಡಿ ಬಂದಿದ್ದಾರೆ.ಶಾಸಕಿ ನಯನಾ ಮೋಟಮ್ಮ ಕೂಡ ನನಗೆ ಅಧಿಕಾರ ಕೊಟ್ಟರೆ ಪಾಳೆಗಾರಿಕೆ ಮಾಡುವವರಿಗೆ ಬುದ್ದಿ ಕಲಿಸುವೆ ಎಂದು ಡಿ.ಕೆ.ಪಾದ ಮುಟ್ಟುತ್ತಿದ್ದಾರೆ ಎಂದು ಕಾಂಗ್ರೆಸ್ ನವರು ಹೇಳುತ್ತಿದ್ದಾರೆ.

ಅಲ್ಪಸಂಖ್ಯಾತರ ಖೋಟಾದಲ್ಲಿ ಮಾಜಿ ಜಿ,ಪಂ ಅಧ್ಯಕ್ಷ ಮಹಮ್ಮದ್ ಮತ್ತು ಸಿ.ಎನ್.ಅಕ್ಮಲ್ ಪ್ರಯತ್ನ ನಡೆದಿದೆ.

ರವೀಶ್ ಕ್ಯಾತನಬೀಡು; ಇವರು ಕೂಡ ಯಾವುದಾದರೂ ಸಾಹಿತ್ಯ ಅಥವಾ ಅಕಾಡೆಮಿ ಅಧ್ಯಕ್ಷರಾಗ ಬೇಕು ಎಂದು ಬೆಂಗಳೂರು ತಲುಪಿ ಬಂದಿದ್ದಾರೆ.

ಡಾ.ವಿಜಯಕುಮಾರ್:  ಹಲವಾರು ವರ್ಷಗಳಿಂದ ಕಾಂಗ್ರೆಸ್ ಕಟ್ಟಲು ಶ್ರಮಿಸಿರುವೆ ಈಗಲೂ ಕಟ್ಟಡ ಸಮಿತಿ ಅಧ್ಯಕ್ಷ ನನಗೆ ಸೇವೆ ಮಾಡಲು ಅವಕಾಶ ಬೇಕು ಎಂದು ಬಿ.ಎಲ್.ಶಂಕರ್ ರನ್ನು ಬಿಗಿ ಹಿಡಿದಿದ್ದಾರೆ.ಸಚಿನ್ ಮೀಗಾ ನಾನು ಬೆಂಗಳೂರು ಬಿಟ್ಟು ಹೋಗಬೇಕೆಂದರೆ ನನಗೆ ಅವಕಾಶ ಬೇಕು ಎನ್ನುತ್ತಿದ್ದಾರೆ.

ಬಿ.ಹೆಚ್. ಹರೀಶ್: ಡಿ.ಕೆ.ಭಂಟ ಜೊತೆಗೆ ಚಿಕ್ಕಮಗಳೂರು ವಿಧಾನ ಸಭಾ ಅಭ್ಯರ್ಥಿ ಖಚಿತ ಎನ್ನುವಂತಹ ಸಮಯದಲ್ಲಿ ತಮ್ಮಯ್ಯ ಗೆ ಅವಕಾಶ ದೊರೆಯುವಂತೆ ಮಾಡಿದೆ ಹೀಗಾಗಿ ನನ್ನನ್ನು ಮುಂದುವರೆಸಿ ಎಂದು ಡಿ.ಕೆ.ಗೆ ಪಟ್ಟು ಹಿಡಿದಿದ್ದಾರೆ ಎಂಬ ಸುದ್ದಿ ಇದೆ.ಇವರೆಲ್ಲರ ಅವಕಾಶಕ್ಕೆ ನೂರು ವರ್ಷದ ಕಾಂಗ್ರೆಸ್ ಮತ್ತು ಜಿಲ್ಲೆಯಲ್ಲಿ ತೆವಳುತ್ತಾ ಕಟ್ಟುತ್ತಿರುವ ಕಟ್ಟಡ ಮಾತ್ರ ಗಹಗಹಿಸಿ ನಗುತ್ತಿರುವುದು ಮಾತ್ರ ಗ್ಯಾರಂಟಿ.

ನಿಗಮ ಮಂಡಳಿಗಳು ಕೆಲಸವಿಲ್ಲದ ರಾಜಕಾರಣಿಗಳಿಗೆ ಗಂಜಿ ಕೇಂದ್ರ ಗಳಾಗಿವೆ.ನೂರಾರು ನಿಗಮ ಮಂಡಳಿಗಳಲ್ಲಿ ಹತ್ತರಿಂದ ಹನ್ನೆರಡು ಸುಸ್ಥಿತಿಯಲ್ಲಿದ್ದರೆ ಇನ್ನುಳಿದವು ಕಾಫಿ,ತಿಂಡಿಗೂ ಪರದಾಡಬೇಕಾಗಿದೆ.ಆದರೆ ಕಾರಿನ ಮುಂದೆ ಒಂದು ಬೋರ್ಡ್ ಅದರಲ್ಲಿ ಹೆಸರು ಕರೆಸಿಕೊಳ್ಳುವ ಪ್ರಚಾರ ಪ್ರಿಯಾ ರಾಜಕಾರಣಿಗಳ ದಂಡು ಹಾರ,ತುರಾಯಿ,ಬೌಪರಾಕ್ ಎಂದು ಬಿಂಬಿಸಿ ಗಂಜಿ ಕೇಂದ್ರ ಗಳಲ್ಲಿ ಎಷ್ಟು ನೆಕ್ಕಬೇಕು ಎಂದು ಕಣ್ಣ್, ಕಣ್ಣ್ ಬಿಡುತ್ತಿದ್ದಾರೆ

