Home namma chikmagalur chikamagalur ರೈತರ ತೋಟ-ಜಮೀನುಗಳಿಂದ ಮೋಟಾರ್ ಕಳ್ಳತನ
chikamagalurCrime NewsHomeLatest Newsnamma chikmagalur

ರೈತರ ತೋಟ-ಜಮೀನುಗಳಿಂದ ಮೋಟಾರ್ ಕಳ್ಳತನ

Share
Share

ಚಿಕ್ಕಮಗಳೂರು: ಸರಣಿ ಕಳ್ಳತನ ಪ್ರಕರಣಗಳು ವರದಿಯಾಗಿದ್ದು, ರೈತರ ತೋಟ ಹಾಗೂ ಜಮೀನುಗಳಿಂದ ಮೋಟಾರ್,ಸ್ಟಾರ್ಟರ್ ಬಾಕ್ಸ್ ಮತ್ತು ಕೇಬಲ್‌ಗಳನ್ನು ಕಳ್ಳರು ಎಗರಿಸಿದ್ದಾರೆ.

ಲಕ್ಯಾ ಹೋಬಳಿಯ ಪಾಯಗೊಂಡನಹಳ್ಳಿ ಗ್ರಾಮದ ಜಮೀನೊಂದರಲ್ಲಿ ಎಲೆಕ್ಟ್ರಿಕಲ್ ಕಾಂಟ್ರಾಕ್ಟರ್ ದೇವರಾಜು ಎಂಬುವರಿಗೆ ಸೇರಿದ ಅಡಕೆ ತೋಟಕ್ಕೆ ನುಗ್ಗಿದ ಕಳ್ಳರು, ಮೂರು ಕೊಳವೆ ಬಾವಿಗಳ ಮೋಟಾರ್ ಸ್ಟಾರ್ಟರ್ ಬಾಕ್ಸ್‌ಗಳನ್ನು ಕಳವು ಮಾಡಿದ್ದಾರೆ.

ಮೇ ೬ರ ರಾತ್ರಿಯಿಂದ ಮೇ ೯ರ ಬೆಳಗಿನ ಅವಧಿಯಲ್ಲಿ ಈ ಕೃತ್ಯ ನಡೆದಿದ್ದು, ಕಳುವಾದ ಸ್ವತ್ತಿನ ಅಂದಾಜು ಮೌಲ್ಯ ೫೨ಸಾವಿರ ರೂಪಾಯಿಗಳಾಗಿದೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳವಾಡಿ ಗ್ರಾಮದ ಬಸವರಾಜು ಎಂಬುವವರಿಗೆ ಸೇರಿದ ಜಮೀನಿನ ಕೊಳವೆ ಬಾವಿಯಿಂದ ೧೦ಸಾವಿರ ರೂಪಾಯಿ ಬೆಲೆಯ ೫೦ ಮೀಟರ್ ಉದ್ದದ ಮೋಟಾರ್ ಕೇಬಲನ್ನು ಕಳ್ಳವು ಮಾಡಲಾಗಿದೆ ಏಪ್ರಿಲ್ ೨೭ರ ಸಂಜೆಯಿಂದ ಏಪ್ರಿಲ್ ೨೮ರ ಬೆಳಗಿನ ಜಾವದ ಅವಧಿಯಲ್ಲಿ ಈ ಕಳ್ಳತನ ನಡೆದಿದೆ.ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ, ನಾಗರಹಳ್ಳಿ ಗ್ರಾಮದ ಸಣ್ಣಯ್ಯ ಎಂಬುವವರ ಜಮೀನಿನ ಕೊಳವೆ ಬಾವಿಗೆ ಅಳವಡಿಸಲಾಗಿದ್ದ ೧೦ಸಾವಿರ ಮೌಲ್ಯದ ೬೦ ಮೀಟರ್ ಉದ್ದದ ಮೋಟಾರ್ ಕೇಬಲನ್ನು ಕತ್ತರಿಸಿ ಕಳ್ಳರು ಕೈಚಳಕ ತೋರಿಸಿದ್ದಾರೆ.

