Home namma chikmagalur chikamagalur ಜಿಲ್ಲೆಗೆ ಮಂತ್ರಿಯಂತೆ, ಮಂತ್ರಿ ಇಲ್ಲವೇ, ಇಲ್ಲ ಸಾಧ್ಯವಿಲ್ಲ !
chikamagalurHomeLatest Newsnamma chikmagalur

ಜಿಲ್ಲೆಗೆ ಮಂತ್ರಿಯಂತೆ, ಮಂತ್ರಿ ಇಲ್ಲವೇ, ಇಲ್ಲ ಸಾಧ್ಯವಿಲ್ಲ !

Share
Share

ಚಿಕ್ಕಮಗಳೂರು: ಕಳೆದ ಇಪ್ಪತೈದು ವರ್ಷಗಳಿಂದ ಜಿಲ್ಲೆಯವರು ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿಲ್ಲಾ. ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಮುಂದಿನ ಮುಖ್ಯಮಂತ್ರಿಯಾಗಲು ಡಿ.ಕೆ.ಶಿವಕುಮಾರ್ ತುದಿಗಾಲಲ್ಲಿ ನಿಂತಿದ್ದಾರೆ. ಈ ಬಾರಿಯಾದರೂ ಜಿಲ್ಲೆಯವರಿಗೆ ಮಂತ್ರಿ ಸ್ಥಾನ ದೊರೆಯುತ್ತದೆ ಎಂಬ ಲೆಕ್ಕಾಚಾರದಲ್ಲಿ ನಿರತರಾದವರಿಗೆ ಮತ್ತೆ ಹಗಲು ಕನಸು ಅವರಿಸುತ್ತದೆ .

ಜಾರ್ಜ್  ಕಸುಬುಗಾರಿಕೆ ‌ ವ್ಯವಹಾರಸ್ಥನಿಗೆ ಮತ್ತೆ ಜಿಲ್ಲೆಯಲ್ಲಿ ಆಸ್ತಿ ಕೊಳ್ಳಲು ಮಣಿ ಹಾಕುವ ಕಾಂಗ್ರೆಸ್ ನವರು ತಲೆ ಬಗ್ಗಿಸಿ ನಿಲ್ಲುವ ಪರಿಪಾಠ ರೂಢಿಯಾಗಿದೆ. 2004 ರವರೆಗೆ ಜಿಲ್ಲೆಯವರಾದ ಡಿ.ಬಿ.ಚಂದ್ರೇಗೌಡ ಐದು ವರ್ಷಗಳ ಕಾಲ ಜಿಲ್ಲಾ ಉಸ್ತುವಾರಿಯಾಗಿದ್ದು ಬಿಟ್ಟರೆ ಬಿಜೆಪಿ ದಳದ ಕಾಲದಲ್ಲಿ ಮೂರು ತಿಂಗಳು ಆರು ತಿಗಳಿಗೆ ಜಿಲ್ಲಾ ಉಸ್ತುವಾರಿ ಮಂತ್ರಿಯಾದವರು ಹೆಚ್ಚು.

ಬಳ್ಳಾರಿಯ ಶ್ರೀರಾಮುಲು, ಗೂಳಿಹಟ್ಟಿ ಶೇಖರ್, ಡಿ.ಸುಧಾಕರ,  ಬಿ.ಶಿವರಾಂ, ಎಸ್,ಸುರೇಶ್ ಕುಮಾರ್, ಪರಮೇಶ್ವರ್, ಖೋಟಾ ಶ್ರೀನಿವಾಸ್ ಪೂಜಾರಿ, ಅಂಗಾರ, ಅರಗ ಜ್ಞಾನೇಂದ್ರ, ಈಶ್ವರಪ್ಪ ಮತ್ತು ಈಗಾ ಜಾರ್ಜ್ ಜಿಲ್ಲಾ ಉಸ್ತುವಾರಿಯಾಗಿ ಬಂದ ಪುಟ್ಟ, ಹೋದ ಪುಟ್ಟ ಎನ್ನುವಂತಾಗಿದೆ.ಇದರ ಮಧ್ಯೆ ಜಿಲ್ಲೆಯವರಾದ ಜೀವರಾಜ್, ಸಿ.ಟಿ.ರವಿ ಆರು ತಿಂಗಳು ವರ್ಷಗಳ ಕಾಲ ಉಸ್ತುವಾರಿ ಮಂತ್ರಿಯಾಗಿದ್ದರು.

