Home namma chikmagalur chikamagalur ತಾಲೂಕು ರೈತ ಸಂಘದ ಅಧ್ಯಕ್ಷರಾಗಿ ಹಾದಿಹಳ್ಳಿ ಭದ್ರೇಗೌಡ ಆಯ್ಕೆ
chikamagalurHomeLatest Newsnamma chikmagalur

ತಾಲೂಕು ರೈತ ಸಂಘದ ಅಧ್ಯಕ್ಷರಾಗಿ ಹಾದಿಹಳ್ಳಿ ಭದ್ರೇಗೌಡ ಆಯ್ಕೆ

Share
Share

ಚಿಕ್ಕಮಗಳೂರು :ಕರ್ನಾಟಕ ರೈತ ಸಂಘದ ಚಿಕ್ಕಮಗಳೂರು ತಾಲೂಕು ಅಧ್ಯಕ್ಷರಾಗಿ ಹಾದಿಹಳ್ಳಿ ಭದ್ರೇಗೌಡ ಆಯ್ಕೆಯಾಗಿದ್ದಾರೆಂದು ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ಮಹೇಶ್ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಗುರುವಾರ ಮಾತನಾಡಿ, ರೈತ ಸಂಘದ ತಾಲೂಕು ಸಂಚಾಲಕರಾಗಿದ್ದ ಮತ್ತಾವರದ ಜಯರಾಂ ಅವರ ನೇತೃತ್ವದಲ್ಲಿ ಜಿಲ್ಲಾ ಗೌರವಾಧ್ಯಕ್ಷ ಎಂ.ಸಿ.ಬಸವರಾಜ್ ಅವರ ಅಧ್ಯಕ್ಷೆಯಲ್ಲಿ ಸೇರಿದ್ದ ತಾಲೂಕು ರೈತ ಸಂಘದ ಕಾರ್ಯಕರ್ತರು ಮತ್ತು ಜಿಲ್ಲಾ ಸಮಿತಿ ಪದಾಧಿಕಾರಿಗಳ ಸಭೆಯಲ್ಲಿ ತಾಲೂಕು ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು ಎಂದು ಹೇಳಿದರು.

ರೈತ ಸಂಘದ ತಾಲೂಕು ಕಾರ್ಯಾಧ್ಯಕ್ಷ ಮತ್ತಾವರ ಜಯರಾಂ, ಗೌರವಾಧ್ಯಕ್ಷರಾಗಿ ಆನಂದಕುಮಾರ್, ಮೂರ್ತಿ,ಲಕ್ಕೇಗೌಡ, ಪ್ರಧಾನಕಾರ್ಯದರ್ಶಿಯಾಗಿ ವೆಂಕಟೇಶ್, ಖಜಾಂಚಿಯಾಗಿ ಕೆ.ಟಿ.ಸುನಿಲ್‌ಕುಮಾರ್, ಉಪಾಧ್ಯಕ್ಷಾಗಿ ಪುಟ್ಟೇಗೌಡ, ಜಗದೀಶ್,ಪಾಂಡು, ಸುಂದ್ರೇಶ್, ಸಂಘಟನಾ ಕಾರ್ಯದರ್ಶಿಯಾಗಿ ಸಿದ್ದೇಗೌಡ, ಸಹಕಾರ್ಯದರ್ಶಿಯಾಗಿ ಹೇಮಂತ್, ನಾಗೇಶ್, ಬಸವರಾಜ್, ಜಯಣ್ಣ, ಗಿರೀಶ್, ಮಹಿಳಾ ಸಂಚಾಲಕರಾಗಿ ರಾಧಮ್ಮ, ಯುವಘಟಕದ ಅಧ್ಯಕ್ಷರಾಗಿ ಜೀವನ್, ಉಪಾಧ್ಯಕ್ಷರಾಗಿ ಗೋಪಾಲ್, ಚಂದ್ರಶೇಖರ್, ಲೋಕೇಶ್, ಸೇರಿದಂತೆ ೨೦ ಮಂದಿ ಕಾರ್ಯಕರ್ತರು ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಸರ್ವಾನುಮತದಿಂದ ಆಯ್ಕೆಮಾಡಲಾಗಿದೆ ಎಂದರು.

ಸಂಘಟನೆ ಬೆಳೆಯುತ್ತಾ ಹೋದಂತೆ ಕೆಲವು ಸ್ವಹಿತಾಸಕ್ತಿಗಾಗಿ ಬಂದ ನಾಯಕರು ಕಾರ್ಯಕರ್ತರು ಅವರ ಸ್ವಾರ್ಥ ಸಾಧನೆ ಆಗದೆ ಹೊರನಡೆಯುತ್ತಾರೆ. ಇದರಿಂದ ಸಂಘಟನೆಗೆ ಯಾವುದೇ ನಷ್ಟ ಉಂಟಾಗುವುದಿಲ್ಲ ಹೊಸ ಕಾರ್ಯಕರ್ತರುಗಳು ಸಂಘಟನೆಗೆ ಸೇರ್ಪಡೆಗೊಳ್ಳುತ್ತಾರೆಂದು ಹೇಳಿದರು.