Share

Leave a comment

Leave a Reply

Your email address will not be published. Required fields are marked *

Don't Miss

ಸಿಐಡಿ ಪೊಲೀಸ್ ರಿಂದ ಪಂಜರದಲ್ಲಿ ಬಂಧಿಸಿಟ್ಟಿದ ಕಾಡು ಗಿಳಿ ವಶ

ಚಿಕ್ಕಮಗಳೂರು : ಅಕ್ರಮವಾಗಿ ಪಂಜರದಲ್ಲಿ ಬಂಧಿಸಿಟ್ಟಿದ ಕಾಡು ಗಿಳಿಗಳನ್ನು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳ ವಶಕ್ಕೆ ಪಡೆದಿದೆ ನಗರದ ಟಿಪ್ಪುನಗರದ ಚಾಮುಂಡಿ ಕಾಫಿ ಕ್ಯೂರಿಂಗ್ ಹಿಂಭಾಗದ ರಾಜಸ್ತಾನ ಕುಳ್ಳಿ ರಸ್ತೆಯ...

ಸಖರಾಯಪಟ್ಟಣದಲ್ಲಿ ಹಣದ ವಿಷಯಕ್ಕೆ ಸ್ನೇಹಿತನೇ ಕೊಲೆ

ಕಡೂರು: ಅಪಘಾತದಲ್ಲಿ ಯುವಕ ಸಾವನ್ನಪ್ಪಿದ್ದ ಎಂದು ಭಾವಿಸಿದ್ದ ಪ್ರಕರಣ ತಿರುವು ಪಡೆದುಕೊಂಡಿದ್ದು, ಹಣದ ವಿಷಯಕ್ಕೆ ಸ್ನೇಹಿತನೇ ಕೊಲೆ ಮಾಡಿರುವುದನ್ನು ಸಖರಾಯಪಟ್ಟಣ ಪೊಲೀಸರು ಪತ್ತೆ ಮಾಡಿದ್ದಾರೆ. ಜೂನ್ 13ರ ರಾತ್ರಿ ಸಖರಾಯಪಟ್ಟಣ ಪೊಲೀಸ್...

Related Articles

ಅರತಿಕೃಷ್ಣಗೆ ಮಂತ್ರಿ ಗ್ಯಾರಂಟಿ – ಶ್ರೀನಿವಾಸ್ ತಿರುಪತಿಗೆ ? – ನಯನ ನವ ಅವತಾರಕ್ಕೆ ಭಂಗ, ಭಂಗ

ಚಿಕ್ಕಮಗಳೂರು: ಜಿಲ್ಲೆಯ ಲ್ಲಿ ಮಂತ್ರಿಯಾಗ ಬೇಕು ಎಂದು ಪಟ್ಟು ಹಿಡಿದವರು ಪಲ್ಟಿ ಹೊಡೆದಿದ್ದಾರೆ ಆದರೆ ಅರತಿಕೃಷ್ಣ...

ರೂಬೆನ್ ಮೊಸಸ್ ಗೆ ನ್ಯಾಷನಲ್ ಬೆಸ್ಟ್ ಸೋಷಿಯಲ್ ವರ್ಕರ್ ಅವಾರ್ಡ್ 

ಚಿಕ್ಕಮಗಳೂರು: ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿರುವ ರೂಬೆನ್ ಮೊಸಸ್ ರವರಿಗೆ ನ್ಯಾಷನಲ್ ಬೆಸ್ಟ್ ಸೋಷಿಯಲ್ ವರ್ಕರ್ ಅವಾರ್ಡ್ ದೊರೆತಿದೆ....

ಹಿರಿಯ ನಾಗರಿಕರಿಗೆ ಪಿಂಚಣಿ ಸೌಲಭ್ಯ ನೀಡಲು ಮನವಿ

ಚಿಕ್ಕಮಗಳೂರು:  ಹಿರಿಯ ನಾಗರೀಕರಿಗೆ ಸಂಧ್ಯಾ ಸುರಕ್ಷಾ, ವಿಧವಾ ಹಾಗೂ ಅಂಗವಿಕಲ ವೇತನವನ್ನು ಒದಗಿಸಿಕೊಡಬೇಕು ಎಂದು ಆಗ್ರಹಿಸಿ...

ಜಲಾಶಯದ ನೀರು ಕುಡಿಯುವ ನೀರಿಗೆ ಬಳಕೆ

ಚಿಕ್ಕಮಗಳೂರು: ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆಯ ಕೊರತೆಯಿಂದಾಗಿ ರಾಜ್ಯದ ಜಲಾಶಯಗಳಲ್ಲಿ ನೀರಿನ ಮಟ್ಟ ತೀವ್ರವಾಗಿ ಕ್ಷೀಣಿಸುತ್ತಿದ್ದು,...