ಶೃಂಗೇರಿಯ ರಾಜೇಗೌಡ, ತರೀಕೆರೆಯ ಶ್ರೀನಿವಾಸ್ ಎರಡು ಬಾರಿ ಗೆದ್ದಿರುವ ಶಾಸಕರು ಕಡೂರು ಆನಂದ್, ಮೂಡಿಗೆರೆ ನಯನ ಮತ್ತು ಚಿಕ್ಕಮಗಳೂರಿನ ಹೆಚ್.ಡಿ.ತಮ್ಮಯ್ಯ ಹೊಸದಾಗಿ ಆಯ್ಕೆಯಾದವರು.ಈಗ ಏನಿದ್ದರೂ ರಾಜೇಗೌಡ ಮತ್ತು ಶ್ರೀನಿವಾಸ್ ಮಂತ್ರಿಯಾಗಿ ಜಿಲ್ಲಾ ಉಸ್ತುವಾರಿ ಆಗಬೇಕು ಎಂದು ಲಾಭಿ ಶುರುಮಾಡಿದ್ದಾರೆ.ಆದರೆ ತುಂಬಾ ಕಷ್ಟವಿದೆ. ಏಕೆಂದರೆ ಜಾತಿ ಲೆಕ್ಕಾಚಾರದಲ್ಲಿ ಇವರ ಕನಸಿಗೆ ವಿಘ್ನ ಖಚಿತ ಎನ್ನಲಾಗುತ್ತಿದೆ.

ಒಕ್ಕಲಿಗರ ಖೋಟಾದಲ್ಲಿ ಟಿ.ಡಿ.ರಾಜೇಗೌಡ ಮಂತ್ರಿಯಾಗಲು ಡಿ.ಕೆ.ಶಿವಕುಮಾರ್, ಸೇರಿದಂತೆ ರಾಮಲಿಂಗ ರೆಡ್ಡಿ, ಸುಧಾಕರ ರೆಡ್ಡಿ, ಜಯಚಂದ್ರ, ಶಿವಲಿಂಗೇಗೌಡ, ಮಾಗಡಿ ಬಾಲಕೃಷ್ಣ, ಮಂಡ್ಯದಿಂದ ಚಲುವ ನಾರಾಯಣ ಸ್ವಾಮಿ, ಕೃಷ್ಣಬೈರೇಗೌಡ ಕ್ಯೂ ನಿಂತಿದ್ದಾರೆ.ಹೀಗಾಗಿ ರಾಜೇಗೌಡರಿಗೆ ಕಷ್ಟ ಎನ್ನಲಾಗುತ್ತಿದೆ. ಮೊನ್ನೆ ನಡೆದ ಶೃಂಗೇರಿ ಘಟನೆಗಳ ಬಗ್ಗೆ ಡಿ.ಕೆ ಸೇಡಿಗೆ ಹೊರಟರೆ ರಾಜೇಗೌಡ ಛಾನ್ಸ್ ಪಡೆಯಬಹುದು. ಜೊತೆಗೆ ಜಿಲ್ಲೆಯ ನಾಲ್ವರು ಶಾಸಕರು ರಾಜೇಗೌಡರ ಪರ ಒಲವು ಹೊಂದಿದ್ದಾರೆ ಎನ್ನಲಾಗುತ್ತಿದೆ.

ತರೀಕೆರೆ ಶಾಸಕ ಶ್ರೀನಿವಾಸ್ ಗೆ ಸಿದ್ದರಾಮಯ್ಯ ಕೈ ಹಿಡಿಯಬೇಕು ಅದು ಸಾಧ್ಯವಿಲ್ಲ ಏಕೆಂದರೆ ಅವರ ನೀಲಿ ಕಣ್ಣಿನ ಬೈರತಿ ಸುರೇಶ್ ಮತ್ತು ಮಗ ಯತೀಂದ್ರ ಪರ ಜೊತೆಗೆ ಹೊಸದುರ್ಗದ ಗೋವಿಂದಪ್ಪ ಪರ ಇರುವುದು ಶ್ರೀನಿವಾಸ್ ಏನೇ ಮಾಡಿದರು ಮಂತ್ರಿಯಾಗುವುದು ಕಷ್ಟ. ಜಾರ್ಜ್ ಗೆ ಅವಕಾಶ ಮತ್ತೊಮ್ಮೆ ಕಾಫಿ ತೋಟ, ಬೆಲೆ ಬಾಳುವ ಆಸ್ತಿ ಖರೀದಿಗೆ ಅನುವು ಮಾಡಿಕೊಡುವ ಸಾಧ್ಯತೆ ಹೆಚ್ಚು. ಪ್ರಮುಖವಾಗಿ ಜಾತಿ ಮೇಲಾಟದಲ್ಲಿ ಇನ್ನೂ ಎರಡು ವರ್ಷಗಳ ಕಾಲ ಜಿಲ್ಲೆಯಲ್ಲಿ ಪರಿಚಯ ಇಲ್ಲದವರಿಗೆ ಸೆಲ್ಯೂಟ್ ಹೊಡೆಯ ಬೇಕಾಗಿದೆ.