ರೈತ ಸಂಘದ ಜಿಲ್ಲಾಗೌರವಾಧ್ಯಕ್ಷ ಎಂ.ಸಿ.ಬಸವರಾಜ್, ತಾಲೂಕು ಅಧ್ಯಕ್ಷ ಭದ್ರೇಗೌಡ, ಖಜಾಂಚಿ ಸುನಿಲ್‌ಕುಮಾರ್, ಉಪಾಧ್ಯಕ್ಷರಾದ ಆನಂದ್, ನೆರಡಿ ಸುಂದರೇಶ್, ಲಕ್ಕೇಗೌಡ, ಮಹಿಳಾ ಸಂಚಾಲಕಿ ರಾಧಮ್ಮ ಇದ್ದರು.

Hadihalli Bhadregowda elected as the president of the Taluk Farmers’ Association

Share

Leave a comment

Leave a Reply

Your email address will not be published. Required fields are marked *

Don't Miss

ಸಾಲು ಸಾಲು ರಸ್ತೆ ಅಪಘಾತ – 12ಕ್ಕೂ ಹೆಚ್ಚು ಮಂದಿ ಗಾಯ

ಚಿಕ್ಕಮಗಳೂರು: ಜಿಲ್ಲೆಯ ವಿವಿಧೆಡೆ ಸಂಭವಿಸಿದ ಸಾಲು ಸಾಲು ರಸ್ತೆ ಅಪಘಾತಗಳಲ್ಲಿ 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್‌ಗೆ ಓಮಿನಿ ಕಾರು ಡಿಕ್ಕಿ: ಧರ್ಮಸ್ಥಳದಿಂದ ಚಿತ್ರದುರ್ಗಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ...

ವೈದ್ಯಕೀಯ ಕಾಲೇಜ್ ನಲ್ಲಿ ಲೂಟಿ ! ಲೂಟಿ !-ನೂರಾರು ಕೋಟಿ ನುಂಗಿರುವ ಖದೀಮರು?

ಚಿಕ್ಕಮಗಳೂರು: ನೂತನವಾಗಿ ನಿರ್ಮಾಣ ವಾಗಿರುವ ವೈದ್ಯಕೀಯ ಕಾಲೇಜ್ ಕಟ್ಟಡದಲ್ಲಿ ಕೋಟಿ, ಕೋಟಿರೂ ನುಂಗಿರುವ ಖದೀಮರು. ಟೆಂಡರ್ ಲೋಪ ದೋಷಗಳ ಪ್ರಕಾರ ನೂರಾರು ಕೋಟಿ ಅಕ್ರಮ ನಡೆದಿದೆ ಎನ್ನಲಾಗುತ್ತಿದೆ. ಟೆಂಡರ್ ಅವಧಿ 30...

Related Articles

ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ರಾಜ್ಯ ರೈತ ಸಂಘ ಪ್ರತಿಭಟನೆ

ಚಿಕ್ಕಮಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ನಗರದಲ್ಲಿ...

ಕಡೂರು ತಾಲ್ಲೂಕು ಬರಪೀಡಿತ ತಾಲ್ಲೂಕು ಘೋಷಣೆಗೆ ವೈ.ಎಸ್.ವಿ.ದತ್ತ ಒತ್ತಾಯ

ಚಿಕ್ಕಮಗಳೂರು: ತೀವ್ರ ಬರಗಾಲಕ್ಕೆ ತುತ್ತಾಗಿರುವ ಕಡೂರು ತಾಲ್ಲೂಕನ್ನು ಬರಪೀಡಿತ ತಾಲ್ಲೂಕು ಎಂದು ಸರ್ಕಾರ ಘೋಷಿಸಬೇಕು. ತುರ್ತು...

ಸೊಪ್ಪು ಕಡಿಯಲು ಮರ ಹತ್ತಿದ್ದ ವ್ಯಕ್ತಿ ಕೆಳಗೆ ಬಿದ್ದು ಸಾವು

ಎನ್.ಆ‌ರ್. ಪುರ: ಸೊಪ್ಪು ಕಡಿಯಲು ಮರ ಹತ್ತಿದ್ದ ವೇಳೆ ಒಣಗಿದ ಕೊಂಬೆ ಮುರಿದು ಕೆಳಗೆ ಬಿದ್ದು...

ಅರತಿಕೃಷ್ಣಗೆ ಮಂತ್ರಿ ಗ್ಯಾರಂಟಿ – ಶ್ರೀನಿವಾಸ್ ತಿರುಪತಿಗೆ ? – ನಯನ ನವ ಅವತಾರಕ್ಕೆ ಭಂಗ, ಭಂಗ

ಚಿಕ್ಕಮಗಳೂರು: ಜಿಲ್ಲೆಯ ಲ್ಲಿ ಮಂತ್ರಿಯಾಗ ಬೇಕು ಎಂದು ಪಟ್ಟು ಹಿಡಿದವರು ಪಲ್ಟಿ ಹೊಡೆದಿದ್ದಾರೆ ಆದರೆ ಅರತಿಕೃಷ್ಣ...