Motore theft from farmers’ farms

Share

Leave a comment

Leave a Reply

Your email address will not be published. Required fields are marked *

Don't Miss

ಕಾಂಗ್ರೆಸ್‌ ಅಭ್ಯರ್ಥಿ ಟಿ.ಡಿ.ರಾಜೇಗೌಡ ಮತ್ತೆ ಶಾಸಕರಾಗಿ ಮುಂದುವರಿಕೆ

ನವದೆಹಲಿ:  ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಿಂದ ಶಾಸಕ ಸ್ಥಾನ ಕಳೆದುಕೊಂಡಿದ್ದ ಕಾಂಗ್ರೆಸ್‌ನ ಟಿ.ಡಿ.ರಾಜೇಗೌಡ ಅವರಿಗೆ ಸುಪ್ರಿಂ ಕೋರ್ಟ್‌ ಬಿಗ್‌ ರಿಲೀಫ್‌ ನೀಡಿದ್ದು, ಹೈಕೋರ್ಟ್‌ನ ಆದೇಶಕ್ಕೆ ಮಧ್ಯಂತರ ತಡೆ ನೀಡಿ...

ರಾಜೇಗೌಡರಿಗೆ ರಾಜಕೀಯ ಮೈಲೇಜ್ – ಜೀವರಾಜ್ ಗೆ ಕೊನೆ ಮೊಳೆ ?

ಶೃಂಗೇರಿ: ಕಳೆದ ಹತ್ತು ದಿನಗಳಿಂದ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ” ಶಾಸಕತ್ವ” ದ ಬಗ್ಗೆ ಎರಡು ಪಕ್ಷದವರಿಂದ ಪಟಾಕಿ,ಮೆರವಣಿಗೆ, ವಿಜಯೋತ್ಸವ ಸಾಲು ಸಾಲಾಗಿ ನಡೆಸಿ ರಾಜಕೀಯ ಜಿದ್ದಾ ಜಿದ್ದಿಗೆ ಈಗ...

Related Articles

ಅರಣ್ಯದಲ್ಲಿ ಅಪರಿಚಿತ ವೃದ್ಧನ ಶವ ಪತ್ತೆ 

ಕೊಟ್ಟಿಗೆಹಾರ : ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ ಸಮೀಪದ ದೇವನಗುಲ್ ಅರಣ್ಯ ಪ್ರದೇಶದಲ್ಲಿ ಸುಮಾರು 65 ರಿಂದ...

ಭಾರತದ ಹಿಂದು ಸಂಸ್ಕೃತಿಗೆ ಮುಂಡಾಲ ಸಮಾಜದ ಕೊಡುಗೆ ಅಪಾರ

ಚಿಕ್ಕಮಗಳೂರು: ಭಾರತದ ಹಿಂದು ಸಂಸ್ಕೃತಿಗೆ ಮುಂಡಾಲ ಸಮಾಜದ ಕೊಡುಗೆ ಅಪಾರವಾಗಿದೆ ಎಂದು ಕಚ್ಚೂರು ಕ್ಷೇತ್ರದ ಧರ್ಮದರ್ಶಿ...

ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಸಾವು

ಚಿಕ್ಕಮಗಳೂರು:  ಎರಡು ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಇಬ್ಬರು ವ್ಯಕ್ತಿಗಳು ಸಾವಪ್ಪಿದ್ದಾರೆ. ಶಾರದಾ ಎಂಬುವರ ಮಗ ಪ್ರದೀಪ್...

ಮರಗಸಿ ಕೆಲಸ ಮಾಡುವಾಗ ಬಿದ್ದು ಕಾರ್ಮಿಕ ಸಾವು

ಚಿಕ್ಕಮಗಳೂರು: ಮರಗಸಿ ಕೆಲಸ ಮಾಡುವಾಗ 25 ಅಡಿ ಎತ್ತರದಿಂದ ಬಿದ್ದು ಕಾರ್ಮಿಕನೊಬ್ಬ ಅಂತ್ಯ ಕಂಡಿರುವ ಘಟನೆ...