There is no minister for the district no minister no way!

Share

Leave a comment

Leave a Reply

Your email address will not be published. Required fields are marked *

Don't Miss

ಸಾವಿರಾರು ಮಂದಿಯಿಂದ ಬೃಹತ್ ಈದ್‌ಮಿಲಾದ್ ಮೆರವಣಿಗೆ

ಚಿಕ್ಕಮಗಳೂರು: ಪ್ರವಾದಿ ಮಹಮ್ಮದ್ ಪೈಗಂಬರ್ ೧೫೦೧ನೇ ಜನ್ಮದಿನದ ಅಂಗವಾಗಿ ಆಚರಿಸಲಾದ ಈದ್‌ಮಿಲಾದ್ ಹಬ್ಬದ ಪ್ರಯುಕ್ತ ನಗರದಲ್ಲಿ ಬುಧವಾರ ಸಾವಿರಾರು ಮಂದಿ ಮುಸ್ಲಿಂ ಬಾಂಧವರು ಬೃಹತ್ ಮೆರವಣಿಗೆ ನಡೆಸಿದರು. ನಗರದ ಅಂಡೇಛತ್ರದಿಂದ ಆರಂಭವಾದ...

ಆರನೇ ಗ್ಯಾರಂಟಿ ಜಾರಿಗೆ ಆಗ್ರಹಿಸಿ ಎಐಟಿಯುಸಿ ಬೃಹತ್ ಪ್ರತಿಭಟನೆ

ಚಿಕ್ಕಮಗಳೂರು:  ಆರನೇ ಗ್ಯಾರಂಟಿ ಜಾರಿಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯ ರು ಮತ್ತು ಸಹಾಯಕಿಯರ ಫೆಡೆರೇಷನ್‌ನ ಜಿಲ್ಲಾ ಘಟಕವು ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ನೂರಾ ರು ಮಹಿಳೆಯರು ಮಂಗಳವಾರ ಪ್ರತಿಭಟಿಸುವ ಮೂಲಕ ಭರವಸೆ...

Related Articles

ಮಾಜಿ ಸರ್ಜನ್  ಕುಮಾರ್ ನಾಯಕ್ ಇನ್ನಿಲ್ಲ

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲಾ ಮಲ್ಲೇಗೌಡ ಜನರಲ್ ಆಸ್ಪತ್ರೆಯ ಮಾಜಿ ಸರ್ಜನ್ ಕುಮಾರ್ ನಾಯಕ್ (67) ರಾತ್ರಿ...

ತಹಸೀಲ್ದಾರ್ ನಿಲುವಿನ ವಿರುದ್ಧ ಮಾಜಿ ಶಾಸಕ ಕುಮಾರಸ್ವಾಮಿ ಅಸಮಾಧಾನ

ಚಿಕ್ಕಮಗಳೂರು: ಚಿಕ್ಕಮಗಳೂರು ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಅವರು ಸಾರ್ವಜನಿಕರೊಂದಿಗೆ ದರ್ಪದಿಂದ ನಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು,...

ಈಜಲು ತೆರಳಿದ್ದ ಯುವಕ ನೀರಿನಲ್ಲಿ ಮುಳುಗಿ ಸಾವು

ಚಿಕ್ಕಮಗಳೂರು: ಈಜಲು ತೆರಳಿದ್ದ 23 ವರ್ಷದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ...

ಕೊಲೆ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ

ಚಿಕ್ಕಮಗಳೂರು: ಪತ್ನಿಯನ್ನು ಕತ್ತು ಹಿಸುಕಿ ಹಾಗೂ ಮೂಗು–ಬಾಯಿ ಮುಚ್ಚಿ ಉಸಿರುಗಟ್ಟಿಸಿ ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪ...